ದೇಹದ ಆ ಭಾಗದ ಸೌಂದರ್ಯ ಹೆಚ್ಚಿಸಲು 14 ಲಕ್ಷ ಖರ್ಚು ಮಾಡಿದ ಮಾಡೆಲ್...ಈಗ ಕೋಟಿ ಎಣಿಸುತ್ತಿದ್ದಾಳೆ!
ಫ್ಲೋರಿಡಾದ 24 ವರ್ಷದ ಕಜುಮಿ ಎಂಬ ಇನ್ಸ್ಟಾಗ್ರಾಂ ಮಾಡೆಲ್ ತಾನು ಚೆನ್ನಾಗಿ ಕಾಣಬೇಕು ಎಂಬ ಬಯಕೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾಳೆ. ಸುಮಾರು 14 ಲಕ್ಷ ರೂ ಖರ್ಚು ಮಾಡಿ ಪೃಷ್ಠ ಚಿಕಿತ್ಸೆಗೆ ಒಳಗಾಗುತ್ತಾಳೆ. ಆದರೀಗ ಕುಳಿತುಕೊಳ್ಳಲಾಗದೆ ನಿಂತುಕೊಂಡೇ ಕೆಲ ಮಾಡುವ ಸ್ಥಿತಿ ಆಕೆಯದ್ದಾಗಿದೆ.
ಹೆಣ್ಣು ಮಕ್ಕಳಿಗೆ ಸೌಂದರ್ಯವತಿಯರಾಗಿರಬೇಕು ಎಂಬ ಬಯಕೆ ಇರುತ್ತದೆ. ಅದಕ್ಕಾಗಿ ಶಸ್ತ್ರ ಚಿಕಿತ್ಸೆಗೂ ಒಳಗಾಗುವವರು ಇದ್ದಾರೆ. ಮುಖದ ಸೌದರ್ಯ, ದೇಹದ ಸೌಂದರ್ಯ, ಚರ್ಮ, ಕೂದಲು ಹೀಗೆ ಇನ್ನೊಬ್ಬರಗಿಂತ ಅಂದವಾಗಿ ಮತ್ತು ಆಕರ್ಷಕವಾಗಿ ಕಾಣಬೇಕು ಎಂಬ ಕಾರಣಕ್ಕೆ ಕಾಸ್ಮೆಟಿಕ್ ಮತ್ತು ಶಸ್ತ್ರ ಚಿಕಿತ್ಸೆ ಒಳಗಾಗುವ ಮೂಲಕ ತಮ್ಮ ಅಂದವನ್ನು ವೃದ್ಧಿಸಲು ಮುಂದಾಗುತ್ತಾರೆ. ಅದಕ್ಕಾಗಿ ಲಕ್ಷ ಲಕ್ಷ ಹಣವನ್ನು ಖರ್ಚು ಮಾಡುವವರಿದ್ದಾರೆ. ಅದರಂತೆಯೇ ಫ್ಲೋರಿಡಾ ಮೂಲದ ಮಾಡೆಲ್ವೊಬ್ಬಳು ತನ್ನ ಪೃಷ್ಠ ಸೌಂದರ್ಯ ಹೆಚ್ಚಿಸಲು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾಳೆ. ಆದರೀಗ ಅವಳ ಸೌಂದರ್ಯವೇ ಆಕೆಗೆ ಮುಳುವಾಗಿದೆ, ಕುಳಿತುಕೊಳ್ಳಲು ಆಗದೆ ಕಷ್ಟಪಡುತ್ತಿದ್ದಾಳೆ!.
ಫ್ಲೋರಿಡಾದ 24 ವರ್ಷದ ಕಜುಮಿ ಸ್ಕರ್ಟ್ಸ್ಎಂ ಬ ಇನ್ಸ್ಟಾಗ್ರಾಂ ಮಾಡೆಲ್ ತಾನು ಚೆನ್ನಾಗಿ ಕಾಣಬೇಕು ಎಂಬ ಬಯಕೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾಳೆ. ಸುಮಾರು 14 ಲಕ್ಷ ರೂ ಖರ್ಚು ಮಾಡಿ ಪೃಷ್ಠ ಚಿಕಿತ್ಸೆಗೆ ಒಳಗಾಗುತ್ತಾಳೆ. ಆದರೀಗ ಕುಳಿತುಕೊಳ್ಳಲಾಗದೆ ನಿಂತುಕೊಂಡೇ ಕೆಲ ಮಾಡುವ ಸ್ಥಿತಿ ಆಕೆಯದ್ದಾಗಿದೆ.
ಕಜುಮಿ ಹಲವು ವರ್ಷಗಳಿಂದ ಸರಿಯಾದ ಆಹಾರ ಮತ್ತು ವ್ಯಾಯಾಮದ ವಿಧಾನಗಳ ಮೂಲಕ ತನ್ನ ಸೌಂದರ್ಯ ಹೆಚ್ಚಿಸಲು ಮುಂದಾಗುತ್ತಾಳೆ. ಆದರೆ ಇದಾವುದು ಆಕೆಗೆ ಸಹಾಯವಾಗುವುದಿಲ್ಲ. ನಂತರ ತುಟಿ, ಎದೆಯ ಭಾಗ, ಮತ್ತು ಪೃಷ್ಠ ಚಿಕಿತ್ಸೆಗೆ ಒಳಗಾಗುತ್ತಾಳೆ. ಸುಮಾರು 26 ಸಾವಿರ ಖರ್ಚು ಮಾಡುತ್ತಾಳೆ. ಆದರೆ ಅಲ್ಲೂ ಶಸ್ತ್ರ ಚಿಕಿತ್ಸೆಯಶಸ್ವಿಯಾಗುವುದಿಲ್ಲ. ಆಕೆ ನಿರೀಕ್ಷಿಸಿದಂತೆ ಕಾಣಲಿಲ್ಲ.
ನಂತರ ಕಜುಮಿ 14 ಲಕ್ಷ ಖರ್ಚು ಮಾಡಿ ಪೃಷ್ಠ ಚಿಕಿತ್ಸೆ ಮಾಡಿಸುತ್ತಾಳೆ. ಆದರೆ ಆಕೆ ಅಂದುಕೊಂಡತೆ ಕಂಡರು ಪೃಷ್ಠ ಸಮಸ್ಯೆಯನ್ನು ಎದುರಿಸುತ್ತಿದ್ದಾಳೆ. ಮಾತ್ರವಲ್ಲ, ಅದರಿಂದಲೇ ಕೋಟಿ ಹಣ ಎಣಿಸುತ್ತಿದ್ದಾಳೆ.
ಈ ಬಗ್ಗೆ ಮಾತನಾಡಿದ ಕಜುಮಿ, ‘‘ನಾನು ಎಲ್ಲ ಕೆಲಸವನ್ನು ನಿಂತುಕೊಂಡು ಮಾಡುತ್ತೇನೆ. ಊಟಕ್ಕೆ ಕುಳಿತುಕೊಳ್ಳುವಾಗ ನನ್ನು ಬಿಬಿಎಲ್ ದಿಂಬಿನ ಸಹಾಯ ಪಡೆದು ಊಟ ಮಾಡುತ್ತೇನೆ’’
‘‘ನನ್ನ ಸೊಂಟ ಮತ್ತು ಪೃಷ್ಠ ಮೇಲೆ ಯಾವುದೇ ಒತ್ತಡ ಹಾಕುವಂತಿಲ್ಲ. ಯಾಕೆಂದರೆ ತೊಂದರೆ ಇದೆ. ಹಾಗಾಗಿ ನಾನು ಕುಳಿತುಕೊಳ್ಳದೆ ಇಡಿ ವರ್ಷ ಬದುಕಬೇಕಾಗುತ್ತದೆ’’ ಎಂದು ಕಜುಮಿ ಹೇಳಿದ್ದಾಳೆ.
ಕಜುಮಿ ಪೃಷ್ಠ ಚಿಕಿತ್ಸೆಯಿಂದ ಸಮಸ್ಯೆ ಎದುರಿಸುತ್ತಿದ್ದರು. ಆ ಸಮಸ್ಯೆಯನ್ನು ಸರಿ ಪಡಿಸಲು ಆಕೆ ಸಿದ್ಧಳಿಲ್ಲ. ಏಕೆಂದರೆ ಕಜುಮಿ ಓನ್ಲಿ ಫ್ಯಾನ್ಸ್ನಲ್ಲಿ ಖಾತೆ ತೆರೆದಿದ್ದು, ಅದರಿಂದ ಆಗೆಕೆ ಕೋಟಿಗಟ್ಟಲೆ ಹಣ ಬರುತ್ತಿದೆಯಂತೆ. ಅದರ ಜೊತೆಗೆ ಇನ್ಸ್ರಾಂ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ಫೋಟೋ ಹಂಚುವ ಮೂಲಕ ಹಣ ಗಳಿಸುತ್ತಿದ್ದಾಳೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ