• Home
 • »
 • News
 • »
 • trend
 • »
 • Mission Swachhta Aur Paani: ವಿಶ್ವ ಶೌಚಾಲಯ ದಿನದಂದು ನೀರು, ಸ್ವಚ್ಛತೆಯ ಅರಿವು! ಹಾರ್ಪಿಕ್-ನೆಟ್‌ವರ್ಕ್ 18 ಸಹಯೋಗದಲ್ಲಿ ಅಭಿಯಾನ

Mission Swachhta Aur Paani: ವಿಶ್ವ ಶೌಚಾಲಯ ದಿನದಂದು ನೀರು, ಸ್ವಚ್ಛತೆಯ ಅರಿವು! ಹಾರ್ಪಿಕ್-ನೆಟ್‌ವರ್ಕ್ 18 ಸಹಯೋಗದಲ್ಲಿ ಅಭಿಯಾನ

 ‘ಮಿಷನ್ ಸ್ವಚ್ಛತಾ ಔರ್ ಪಾನಿ’ ಅಭಿಯಾನ

‘ಮಿಷನ್ ಸ್ವಚ್ಛತಾ ಔರ್ ಪಾನಿ’ ಅಭಿಯಾನ

‘ವಿಶ್ವ ಶೌಚಾಲಯ ದಿನ’ 2022ರಂದು ಹಾರ್ಪಿಕ್ ಮತ್ತು ನೆಟ್‌ವರ್ಕ್ 18 ಜಂಟಿಯಾಗಿ ‘ಮಿಷನ್ ಸ್ವಚ್ಛತಾ ಔರ್ ಪಾನಿ’ (ಸ್ವಚ್ಛತೆ ಹಾಗೂ ನೀರು) ಎಂಬ ಕಾರ್ಯಕ್ರಮ ಆಯೋಜಿಸುತ್ತಿದೆ. 8 ಗಂಟೆಗಳ ಸುದೀರ್ಘ ಟಿವಿ ಕಾರ್ಯಕ್ರಮ ಇದಾಗಿದ್ದು

 • Share this:

  ‘ವಿಶ್ವ ಶೌಚಾಲಯ ದಿನ’ (World Toilet Day) 2022ರಂದು ಹಾರ್ಪಿಕ್ (Harpic) ಮತ್ತು ನೆಟ್‌ವರ್ಕ್ 18 (Network 18) ಜಂಟಿಯಾಗಿ ‘ಮಿಷನ್ ಸ್ವಚ್ಛತಾ ಔರ್ ಪಾನಿ’ (Mission Swachhata Aur Paani) (ಸ್ವಚ್ಛತೆ ಹಾಗೂ ನೀರು) ಎಂಬ ಕಾರ್ಯಕ್ರಮ ಆಯೋಜಿಸುತ್ತಿದೆ. 8 ಗಂಟೆಗಳ ಸುದೀರ್ಘ ಟಿವಿ ಕಾರ್ಯಕ್ರಮ (TV Program) ಇದಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಕಾರ್ಪೋರೇಟ್, ಮನರಂಜನೆ, ಸಾಮಾಜಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಖ್ಯಾತನಾಮರು ಭಾಗಿಯಾಗಲಿದ್ದಾರೆ. ವಿಶ್ವ ಶೌಚಾಲಯ ದಿನವಾದ ನವೆಂಬರ್ 19, 2022 ರಂದು ಮಧ್ಯಾಹ್ನ 12 ರಿಂದ ರಾತ್ರಿ 8 ರವರೆಗೆ CNN News18ನಲ್ಲಿ ಕಾರ್ಯಕ್ರಮ ನೇರಪ್ರಸಾರ (Live Telecast) ಆಗಲಿದೆ.


  ಎಂಟು ಗಂಟೆಗಳ ಭರ್ಜರಿ ಟೆಲಿವಿಷನ್ ಕಾರ್ಯಕ್ರಮ


  ನೀರು ಹಾಗೂ ಸ್ವಚ್ಛತೆ ಎಂಬುದು ಭೂಮಿಯಲ್ಲಿ ವಾಸಿಸುವವರಿಗೆ ಎರಡು ಆಧಾರ ಸ್ತಂಭಗಳು ಎಂದೆನಿಸಿದೆ. ಈ ಹಿನ್ನಲೆಯಲ್ಲಿ ಭಾರತದ ಪ್ರಮುಖ ಮಾಧ್ಯಮವಾದ ನೆಟ್‌ವರ್ಕ್ 18 ಮತ್ತು ಶೌಚಾಲಯ ಸ್ವಚ್ಛತೆ ಹಾಗೂ ನೈರ್ಮಲ್ಯ ವರ್ಗದಲ್ಲಿ ಪ್ರಮುಖ ಬ್ರ್ಯಾಂಡ್ ಎಂದೆನ್ನಿಸಿರುವ ಹಾರ್ಪಿಕ್, ಸ್ವಚ್ಛತೆಯೂ ಸೇರಿರುವ ಹಾರ್ಪಿಕ್-ನೆಟ್‌ವರ್ಕ್ 18 ಮಿಶನ್ ಪಾನಿ ಅಭಿಯಾನದ ವಿಸ್ತರಣೆಯನ್ನು ಘೋಷಿಸಿದೆ.


  ಮುಖ್ಯ ಅತಿಥಿಯಾಗಿ ಅಕ್ಷಯ್ ಕುಮಾರ್


  ನವೆಂಬರ್ 19, 2022 ರ ವಿಶ್ವ ಶೌಚಾಲಯ ದಿನದಂದು ಮಿಷನ್ ಸ್ವಚ್ಛತಾ ಔರ್ ಪಾನಿ ಅಡಿಯಲ್ಲಿ ಉತ್ತಮ ನೈರ್ಮಲ್ಯಕ್ಕಾಗಿ ಭಾರತವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಭರ್ಜರಿ 8 ಗಂಟೆಗಳ ಟೆಲಿವಿಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇತರ ನಾಯಕರುಗಳೊಂದಿಗೆ ಪ್ರಚಾರ ರಾಯಭಾರಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.


  ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವ


  ಪ್ರತಿಯೊಬ್ಬರಿಗೂ ಸ್ವಚ್ಛ ಶೌಚಾಲಯಗಳ ಲಭ್ಯತೆಯನ್ನುಂಟು ಮಾಡುವ ಅಂತರ್ಗತ ನೈರ್ಮಲ್ಯದ ಮಹತ್ವವನ್ನು ಗುರುತಿಸುವ ಮಿಷನ್ ಸ್ವಚ್ಛತಾ ಔರ್ ಪಾನಿ ನೈರ್ಮಲ್ಯ ಅಭಿಯಾನ ನ್ಯೂಸ್ 18 ಮತ್ತು ಹಾರ್ಪಿಕ್ ಸಹಯೋಗದಲ್ಲಿ ಮೂಡಿಬರಲಿದೆ. ಈ ಅಭಿಯಾನವು ಎಲ್ಲಾ ಲಿಂಗಗಳು, ಸಾಮರ್ಥ್ಯಗಳು, ಜಾತಿಗಳು ಮತ್ತು ವರ್ಗಗಳಿಗೆ ಸಮಾನತೆಯನ್ನು ಪ್ರತಿಪಾದಿಸುತ್ತದೆ ಮತ್ತು ಸ್ವಚ್ಛ ಶೌಚಾಲಯಗಳು ಹಂಚಿಕೆಯ ಜವಾಬ್ದಾರಿ ಎಂದು ಬಲವಾಗಿ ನಂಬಿದೆ.


  ಇದನ್ನೂ ಓದಿ: Children's day 2022: ನೆಹರು ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವುದೇಕೆ? ಕಾರಣ ತಿಳಿಯಿರಿ


  ಜಲ್ ಜೀವನ್ ಮಿಶನ್ ಸಾಧನೆ


  ನೆಟ್‌ವರ್ಕ್ 18 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, A + E ಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವಿನಾಶ್ ಕೌಲ್ ಈ ಮಿಷನ್ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ನಂಬಲಾಗದಷ್ಟು ಪ್ರಗತಿ ಸಾಧಿಸಿದೆ. ಜಲ್ ಜೀವನ್ ಮಿಶನ್ ಅಡಿಯಲ್ಲಿ 100 ಮಿಲಿಯನ್ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ವ್ಯವಸ್ಥೆಯನ್ನು ಒದಗಿಸುವ ಯೋಜನೆಯಲ್ಲಿ, ಕಳೆದ ಮೂರು ವರ್ಷಗಳಲ್ಲಿ 70 ಮಿಲಿಯನ್ ಕುಟುಂಬಗಳಿಗೆ ಯಶಸ್ವಿಯಾಗಿ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದರು. ಸಾರ್ವಜನಿಕ ಅಭಿಪ್ರಾಯ ಮತ್ತು ಸಾಮಾಜಿಕ ಕ್ರಿಯೆಯನ್ನು ಉತ್ತೇಜಿಸುವ ಮೂಲಕ ಮಿಶನ್ ಮೂಲಕ ನಮ್ಮ ಕೊಡುಗೆಯನ್ನು ನೀಡುತ್ತಿದ್ದೇವೆ. ನಮ್ಮೊಂದಿಗೆ ಕೈಜೋಡಿಸುತ್ತಿರುವ ಪ್ರತಿಯೊಬ್ಬರಿಗೂ ನಾವು ಅಭಾರಿ ಎಂದು ಕೃತಜ್ಞತೆ ಅರ್ಪಿಸಿದ್ದಾರೆ.


  2019ರಿಂದಲೂ ನಿರಂತರ ಅಭಿಯಾನ


  2019 ರಲ್ಲಿ ಪ್ರಾರಂಭಿಸಿದ ನೆಟ್‌ವರ್ಕ್ 18 ಮತ್ತು ಹಾರ್ಪಿಕ್‌ನ ನಿರಂತರ ಅಭಿಯಾನವು ಪ್ರಮುಖ ನೀರು ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ಗುರುತಿಸುವ ಮೂಲಕ ಗಣನೀಯ ಯಶಸ್ಸು ಸಾಧಿಸಿದೆ. ಇಲ್ಲಿಯವರೆಗಿನ ಭಾರತದ ನೈರ್ಮಲ್ಯ ಪ್ರಯಾಣ ಹಾಗೂ ಮುಂದಿನ 5 ವರ್ಷಗಳ ಯೋಜನೆಯ ವಿವರವನ್ನು ಟೆಲಿವಿಶನ್ ಕಾರ್ಯಕ್ರಮ ಪ್ರದರ್ಶಿಸಲಿದೆ. ಶುದ್ಧ ಹಾಗೂ ನೈರ್ಮಲ್ಯದಿಂದ ಕೂಡಿದ ಶೌಚಾಲಯಗಳ ಮೂಲಕ ಪ್ರತಿಯೊಬ್ಬರ ನಡವಳಿಕೆಯಲ್ಲಿ ಮಹತ್ತರ ಬದಲಾವಣೆಯನ್ನು ತರುವ ಗುರಿ ಹೊಂದಿದೆ ಎಂದು ಅವಿನಾಶ್ ಕೌಲ್ ತಿಳಿಸಿದ್ದಾರೆ.


  ನೀರಿನ ಸಂರಕ್ಷಣೆ ಹಾಗೂ ಜಲ ಸುರಕ್ಷತೆಯ ಮಹತ್ವ


  ಇದೇ ಸಂದರ್ಭದಲ್ಲಿ ಅಭಿಯಾನದ ಕುರಿತು ಅಭಿಪ್ರಾಯ ಹಂಚಿಕೊಂಡ ನೆಟ್‌ವರ್ಕ್ 18 ಮೀಡಿಯಾ & ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ ಡಿಜಿಟಲ್‌ನ ಸಿಇಒ ಮತ್ತು ಅಧ್ಯಕ್ಷ ಪುನೀತ್ ಸಿಂಘ್ವಿ, ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಕಲ್ಪನೆಗೆ ಮಹತ್ವ ನೀಡುವ ಮೂಲಕ ಅದರಿಂದ ಸ್ಫೂರ್ತಿ ಪಡೆದು ಈ ಅಭಿಯಾನ ಕೈಗೊಳ್ಳಲಾಗಿದೆ. ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿರುವ ವಿವಿಧ ಹಂತಗಳ ಹಾಗೂ ಸ್ತರಗಳ ಸಾಮಾಜಿಕ ಮುಖಂಡರನ್ನು ತನ್ನತ್ತ ಸೆಳೆಯಲು ಈ ಅಭಿಯಾನವು ಸಹಾಯಕವಾಗಿದ್ದು, 2.5 ಲಕ್ಷಕ್ಕೂ ಹೆಚ್ಚು ಜನರು ನೈರ್ಮಲ್ಯ ಪ್ರತಿಜ್ಞೆಯನ್ನು ಸಾಧಿಸುವ ಗುರಿಯನ್ನು ಹೊಂದಿದ್ದು, ಮಿಶನ್ ಸ್ವಚ್ಛತಾ ಹಾಗೂ ಪಾನಿ ನಿಜಕ್ಕೂ ಉತ್ತಮ ಪ್ರಭಾವ ಬೀರಿದೆ ಎಂಬುದಕ್ಕೆ ಇದು ಸೂಚಕವಾಗಿದೆ ಎಂದು ಸಿಂಘ್ವಿ ಹರ್ಷ ವ್ಯಕ್ತಪಡಿಸಿದ್ದಾರೆ.


  ಜಾಗೃತಿ ಮೂಡಿಸುವ ಅಭಿಯಾನ


  ರೆಕಿಟ್- ದಕ್ಷಿಣ ಏಷ್ಯಾದ ವಿದೇಶಾಂಗ ವ್ಯವಹಾರಗಳು ಮತ್ತು ಪಾಲುದಾರಿಕೆಗಳ ನಿರ್ದೇಶಕರಾದ ರವಿ ಭಟ್ನಾಗರ್, ಅಭಿಯಾನದ ಯಶಸ್ಸಿನ ಕುರಿತು ಅನಿಸಿಕೆ ಹಂಚಿಕೊಂಡಿದ್ದು, ಹಾರ್ಪಿಕ್ ನೆಟ್‌ವರ್ಕ್ 18 ಮಿಷನ್ ಸ್ವಚ್ಛತಾ ಔರ್ ಪಾನಿ ಅಭಿಯಾನವು ಭಾರತದಲ್ಲಿ ಅಂತರ್ಗತ ನೈರ್ಮಲ್ಯದ ಮೇಲೆ ಹಾಗೂ ಸ್ವಚ್ಛತೆಗೆ ನೀರಿನ ಮಹತ್ವದ ಕುರಿತು ಹೆಚ್ಚು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.


  ಈ ಅಭಿಯಾನದ ಮೂಲಕ, ನಮ್ಮ ವಿವಿಧ ಮಧ್ಯಸ್ಥಿಕೆಗಳು ಮತ್ತು ಪಾಲುದಾರಿಕೆಗಳು, ನಡವಳಿಕೆಯನ್ನು ಬದಲಾಯಿಸುವ ಮತ್ತು ಜಾಗೃತಿ ಮೂಡಿಸಲು ಸಹಾಯ ಮಾಡುವ ಸಾಧನಗಳು ಮಾಹಿತಿ ಹಾಗೂ ಪರಿಕರಗಳೊಂದಿಗೆ 20 ಮಿಲಿಯನ್ ಭಾರತೀಯರನ್ನು ತಲುಪುವ ಗುರಿಯನ್ನು ಹೊಂದಿದ್ದು, ಆರೋಗ್ಯಕರ ಭಾರತಕ್ಕಾಗಿ ಪ್ರತಿಯೊಬ್ಬರ ಸಂಪೂರ್ಣ ಆರೋಗ್ಯದಲ್ಲಿ ನೈರ್ಮಲ್ಯದ ಪ್ರಾಮುಖ್ಯತೆಯನ್ನು ತಿಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.


  ನೈರ್ಮಲ್ಯ ಅನುಸರಣೆ


  ರೆಕಿಟ್, ದಕ್ಷಿಣ ಏಷ್ಯಾದ ಪ್ರಾದೇಶಿಕ ಮಾರುಕಟ್ಟೆ ನಿರ್ದೇಶಕ ಶ್ರೀ ಸೌರಭ್ ಜೈನ್ ಕೂಡ ಅಭಿಯಾನದ ಕುರಿತು ಹರ್ಷ ವ್ಯಕ್ತಪಡಿಸಿದ್ದು, ಶೌಚಾಲಯ ಸ್ವಚ್ಛತಾ ವಿಭಾಗದಲ್ಲಿ ಜಾಗತಿಕ ನಾಯಕ ಎಂದೆನಿಸಿರುವ ಹಾರ್ಪಿಕ್ ಪ್ರತಿಯೊಬ್ಬರಿಗೂ ಆರೋಗ್ಯಕರ, ಸ್ವಚ್ಛ ಶೌಚಾಲಯದ ಬಳಕೆಯನ್ನು ಒದಗಿಸುವ ಮೂಲಕ ನೈರ್ಮಲ್ಯದ ಅಂತರವನ್ನು ಪರಿಹರಿಸಲು ಕೇಂದ್ರೀಕರಿಸಿದೆ. Network 18 ನೊಂದಿಗೆ ಪಾಲುದಾರಿಕೆಯ ಬಗ್ಗೆ ನಾವು ಹೆಮ್ಮೆಪಡುತ್ತಿದ್ದು, ಇದು ಉತ್ತಮ ನೈರ್ಮಲ್ಯ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಬಲಪಡಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.


  ದೂರದರ್ಶನದ ಕಾರ್ಯಕ್ರಮದಲ್ಲಿ ಎಲ್ಲಾ ಹಂತಗಳ ನಾಯಕರು ಭಾಗವಹಿಸಲಿದ್ದು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ ಹಾಗೂ ಸಾಮಾಜಿಕ ಉದ್ದೇಶವಿರುವ ಅಭಿಯಾನದಲ್ಲಿ ಸೇರ್ಪಡೆಗೊಳ್ಳಲು ಜನರನ್ನು ಒತ್ತಾಯಿಸಲಾಗುತ್ತದೆ ಎಂದು ಹೇಳಿದ್ದಾರೆ.


  ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರು


  ಗೌರವ್ ಜೈನ್, ಎಕ್ಸಿಕ್ಯೂಟಿವ್ ವಿಪಿ, ದಕ್ಷಿಣ ಏಷ್ಯಾ, ರೆಕಿಟ್; ಸೌರಭ್ ಜೈನ್, ಪ್ರಾದೇಶಿಕ ಮಾರುಕಟ್ಟೆ ನಿರ್ದೇಶಕ, ನೈರ್ಮಲ್ಯ, ದಕ್ಷಿಣ ಏಷ್ಯಾ, ರೆಕಿಟ್; ರವಿ ಭಟ್ನಾಗರ್, ನಿರ್ದೇಶಕರು, ವಿದೇಶಾಂಗ ವ್ಯವಹಾರಗಳು ಮತ್ತು ಪಾಲುದಾರಿಕೆಗಳು ದಕ್ಷಿಣ ಏಷ್ಯಾ, ರೆಕಿಟ್; ಜ್ಯಾಕ್ ಸಿಮ್ ಸಂಸ್ಥಾಪಕರು ವಿಶ್ವ ಶೌಚಾಲಯ ಸಂಸ್ಥೆ; ಡಾ ಬಿಂದೇಶ್ವರ ಪಾಠಕ್ ಸ್ಥಾಪಕರು ಸುಲಭ್ ಇಂಟರ್ನ್ಯಾಷನಲ್; ಕೌಸರ್ ಮುನೀರ್ ಲೇಖಕರು, ಮಿಷನ್ ಪಾನಿ ಪೀಠಿಕೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.


  ನೀರಿನ ಸಮರ್ಪಕ ಬಳಕೆಯ ಕೊರತೆಯು ಹಲವಾರು ಮನೆಗಳಲ್ಲಿ ತಮ್ಮ ತಮ್ಮ ಶೌಚಾಲಯಗಳ ಸ್ವಚ್ಛತೆ ಹಾಗೂ ನೈರ್ಮಲ್ಯೀಕರಣಕ್ಕೆ ತಡೆಗೋಡೆಯಾಗಿದೆ. ಹಾರ್ಪಿಕ್ ನೆಟ್‌ವರ್ಕ್ 18 ಮಿಷನ್ ಸ್ವಚ್ಛತಾ ಔರ್ ಪಾನಿ ಈ ನಿರ್ಣಾಯಕ ವಿಷಯದ ಕಡೆಗೆ ಜನರ ಗಮನವನ್ನು ಸೆಳೆಯಲು ಸತತ ಪ್ರಯತ್ನಗಳನ್ನು ಮಾಡಿದೆ.


  ಪಾನಿ ಗೀತೆ


  2020 ರಲ್ಲಿ ಪ್ರಾರಂಭಿಸಲಾದ ಪಾನಿ ಗೀತೆಯು ಸ್ವಚ್ಛತಾ ಸಂದೇಶವನ್ನು ಯಶಸ್ವಿಯಾಗಿ ತಲುಪುವಂತೆ ಮಾಡಲು ಮಕ್ಕಳನ್ನು ಮುಖ್ಯಪಾತ್ರಗಳಾಗಿ ಪ್ರದರ್ಶಿಸಿತು. ಭಾರತ ಸರಕಾರದ ಬೆಂಬಲದೊಂದಿಗೆ, ಹಾರ್ಪಿಕ್ ಭಾರತದ ಮೊಟ್ಟಮೊದಲ 'ಎಲ್ಲ ಪ್ರತಿಜ್ಞೆ ಮತ್ತು ಮುನ್ನುಡಿಗಾಗಿ ನೈರ್ಮಲ್ಯ: ಶುದ್ಧ ನೀರು, ಸುಸ್ಥಿರ ನೈರ್ಮಲ್ಯ' ಕಾರ್ಯಾಗಾರವನ್ನು 2021 ರಲ್ಲಿ ಮಿಷನ್ ಪಾನಿ ನೈರ್ಮಲ್ಯ ವೇದಿಕೆಯಲ್ಲಿ ಆರಂಭಿಸಿತು.


  ನೈರ್ಮಲ್ಯ ಕಾರ್ಮಿಕರ ಜೀವನದ ಸಾಮಾಜಿಕ-ಆರ್ಥಿಕ ಗುಣಮಟ್ಟ


  ಮಿಷನ್ ಸ್ವಚ್ಛತಾ ಔರ್ ಪಾನಿ ಟೆಲಿವಿಶನ್ ಕಾರ್ಯಕ್ರಮದ ನೇರ ಪ್ರಸಾರವನ್ನು CNN News18 ನಲ್ಲಿ 19 ನವೆಂಬರ್, 2022 ರಂದು ಮಧ್ಯಾಹ್ನ 12 ಗಂಟೆಯಿಂದ ವೀಕ್ಷಿಸಬಹುದು. ಡಿಜಿಟಲ್ ಸ್ಟ್ರೀಮಿಂಗ್ ಅನ್ನು https://www.news18.com/missionswachhtapaani ನಲ್ಲಿ ನೋಡಬಹುದಾಗಿದೆ.


  ಇದನ್ನೂ ಓದಿ: Good News: ತಾಜ್ ಮಹಲ್ ಸೇರಿದಂತೆ ಪುರಾತನ ಕಟ್ಟಡಗಳಿಗೆ ಉಚಿತ ಎಂಟ್ರಿ; ಇಲ್ಲಿದೆ ಫುಲ್ ಡೀಟೇಲ್ಸ್


  ಭಾರತದಾದ್ಯಂತದ ವಿಶ್ವ ಶೌಚಾಲಯ ಕಾಲೇಜುಗಳ ಪ್ರಾರಂಭದೊಂದಿಗೆ, ಸಮುದಾಯಕ್ಕೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವ ಸರಿಯಾದ ಯಂತ್ರೋಪಕರಣಗಳು ಮತ್ತು ಔಪಚಾರಿಕ ತರಬೇತಿಯೊಂದಿಗೆ, ಹಾರ್ಪಿಕ್ ಇಂಡಿಯಾ ಸುಸಜ್ಜಿತವಾದ ಪರಿಸರ ವ್ಯವಸ್ಥೆಯನ್ನು ಒದಗಿಸುವ ಮೂಲಕ ನೈರ್ಮಲ್ಯ ಕಾರ್ಮಿಕರ ಜೀವನದ ಸಾಮಾಜಿಕ-ಆರ್ಥಿಕ ಗುಣಮಟ್ಟವನ್ನು ಸುಧಾರಿಸಲು ಕೆಲಸ ಮಾಡುತ್ತಿದೆ.

  Published by:Annappa Achari
  First published: