ಪಬ್​ನಲ್ಲೇ ಮಾಡೆಲ್ ರಂಪಾಟ; ಸುಂದರ ಹಣೆಗೆ ಬಿತ್ತು 10 ಹೊಲಿಗೆ

ಏಟು ತಿನ್ನುವಾಗ ಗೋಲ್ಡ್​ ಕೈಕಟ್ಟಿಯೇನು ಕುಳಿತಿರಲಿಲ್ಲ. ಒಲಿವಿಯಾಗೆ ತಿರುಗಿ ಏಟು ಕೊಟ್ಟಿದ್ದರು. ಪರಿಣಾಮ, ಒಲಿವಿಯಾ ತೀವ್ರವಾಗಿ ಗಾಯಗೊಂಡಿದ್ದಾರೆ.

news18
Updated:July 7, 2019, 3:57 PM IST
ಪಬ್​ನಲ್ಲೇ ಮಾಡೆಲ್ ರಂಪಾಟ; ಸುಂದರ ಹಣೆಗೆ ಬಿತ್ತು 10 ಹೊಲಿಗೆ
ಒಲಿವಿಯಾ ಕುಕ್​
news18
Updated: July 7, 2019, 3:57 PM IST
ಸೆಲೆಬ್ರಿಟಿಗಳು ಸಾಮಾನ್ಯವಾಗಿ ವಿವಾದಗಳಿಂದ ದೂರ ಉಳಿಯ ಬಯಸುತ್ತಾರೆ. ಆದರೆ, ಕೆಲವರು ವಿವಾದಗಳ ಮೂಲಕವೇ ಸುದ್ದಿಯಾಗಿಬಿಡುತ್ತಾರೆ. ಅದೇ ರೀತಿ ಮಿಸ್​ ಇಂಗ್ಲೆಂಡ್​ ಫೈನಲಿಸ್ಟ್​ ಆಗಿದ್ದ ಒಲಿವಿಯಾ ಕುಕ್​ ಕೂಡ ಈಗ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಒಲಿವಿಯಾ ವಯಸ್ಸು ಕೇವಲ 21. ಅವರು ಇತ್ತೀಚೆಗೆ ಅಮ್ಮನ ಜೊತೆ ಪಬ್​ಗೆ ತೆರಳಿದ್ದರು. ಈ ವೇಳೆ ಚೀನಾ ಗೋಲ್ಡ್​ ಎಂಬುವವರ ಜೊತೆ ಮಾತಿಗೆ ಇಳಿದಿದ್ದರು. ವಾಗ್ವಾದ ಜಗಳಕ್ಕೆ ತಿರುಗಿದೆ. ಒಲಿವಿಯಾ ಹಾಗೂ ಅವರ ತಾಯಿ ಗೋಲ್ಡ್​​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಗೋಲ್ಡ್​​ ಕಣ್ಣಿಗೆ ಪೆಟ್ಟು ಬಿದ್ದಿದೆ.

ಏಟು ತಿನ್ನುವಾಗ ಗೋಲ್ಡ್​ ಕೈಕಟ್ಟಿಯೇನು ಕುಳಿತಿರಲಿಲ್ಲ. ಒಲಿವಿಯಾಗೆ ತಿರುಗಿ ಏಟು ಕೊಟ್ಟಿದ್ದರು. ಪರಿಣಾಮ, ಒಲಿವಿಯಾ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ನರಕ್ಕೆ ಹಾನಿ ಉಂಟಾಗಿದ್ದು, 10 ಸ್ಟಿಚ್​ಗಳನ್ನು ಹಾಕಲಾಗಿದೆ.

ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಗೋಲ್ಡ್​​ ಮೇಲೆ ನಾನು ದಾಳಿ ಮಾಡಿಯೇ ಇಲ್ಲ ಎಂದು ಒಲಿವಿಯಾ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣ ಶೀಘ್ರದಲ್ಲೇ ಕೋರ್ಟ್​​ನಲ್ಲಿ ವಿಚಾರಣೆ ಎದುರಿಸಲಿದ್ದಾರೆ.

ಇದನ್ನೂ ಓದಿ: ಪೂನಂ ಪಾಂಡೆಗೆ ಮತ್ತೊಂದು ಮಾಡೆಲ್ ಸವಾಲು; ಭಾರತ ಗೆದ್ದಿದ್ದಕ್ಕೆ ನ್ಯೂಡ್ ಪಿಕ್ಚರ್ ಪೋಸ್ಟ್!

First published:July 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...