ಮಾಡೆಲ್ಗಳಿಗೆ ಫ್ಯಾಷನ್ ಶೋ ಮಾಡಿ ಮಾಡಿ ಅಭ್ಯಾಸವಾಗಿರುತ್ತದೆ. ಆದರೂ, ಒಮ್ಮೊಮ್ಮೆ ಚಿಕ್ಕಪುಟ್ಟ ಅವಘಡಗಳು ನಡೆಯುತ್ತವೆ. ಫ್ಯಾಷನ್ ಶೋ ನೋಡಲು ಜನರೂ ಸಹ ತುಂಬಿಕೊಂಡಿರುತ್ತಾರೆ. ಆದರೆ, ಇಂತಹ ಫ್ಯಾಷನ್ ಶೋನಲ್ಲೇ ರನ್ ವೇನಲ್ಲಿ ನಡೆಯುವಾಗ, ಕೆಲವು ಮಾಡೆಲ್ಗಳು ತಮ್ಮ ಸಮತೋಲನ ಕಳೆದುಕೊಂಡು ವೇದಿಕೆಯ ಮೇಲೆ ಬೀಳುವಂತಹ ಘಟನೆಗಳೂ ಜರುಗುತ್ತದೆ. ಜಾರುವುದು ಮತ್ತು ಬೀಳುವುದು ಸಾಮಾನ್ಯ ಎನಿಸಿಕೊಂಡರೂ, ಬಿದ್ದ ಬಳಿಕ ಆ ಮಾಡೆಲ್ ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದು ಅತ್ಯಂತ ಮುಖ್ಯವಾಗಿದೆ. ಅಂತಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಬ್ರೈಡಲ್ ಫ್ಯಾಷನ್ ಶೋ ವೇಳೆ ಮಾಡೆಲ್ ಉರುಳಿ ಬೀಳುವುದನ್ನು ತೋರಿಸುತ್ತದೆ.
ವಿಡಿಯೋದಲ್ಲಿ ವಧುವಿನಂತೆ ಉಡುಪು ಧರಿಸಿರುವ ಮತ್ತು ಸೊಗಸಾದ ಆಭರಣಗಳ ಜೊತೆಗೆ ಮಹಿಳೆಯರ ಗುಂಪು ಭಾರವಾದ ಲೆಹೆಂಗಾ ಧರಿಸಿರುವುದನ್ನು ತೋರಿಸುತ್ತದೆ. ಒಬ್ಬೊಬ್ಬರಾಗಿ, ಎಲ್ಲಾ ಮಹಿಳೆಯರು ರ್ಯಾಂಪ್ ಮೇಲೆ ನಡೆದು ತಮ್ಮ ಸುಂದರ ಬ್ರೈಡಲ್ ಲೆಹೆಂಗಾವನ್ನು ಪ್ರದರ್ಶಿಸುತ್ತಾರೆ. ಆದರೆ, ಈ ವೇಳೆ ಇದ್ದಕ್ಕಿದ್ದಂತೆ ರ್ಯಾಂಪ್ ಮೇಲೆ ನಡೆಯುತ್ತಿದ್ದ ಒಬ್ಬರು ಮಾಡೆಲ್ ಸ್ಲಿಪ್ ಆಗಿ ಕ್ಯಾಮರಾ ಮುಂದೆ ಬಿದ್ದರು. ಅವರು ಬೀಳುವ ಸಮಯದಲ್ಲಿ, ಆಕೆ ತನ್ನ ಮುಂದೆ ನಡೆಯುತ್ತಿದ್ದ ಮತ್ತೊಬ್ಬರು ಮಾಡೆಲ್ನ ದುಪಟ್ಟಾವನ್ನು ಎಳೆದರು. ಆದರೆ, ಈ ಮಧ್ಯೆ, ಮತ್ತೊಬ್ಬರು ಮಾಡೆಲ್ ಆಕೆಯನ್ನು ಎದ್ದೇಳಲು ಸಹಾಯ ಮಾಡುತ್ತಾರೆ. ನಂತರ ಕೆಳಕ್ಕೆ ಬಿದ್ದ ಮಾಡೆಲ್ ತನ್ನ ನಡಿಗೆಯನ್ನು ಮುಂದುವರಿಸಲು ಇದು ಪ್ರೇರೇಪಿಸಿತು.
ಈ ವಿಡಿಯೋವನ್ನು ಇಲ್ಲಿ ನೋಡಿ..
View this post on Instagram
ಈ ವಿಡಿಯೋ ವೈರಲ್ ಆಗಿದ್ದು, ಹತ್ತಾರು ಸಾವಿರ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 20 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ಮತ್ತು ಸಾಕಷ್ಟು ಕಾಮೆಂಟ್ಗಳು ಹರಿದುಬರುತ್ತಿವೆ. ಕೆಲವರು ಈ ವಿಡಿಯೋವನ್ನು ಫನ್ನಿಯಾಗಿ ತೆಗೆದುಕೊಂಡು ನಕ್ಕಿದ್ದರೆ, ಇತರರು ಯಾರೊಂದಿಗಾದರೂ ಇದು ಸಂಭವಿಸಬಹುದು ಎಂದು ಹೇಳಿದರು.
''ಔಚ್ಹ್! ನಾನು ಸ್ವಲ್ಪ ಹೊತ್ತು ಹೆದರಿಕೊಂಡೆ .. " ಎಂದು ಒಬ್ಬರು ನೆಟ್ಟಿಗರು ಬರೆದಿದ್ದಾರೆ. ಹಲವು ನೆಟ್ಟಿಗರು ನಾನಾ ವಿಧದ ಕಾಮೆಂಟ್ಗಳನ್ನು ಬರೆದಿದ್ದಾರೆ.
ಈ ಮಧ್ಯೆ, ಜಾರಿ ಕೆಳಕ್ಕೆ ಬಿದ್ದ ಮಾಡೆಲ್ ಸಹ ಈ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. "ಸರಿ ... ಓಹ್ ಶಿಟ್ ಇದು ನಾನು. ಮುಂದಿದ್ದ ಮಾಡೆಲ್ನ ದುಪಟ್ಟಾದಿಂದ ಇದು ಸಂಭವಿಸಿದೆ. ಎಲ್ಲ ಮಾಡೆಲ್ಗಳಿಗೂ ನಡೆಯಲು ಸರಿಯಾದ ವ್ಯವಸ್ಥೆಗಳಿರಲಿಲ್ಲ. ಫ್ಲೋರ್ ತುಂಬಾ ಅನಾನುಕೂಲವಾಗಿತ್ತು ಏಕೆಂದರೆ ಎಲ್ಲರೂ ನಡೆಯಲು ಕಡಿಮೆ ಜಾಗ ಹೊಂದಿದ್ದರು'' ಎಂದು ಆಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ