ಪುಟ್ಟ ಪೋರನ ಮುಗ್ಧತೆ: ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಬಾಲಕನಿಗೆ ನೆಟ್ಟಿಗರು ಫಿದಾ

ಈ ನಡುವೆ ಕೋಳಿ ಮತ್ತು ಹತ್ತು ರೂ.ವನ್ನು ಹಿಡಿದು ನಿಂತಿದ್ದ ಬಾಲಕನ ಫೋಟೋವನ್ನು ಆಸ್ಪತ್ರೆ ಸಿಬ್ಬಂದಿಯೊಬ್ಬರು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 

zahir | news18
Updated:April 8, 2019, 11:45 PM IST
ಪುಟ್ಟ ಪೋರನ ಮುಗ್ಧತೆ: ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಬಾಲಕನಿಗೆ ನೆಟ್ಟಿಗರು ಫಿದಾ
ದೆರಕ್ ಸಿ ಲಾಲ್ ಚಾನ್ಹಿಮಾ
zahir | news18
Updated: April 8, 2019, 11:45 PM IST
ಮಕ್ಕಳಲ್ಲಿನ ಮುಗ್ದತೆಯಲ್ಲಿ ಎಂತವರನ್ನೂ ಮಂತ್ರಮುಗ್ದರನ್ನಾಗಿ ಮಾಡುವಂತಹ ಶಕ್ತಿಯಿದೆ. ಇದಕ್ಕೆ ತಾಜಾ ಉದಾಹರಣೆ ಮಿಜೋರಂನ ಈ ಪುಟ್ಟ ಪೋರ. ತನ್ನ ಸೈಕಲ್​ಗೆ ಸಿಲುಕಿ ಸಾವನ್ನಪ್ಪಿದ್ದ ಕೋಳಿ ಮರಿಯನ್ನು ಆಸ್ಪತ್ರೆಗೆ ಕೊಂಡೊಯ್ದು ಅಂಗಲಾಚಿದ ದೆರಕ್ ಸಿ ಲಾಲ್ ಚಾನ್ಹಿಮಾ ಈಗ ಸೋಷಿಯಲ್ ಮೀಡಿಯಾ ಸೂಪರ್ ಸ್ಟಾರ್. ಈ ಪುಟ್ಟ ಮಗು ತೋರಿದ ಮಾನವೀಯ ಗುಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹೊಗಳಲಾಗುತ್ತಿದೆ.

ಮಾನವೀಯತೆ ಮರೆತ ಸಮಾಜದಲ್ಲಿ ಒಂದು ಕೈಯಲ್ಲಿ ಕೋಳಿ ಮರಿ ಮತ್ತೊಂದು ಕೈಯಲ್ಲಿ ಹತ್ತು ರೂ ಹಿಡಿದು ನಿಂತ ದೆರಕ್ ಸಿ ಲಾಲ್ ಚಾನ್ಹಿಮಾನ ಫೋಟೋ ಎಲ್ಲರನ್ನು ಮೂಕವಿಸ್ಮಿತರನ್ನಾಗಿದೆ. ಈ ಬಿಲಿಯನ್ ಡಾಲರ್ ಪಿಕ್ಚರ್​ಗೆ ಒಂದೇ ದಿನದಲ್ಲಿ ಲಕ್ಷಗಳಟ್ಟಲೇ ಲೈಕ್ಸ್ ಹಾಗೂ 10 ಸಾವಿರಕ್ಕೂ ಹೆಚ್ಚಿನ ಕಮೆಂಟ್​ಗಳು ಹರಿದು ಬಂದಿದೆ.

ನಡೆದಿದ್ದೇನು?

ಮಿಜೋರಂ ರಾಜ್ಯದ ಸಾಯಿರಂಗ್ ಎಂಬಲ್ಲಿಯ ಆರು ವರ್ಷ ವಯಸ್ಸಿನ ದೆರಕ್ ಸಿ ಲಾಲ್ ಚಾನ್ಹಿಮಾ ಎಂಬ ಪೋರ ಸೈಕಲ್​ನಲ್ಲಿ ಆಡುತ್ತಿದ್ದ. ಈ ಸಂದರ್ಭದಲ್ಲಿ ನೆರೆ ಮನೆಯ ಕೋಳಿ ಮರಿ ಆತನ ಸೈಕಲ್ ಚಕ್ರಕ್ಕೆ ಸಿಲುಕಿದೆ. ಅಷ್ಟೇ ಅಲ್ಲದೆ ತಕ್ಷಣವೇ ಅದು ಸತ್ತು ಹೋಗಿತ್ತು. ಕೂಡಲೇ ಈ ಬಾಲಕ ಆ ಕೋಳಿಮರಿಯನ್ನು ಕೈಯಲ್ಲಿ ಹಿಡಿದು ಮನೆಗೆ ಓಡಿ ಬಂದಿದ್ದಾನೆ. ತನ್ನ ತಂದೆಯೊಂದಿಗೆ ಕೋಳಿ ಮರಿಯನ್ನು ಉಳಿಸಬೇಕಿದೆ. ಅದಕ್ಕಾಗಿ ಆಸ್ಪತ್ರೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾನೆ. ಚಿಕಿತ್ಸೆಗೆ ಹೊರಡುವ ಮುನ್ನ ತನ್ನ ಬಳಿ ಉಳಿತಾಯ ಮಾಡಿಟ್ಟುಕೊಂಡಿದ್ದ 10 ರೂ ಅನ್ನು ತೆಗೆದುಕೊಂಡು ಹೋಗಿದ್ದ. ಅಲ್ಲದೆ ಆಸ್ಪತ್ರೆಯಲ್ಲಿ ಕೋಳಿಯನ್ನು ಉಳಿಸುವಂತೆ ಡಾಕ್ಟರ್​ಗಳೊಂದಿಗೆ ಪುಟ್ಟ ಪುಟಾಣಿ ಅಂಗಲಾಚಿದ್ದಾನೆ. ಒಂದು ಕೈಯಲ್ಲಿ ಕೋಳಿ ಮತ್ತೊಂದು ಕೈಯಲ್ಲಿ 10 ರೂ. ಹಿಡಿದು ಕೋಳಿ ಮರಿಯನ್ನು ಉಳಿಸುವಂತೆ ಪುಟ್ಟ ಮಗು ಪರಿ ಪರಿಯಾಗಿ ಕೇಳಿಕೊಳ್ಳುತ್ತಿರುವುದು ಅಲ್ಲಿದ್ದವರ ಮನವನ್ನು ಕರಗಿಸಿತು.

ಅದರಂತೆ ಕೋಳಿಯನ್ನು ಪರಿಶೀಲಿಸಿದ ನರ್ಸ್​ ಇದು ಸತ್ತು ಹೋಗಿದೆ ಎಂದು ಬಾಲಕನನ್ನು ಸಮಾಧಾನ ಮಾಡಿದ್ದಾರೆ. ಅಲ್ಲದೆ ಕೋಳಿಮರಿಗೆಲ್ಲಾ ಇಲ್ಲಿ ಚಿಕಿತ್ಸೆ ನೀಡುವುದಿಲ್ಲ ಎಂದು ತಿಳಿ ಹೇಳಿದ್ದಾರೆ. ಈ ನಡುವೆ ಕೋಳಿ ಮತ್ತು ಹತ್ತು ರೂ.ವನ್ನು ಹಿಡಿದು ನಿಂತಿದ್ದ ಬಾಲಕನ ಫೋಟೋವನ್ನು ಆಸ್ಪತ್ರೆ ಸಿಬ್ಬಂದಿಯೊಬ್ಬರು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.  ಮುಗ್ಧ ಮುಖದ ಪುಟ್ಟ ಪೋರನ  ಫೋಟೋ ರಾತ್ರೋರಾತ್ರಿ ವೈರಲ್ ಆಗಿದ್ದು, ದೆರಕ್ ಸಿ ಲಾಲ್ ಚಾನ್ಹಿಮಾನ ವಯಸ್ಸಿಗೂ ಮೀರಿದ ಪ್ರಬುದ್ಧತೆ ನೆಟ್ಟಿಗರು ತಲೆದೂಗಿದ್ದಾರೆ.

ಈ ಫೋಟೋಗೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಇನ್ನೂ ಕೂಡ ಮಾನವೀಯತೆಯ ಅಂಶ ಉಳಿದಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಾನವೀಯತೆಯನ್ನೇ ಮರೆಯುತ್ತಿರುವ ಇಂದಿನ ಸಮಾಜದಲ್ಲಿ ದೆರಕ್ ಸಿ ಲಾಲ್ ಚಾನ್ಹಿಮಾ ತೋರಿದ ಮಾನವೀಯ ನಡೆಗೆ ಸಲಾಂ ಹೇಳಲೇಬೇಕಿದೆ.
First published:April 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...