ಸಾವು ಗೆದ್ದ ಮಗು: ಜನಿಸಿ 7 ನಿಮಿಷಗಳ ಬಳಿಕ ಉಸಿರಾಡಿದ ಪಾಪು..!

ಆರು ನಿಮಿಷಗಳ ಯಾತನೆಯ ಬಳಿಕ ನಮ್ಮ ಸುಂದರ ಮಗುವನ್ನು ವೈದ್ಯರು ಹೊರಗೆಳೆದರು. ಜೀವ ಇರುವ ಯಾವುದೇ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ತಕ್ಷಣ, ಮಕ್ಕಳ ತಜ್ಞರು ಸಿಪಿಆರ್ ನಡೆಸಿದರು. ಯಾವುದೇ ಫಲಿತಾಂಶವಿಲ್ಲ.

news18-kannada
Updated:July 16, 2020, 5:26 PM IST
ಸಾವು ಗೆದ್ದ ಮಗು: ಜನಿಸಿ 7 ನಿಮಿಷಗಳ ಬಳಿಕ ಉಸಿರಾಡಿದ ಪಾಪು..!
ಮಗು
  • Share this:
ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಬಂದ ಕೂಡಲೇ ಗಾಬರಿಯಿಂದ ಮಗು ಅಳುತ್ತಿದ್ದರೆ, ಸುತ್ತ ಮುತ್ತಲಿನವರು ನಗುತ್ತಾರೆ. ಆದರೆ ಅದೇ ಮಗು ಅಳದಿದ್ದರೆ ಆಗುವ ದುಗುಡ ದುಮ್ಮಾನಗಳು ಹೇಳತೀರದು. ಅಲ್ಲೂ ಕೂಡ ನಡೆದಿರುವುದು ಅದೇ.

ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ಜನಿಸಿದ ಮಗುವಿನ ಕುತ್ತಿಗೆಗೆ ಹೊಕ್ಕುಳ ಬಳ್ಳಿ ಸುತ್ತಿಕೊಂಡಿತ್ತು. ಮಗು ಉಸಿರಾಡುತ್ತಿರಲಿಲ್ಲ. ಇತ್ತ ಡಾಕ್ಟರ್ ಕೂಡ ಚಿಂತಿತರಾದರು. ಒಂದಾದ್ರೆ ಮಗು ಸಾಯಬಹುದು ಅಥವಾ ಮೆದುಳಿಗೆ ತೀವ್ರ ಹಾನಿಯಾಗಬಹುದು ಎಂದು ವೈದ್ಯರು ಎಚ್ಚರಿಸಿದರು. ಆದರೆ ಆ ಆಸ್ಪತ್ರೆಯ ಕೋಣೆಯಲ್ಲಿ ಪವಾಡವೊಂದು ನಡೆಯಿತು.

ಇದಕ್ಕೂ ಮುನ್ನ ಮೊದಲ ಮಗುವಿನ ನಿರೀಕ್ಷೆಯೊಂದಿಗೆ ಸ್ಯಾಲಿ ಕ್ರೊ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಬೇನೆ ಶುರುವಾಗುತ್ತಿದ್ದಂತೆ ನರ್ಸ್​ ತಮ್ಮ ಸಹಾಯಕ್ಕೆ ಬಂದಿದ್ದರು. ಇದೇ ವೇಳೆ ನನ್ನ ಸಂಗಾತಿ ಡೇವಿಡ್ ಕೂಡ ಜೊತೆಗಿದ್ದರು. ಮಗುವಿನ ತಲೆ ಹೊರಬರುತ್ತಿದ್ದಂತೆ ಆತ ಖುಷಿಯಿಂದ ನನ್ನನ್ನು ಪ್ರೋತ್ಸಾಹಿಸಿದನು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ.

ಏಕೆಂದರೆ ಪುಟ್ಟ ಪಾಪುವಿನ ಕುತ್ತಿಗೆಗೆ ಹೊಕ್ಕುಳ ಬಳ್ಳಿ ಸುತ್ತಿಕೊಂಡಿತ್ತು. ಇದನ್ನು ನರ್ಸ್​ ತಿಳಿಸಿದಾಗ ನಾನು ಅಕ್ಷರಶಃ ಕುಗ್ಗಿ ಹೋದೆ. ಆ ಬಳಿಕ ಆಕೆ ಬಳ್ಳಿಯನ್ನು ಕತ್ತರಿಸಿದರು. ಇಷ್ಟಾದರೂ ಮಗು ಹೊರ ಬರುತ್ತಿರಲಿಲ್ಲ.  ಏಕೆಂದರೆ ಪಾಪುವಿನ ಭುಜ ಅಂಟಿಕೊಂಡಿತ್ತು.

ಇದರ ನಡುವೆ ಮಗು ಅಳುತ್ತಿಲ್ಲ ಎಂಬ ಚಿಂತೆ ಬೇರೆ. ಎಲ್ಲರಲ್ಲೂ ನೀರವ ಮೌನ. ಡಾಕ್ಟರ್ ಪರೀಕ್ಷಿಸಿದಾಗ ಉಸಿರಾಡುತ್ತಿಲ್ಲ ಎಂಬುದು ತಿಳಿಯಿತು. ನಾನು ಕೂಡ ನರ್ಸ್​ ಆಗಿರುವ ಕಾರಣ ಆಕ್ಸಿಜನ್ ಕೊರತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ನನಗೂ ತಿಳಿದಿತ್ತು.

ಆರು ನಿಮಿಷಗಳ ಯಾತನೆಯ ಬಳಿಕ ನಮ್ಮ ಸುಂದರ ಮಗುವನ್ನು ವೈದ್ಯರು ಹೊರಗೆಳೆದರು. ಜೀವ ಇರುವ ಯಾವುದೇ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ತಕ್ಷಣ, ಮಕ್ಕಳ ತಜ್ಞರು ಸಿಪಿಆರ್ ನಡೆಸಿದರು. ಯಾವುದೇ ಫಲಿತಾಂಶ ಕಾಣುತ್ತಿರಲಿಲ್ಲ.

ಮಗು
ಇದಾಗಿ ಏಳು ನಿಮಿಷಗಳ ನಂತರ ಪುಟ್ಟ ಪಾಪು ಉಸಿರಾಡಲಾರಂಭಿಸಿದ. ವೈದ್ಯರು ಮಗುವನ್ನು ನನ್ನ ಬಳಿ ಕರೆತಂದು ತೋರಿಸಿದರು.  ಆ ಸಮಯದಲ್ಲಿ ನನ್ನ ಹೋದ ಜೀವ ಮರಳಿ ಬಂದಾಗಿತ್ತು. ಏಕೆಂದರೆ ಮಗು 13 ನಿಮಿಷಗಳ ಕಾಲ ಉಸಿರಾಡಿರಲಿಲ್ಲ.

ಮಗುವನ್ನು ಐಸಿಯುನಲ್ಲಿ ಆಕ್ಸಿಜನ್ ಟ್ಯೂಬ್​ನಲ್ಲಿಡಬೇಕು. ಇಲ್ಲದಿದ್ರೆ ಮಗು ಸಾಯಬಹುದು ಅಥವಾ ಮೆದುಳಿಗೆ ಹಾನಿಯಾಗಬಹುದು ಎಂದು ವೈದ್ಯರು ಎಚ್ಚರಿಸಿದರು. ಅದರಂತೆ ಪುಟ್ಟ ಪಾಪುಗೆ ಹೈಪೊಥೆರ್ಮಿಯಾ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಗಾತಿ ಡೇವಿಡ್ ನನಗೆ ದೈರ್ಯ ತುಂಬಿದರು.

ಇತ್ತ ಕಡೆ ನಾನು ಕೂಡ ಚೇತರಿಸಿಕೊಂಡೆ. ಮೂರು ದಿಗಳ ನಂತರ ನನ್ನ ಮಗುವನ್ನು ಆಸ್ಪತ್ರೆಯ ಕೋಣೆಯಲ್ಲೇ ಮುದ್ದಿಸಿದೆ. ಐದನೇ ದಿನ ಮಗುವಿನ ಎಂಆರ್​ಐ ಸ್ಕ್ಯಾನಿಂಗ್ ಮಾಡಬೇಕೆಂದು ವೈದ್ಯರು ತಿಳಿಸಿದ್ದರು. ಅದೇನು ರಿಪೋರ್ಟ್ ಬರಲಿದೆ ಎಂಬ ಭಯ ನನ್ನಲ್ಲಿ ಆವರಿಸಿತ್ತು. ಡೇವಿಡ್ ಅದೆಷ್ಟು ದೈರ್ಯ ತುಂಬಿಸಿದರೂ, ನಾನು ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ.

ಆದರೆ ಅಲ್ಲೂ ಒಂದು ಅಚ್ಚರಿ ಕಾದಿತ್ತು. ಸ್ಕ್ಯಾನಿಂಗ್​ ರಿಪೋರ್ಟ್​ ನೋಡಿ ಮಗುವಿನ ಮೆದುಳು ಮತ್ತು ಆರೋಗ್ಯ ಸಂಪೂರ್ಣ ಸಾಮಾನ್ಯವಾಗಿ ಎಂದು ಡಾಕ್ಟರ್ ತಿಳಿಸಿದರು. ಎರಡು ದಿನಗಳ ನಂತರ ನನ್ನ ರಾಜಕುಮಾರನನ್ನು ಆಸ್ಪತ್ರೆಯಿಂದ ಕರೆದುಕೊಂಡು ಮನೆ ಬಂದೆವು. ನಾವು ಮಗುವಿನೊಂದಿಗೆ ಬೆರೆತವು. ಆರಂಭದಲ್ಲೇ ನೋವು ನೋಡಿದ ನನಗೆ ನಲಿವು ಕಾಣಿಸಿತು.

ಇದೀಗ ಡಾಕ್ಟರ್ ಬದುಕುವುದು ಡೌಟ್ ಎಂದೇಳಿದ ನನ್ನ ಪಾಪುವಿಗೆ ನಾಲ್ಕು ವರ್ಷ. 13 ನಿಮಿಷಗಳ ಉಸಿರಾಡದೇ ನಮ್ಮೆಲ್ಲರನ್ನು ಚಿಂತೆಗೀಡು ಮಾಡಿದ ಆ ಮಗು ಈಗ ಆರೋಗ್ಯವಾಗಿ ನಮ್ಮ ಸಂತೋಷದ ಪಾಲುದಾರನಾಗಿದ್ದಾನೆ ಎಂದು ಸ್ಯಾಲಿ ಕ್ರೊವ್ ನಾಲ್ಕು ವರ್ಷಗಳ ಹಿಂದಿನ ಆಸ್ಪತ್ರೆ ಕಹಾನಿಯನ್ನು ತೆರೆದಿಟ್ಟಿದ್ದಾರೆ.
Published by: zahir
First published: July 16, 2020, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading