Amarantha Robinson: ಮೂರು ವರ್ಷಗಳ ಕಾಲ ಸೆಕ್ಸ್​​ನಿಂದ ದೂರ ಉಳಿದ ಕಾರಣ ಬಿಚ್ಚಿಟ್ಟ ರೂಪದರ್ಶಿ

ಪುರುಷರು ಕೇವಲ ಸೆಕ್ಸ್ ಎಂಜಾಯ್ ಮಾಡೋದಕ್ಕೆ ನನ್ನ ಬಳಿ ಬರ್ತಾರೆ ಎಂದು ಅರ್ಥವಾದಾಗ ಮನಸ್ಸು ಭಾರವಾಗುತ್ತಿತ್ತು. ದೈಹಿಕ ಸಂಪರ್ಕದ ಬಳಿಕ ಸಣ್ಣ ಸಣ್ಣ ಕಾರಣಗಳನ್ನು ನೀಡಿ ದೂರವಾಗುತ್ತಿದ್ದರು. ಅಂದು ಜೀವನವನ್ನು ಸೆಕ್ಸ್ ಬಿಟ್ಟು ನೋಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡಿದೆ.

ರೂಪದರ್ಶಿ ಅಮರಂಥಾ ರಾಬಿನ್ಸನ್

ರೂಪದರ್ಶಿ ಅಮರಂಥಾ ರಾಬಿನ್ಸನ್

 • Share this:
  ಸೆಕ್ಸ್ ಜೀವನದ ಒಂದು ಪ್ರಮುಖ ಭಾಗ ಎಂದು ಹೇಳಲಾಗುತ್ತದೆ. ಆದ್ರೆ ಕೆಲವೊಮ್ಮೆ ಇದೇ ಕಾರಣದಿಂದಲೇ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳು ಆಗುತ್ತವೆ. ಆಸ್ಟ್ರೇಲಿಯಾದ ಖ್ಯಾತ ರೂಪದರ್ಶಿ ಅಮರಂಥಾ ರಾಬಿನ್ಸನ್ (Amarantha Robinson) ನೀಡಿರುವ ಸಂದರ್ಶನದಲ್ಲಿ ತಮ್ಮ ಸೆಕ್ಸ್ ಲೈಫ್‍(Sex Life)ಗೆ ಸಂಬಂಧಿಸಿದ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೇಗೆ ತಾವು ಮೂರು ವರ್ಷ ಲೈಂಗಿಕ ಜೀವನದಿಂದ ದೂರ ಉಳಿದರು? ಆ ಮೂರು ವರ್ಷಗಳಲ್ಲಿ ಅಮರಂಥಾ ಜೀವನದಲ್ಲಾದ ಬದಲಾವಣೆಗಳೇನು ಎಂಬುದರ ಮಾಹಿತಿ ಇಲ್ಲಿದೆ.

  "ಸೆಕ್ಸ್ ಕೆಟ್ಟದ್ದು, ಇದರಿಂದ ಸಿಗೋದು ನೋವು ಮಾತ್ರ"

  30 ವರ್ಷದವಳಿದ್ದಾಗ ಅಂದ್ರೆ 2016ರಲ್ಲಿ ನನ್ನ ಡೇಟಿಂಗ್ ಲೈಫ್ ಚೆನ್ನಾಗಿರಲಿಲ್ಲ. ಜೀವನ ಒಂದು ರೀತಿ ಬದಲಾವಣೆಗಳ ಜೊತೆ ಹೊಂದಿಕೊಂಡು ಹೋದಂತೆ ಆಗಿತ್ತು. ಆ ಸಮಯದಲ್ಲಿ ಹಲವು ಪುರುಷರನ್ನು ಭೇಟಿಯಾಗುತ್ತಿದ್ದೆ, ಇಷ್ಟವಾದ್ರೆ ಇಬ್ಬರು ದೈಹಿಕ ಸಂಪರ್ಕ ಹೊಂದುತ್ತಿದ್ದೇವೆ. ಆದ್ರೆ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಬ್ರೇಕಪ್ ಆಗುತ್ತಿತ್ತು. ಆ ಸಮಯದಲ್ಲಿ ಪುರುಷರು ಕೇವಲ ಸೆಕ್ಸ್ ಎಂಜಾಯ್ ಮಾಡೋದಕ್ಕೆ ನನ್ನ ಬಳಿ ಬರೋದು ಅರ್ಥವಾದಾಗ ಮನಸ್ಸು ಭಾರವಾಗುತ್ತಿತ್ತು. ದೈಹಿಕ ಸಂಪರ್ಕದ ಬಳಿಕ ಸಣ್ಣ ಸಣ್ಣ ಕಾರಣಗಳನ್ನು ನೀಡಿ ದೂರವಾಗುತ್ತಿದ್ದರು. ಅಂದು ಜೀವನವನ್ನು ಸೆಕ್ಸ್ ಬಿಟ್ಟು ನೋಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡಿದೆ. ಅಂದಿನಿಂದ ದೈಹಿಕ ಸಂಪರ್ಕ ಹೊಂದೋದನ್ನು ನಿಲ್ಲಿಸಿದೆ. ಆವತ್ತು ನನ್ನ ವಿಶ್ವಾಸ ಮತ್ತಷ್ಟು ಸದೃಢವಾಯ್ತು. ಸೆಕ್ಸ್ ಎಂಬುವುದು ಕೆಟ್ಟದ್ದು, ಇದರಿಂದ ಕೇವಲ ನೋವು ಸಿಗುತ್ತೆ ಎಂದು ತಿಳಿಯಿತು ಅಂತ ಅಮರಂಥಾ ರಾಬಿನ್ಸನ್ ಹೇಳಿದ್ದಾರೆ.

  ಸೆಕ್ಸ್ ನಿಂದ ಮೂರು ವರ್ಷ ದೂರ

  ಸೆಕ್ಸ್ ನಿಂದ ದೂರವಾದ ಆರಂಭದ ಎರಡು ವರ್ಷಗಳನ್ನು ಚೆನ್ನಾಗಿ ಕಳೆದೆ. ಡೇಟಿಂಗ್ ಲೈಫ್ ಭಾವನಾತ್ಮಕವಾಗಿ ತೆಗೆದುಕೊಳ್ಳೋದನ್ನ ನಿಲ್ಲಿಸಿ ತುಂಬಾ ಸಂತೋಷವಾಗಿ ಜೀವನ ಕಳೆದೆ. ಈ ನಡುವೆ ಚರ್ಚ್ ಗೆ ತೆರಳಿ ಪ್ರಾರ್ಥನೆ ಮತ್ತು ಧ್ಯಾನದಲ್ಲಿ ನನ್ನನ್ನು ತೊಡಗಿಸಿಕೊಂಡು ಸಾಂಪ್ರದಾಯಿಕ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಭಾವನಾತ್ಮಕವಾಗಿ ಸ್ಟ್ರಾಂಗ್ ಆದೆ. ಆದ್ರೆ ಇದರ ಪ್ರಭಾವ ನನ್ನ ಕೆಲಸದ ಮೇಲೆ ಬೀರಿತು. ಯಾವುದೇ ಕೆಲಸ ಮಾಡಿದ್ರೂ ಅದಕ್ಕೆ ನನ್ನ ಸಾಮಾಥ್ರ್ಯಕ್ಕೂ ಮೀರಿದ ಎನರ್ಜಿ ಹಾಕಲು ಆರಂಭಿಸಿದೆ. ಮೂರನೇ ವರ್ಷಕ್ಕೆ ಡೇಟಿಂಗ್ ಲೈಫ್ ನನ್ನ ಜೀವನದ ಕೆಟ್ಟ ಭಾಗ ಎಂದು ತಿಳಿಯಿತು.

  ಅಮರಂಥಾ ಜೀವನದಲ್ಲಿ ಮುಂದೇನಾಗಿದ್ದು?

  ಮೂರು ವರ್ಷದ ಬಳಿಕ ನನ್ನ ಜೀವನದಲ್ಲಿ ಯಾವುದೇ ರೋಮಾಂಚನ ಉಳಿದಿರಲಿಲ್ಲ ಸೆಕ್ಸ್ ನಿಂದ ಮಾತ್ರ ದೂರವಾಗಬೇಕು ಎಂದು ಈ ಮಾರ್ಗ ಆಯ್ಕೆ ಮಾಡಿಕೊಂಡಿದ್ದ ನನ್ನ ಹೃದಯದಲ್ಲಿ ಉದಾಸೀನತೆ ಮನೆ ಮಾಡಿತ್ತು. ನನ್ನ ದೇಹ ದಿನದಿಂದ ದಿನಕ್ಕೆ ಲೈಂಗಿಕತೆಯಿಂದ ದೂರವಾಗುತ್ತಿತ್ತು. ಚರ್ಚ್ ಗೆ ತೆರಳುವ ಆಸಕ್ತಿಯೂ ಸಹ ದೂರವಾಗುತ್ತಿತ್ತು. ಈ ನಡುವೆ ನನ್ನ ಜೀವನಕ್ಕೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ. ಅದೇ ವೇಳೆಗೆ ಆನ್‍ಲೈನ್ ನಲ್ಲಿ ಭೇಟಿಯಾದ ಐಲ್ಯಾಂಡ್ ಮೂಲದ ಗೆಳೆಯ ಪ್ರವಾಸದ ಆಯ್ಕೆಯನ್ನು ನನ್ನ ಮುಂದಿಟ್ಟನು. ಇಂಗ್ಲೆಂಡ್ ಪ್ರವಾಸದ ಮಾತು ಬರುತ್ತಿದ್ದಂತೆ ಹೊಸ ಹೊಸ ಯೋಚನೆ ಮತ್ತು ಕನಸುಗಳು ನನ್ನನ್ನು ಆವರಿಸಿದವು.

  ಇದನ್ನೂ ಓದಿ: Real Life Tarzan: 41 ವರ್ಷ ಕಾಡಿನಲ್ಲಿದ್ದ ಈ ವ್ಯಕ್ತಿಗೆ ಮಹಿಳೆ, ಲೈಂಗಿಕತೆ ಎಂದರೇನು ಎಂಬುದೇ ಗೊತ್ತಿರಲಿಲ್ಲವಂತೆ..!

  ಇಂಗ್ಲೆಂಡ್ ಪ್ರವಾಸ ಮಿಸ್ ಮಾಡಿಕೊಂಡ್ರೆ ಬದುಕೋದನ್ನ ನಾನು ಮರೆಯಬಹುದು ಎಂಬ ಭಯ ಶುರುವಾಗಿತ್ತು. ಕೊನೆಗೆ ಗೆಳೆಯನ ಜೊತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದೆ. ಅಲ್ಲಿ ನಾವು ಮಾಡಬೇಕೆಂದು ಅಂದುಕೊಂಡಿದನ್ನು ಎಲ್ಲವೂ ಮಾಡಿದೆ. ಇಂಗ್ಲೆಂಡ್ ನಿಂದ ಹಿಂದಿರುವ ವೇಳೆ ನನ್ನ ಜೀವನದಲ್ಲಿ ಮತ್ತೆ ರೋಮಾಂಚನ ಕಾಣಿಸಿಕೊಂಡಿತ್ತು. ನನ್ನ ಬದುಕಿನ ಪುಟಗಳನ್ನು ಕೆಲವೊಮ್ಮೆ ಮತ್ತೆ ನೋಡುತ್ತಿರುತ್ತೇನೆ. ನನ್ನ ಜೀವನದಲ್ಲಾದ ಎಲ್ಲ ಘಟನೆಗಳಿಗೂ ಸೆಕ್ಸ್ ನ್ನು ದೂಷಿಸಿದೆ. ನಂತರ ಎಲ್ಲದರಿಂದ ದೂರವಾದಗಲೂ ಆ ಕ್ಷಣಗಳ ಮಹತ್ವ ಅರ್ಥವಾಯ್ತು. ಇದೀಗ ಎರಡನೇ ನನ್ನ ಜೀವನವನ್ನು ಬರೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

  ವರದಿ: ಮೊಹ್ಮದ್​ ರಫೀಕ್​ ಕೆ
  Published by:Kavya V
  First published: