ಭಾರತದಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚು. ಈ ಪೈಕಿ ಇಡೀ ವಿಶ್ವದಲ್ಲೇ ಅತಿದೊಡ್ಡ ಕುಟುಂಬ ಎಂಬ ಕೀರ್ತಿಗೆ ಕಾರಣರಾಗಿದ್ದ ಮಿಜೋರಾಂನ ವ್ಯಕ್ತಿ ಮೃತಪಟ್ಟಿದ್ದಾರೆ. 38 ಹೆಂಡತಿಯರು, 89 ಮಕ್ಕಳು, 33 ಮೊಮ್ಮಕ್ಕಳು ಮತ್ತು ಇಬ್ಬರು ಮರಿ ಮೊಮ್ಮಕ್ಕಳನ್ನು ಹೊಂದಿದ್ದ ಜಿಯೋನಾ ಚಾನಾ ಕೊನೆಯುಸಿರೆಳೆದಿದ್ದಾರೆ. ಮಿಜೋರಾಂನ ಬಕ್ತಾಂಗ್ ತ್ಲಾಂಗ್ನುವಾಮ್ ಎಂಬ ಗ್ರಾಮದಲ್ಲಿ ಜಿಯೋನಾ ಚಾನಾ ನಿಧನರಾಗಿದ್ದಾರೆ. ಇವರಿಗೆ 76 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ಜಿಯೋನಾ ಚಾನಾ ಅವರ ನಿಧನವನ್ನು ಮಿಜೋರಾಂ ಸಿಎಂ ಝೋರಾಮ್‌ಥಂಗಾ ಖಚಿತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಝೋರಾಮ್‌ಥಂಗಾ, ಭಾರವಾದ ಹೃದಯದಿಂದ ಮಿಜೋರಾಂ 38 ಹೆಂಡತಿಯರು ಮತ್ತು 89 ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬದ ಮುಖ್ಯಸ್ಥರಾದ ಶ್ರೀ ಜಿಯಾನ್ (76) ಗೆ ಬದುಕಿಗೆ ವಿದಾಯ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಾಲ್ಕು ಅಂತಸ್ತಿನ ಇವರ ಮನೆಯಲ್ಲಿ ಒಟ್ಟಾರೆ 162 ಜನರಿದ್ದರು. ಈ ಮನೆಯನ್ನು ಛುವಾನ್ ಥಾರ್ ರನ್ ಅಥವಾ ಹೊಸ ಪೀಳಿಗೆಯ ಮನೆ ಎಂದು ಕರೆಯುತ್ತಿದ್ದರು. "ಮಿಜೋರಾಂ ಮತ್ತು ಬಕ್ತಾಂಗ್ ತ್ಲಾಂಗ್ನುವಾಮ್‌ನಲ್ಲಿರುವ ಅವರ ಗ್ರಾಮವು ಕುಟುಂಬದಿಂದಾಗಿ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿತ್ತು. ರೆಸ್ಟ್ ಇನ್ ಪೀಸ್ ಸರ್!" ಎಂದು ಸಹ ಮಿಜೋರಾಂ ಸಿಎಂ ಟ್ವೀಟ್ ಮಾಡಿದ್ದಾರೆ. ಜತೆಗೆ ಸಿಎಂ ಜಿಯೋನಾ ಪೂರ್ಣ ಕುಟುಂಬದ ಫೋಟೋವನ್ನೂ ಪೋಸ್ಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Smart Cooking: ಕುಕ್ಕರ್ ಬಳಸಿ ಡಾಬಾ ಶೈಲಿಯ ರೋಟಿಯನ್ನು ಮನೆಯಲ್ಲೇ ಮಾಡಬಹುದು.. ವಿಧಾನ ಇಲ್ಲಿದೆ!
ಮಿಜೋರಾಂನ ರಾಜಧಾನಿಯಾದ ಐಜ್ವಾಲ್‌ನ ದಕ್ಷಿಣಕ್ಕೆ 100 ಕಿಲೋಮೀಟರ್ ದೂರದಲ್ಲಿರುವ ಸೆಂಟ್ರಲ್ ಸೆರ್ಚಿಪ್ ಜಿಲ್ಲೆಯ ಬಕ್ತಾಂಗ್ ಗ್ರಾಮದ ಮೂಲದವರು ಜಿಯೋನಾ. ಅವರು ಜುಲೈ 21,1945 ರಂದು ಜನಿಸಿದರು. ಅವರು ತಮ್ಮ 15 ನೇ ವಯಸ್ಸಿನಲ್ಲಿ ಅವರ ಮೊದಲ ಪತ್ನಿ ಜಥಿಯಂಗಿಯನ್ನು ಮದುವೆಯಾಗಿದ್ದರು. ಅವರ ಪತ್ನಿ ಜಥಿಯಂಗಿ, ಪತಿ ಜಿಯೋನಾಗಿಂತ ಮೂರು ವರ್ಷ ದೊಡ್ಡವರಾಗಿದ್ದರು. ಇನ್ನು, ತಮ್ಮ 60ನೇ ವಯಸ್ಸಿನಲ್ಲಿ ಅವರು ಕೊನೆಯ ಮದುವೆಯಾಗಿದ್ದರು.
ಅವರು ತಮ್ಮ ದೊಡ್ಡ ಕುಟುಂಬಕ್ಕೆ ಅನುಕೂಲವಾಗುವಂತೆ ನಾಲ್ಕು ಅಂತಸ್ತಿನ ಭವನವನ್ನು ನಿರ್ಮಿಸಿದರು. ಈ ಮನೆಯನ್ನು "ಚುವಾನ್ ಥಾರ್ ರನ್" ಅಥವಾ ಹೊಸ ಪೀಳಿಗೆಯ ಮನೆ ಎಂದು ಕರೆಯಲಾಗುತ್ತದೆ ಮತ್ತು ಇದು ಪರ್ವತದ ಹಳ್ಳಿಯಾದ ಬಕ್ತಾಂಗ್‌ನಲ್ಲಿದೆ. "ನನ್ನ ವಂಶವನ್ನು ವಿಸ್ತರಿಸಲು, ನಾನು ಯು.ಎಸ್‌ಗೆ ಹೋಗಲು ಸಹ ಸಿದ್ಧನಿದ್ದೇನೆ" ಎಂದು ಸುಮಾರು 400 ಧಾರ್ಮಿಕ ಪಂಥದ ಸದಸ್ಯರನ್ನು ಹೊಂದಿರುವ ಚಾನಾ ಒಮ್ಮೆ ಹೇಳಿದ್ದರು.
ಪತ್ರಿಕಾ ಸಂದರ್ಶನವೊಂದರಲ್ಲಿ, ಚಾನಾ ಅವರ ಮಗನೊಬ್ಬ, ತಮ್ಮ ಅಜ್ಜ ಸಹ ಅನೇಕ ಹೆಂಡತಿಯರನ್ನು ಹೊಂದಿದ್ದರು. ಅವರನ್ನು ನೋಡಿಕೊಳ್ಳಲೆಂದೇ ಹಳ್ಳಿಯ ಬಡ ಮಹಿಳೆಯರನ್ನು ಮದುವೆಯಾಗಿದ್ದರು ಎಂದು ವಿವರಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ