ಈಗಂತೂ ಬಹುತೇಕ ಕಾಲೇಜು (College) ಓದೋ ಮತ್ತು ಕೆಲಸಕ್ಕೆ ಹೋಗೋ ಹುಡುಗರು ಮನೆಯಲ್ಲಿ ಅಮ್ಮ ಮಾಡುವ ಆಹಾರಗಳನ್ನು ಬಿಟ್ಟು ಸದಾ ಹೊರಗಡೆ ಬೇಕರಿಯಲ್ಲಿ ಸಿಗುವ ಪದಾರ್ಥಗಳನ್ನು ಮತ್ತು ಫಾಸ್ಟ್ಫುಡ್ ನಲ್ಲಿ ದೊರೆಯುವ ನೂಡಲ್ಸ್ (Noodles), ಮಂಚೂರಿ ಅಂತ ಎಣ್ಣೆಯಲ್ಲಿ ಮಾಡಿದ್ದನ್ನೆಲ್ಲಾ ತಿನ್ನುತ್ತಾರೆ. ಅಮ್ಮಂದಿರು ‘ಮನೆಯಲ್ಲಿ ಮಾಡಿದ ಆಹಾರ ಬಿಟ್ಟು, ಹೊರಗಡೆದು ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ’ ಅಂತ ಮಕ್ಕಳಿಗೆ ಸದಾ ಹೇಳುತ್ತಲೇ ಇರುತ್ತಾರೆ. ಪಿಜ್ಜಾ, ಫ್ರೈಸ್ ಮತ್ತು ಬರ್ಗರ್ ಗಳಿಂದ ಹಿಡಿದು ಮೊಮೊಸ್, ಪಕೋಡಾ ಮತ್ತು ಫಿಜಿ ಪಾನೀಯಗಳವರೆಗೆ, ಈ ಎಲ್ಲ ಜಂಕ್ ತಿನಿಸುಗಳು ಫಿಟ್ನೆಸ್ (Fitness) ಕಾಪಾಡಿಕೊಳ್ಳುವ ಮತ್ತು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯಾಣದಲ್ಲಿ ಅಡ್ಡಿಯಾಗುವ ಆಹಾರ (Food) ಪದಾರ್ಥಗಳು ಅಂತ ಹೇಳಬಹುದು. ಅಷ್ಟೇ ಅಲ್ಲದೆ ಕೆಲವೊಮ್ಮೆ ಮನೆಯಲ್ಲಿ ಅಮ್ಮ ಮಾಡಿದ ಕರಿದ ಪದಾರ್ಥಗಳನ್ನು ಸಹ ನಾವು ನಿರಾಕರಿಸಬೇಕಾಗುತ್ತದೆ.
ಈಗೇಕೆ ಇದೆಲ್ಲಾ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು, ಇಲ್ಲಿ ಇದಕ್ಕೆ ವಿರುದ್ಧವಾಗಿ ಎಂಬಂತೆ ಒಂದು ವಿಡಿಯೋ ಬಂದಿದೆ ನೋಡಿ. ಇದರಲ್ಲಿ ಒಬ್ಬ ಮಗ ತಾನು ಜಿಮ್ ಗೆ ಹೋಗುತ್ತಿದ್ದು, ತನ್ನ ತಾಯಿಗೆ ಎಣ್ಣೆಯಲ್ಲಿ ಕರಿದಿದ್ದ ಪದಾರ್ಥಗಳನ್ನ ಮಾಡಬೇಡ, ಪೌಷ್ಟಿಕ ಆಹಾರ ಮಾಡಿ ಕೊಡು ಅಂತ ಕೇಳಿದ್ದಕ್ಕೆ, ತಾಯಿ ಪಕೋಡಾ ಮಾಡಿದ್ದೇನೆ ಸುಮ್ನೆ ತಿನ್ನು ಅಂತ ಹೇಳಿ ಮಗನ ಮನವೊಲಿಸಿದ್ದಾಳೆ ನೋಡಿ.
ತಾಯಿ ಮಾಡಿದ ಪಕೋಡಾಗಳನ್ನು ತಿನ್ನಲು ನಿರಾಕರಿಸಿದ ಮಗ
ನೀವು ಆ ಫಿಟ್ನೆಸ್ ಉತ್ಸಾಹಿಗಳಲ್ಲಿ ಒಬ್ಬರಾಗಿದ್ದರೆ, ನಿಮ್ಮ ಆಹಾರ ಆದ್ಯತೆಗಳ ಬಗ್ಗೆ ನೀವು ನಿಮ್ಮ ತಾಯಿಯನ್ನು ಕೆರಳಿಸಿರಬಹುದು. ಈಗ, ಉಲ್ಲಾಸಭರಿತ ವೀಡಿಯೊವೊಂದು ವೈರಲ್ ಆಗಿದ್ದು, ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಹುಡುಗ ತನ್ನ ತಾಯಿ ತಯಾರಿಸಿದ ಪಕೋಡಗಳನ್ನು ಸೇವಿಸಲು ನಿರಾಕರಿಸುತ್ತಾನೆ ಆದರೆ ಅಂತಿಮವಾಗಿ ಅವುಗಳನ್ನು ತಿನ್ನಬೇಕಾಗುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ಹೇಗಿರಬೇಕು? ಇಲ್ಲಿದೆ ಮುನ್ನೆಚ್ಚರಿಕಾ ಕ್ರಮ
ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರು ವ ಕ್ಲಿಪ್ ನಲ್ಲಿ, ತಾಯಿ ತನ್ನ ಮಗನಿಗೆ ಮತ್ತು ಗಂಡನಿಗಾಗಿ ಬಿಸಿ ಬಿಸಿ ಪಕೋಡಾ ಮಾಡುತ್ತಿರುತ್ತಾರೆ.
ಅಡುಗೆಮನೆಯೊಳಗೆ ಬಂದ ಮಗ ತನ್ನ ತಾಯಿಗೆ "ಅಮ್ಮ, ನಾನು ಜಿಮ್ ಗೆ ಹೋಗಲು ಪ್ರಾರಂಭಿಸಿದ್ದೇನೆ. ಹಾಗಾಗಿ ನೀವು ನನಗಾಗಿ ಉತ್ತಮವಾದ ಮತ್ತು ಪೌಷ್ಟಿಕವಾದ ಆಹಾರವನ್ನು ಮಾಡಿ ಕೊಡಿ” ಅಂತ ಕೇಳಿರುವುದನ್ನು ನಾವು ಇಲ್ಲಿ ನೋಡಬಹುದು.
View this post on Instagram
ತಕ್ಷಣವೇ ಮಗನಿಗೆ ಪ್ರತಿಕ್ರಿಯಿಸಿದ ತಾಯಿ “ನಾನು ಯಾವಾಗಲೂ ಉತ್ತಮ ಆಹಾರವನ್ನೇ ಮಾಡಿ ಕೊಡುತ್ತೇನೆ” ಎಂದು ಜೋರಾಗಿ ಹೇಳುತ್ತಾರೆ.
“ಪಕೋಡಾ ತಿನ್ನಬೇಡ ಅಂತ ನಿನಗೆ ಯಾರು ಹೇಳಿದರು” ಅಂತ ತಾಯಿ ತನ್ನ ಮಗನಿಗೆ ಕೇಳುತ್ತಾಳೆ. ಹಾಗೆಯೇ ಮಾತನ್ನು ಮುಂದುವರೆಸಿ “ನೀನು ನನ್ನ ವಯಸ್ಸಿನವನಾದಾಗ, ನೀನು ಇದನ್ನೆಲ್ಲಾ ತಿನ್ನಲು ಸಾಧ್ಯವಾಗುವುದಿಲ್ಲ, ಅದಕ್ಕೆ ಸುಮ್ನೆ ಇದೆಲ್ಲಾ ತಿನ್ನು" ಅಂತ ತನ್ನ ಮಗನಿಗೆ ಹೇಳುತ್ತಾರೆ. ತನ್ನ ಮಗನ ಮನವೊಲಿಸುವ ಪ್ರಯತ್ನದಲ್ಲಿ, ತಾಯಿ ನಂತರ ಪಕೋಡಾಗಳನ್ನು ನೀನು ತಿನ್ನದೇ ಇದ್ದರೆ, ನಿನ್ನ ತಂದೆಗೆ ತಟ್ಟೆಯನ್ನು ಕೊಟ್ಟು ಬಾ, ಅವರು ತಿನ್ನುತ್ತಾರೆ ಅಂತ ಹೇಳುವುದನ್ನು ನಾವು ಈ ಕ್ಲಿಪ್ ನಲ್ಲಿ ನೋಡಬಹುದು.
ಇದನ್ನು ಕೇಳಿದ ಮಗ ತಕ್ಷಣವೇ ಪಕೋಡಾಗಳನ್ನು ತಿನ್ನಲು ಒಪ್ಪುತ್ತಾನೆ ಮತ್ತು ಅದಕ್ಕಾಗಿ ಸ್ವಲ್ಪ ಮಯೋನೈಸ್ ಕೇಳುತ್ತಾನೆ. ಅದಕ್ಕೆ ತಾಯಿ "ನೀನು ಮಯೋನೈಸ್ ನೊಂದಿಗೆ ತಿನ್ನಬೇಡ. ಮಯೋನೈಸ್ ನಿನ್ನ ಗೆಳತಿಯೇ” ಅಂತ ಕೇಳಿ ಕೊತ್ತಂಬರಿ-ಪುದೀನ ಚಟ್ನಿಯೊಂದಿಗೆ ಇದನ್ನು ತಿನ್ನು ಅಂತ ಹೇಳುತ್ತಾರೆ.
ತಾಯಿ ಮಗನ ಈ ವೀಡಿಯೋ ನೋಡುಗರಿಗೆ ಖುಷಿ ಕೊಟ್ಟಿದ್ದಂತೂ ನಿಜ
ತಾಯಿ ಮತ್ತು ಮಗನ ನಡುವಿನ ಈ ನಗು ತರಿಸುವ ಸಂಭಾಷಣೆ ಬೇಗನೆ ಅನೇಕ ನೆಟ್ಟಿಗರನ್ನು ತನ್ನೆಡೆಗೆ ಸೆಳೆದಿದೆ ಅಂತ ಹೇಳಬಹುದು.
ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು “ನಾವು ನಮ್ಮ ಮನೆಯಲ್ಲೂ ಇದನ್ನೇ ನೋಡುತ್ತೇವೆ" ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ