ಮಕ್ಕಳು ಅಥವಾ ವಯಸ್ಸಾದವರು ನಾಪತ್ತೆಯಾಗಿದ್ದಾರೆಂದು ದೂರು ಕೊಡೋದು ಕೇಳಿರ್ತೀರಾ. ಆದರೆ, ಮಹಾರಾಷ್ಟ್ರದ ಪುಣೆ ರೈಲ್ವೆ ಸ್ಟೇಷನ್ನಲ್ಲಿ ನಾಯಿ ನಾಪತ್ತೆಯಾಗಿದೆ ಎಂದು ದೆಹಲಿ ಮೂಲದ ದಂಪತಿ ಆರ್ಪಿಎಫ್ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಆರ್ಪಿಎಫ್ ಪೊಲೀಸ್ ಠಾಣೆ ಸಿಬ್ಬಂದಿ ಸದ್ಯ, ಆ ನಾಯಿ ಹುಡುಕುವುದ್ರಲ್ಲೇ ಬ್ಯುಸಿಯಾಗಿದ್ದಾರೆ. ಸ್ಟೇಷನ್ನಲ್ಲಿ, ಸುತ್ತಮುತ್ತ ಎಲ್ಲ ಕಡೆ ನಾಯಿ ಹುಡುಕಿದರೂ ಸಿಗದೆ ಇರುವುದು ಅವರ ಚಿಂತೆಗೀಡು ಮಾಡಿದೆ.
ದೆಹಲಿ ಮೂಲದ ದಂಪತಿ ಭಾನುವಾರ ಪುಣೆ ರೈಲ್ವೆ ಸ್ಟೇಷನ್ನಲ್ಲಿ ಟ್ರೈನ್ನಿಂದ ಇಳಿದಿದ್ದಾರೆ. ಅವರು 2 ನಾಯಿಗಳೊಂದಿಗೆ ಬಂದಿದ್ದು, ಈ ಪೈಕಿ ಒಂದು ರೈಲಿನಿಂದ ಇಳಿದ ಬಳಿಕ ಮಿಸ್ಸಿಂಗ್ ಆಗಿದೆ ಎಂದು ದಂಪತಿ ದೂರು ನೀಡಿದ್ದಾರೆ. ರೈಲ್ವೆ ಸ್ಟೇಷನ್ನ ಪ್ಲಾಟ್ಫಾರ್ಮ್ ಸಂಖ್ಯೆ ಒಂದರಲ್ಲಿ ಈ ಘಟನೆ ನಡೆದಿದ್ದು, ನಾಯಿ ಓಡಿಹೋಯಿತು ಎನ್ನಲಾಗಿದೆ.
ಕೋರ್ಟ್ ವಿಚಾರಣೆ ವೇಳೆಯೇ ನ್ಯಾಯಾಧೀಶೆಗೆ ಪ್ರೇಮ ನಿವೇದನೆ ಮಾಡಿದ ಕಳ್ಳ..!: ವಿಡಿಯೋ ವೈರಲ್
ಈ ಸಂಬಂಧ ಪುಣೆ ಮಿರರ್ ಮಾಧ್ಯಮದ ಜತೆ ಮಾತನಾಡಿದ ದೂರುದಾರ ಮಹಿಳೆ ಅಗ್ರಜಾ ಕಶ್ಯಪ್, ''ನಾವು ದೆಹಲಿಯಿಂದ ಪುಣೆಗೆ ಎರಡು ನಾಯಿಗಳೊಂದಿಗೆ ಬಂದೆವು. ಎಸಿ ಬೋಗಿಯಲ್ಲಿದ್ದ ನಾವು, ನಾನು ಹಾಗೂ ನನ್ನ ಪತಿ ಇಬ್ಬರೂ ಒಂದೊಂದು ನಾಯಿ ಹಿಡಿದು ರೈಲಿನಿಂದ ಇಳಿದೆವು. ಆದರೆ, ಇಳಿದ ಬಳಿಕ ನನ್ನ ಕಾಲು ಜಾರಿ ಕೆಳಗೆ ಬಿದ್ದು ಮೂಳೆ ಮುರಿಯಿತು. ಈ ವೇಳೆ ಒಂದು ಶ್ವಾನ ಹೆದರಿಕೊಂಡು ನಮ್ಮಿಂದ ದೂರ ಓಡಿಹೋಯಿತು'' ಎಂದು ಹೇಳಿದ್ದಾಳೆ.
ರಾಜಸ್ಥಾನದ ಸರ್ಕಾರಿ ಆಸ್ಪತ್ರೆ ಐಸಿಯುನಲ್ಲಿ ನರ್ಸ್ಗಳ ಡ್ಯಾನ್ಸ್ ವಿಡಿಯೋ ವೈರಲ್: ಆಸ್ಪತ್ರೆಯಿಂದ ತನಿಖೆಗೆ ಆದೇಶ
''ನಂತರ ನಾನು ಆಸ್ಪತ್ರೆಗೆ ಹೋಗಬೇಕಾಯಿತು. ಬಳಿಕ ಆರ್ಪಿಎಫ್ಗೆ ನಾಯಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದೇವೆ'' ಎಂದೂ ಮಹಿಳೆ ಹೇಳಿದರು.
ಈ ಬಗ್ಗೆ ಆರ್ಪಿಎಫ್ ಸಿಬ್ಬಂದಿ ಮಾತನಾಡಿದ್ದು, ''ನಾವು ನಾಯಿಯ ಫೋಟೋ ತೆಗೆದುಕೊಂಡು ಹುಡುಕುತ್ತಿದ್ದೇವೆ.. ರೈಲ್ವೆ ಸ್ಟೇಷನ್ನಲ್ಲಿದ್ದ ರೈಲುಗಳ ಬೋಗಿ, ರೈಲ್ವೆ ಸ್ಟೇಷನ್ ಸುತ್ತಮುತ್ತ ಹೆದರಿಕೊಂಡು ಅಡಗಿರಬಹುದೆಂದು ಹುಡುಕುತ್ತಿದ್ದೇವೆ. ಅಕ್ಕಪಕ್ಕದ ಏರಿಯಾದಲ್ಲಿ ಪರಿಶೀಲಿಸಿ ಎಂದು ಸಿಬ್ಬಂದಿಗೆ ಹೇಳಲಾಗಿದೆ. ಕಳೆದ 3 ದಿನಗಳಿಂದ ವಿವಿಧ ಸ್ಥಳಗಳಲ್ಲಿ ಶ್ವಾನವನ್ನು ಹುಡುಕುತ್ತಿದ್ದೇವೆ'' ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ