• Home
  • »
  • News
  • »
  • trend
  • »
  • Viral Photo: ಮನೆ ಬಾಡಿಗೆ ಬೋರ್ಡ್​ ನಲ್ಲಿ ಎಡವಟ್ಟು: ಒಂದು ಅಕ್ಷರ ಅತ್ತಿತ್ತವಾದ್ರೂ ಏನೇನ್ ಆಗುತ್ತೆ ನೋಡಿ

Viral Photo: ಮನೆ ಬಾಡಿಗೆ ಬೋರ್ಡ್​ ನಲ್ಲಿ ಎಡವಟ್ಟು: ಒಂದು ಅಕ್ಷರ ಅತ್ತಿತ್ತವಾದ್ರೂ ಏನೇನ್ ಆಗುತ್ತೆ ನೋಡಿ

ಮನೆ ಬಾಡಿಗೆ ಬೋರ್ಡ್ ನಲ್ಲಿ ಬರೆದಿದ್ದು ಹೀಗೆ

ಮನೆ ಬಾಡಿಗೆ ಬೋರ್ಡ್ ನಲ್ಲಿ ಬರೆದಿದ್ದು ಹೀಗೆ

ಯಾವುದೇ ಭಾಷೆ ಆಗಲಿ ವರ್ಣಮಾಲೆಯ ಒಂದು ಅಕ್ಷರ ಅತ್ತಿತ್ತವಾದರೂ ಪೂರ್ತಿ ವಾಕ್ಯದ ಅಥವಾ ಪದದ ಅರ್ಥವೇ ಬದಲಾಗುತ್ತದೆ. ಕೆಲವೊಮ್ಮೆ ಇದು ಮನರಂಜನೆಯ ವಿಷಯವಾಗಿಯೂ ಸಹ ಬದಲಾಗಿ ಬಿಡುತ್ತದೆ. ಇಂತಹ ಹಲವಾರು ನಿದರ್ಶನಗಳು ಆಗಾಗ ಕಣ್ಣಿಗೆ ಬೀಳುತ್ತವೆ ನೋಡಿ. ಇಲ್ಲೊಂದು ಅಪಾರ್ಟ್ಮೆಂಟ್ ಬೋರ್ಡ್ ನಲ್ಲೂ ಇಂತದ್ದೇ ಒಂದು ಫಜೀತಿ ಆಗಿಬಿಟ್ಟಿದೆ.

ಮುಂದೆ ಓದಿ ...
  • Share this:

ಯಾವುದೇ ಭಾಷೆ ಆಗಲಿ ವರ್ಣಮಾಲೆಯ ಒಂದು ಅಕ್ಷರ (Character) ಅತ್ತಿತ್ತವಾದರೂ ಪೂರ್ತಿ ವಾಕ್ಯದ ಅಥವಾ ಪದದ ಅರ್ಥವೇ ಬದಲಾಗುತ್ತದೆ. ಕೆಲವೊಮ್ಮೆ ಇದು ಮನರಂಜನೆಯ (Entertainment) ವಿಷಯವಾಗಿಯೂ ಸಹ ಬದಲಾಗಿ ಬಿಡುತ್ತದೆ. ಇಂತಹ ಹಲವಾರು ನಿದರ್ಶನಗಳು ಆಗಾಗ ಕಣ್ಣಿಗೆ ಬೀಳುತ್ತವೆ ನೋಡಿ. ಇಲ್ಲೊಂದು ಅಪಾರ್ಟ್ಮೆಂಟ್ ಬೋರ್ಡ್ ನಲ್ಲೂ (Apartment Board) ಇಂತದ್ದೇ ಒಂದು ಫಜೀತಿ ಆಗಿಬಿಟ್ಟಿದೆ. ಅದರಿಂದ ನೆಟ್ಟಿಗರು ಬಿಟ್ಟಿ ಮನರಂಜನೆ ತೆಗೆದುಕೊಳ್ಳುತ್ತಿರುವುದರ ಜೊತೆ ಸಖತ್ ವೈರಲ್ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ (Language) ನೋಡುವುದಾದರೆ ದೀರ್ಘ, ಒತ್ತು, ಅಕ್ಷರ ಹೀಗೆ ಪದಗಳನ್ನು ಬರೆಯುವಾಗ ಇವು ವ್ಯತ್ಯಾಸವಾದರೆ ಅರ್ಥ ಬದಲಾಗುತ್ತದೆ, ಅದೇ ಇಂಗ್ಲಿಷ್ ಭಾಷೆಯಲ್ಲಿ ಒಂದಕ್ಷರ ಅದಲು ಬದಲಾದರೆ ಇನ್ನೇನೋ ಅರ್ಥ ಬಂದು ಬಿಡುತ್ತದೆ. ಹೀಗಾಗಿ ಬರೆಯುವಾಗ ಮನರಂಜನೆಯ ವಿಷಯವಾಗದಂತೆ ಎಚ್ಚರವಹಿಸಬೇಕು.


ಈ ಸೂಚನ ಫಲಕಾ, ಮುದ್ರಣ, ಪತ್ರಿಕೆ, ಸುದ್ದಿ ಮಾಧ್ಯಮ, ಟ್ವೀಟ್, ಸಂದೇಶ ಹೀಗೆ ಇಂತಹ ಕಡೆ ಮುದ್ರಣದೋಷಗಳು ಒಬ್ಬರು ಎದುರಿಸಬಹುದಾದ ಸಾಮಾನ್ಯ ವಿಷಯವಾಗಿದೆ. ಮುದ್ರಣದೋಷಗಳು ಒಬ್ಬರು ಮಾಡಬಹುದಾದ ಅತ್ಯಂತ ಮುಜುಗರದ ತಪ್ಪುಗಳಲ್ಲಿ ಒಂದು ಎನ್ನಬಹುದು.


ಇಲ್ಲೊಂದು ಅಪಾರ್ಟ್‌ಮೆಂಟ್‌ನ ಜಾಹೀರಾತಿನಲ್ಲಿ ಇದೇ ರೀತಿಯ ಮುದ್ರಣದೋಷ ಆಗಿದೆ. ಡೋರಿ ಜೀನ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಇತ್ತೀಚೆಗೆ ಬಾಡಿಗೆ ಅಪಾರ್ಟ್‌ಮೆಂಟ್‌ನ ಜಾಹೀರಾತಿನಲ್ಲಿ ಮುದ್ರಣದೋಷವನ್ನು ಗುರುತಿಸಿದ್ದಾರೆ ಮತ್ತು ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡೋರಿ ಜೀನ್ ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಆನ್ ಲೈನ್ ನಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ.


ಅಪಾರ್ಟ್‌ಮೆಂಟ್‌ನ ಜಾಹೀರಾತಿನಲ್ಲಿ ಎಡವಟ್ಟು
ಮುದ್ರಿತ ಜಾಹೀರಾತಿನಲ್ಲಿ ಎಲ್ಲವೂ ಪರಿಪೂರ್ಣವಾಗಿದ್ದು, ಶೀರ್ಷಿಕೆಯಲ್ಲಿ ಬಾಡಿಗೆಗೆ ಇರುವ ಅಪಾರ್ಟ್ಮೆಂಟ್ ಬಗ್ಗೆ ಓದುಗರಿಗೆ ತಿಳಿಸಲಾಗಿದೆ. ಸಾಮಾನ್ಯವಾಗಿ ಬಾಡಿಗೆ ಖಾಲಿ ಇರುವ ಮನೆ ಮುಂದೆ, ‘ಮನೆ ಬಾಡಿಗೆಗೆ ಇದೆ ಸಂಪರ್ಕಿಸಿ’ ಇಂತಹ ಸೂಚನಾ ಫಲಕ ನೋಡಿರುತ್ತೇವೆ. ಇನ್ನು ಕೆಲವರು ಸಸ್ಯಹಾರಿಗಳಿಗೆ ಮಾತ್ರ, ವಿವಾಹಿತರಿಗೆ ಮಾತ್ರ, ನಾಯಿಗಳನ್ನು ಸಾಕುವಂತಿಲ್ಲ ಹೀಗೆ ಅವರವರ ನಿಯಮಗಳನ್ನು ಮಾಲೀಕರು ಫಲಕಗಳಲ್ಲಿ ಹಾಕಿರುತ್ತಾರೆ.


ಇದನ್ನೂ ಓದಿ: Bengaluru: ವೀಕೆಂಡ್​ನಲ್ಲಿ ರ್‍ಯಾಪಿಡೋ ಓಡಿಸುವ ಎಂಜಿನಿಯರ್! ಹೀಗೇಕೆ ಮಾಡ್ತಾರೆ ಗೊತ್ತಾ?


ಇದೇ ರೀತಿ ಈ ಮನೆಯ ವಿವರಣೆ ಬಗ್ಗೆ ಮಾಲೀಕರು ವಿವರಿಸಿದ್ದಾರೆ. ಮಾಹಿತಿಯಲ್ಲಿ, ಮನೆ 1 ಬಿಹೆಚ್ಕೆ ಮತ್ತು ಜುಲೈ 1 ರಂದು ಲಭ್ಯವಿದೆ ಎಂದು ಬಾಡಿಗೆ ಹಣವನ್ನು ಕೂಡ ನಮೂದಿಸಿದ್ದಾರೆ. ಮತ್ತು ಕೆಲವು ನಿಷೇಧಗಳನ್ನು ಸಹ ನಮೂದಿಸಿದ್ದಾರೆ. ಧೂಮಪಾನ ಮಾಡುವಂತಿಲ್ಲ, ನಾಯಿಗಳನ್ನು ಸಾಕುವಂತಿಲ್ಲ ಎಂಬುವುದನ್ನು ಬರೆದಿದ್ದಾರೆ. ಇಲ್ಲೇ ನೋಡಿ ಎಡವಟ್ಟಾಗಿದ್ದು.


ಪೆಟ್ ಹೋಗಿ ಪೊಯೆಟ್ ಆದ ಮುದ್ರಣ
ಇಂಗ್ಲಿಷ್ ನಲ್ಲಿರುವ ಈ ಬೋರ್ಡ್ ನಲ್ಲಿ ನೋ ಪೊಯೆಟ್, ನೋ ಸ್ಮೋಕಿಂಗ್ ಎಂದು ಬರೆದಿದ್ದಾರೆ. ಇದೇನು ಪೊಯೆಟ್. ಪೊಯೆಟ್ ಅಂದರೆ ಇಂಗ್ಲಿಷ್ ನಲ್ಲಿಕವಿ, ಕವಿ/ಕವಿಯತ್ರಿ ಎಂಬ ಅರ್ಥ ಬರುತ್ತದೆ. ಬೋರ್ಡ್ ನೋಡಿ ಕವಿಗಳಿಗೆ ಮನೆ ಇಲ್ವಾ ಅಂದು ಕೊಳ್ಳುತ್ತಿದ್ದೀರಾ. ಅದರರ್ಥ ಅಸಲಿಗೆ ಬೇರೆ ಇದೆ ನೋಡಿ. ಅದು ಪೊಯೆಟ್ ಅಲ್ಲ ಪೆಟ್. ಹೌದು ಪೆಟ್ (pet) ಎಂದು ಮುದ್ರಣವಾಗಬೇಕಾದ ಜಾಗದಲ್ಲಿ ಪೊಯೆಟ್ ( poet) ಎಂದು ಮುದ್ರಣವಾಗಿದೆ. ಹೀಗೆ ಬದಲಾದ ಮತ್ತು ಹೆಚ್ಚುವರಿ ಪದ ವಾಕ್ಯಕ್ಕೆ ಸಂಪೂರ್ಣ ಹೊಸ ಅರ್ಥವನ್ನು ನೀಡಿದೆ.


ಇದನ್ನೂ ಓದಿ:  Traffic Challan: ಬೈಕ್​ನಲ್ಲಿ ಪೆಟ್ರೋಲ್ ಇಲ್ಲದಿದ್ರೂ ಪೊಲೀಸರು ದಂಡ ಹಾಕಬಹುದೇ?


ಜಾಹೀರಾತಿನ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ನೆಟಿಜನ್‌ಗಳು ಟ್ರೋಲ್ ಗಳಿಗೆ ಇಳಿದಿದ್ದಾರೆ. ಅನೇಕ ಬಳಕೆದಾರರು ಮುದ್ರಿತ ಜಾಹೀರಾತಿನೊಂದಿಗೆ ಮನರಂಜನೆ ಪಡೆದುಕೊಳ್ಳುತ್ತಿದ್ದಾರೆ. ಹಲವಾರು ಮಂದಿ ಕಾಮೆಂಟ್ ಸಹ ಮಾಡಿದ್ದಾರೆ. ಅಯ್ಯೋ ಕವಿಗಳಿಗೆ ಮನೆ ಇಲ್ವಾ ಅಂತಾ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ನಗುವಿನ ಎಮೋಜಿ ಹಾಕಿದ್ದಾರೆ. ಮುದ್ರಣದೋಷದಿಂದ ಮನೆ ಬಾಡಿಗೆ ಜಾಹೀರಾತು ಹೆಚ್ಚು ಪ್ರಚಾರ ಪಡೆಯುತ್ತಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

Published by:Ashwini Prabhu
First published: