ಹಾಸಿಗೆಯ ಮೇಲೆ ಬಟ್ಟೆ ಬಿಚ್ಚಿಸಿ 12 ವರ್ಷದ ಮಗನನ್ನೇ ಅತ್ಯಾಚಾರ ಮಾಡಿದ ತಾಯಿಯ ಬಂಧನ

ಅತ್ಯಾಚಾರ ನಡೆದ ನಂತರದಲ್ಲಿ ಆಕೆ ಮಗನನ್ನು ಸಮಾಧಾನ ಮಾಡಲು ಯತ್ನಿಸಿದ್ದಳು. ಆದರೆ, ಮಗ ಅಳುವುದನ್ನು ನಿಲ್ಲಿಸಲಿಲ್ಲ. ಈ ವೇಳೆ ಆಕೆ, ಬ್ಲ್ಯಾಕ್​ಮೇಲ್​ ಮಾಡಲು ಆರಂಭಿಸಿದ್ದಳು.

ಅತ್ಯಾಚಾರ ಮಾಡಿದ ತಾಯಿ

ಅತ್ಯಾಚಾರ ಮಾಡಿದ ತಾಯಿ

 • Share this:
  ಅತ್ಯಾಚಾರ ಪ್ರಕರಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅದರಲ್ಲೂ ಅಪ್ರಾಪ್ತರ ಮೇಲೆ ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಿರುವ ಬಗ್ಗೆ ದೂರುಗಳು ದಾಖಲಾಗುತ್ತಲೇ ಇವೆ. ಅಂತೆಯೇ ಟೆಕ್ಸಾಸ್​ ನಗರದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರವಾಗಿದೆ. ಅದು ಆತನ ತಾಯಿ ಇಂದಲೇ ಅನ್ನೋದು ಬೇಸರದ ಸಂಗತಿ! ಎರಡು ವರ್ಷಗಳ ಹಿಂದೆ ನಡೆದ ಘಟನೆ ಇದಾಗಿದ್ದು ಈಗ ಬೆಳಕಿಗೆ ಬಂದಿದೆ. ಈಗ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ನಡೆದಿದ್ದು 2018ರಲ್ಲಿ. 32 ವರ್ಷದ ಬ್ರಿಟಾನಿ ರೋಲರ್ ಬಂಧಿತ ಮಹಿಳೆ. ಈಕೆ 12 ವರ್ಷದ ಮಗನ ಜೊತೆ ವಾಸವಾಗಿದ್ದಳು. ಈಕೆ ಮಗನನ್ನೇ ಕಾಮಿಸುತ್ತಿದ್ದಳು. ಈಕೆ ಸದಾ ಮಗನನ್ನು ಮುಟ್ಟುತ್ತಿದ್ದಳು. ಇದೆಲ್ಲವೂ ಮಗನಿಗೆ ತಿಳಿಯುತ್ತಿರಲಿಲ್ಲ.

  ಒಂದು ದಿನ ಮಲಗುವುದಕ್ಕೂ ಮೊದಲು ಮಗನ ಬಳಿ ಬಟ್ಟೆ ಬಿಚ್ಚುವಂತೆ ಬ್ರಿಟಾನಿ ಹೇಳಿದ್ದಳು. ಇದನ್ನು ಕೇಳಿ ಆತ ಶಾಕ್​ಗೆ ಒಳಗಾಗಿದ್ದ. ಅಲ್ಲದೆ, ಅಮ್ಮ ನಡೆದುಕೊಳ್ಳುವ ರೀತಿ ಸರಿಯಿಲ್ಲ ಎಂಬುದು ಆತನಿಗೆ ಖಚಿತವಾಗಿ ಬಿಟ್ಟಿತ್ತು. ಇದಕ್ಕೆ ಆತ ವಿರೋಧ ವ್ಯಕ್ತಪಡಿಸಿದ್ದ. ಆದರೂ ಇದನ್ನು ಕೇಳದ ಆಕೆ ಆತನ ಬಟ್ಟೆ ಬಿಚ್ಚಿಸಿ ಅತ್ಯಾಚಾರ ಮಾಡಿದ್ದಾಳೆ.

  ಅತ್ಯಾಚಾರ ನಡೆದ ನಂತರದಲ್ಲಿ ಆಕೆ ಮಗನನ್ನು ಸಮಾಧಾನ ಮಾಡಲು ಯತ್ನಿಸಿದ್ದಳು. ಆದರೆ, ಮಗ ಅಳುವುದನ್ನು ನಿಲ್ಲಿಸಲಿಲ್ಲ. ಈ ವೇಳೆ ಆಕೆ, ನೀನು ಇದೇ ರೀತಿ ಮಾಡಿದರೆ ನಿನ್ನನ್ನು ಬಿಟ್ಟು ತೆರಳುತ್ತೇನೆ. ಅಲ್ಲದೆ, ಲೈಂಗಿಕ ಕ್ರಿಯೆ ನಡೆಸಲು ನೀನು ಅನುಮತಿ ಕೂಡ ನೀಡಿದ್ದೀಯಾ ಎಂದು ಹೆದರಿಸಿದ್ದಳು. ಹೀಗಾಗಿ ಸಂತ್ರಸ್ತ ಈ ವಿಚಾರದಲ್ಲಿ ಸುಮ್ಮನೇ ಉಳಿದುಕೊಂಡಿದ್ದ.

  ಘಟನೆ ನಡೆದು ಎರಡು ವರ್ಷಗಳ ನಂತರದಲ್ಲಿ ಈ ಬಗ್ಗೆ ಬಾಲಕ ಹೇಳಿಕೊಂಡಿದ್ದಾನೆ. ಈ ಬಗ್ಗೆ ನೇರವಾಗಿ ಪೊಲೀಸರ ಬಳಿ ತೆರಳಿ ತನಗಾದ ಕಹಿ ಅನುಭವದ ಬಗ್ಗೆ ಹಂಚಿಕೊಂಡಿದ್ದಾನೆ. ಆಕೆಯನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
  Published by:Rajesh Duggumane
  First published: