Viral Video: ಏರ್ಪೋರ್ಟ್ ನಲ್ಲಿ ತಾಯಿಯಿಂದ ಮಗನಿಗೆ ಬಿತ್ತು ಚಪ್ಪಲಿ ಏಟು..!
Airport Viral Video: ಯದ್ನೋ ಬಿದ್ನೋ ಅಂತ ಮುಖ ತೋರಿಸದೆ ಅಲ್ಲಿಂದ ಓಡಿ ಹೋದರೆ, ಏರ್ಪೋರ್ಟ್ ನಲ್ಲಿ ಇದ್ದ ಜನರು ಮಾತ್ರ ಇಲ್ಲಿ ಏನಾಗುತ್ತಿದೆ ಅಂತ ಒಂದು ಕ್ಷಣಕ್ಕೆ ಗಾಬರಿಯಾಗಿದ್ದಾರೆ.. ಯಾಕಪ್ಪ ತನ್ನನ್ನ ಸ್ವಾಗತ ಮಾಡಲು ಬಂದ ಮಗನಿಗೆ ತಾಯಿ ಈ ರೀತಿ ಹೊಡೆದಿದ್ದಾಳೆ ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ..
ಅಮ್ಮ(Mother) ಎಂಬ ಎರಡಕ್ಷರದ ಪದದಲ್ಲಿ ಏನೋ ಖುಷಿ(Happiness). ಇದು ನಮ್ಮ ಅರಿವಿಗೆ ಬರುವುದು ನಾವು ತಾಯಿಯಾದಾಗ. ಅಮ್ಮನ ಎರಡು ಮಾತನ್ನು ಕೇಳಲು ಕಿವಿ(Ear) ಚಡಪಡಿಸುತ್ತಿದೆ, ಅವರ ಮಡಿಲಲ್ಲಿ ಮಲಗಲು ಆಸೆಯಾಗುತ್ತಿದೆ...ಅಮ್ಮಾ ಎನ್ನುವ ಈ ಪದ ಕರೆಯುವಾಗ ಅದೇನೋ ಪುಳಕ, ಭಾವುಕ ಮನೋಭಾವ, ಪ್ರತಿಯೊಬ್ಬರಿಗೆ ಕೂಡ ತಾಯಿ ಎಂದರೆ ಇಷ್ಟ ಮತ್ತು ಅಪ್ಪನನಿಗಿಂತ(Father) ಅಮ್ಮನ ಮೇಲೆ ಸ್ವಲ್ಪ ಒಲವು ಜಾಸ್ತಿ ಎನ್ನಬಹುದು. ಚಿಕ್ಕವರಿರುವಾಗ(Childrens) ಅಮ್ಮನ ಬಳಿಯೇ ಎಲ್ಲವನ್ನು ಹೇಳಿಕೊಂಡು ಬಂದಿರುತ್ತೇವೆ ಹೀಗಾಗಿ ಬೆಳೆದ ಮೇಲೆಯೂ ಕೂಡ ಕೆಲವೊಂದು ಬಾರಿ ಬಹಳ ದುಃಖ ಅವರಿಸಿದಾಗ ಅಮ್ಮನ ಮಡಿಲ ಮೇಲೆ ಮಲಗಬೇಕು ಎನಿಸುತ್ತದೆ.. ಆದ್ರೆ ಅಮ್ಮ ದೂರವಾದಾಗ ಆಗುವ ಚಡಪಡಿಕೆ ಮಾತ್ರ ಅಷ್ಟಿಷ್ಟಲ್ಲ. ಅದ್ರಲ್ಲೂ ತಮ್ಮ ತಾಯಿಯನ್ನು ಹಲವು ವರ್ಷಗಳ ಬಳಿಕ ನೋಡಿದಾಗ ಮಕ್ಕಳು ಹಾಗೂ ತಾಯಿ ನಡುವೆ ಒಂದು ಬಾಂಧವ್ಯ ಇರುತ್ತದೆ.. ಆದರೆ ತೀರಾ ವಿಲಕ್ಷಣ ಎನ್ನುವಂತೆ ಇಲ್ಲಿ ಮಗನನ್ನು ನೋಡಿದ ಖುಷಿಯಲ್ಲಿ ತಾಯಿ ಚಪ್ಪಲಿಯಿಂದ ಹೊಡೆದಿದ್ದಾರೆ..
ಏರ್ಪೋರ್ಟ್ ನಲ್ಲಿ ತಾಯಿಯಿಂದ ಮಗನಿಗೆ ಬಿತ್ತು ಚಪ್ಪಲಿ ಏಟು..
ಮಕ್ಕಳು ಹಾಗೂ ತಂದೆ ತಾಯಿ ಭೇಟಿಯಾದ ಅದು ಭಾವನಾತ್ಮಕ ಕ್ಷಣವಾಗಿರುತ್ತದೆ..ಮಕ್ಕಳನ್ನ ಬಹುದಿನಗಳ ಬಳಿಕ ನೋಡಿದ ತಾಯಿ ಆಲಂಗಿಸಿಕೊಂಡು ಮಕ್ಕಳನ್ನು ಸಂತೈಸುತ್ತಾಳೆ.. ಆದರೆ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತಾಯಿ ಮಗನಿಗೆ ಚಪ್ಪಲಿಯಲ್ಲಿ ಒಡೆದಿದ್ದಾಳೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅನ್ವರ್ ಜಿಬಾವಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನನ್ನ ತಾಯಿ ಮರಳಿದ್ದಾರೆ ಎಂದು ಕ್ಯಾಪ್ಶನ್ ಬರೆದು ನಟ ಅನ್ವರ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್ನಲ್ಲಿ ಮಹಿಳೆಯೊಬ್ಬರು ಯುವಕನಿಗೆ ಚಪ್ಪಲಿಯಲ್ಲಿ ಹೊಡೆಯುವ ದೃಶ್ಯವಿದೆ.
ವಿಡಿಯೋದಲ್ಲಿ ಏನಿದೆ..?
ವಿಡಿಯೋದಲ್ಲಿ ಮಗ ತನ್ನ ತಾಯಿಯನ್ನು ಏರ್ಪೋರ್ಟ್ನಲ್ಲಿ ಭೇಟಿಯಾಗಲು ಬರುತ್ತಾನೆ. ಅಲ್ಲದೆ ತನ್ನ ತಾಯಿಯ ಸ್ವಾಗತಕ್ಕಾಗಿ ಹೂಗುಚ್ಛ ಹಾಗೂ ಕೈಯಲ್ಲಿ ಫಲಕ ಇಡಿದು ಯುವಕ ತನ್ನ ತಾಯಿಗಾಗಿ ಕಾಯುತ್ತಿರುತ್ತಾನೆ.. ಮತ್ತೊಂದೆಡೆಯಲ್ಲಿ ಏರ್ಪೋರ್ಟ್ನ ಆಗಮನ ದ್ವಾರದಿಂದ ಮಹಿಳೆಯೊಬ್ಬರು ಈಚೆಗೆ ಬರುತ್ತಾರೆ. ಹೀಗೆ ಬರುವ ಮಹಿಳೆ ತನ್ನ ಎದುರಿಗೆ ಇರುವ ಮಗನನ್ನು ಬಿಗಿದಪ್ಪಿ ಪ್ರೀತಿ ತೋರಿಸುತ್ತಾರೆ.. ಆಗ ಮಗ ಹೂಗುಚ್ಛ ತಾಯಿಗೆ ನೀಡುತ್ತಾನೆ ಅಂತ ಆ ಕ್ಷಣಕ್ಕೆ ಮಾತ್ರ ಅನಿಸುತ್ತೆ.. ಆದ್ರೆ ಕಂಪ್ಲೀಟ್ ನಿರೀಕ್ಷೆ ಉಲ್ಟಾ ಆಗಿ, ತಾಯಿ ತನ್ನ ಕಾಲಲ್ಲಿ ಇದ್ದ ಚಪ್ಪಲಿಯನ್ನ ತೆಗೆದುಕೊಂಡು ಯುವಕನಿಗೆ ರಪರಪನೆ ಏಟು ಕೊಡುತ್ತಾರೆ. ಈ ಏಟಿಗೆ ಆ ಯುವಕ ಹೂಗುಚ್ಛ, ಸ್ವಾಗತ ಫಲಕವನ್ನು ಎಸೆದು ಓಡಿಹೋಗುತ್ತಾನೆ..
ಇತ್ತ ಯದ್ನೋ ಬಿದ್ನೋ ಅಂತ ಮುಖ ತೋರಿಸದೆ ಅಲ್ಲಿಂದ ಓಡಿ ಹೋದರೆ, ಏರ್ಪೋರ್ಟ್ ನಲ್ಲಿ ಇದ್ದ ಜನರು ಮಾತ್ರ ಇಲ್ಲಿ ಏನಾಗುತ್ತಿದೆ ಅಂತ ಒಂದು ಕ್ಷಣಕ್ಕೆ ಗಾಬರಿಯಾಗಿದ್ದಾರೆ.. ಯಾಕಪ್ಪ ತನ್ನನ್ನ ಸ್ವಾಗತ ಮಾಡಲು ಬಂದ ಮಗನಿಗೆ ತಾಯಿ ಈ ರೀತಿ ಹೊಡೆದಿದ್ದಾಳೆ ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ..
ಸದ್ಯ ಈ ಘಟನೆಯ ಸತ್ಯಾಸತ್ಯತೆ ಏನು ಎಂಬುದು ಇದುವರೆಗೂ ತಿಳಿದುಬಂದಿಲ್ಲ.. ನೋಡೋದಕ್ಕೆ ಇದು ಬೇಕಂತಲೇ ಮಾಡಿರುವ ವಿಡಿಯೋ ಅಂತ ಕಂಡು ಬಂದರೂ ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು ಟ್ರೋಲ್ ಪೇಜ್ ಗಳು ,ಇದು ತಾಯಿ ಮಗನ ಪ್ರೀತಿ ತೋರಿಸಲು ಇರುವ ಸರಿಯಾದ ಮಾರ್ಗ, ಮತ್ತೆ ಆತ ಮುಖ ತೋರಿಸುವುದಿಲ್ಲ ಎಂದೆಲ್ಲಾ ಸುಮ್ನೆ ಟ್ರೋಲ್ ಮಾಡುತ್ತಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ