Aircraft: ವಿಮಾನದ ಟೈರನ್ನೇ ಕದ್ದು ಬಿಟ್ಟ ಖತರ್​ನಾಕ್ ಕಳ್ಳರು!

Aircraft: ಚಾಲಕ ಕೇವಲ ನಾಲ್ಕು ಟೈರ್‌ಗಳೊಂದಿಗೆ ಜೋಧಪುರಕ್ಕೆ ತಲುಪಿದಾಗ ರಕ್ಷಣಾ ಸಿಬ್ಬಂದಿ ಕಾರ್ಯಪ್ರವೃತ್ತರಾದರು ಮತ್ತು ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿದರು

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಒಮ್ಮೊಮ್ಮೆ ದೊಡ್ಡ ದೊಡ್ಡ ಮಹಾ ನಗರಗಳಲ್ಲಿ (Big city)ಅತಿಯಾದ ವಾಹನಗಳ ದಟ್ಟಣೆಯಿಂದ ಟ್ರಾಫಿಕ್(Traffic jam) ನಿಂತ ಜಾಗದಿಂದ ಗಂಟೆಗಳು ಕಳೆದರೂ ಸ್ವಲ್ಪವೂ ಮುಂದಕ್ಕೆ ಚಲಿಸಲಾಗುವುದಿಲ್ಲ.ಟ್ರಾಫಿಕ್ ಜಾಮ್‌ನಲ್ಲಿ ನಮ್ಮ ವಾಹನವನ್ನು ನಿಲ್ಲಿಸಿಕೊಂಡು ನಿಂತಾಗ ಯಾರಾದರೂ ಕಳ್ಳರು ನಮ್ಮ ಕಾರಿನ ಕಿಟಕಿಯ (window)ಬಳಿ ಬಂದು ನಮ್ಮ ಜೇಬಿನಲ್ಲಿರುವ ಮೊಬೈಲ್ ಫೋನ್ (Mobile phone)ಅನ್ನು ಅಥವಾ ನಾವು ಹಾಕಿಕೊಂಡಿರುವ ಚಿನ್ನದ ಸರವಾಗಿರಬಹುದು. ಹೀಗೆ ಕೈಗೆ ಸಿಕ್ಕಿದ್ದನ್ನ ಎಗರಿಸಿಕೊಂಡು ಹೋದರೂ ನಮ್ಮ ವಾಹನದಲ್ಲಿ ಅವರನ್ನು ಹಿಂಬಾಲಿಸಲು ಆಗುವುದಿಲ್ಲ ಮತ್ತು ವಾಹನ ಅಲ್ಲೇ ಬಿಟ್ಟು ಹೋಗಲು ಬರುವುದಿಲ್ಲ. ಇಂತಹ ಸಮಯವನ್ನೇ ಬಳಸಿಕೊಂಡ ಕಳ್ಳರು ಐದು ದಿನಗಳ ಹಿಂದೆ ಲಕ್ನೋ (Lucknow)ದಲ್ಲಿರುವ ಆಶಿಯಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಶಹೀದ್ ಪಾತ್ ಮೂಲಕ ವಾಹನ ಹಾದು ಹೋಗುತ್ತಿದ್ದಾಗ ಇಲ್ಲಿನ ಭಕ್ಷಿ ಕಾ (Bakshi Ka Talab)ತಲಾಬ್ (ಬಿಕೆಟಿ) ವಾಯುಪಡೆ ನಿಲ್ದಾಣದಿಂದ ಜೋಧಪುರಕ್ಕೆ ವಾಹನದಲ್ಲಿ ಸಾಗಿಸುತ್ತಿದ್ದ ಫೈಟರ್ ಜೆಟ್ (Mirage fighter aircraft)ವಿಮಾನದ ಐದು ಟೈರ್‌ಗಳಲ್ಲಿ ಒಂದನ್ನು ಕದ್ದು ತಮ್ಮ ಕೈಚಳಕ ತೋರಿಸಿದ್ದಾರೆ.

ತನಿಖೆಗಾಗಿ ವಿಶೇಷ ತಂಡ
ಅಪರಿಚಿತ ಕಿಡಿಕೇಡಿಗಳು ವಿರುದ್ಧ ಐಪಿಸಿ ಸೆಕ್ಷನ್ 379 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಏಕೆಂದರೆ ಇದು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದೆ ಮತ್ತು ಅದರ ಹಿಂದೆ ಕೆಲವು ದೇಶ ವಿರೋಧಿ ಉದ್ದೇಶಗಳು ಇರಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: Viral Video: ಲಕ್ನೋ ಹುಡುಗಿ ಕ್ಯಾಬ್‌ ಡ್ರೈವರ್‌ಗೆ ಹೊಡೆಯುತ್ತಿದ್ದರೂ ಆ ಚಾಲಕ ಸುಮ್ಮನಿದ್ದದ್ದು ಏಕೆ ಗೊತ್ತಾ..?

ಜೋಧಪುರಕ್ಕೆ ಪ್ರಯಾಣ
ರಾಜಸ್ಥಾನದ ಅಜ್ಮೀರ್‌ನ ವಾಹನದ ಚಾಲಕ ಹೇಮ್ ಸಿಂಗ್ ರಾವತ್ ದೂರಿನ ಮೇಲೆ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ. ತಾನು ಫೈಟರ್ ಜೆಟ್‌ನ ಐದು ಟೈರ್‌ಗಳನ್ನು ಸಾಗಿಸುತ್ತಿದ್ದೆ ಮತ್ತು ಬಿಕೆಟಿ ವಾಯುಪಡೆ ನಿಲ್ದಾಣದಿಂದ ಜೋಧಪುರಕ್ಕೆ ಪ್ರಯಾಣಿಸುತ್ತಿದ್ದೆ ಎಂದು ರಾವತ್ ಹೇಳಿದ್ದಾರೆ. ಅವುಗಳಲ್ಲಿ ಒಂದನ್ನು ನವೆಂಬರ್ 27ರಂದು ಶಹೀದ್ ಪಾತ್ ಮಾರ್ಗದಲ್ಲಿ ಕದಿಯಲಾಗಿದೆ ಎಂದು ಅಶಿಯಾನಾ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಧೀರಜ್ ಶುಕ್ಲಾ ಹೇಳಿದ್ದಾರೆ. ತನ್ನ ವಾಹನವು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಾಗ ಟೈರ್ ಕಳುವಾಗಿದೆ ಎಂದು ದೂರಿನಲ್ಲಿ ಸ್ಪಷ್ಟವಾಗಿ ವಾಹನದ ಚಾಲಕ ರಾವತ್ ಉಲ್ಲೇಖಿಸಿದ್ದಾರೆ.

ಸಿಸಿಟಿವಿ ತುಣುಕು
ಈ ವಾಹನವು ಟ್ರಾಫಿಕ್ ಜಾಮ್‌ನಲ್ಲಿದ್ದಾಗ ಇಬ್ಬರು ಎಸ್‌ಯುವಿಯಲ್ಲಿ ಬಂದ ಪುರುಷರು ಟೈರ್ ಕದ್ದಿದ್ದಾರೆ ಎಂದು ಚಾಲಕ ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಲು ಚಾಲಕ ತಕ್ಷಣ ಪೊಲೀಸ್ ತುರ್ತು ಪ್ರತಿಕ್ರಿಯೆ ಕೇಂದ್ರಕ್ಕೆ ಕರೆ ಮಾಡಿದ್ದು, ನಂತರ ದೂರು ದಾಖಲಿಸಿದ್ದಾರೆ. ಚಾಲಕ ಕೇವಲ ನಾಲ್ಕು ಟೈರ್‌ಗಳೊಂದಿಗೆ ಜೋಧಪುರಕ್ಕೆ ತಲುಪಿದಾಗ ರಕ್ಷಣಾ ಸಿಬ್ಬಂದಿ ಕಾರ್ಯಪ್ರವೃತ್ತರಾದರು ಮತ್ತು ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಶಹೀದ್ ಪಾತ್ ಸುತ್ತಮುತ್ತಲಿನ ಎಲ್ಲಾ ಸಂಭಾವ್ಯ ಸ್ಥಳಗಳಿಂದ ಸಿಸಿಟಿವಿಗಳ ತುಣುಕುಗಳನ್ನು ಪಡೆಯಲಾಗಿದೆ ಎಂದು ಅಧಿಕಾರಿ ಹೇಳಿದರು.

ಭದ್ರತೆಯ ಕಳವಳ
ಉಳಿದ ನಾಲ್ಕು ಟೈರ್‌ಗಳೊಂದಿಗೆ ಜೋಧ್‌ಪುರ ಏರ್‌ಫೋರ್ಸ್ ಸ್ಟೇಷನ್‌ಗೆ ಆಗಮಿಸಿ ವಿವರವಾಗಿ ಪ್ರಶ್ನಿಸಿದಾಗ ಭಾರತೀಯ ವಾಯುಪಡೆ ಸಿಬ್ಬಂದಿ ರಾವತ್ ಅವರನ್ನು ವಶಕ್ಕೆ ಪಡೆದರು. ಸೇನಾ ನೆಲೆಗಳು ಮತ್ತು ವಾಯುನೆಲೆಗಳ ನಡುವೆ ವಸ್ತುಗಳನ್ನು ಸಾಗಿಸಲು ರಾವತ್ ಅವರನ್ನು ಸೇನೆಯು ಗುತ್ತಿಗೆ ಪಡೆದಿದೆ.

ಇದನ್ನೂ ಓದಿ: 39ನೇ ವಯಸ್ಸಿನಲ್ಲಿ ಭಾರತೀಯ ಸೇನೆ ಸೇರಿದ ಬೆಂಗಳೂರಿನ ಟೆಕ್ಕಿ: ಲೆಫ್ಟಿನೆಂಟ್​ ಸತೀಶ್​ ಪಯಣದ ಕತೆ ಹೀಗಿದೆ​

ರಕ್ಷಣಾ ಮೂಲಗಳ ಪ್ರಕಾರ, ಚಾಲಕನು ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶವನ್ನು ಹೊಂದಿದ್ದರಿಂದ ಮತ್ತು ಈ ರೀತಿಯ ಕಳ್ಳತನವು ರಾಷ್ಟ್ರೀಯ ಭದ್ರತೆಯ ಕಳವಳವನ್ನು ಉಂಟುಮಾಡುತ್ತದೆ.
Published by:vanithasanjevani vanithasanjevani
First published: