• Home
  • »
  • News
  • »
  • trend
  • »
  • Mother Gift to Son: ಮಗನಿಗೆ ಹೊಸ ಬಂಗಲೆ ತೋರಿಸಿ ಸಪ್ರೈಸ್ ಕೊಟ್ಟ ತಾಯಿ! ಮಗನ ರಿಯಾಕ್ಷನ್ ವೈರಲ್

Mother Gift to Son: ಮಗನಿಗೆ ಹೊಸ ಬಂಗಲೆ ತೋರಿಸಿ ಸಪ್ರೈಸ್ ಕೊಟ್ಟ ತಾಯಿ! ಮಗನ ರಿಯಾಕ್ಷನ್ ವೈರಲ್

ವೀಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ತಾವು ಖರೀದಿಸಿದ ಮನೆಯೊಂದನ್ನು ತೋರಿಸುತ್ತಾಳೆ. ಆಗ ಆ ಮನೆಯನ್ನು ನೋಡಿ ಮತ್ತು ಆ ಮನೆ ಅವರದ್ದೇ ಅಂತ ಗೊತ್ತಾಗಿ ಆ ಹುಡುಗ ಸಂತೋಷದಿಂದ ಕಣ್ಣೀರಿಡುತ್ತಾನೆ.

ವೀಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ತಾವು ಖರೀದಿಸಿದ ಮನೆಯೊಂದನ್ನು ತೋರಿಸುತ್ತಾಳೆ. ಆಗ ಆ ಮನೆಯನ್ನು ನೋಡಿ ಮತ್ತು ಆ ಮನೆ ಅವರದ್ದೇ ಅಂತ ಗೊತ್ತಾಗಿ ಆ ಹುಡುಗ ಸಂತೋಷದಿಂದ ಕಣ್ಣೀರಿಡುತ್ತಾನೆ.

ವೀಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ತಾವು ಖರೀದಿಸಿದ ಮನೆಯೊಂದನ್ನು ತೋರಿಸುತ್ತಾಳೆ. ಆಗ ಆ ಮನೆಯನ್ನು ನೋಡಿ ಮತ್ತು ಆ ಮನೆ ಅವರದ್ದೇ ಅಂತ ಗೊತ್ತಾಗಿ ಆ ಹುಡುಗ ಸಂತೋಷದಿಂದ ಕಣ್ಣೀರಿಡುತ್ತಾನೆ.

  • Trending Desk
  • Last Updated :
  • Bangalore, India
  • Share this:

ನಮಗೆ ತುಂಬಾ ಪ್ರೀತಿಸುವವರು ನಮಗೆ ತುಂಬಾನೇ ಇಷ್ಟವಾಗುವ ವಸ್ತುವನ್ನು ಉಡುಗೊರೆಯಾಗಿ (Gift) ಕೊಟ್ಟರೆ ನಮಗೆ ಎಷ್ಟು ಸಂತೋಷವಾಗುತ್ತದೆ (Happy) ಅಲ್ಲವೇ? ಅದರಲ್ಲೂ ನಮಗೆ ಗೊತ್ತಿಲ್ಲದೆ ನೀಡಿದರೆ ಆ ಸಂತೋಷ ಇನ್ನೂ ಹೆಚ್ಚಾಗುತ್ತದೆ. ಈ ಹಿಂದೆ ಸಹ ನಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತಾಯಿ ಮಗನಿಗೆ ಸಪ್ರೈಸ್ (Surprise) ಆಗಿ ಉಡುಗೊರೆ ನೀಡಿ ಸಂತೋಷ ಪಡಿಸಿದ್ದು, ಮಕ್ಕಳು ಸಹ ತಾಯಿಗೆ ಹುಟ್ಟುಹಬ್ಬದ (Birthday) ದಿನದಂದು ಅಮ್ಮ ಇಷ್ಟಪಡುವ ವಸ್ತುವನ್ನು ಸಪ್ರೈಸ್ ನೀಡಿ ಖುಷಿ ಪಡಿಸಿದ್ದನ್ನು ವೀಡಿಯೋಗಳಲ್ಲಿ ಅನೇಕ ಬಾರಿ ನೋಡಿದ್ದೆವು. ಆ ಸುಂದರ ಕ್ಷಣದಲ್ಲಿ ನೀಡಿದ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು  (Reactions) ರೆಕಾರ್ಡ್ ಮಾಡಿ ಆ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡದ್ದನ್ನು ಸಹ ನಾವು ನೋಡಿರುತ್ತೇವೆ.


ಮಗನಿಗೆ ತಾಯಿ ಎಂತಹ ಸರ್ಪ್ರೈಸ್ ನೀಡಿದ್ದಾಳೆ ನೋಡಿ


ಈಗ ಇಲ್ಲಿ ಮತ್ತೊಂದು ಹೊಸ ವೀಡಿಯೋವೊಂದು ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ ನೋಡಿ. ಆ ವೀಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ತಾವು ಖರೀದಿಸಿದ ಮನೆಯೊಂದನ್ನು ತೋರಿಸುತ್ತಾಳೆ. ಆಗ ಆ ಮನೆಯನ್ನು ನೋಡಿ ಮತ್ತು ಆ ಮನೆ ಅವರದ್ದೇ ಅಂತ ಗೊತ್ತಾಗಿ ಆ ಹುಡುಗ ಸಂತೋಷದಿಂದ ಕಣ್ಣೀರಿಡುತ್ತಾನೆ.


ನೆಟ್ಟಿಗರ ಮನಸು ಗೆದ್ದ ವಿಡಿಯೋ


ತಾಯಿ ತನ್ನ ಮಗನನ್ನು ಆಶ್ಚರ್ಯಚಕಿತಗೊಳಿಸುವ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಾರ್ಟಿಸ್ಟ್ರಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋವು ಆನ್ಲೈನ್ ನಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದೆ.


ಈ ವೀಡಿಯೋವನ್ನು ಮಹಿಳೆ ಅಕ್ಟೋಬರ್ 18 ರಂದು ಪೋಸ್ಟ್ ಮಾಡಿದ್ದಾರೆ. ಈಗ ಈ ವಿಡಿಯೋ ಅನೇಕ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ವೀಡಿಯೋವನ್ನು ಒಂದೂವರೆ ಲಕ್ಷಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ. 7,700 ಕ್ಕೂ ಹೆಚ್ಚು ಬಳಕೆದಾರರು ಅದರ ಬಗ್ಗೆ ಕಾಮೆಂಟ್  ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಪುಟದ ವಿವರಣೆಯ ಪ್ರಕಾರ, ವೀಡಿಯೋ ಪೋಸ್ಟ್ ಮಾಡಿದ ಮಹಿಳೆ ಫಿಟ್ನೆಸ್ ಉತ್ಸಾಹಿ ಮತ್ತು ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿ ಅಂತ ಗೊತ್ತಾಗಿದೆ.


ವೈರಲ್ ವೀಡಿಯೋ ಹೇಗಿದೆ ನೋಡಿ?


ಪುಟ್ಟ ಹುಡುಗ ತನ್ನ ತಾಯಿಯ ಜೊತೆ ಒಂದು ಕಾರಿನಲ್ಲಿ ಕುಳಿತು ಅಲ್ಲಿರುವ ಅನೇಕ ಮನೆಗಳನ್ನು ನೋಡುತ್ತಾ ಇರುತ್ತಾನೆ. ಅವರ ಕಾರು ಒಂದು ಮನೆಯ ಮುಂದೆ ಬಂದು ನಿಲ್ಲುತ್ತದೆ. ಮುಂದಿನ ಸೀಟ್ ನಲ್ಲಿ ಕುಳಿತಿರುವ ಹುಡುಗ ತನ್ನ ತಾಯಿಗೆ ಮನೆ ದೊಡ್ಡ ಹಿತ್ತಲನ್ನು ಹೊಂದಿದೆಯೇ ಎಂದು ಕೇಳುತ್ತಾನೆ. ಅದಕ್ಕೆ ಅವಳು "ಹೌದು" ಎಂದು ಹೇಳುತ್ತಾಳೆ.


ಇದನ್ನೂ ಓದಿ: Elon Musk: ಎಲಾನ್ ಮಸ್ಕ್ ಅವರ ‘ಬ್ಲ್ಯೂ ಟಿಕ್’ ಪೋಸ್ಟ್​ ಬಗ್ಗೆ ತಮಾಷೆ ಟ್ವೀಟ್ ಹಂಚಿಕೊಂಡ ಜೊಮ್ಯಾಟೊ!


ಹುಡುಗನು ಆ ಮನೆಯನ್ನು ಮೆಚ್ಚಿ "ನನಗೆ ಅದು ಬೇಕು" ಎಂದು ಹೇಳುತ್ತಿರುವಾಗ, ಮಹಿಳೆ "ಇದು ನಮ್ಮ ಮನೆಯೇ" ಎಂದು ಹೇಳುತ್ತಾಳೆ. ಆಗ ಆ ಹುಡುಗ ಒಂದೇ ಬಾರಿಗೆ ಅದನ್ನು ನಂಬುವುದಿಲ್ಲ. ಪದೇ ಪದೇ ತಾಯಿಗೆ “ಇದು ನಿಜಕ್ಕೂ ನಮ್ಮ ಮನೆಯೇ” ಎಂದು ಕೇಳುತ್ತಾನೆ. ಅದಕ್ಕೆ ತಾಯಿ ಮತ್ತೊಮ್ಮೆ "ಹೌದು, ಇದು ನಮ್ಮ ಮನೆ" ಎಂದು ಮಗನಿಗೆ ಹೇಳುತ್ತಾಳೆ.

View this post on Instagram


A post shared by Martistry (@__martistry_)

ಆಗ ಆ ಹುಡುಗ ತುಂಬಾ ಖುಷಿ ಪಟ್ಟು ಅತೀ ಉತ್ಸಾಹದಿಂದ ಜೋರಾಗಿ ಕಿರುಚುತ್ತಾನೆ. ಖುಷಿಯಲ್ಲಿ ಅಳುತ್ತಾನೆ. ಹಿಂದಿನ ಸೀಟ್ ನಲ್ಲಿ ಕುಳಿತ ಅವನ ಸಹೋದರಿಯ ಧ್ವನಿಯೂ ಸಹ ಹಿನ್ನೆಲೆಯಲ್ಲಿ ಕೇಳಿಸುತ್ತದೆ. ವೀಡಿಯೋದಲ್ಲಿರುವ ಕ್ಯಾಪ್ಶನ್​​ನಲ್ಲಿ “ಮಕ್ಕಳಿಗೆ ಘಟನೆಯ ಬಗ್ಗೆ ಏನು ತಿಳಿದಿಲ್ಲ, ಮಹಿಳೆ ಅದನ್ನು ವಾರಗಟ್ಟಲೆ ರಹಸ್ಯವಾಗಿಟ್ಟಿರುತ್ತಾಳೆ” ಎಂದು ಬರೆಯಲಾಗಿದೆ.


ನೆಟ್ಟಿಗರ ಕಾಮೆಂಟ್ ನೋಡಿ ಹೇಗಿವೆ?


ಹುಡುಗನ ಪ್ರತಿಕ್ರಿಯೆಯು ಇನ್‌ಸ್ಟಾಗ್ರಾಮ್ ಬಳಕೆದಾರರನ್ನು ಪ್ರೇರೇಪಿಸಿದೆ, ಅವರು ಹೃದಯಸ್ಪರ್ಶಿ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ. "ಇದು ನನ್ನನ್ನು ಭಾವುಕವಾಗಿಸಿತು! ದೇವರು ನಿಮ್ಮ ಹೊಸ ಮನೆಯನ್ನು ಆಶೀರ್ವದಿಸಲಿ! ಖಂಡಿತವಾಗಿಯೂ ಹೆಮ್ಮೆಯ ತಾಯಿ ನೀವು " ಎಂದು ಬಳಕೆದಾರರೊಬ್ಬರು ಹೇಳಿದರು.


ಇದನ್ನೂ ಓದಿ: World's Tallest Woman: ಅಬ್ಬಾ, ವಿಶ್ವದ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣ; ಆಕೆಗಾಗಿ 6 ಸೀಟ್‌ಗಳ ಬದಲಾವಣೆ!


"ಅಭಿನಂದನೆಗಳು! ನಾನು ನನ್ನ ಇಡೀ ಜೀವನದಲ್ಲಿ ಇಂತಹ ಒಂದು ಕ್ಷಣದ ಬಗ್ಗೆ ಕನಸು ಕಂಡಿದ್ದೇನೆ. ಒಂದಲ್ಲ ಒಂದು ದಿನ ನಾನು ಹೀಗೆ ಮಕ್ಕಳಿಗೆ ಸರ್‌ಪ್ರೈಸ್ ನೀಡುತ್ತೇನೆ ಅಂತ ನನಗೆ ಗೊತ್ತು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

Published by:Divya D
First published: