ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಹಾಕಿ ಸುದ್ದಿಯಾದ ಬಿಗ್ ಬಾಸ್ ಸ್ಪರ್ಧಿ..!

ಇದಲ್ಲದೆ 2014ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ವೈಯಕ್ತಿಕ ಗರಿಷ್ಠ ಮೊತ್ತ 264 ರನ್ ಸಿಡಿಸಿದ್ದರು.

zahir | news18
Updated:June 4, 2019, 10:48 AM IST
ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಹಾಕಿ ಸುದ್ದಿಯಾದ ಬಿಗ್ ಬಾಸ್ ಸ್ಪರ್ಧಿ..!
ಸೋಫಿಯಾ ಹಯಾತ್
  • News18
  • Last Updated: June 4, 2019, 10:48 AM IST
  • Share this:
ಬಿಟೌನ್ ಮಾಡೆಲ್, ವಿವಾದಗಳ ತಾರೆ ಸೋಫಿಯಾ ಹಯಾತ್ ಮತ್ತೆ ಸುದ್ದಿಯಲ್ಲಿದ್ದಾರೆ. ಒಂದಷ್ಟು ಗೀತೆಗಳ ಮೂಲಕ ಹೊಸ ಹವಾ ಎಬ್ಬಿಸಿದ್ದ ಈ ತಾರೆ, ಈ ಬಾರಿ ಕೂಡ ನಗ್ನ ಚಿತ್ರದ ಮೂಲಕ ಪಡ್ಡೆಗಳಿಗೆ ಮನತಣಿಸಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ನಗ್ನ ಫೋಟೋವನ್ನು ಹರಿಬಿಟ್ಟಿರುವ ಸೋಫಿಯಾ, 'ಮಿಂಚುತ್ತಿರುವೆ, ಏಕೆಂದರೆ ನೀನೊಬ್ಬಳು ಸ್ಟಾರ್' ಎಂದು ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ.

ಈ ಸಖತ್ ಹಾಟ್​ ಫೋಟೋ ಭಾರೀ ವೈರಲ್​ ಆಗುತ್ತಿದ್ದಂತೆ  ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮ ನಗ್ನ ಚಿತ್ರವನ್ನು ಸಮರ್ಥಿಸಿಕೊಂಡಿರುವ ಸೋಫಿಯಾ ಇದೆಲ್ಲವೂ ಪಾಶ್ಚಾತ್ಯ ಸಂಸ್ಕೃತಿಯಿಂದ ಭಾರತಕ್ಕೆ ಬಂದ ಬಳವಳಿ ಎಂದಿದ್ದಾರೆ. ಈ ಹಿಂದೆ ನ್ಯೂಡ್​ ಯೋಗ ಎಂಬ ಶೀರ್ಷಿಕೆಯಲ್ಲಿ ಸಂನ್ಯಾಸಿನಿಯ ವೇಷ ಧರಿಸಿ ಫೋಟೋ ಹಾಕಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೋಫಿಯಾ ಬಗ್ಗೆ ಹಸಿಬಿಸಿ ಚರ್ಚೆಗಳು ನಡೆದಿದ್ದವು.

ಸೋಫಿಯಾ ಹಯಾತ್


ಹಿಂದಿಯ ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ಹಿಂದೊಮ್ಮೆ ವಿಷಯದಲ್ಲಿ ಸುದ್ದಿಯಾಗಿದ್ದರು.  2014ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ವೈಯಕ್ತಿಕ ಗರಿಷ್ಠ ಮೊತ್ತ 264 ರನ್ ಸಿಡಿಸಿದ್ದರು. ಈ ವೇಳೆ ಸೋಫಿಯಾ ರೋಹಿತ್​ಗೆ ತನ್ನ ನಗ್ನ ಚಿತ್ರಗಳನ್ನು ಕಳುಹಿಸಿ ಸುದ್ದಿ ಕಾಲಂಗಳಲ್ಲಿ ಸ್ಥಾನಗಿಟ್ಟಿಸಿದ್ದರು.

ನಗ್ನ ಚಿತ್ರದ ಮೂಲಕವೇ ಪಡ್ಡೆಗಳ ನಿದ್ದೆಗೆಡಿಸುತ್ತಿರುವ ಸೋಫಿಯಾ ತಮ್ಮ ಪೋಸ್ಟ್​ ಎಲ್ಲರೂ ನಕಲಿ ಜೀವನವನ್ನು ಬಿಟ್ಟು ಪೂರ್ಣತೆಯಿಂದ ನಾವೆಲ್ಲ ಬಾಳಬೇಕು. ನಾನು ಎಲ್ಲರಿಗೂ ತಾಯಿ ಇದ್ದಂತೆ. ನಾನು ಮದರ್ ಸೋಫಿಯಾ ಎಂದು ಬಿಟ್ಟಿ ಫಿಲಾಸಫಿಯನ್ನು ಕೂಡ ನೀಡುತ್ತಾರೆ. ಇಷ್ಟೇ ಅಲ್ಲದೆ ಬಣ್ಣದಲೋಕದಲ್ಲಿ ಈಕೆ ಗಾಯಕಿಯೂ ಮಿಂಚಿದ್ದಾರೆ. ಸೋಫಿಯಾ ಹಾಡಿರುವ ಗೀತೆಗಳು ಈ ಹಿಂದೆ ಸಾಕಷ್ಟು ಹಲ್​ಚಲ್ ಸೃಷ್ಟಿಸಿತ್ತು. ಆಲ್ಬಂನಲ್ಲೂ ಬಿಚ್ಚಮ್ಮಳಾಗಿ ಕಾಣಿಸಿಕೊಂಡಿದ್ದ ಈ ಮಾಡೆಲ್​ನ ವಿಡಿಯೋ ಭಾರೀ ವೈರಲ್ ಆಗಿತ್ತು.ಇದೀಗ ನ್ಯೂಡ್ ಫೋಟೋದೊಂದಿಗೆ ಮರಳಿರುವ ಸೋಫಿಯಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ವಿವಾದವನ್ನೇ ಮೈಗೆಳೆದುಕೊಳ್ಳುವ ಛಾಳಿ ಹೊಂದಿರುವ ಸೋಫಿಯಾ ಹಯಾತ್ ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದೇ ಸತ್ಯ.

ಇದನ್ನೂ ಓದಿ: DRDO Recruitment 2019: 10ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ: ತಿಂಗಳ ವೇತನ 28 ಸಾವಿರ ರೂ.
First published: June 4, 2019, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading