News18 India World Cup 2019

ಕೇಂದ್ರ ಕ್ರೀಡಾ ಸಚಿವರ ಚಿತ್ರ ವೈರಲ್​


Updated:August 28, 2018, 1:28 PM IST
ಕೇಂದ್ರ ಕ್ರೀಡಾ ಸಚಿವರ ಚಿತ್ರ ವೈರಲ್​

Updated: August 28, 2018, 1:28 PM IST
ನಮ್ಮ ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗುತ್ತಲೇ ಇದೆ, ಕಚೇರಿಯಲ್ಲೇ ಕುಳಿತು ತಾಖೀತು ಮಾಡುವ ಸಚಿವರಿಗಿಂತ ಕೊಂಚ ಭಿನ್ನ ಎನಿಸಿಕೊಂಡಿರುವ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್,​ ಇದೀಗ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕ್ರೀಡಾ ಪಟುಗಳಿಗೆ ಊಟವನ್ನು ಕೈಯಾರೆ ನೀಡಿದ್ದಾರೆ.ಏಷಿಯನ್​ ಕ್ರೀಡಾ ಕೂಟಕ್ಕೆ ಪಾಲ್ಗೊಂಡಿದ್ದ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಲು ಸ್ವತಃ ಕ್ರೀಡಾ ಸಚಿವ ರಾಥೋಡ್​ ಜಕರ್ತಾಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಭಾರತೀಯ ಕ್ರೀಡಾಪಟುಗಳೊಂದಿಗೆ ಬೆರೆತು ಕೈಯಾರೆ ಊಟವನ್ನು ನೀಡಿದ ಚಿತ್ರ ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಊಟದೊಂದಿಗೆ ಎಲ್ಲಾ ಕ್ರೀಡಾಪಟುಗಳೊಂದಿಗೆ ಚರ್ಚೆ ಕೂಡಾ ನಡೆಸಿದ್ದಾರೆ. ಓರ್ವ ಸಚಿವನಾಗಿ ಕ್ರೀಡಾಪಟುಗಳೊಂದಿಗೆ ಬೆರೆತಿಯುತ್ತಿರುವ ರಾಥೋಡ್​ ನಡೆಯನ್ನು ಟ್ವಿಟರಾತಿಗಳು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
Loading...
ಕೆಲ ದಿನಗಳ ಹಿಂದೆ ನಡೆದಿದ್ದ ಏಷಿಯನ್​ ಗೇಮ್ಸ್​ನ ಶಾಟ್​ಪುಟ್​ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ತಾಜಿಂದರ್​ ಪಾಲ್​ ಸಿಂಗ್​ಗೆ ಸ್ವತಃ ತಾವೇ ಹೋಗಿ ಅಭಿನಂದನೆ ಸಲ್ಲಿಸಿದ್ದಾರೆ.

ಫಿಟ್​ ಇಂಡಿಯಾ ಚಾಲೆಂಜ್
ಕೇವಲ ಇಷ್ಟು ಮಾತ್ರವಲ್ಲೇ ರಾಥೋಡ್​ ಕೆಲ ದಿನಗಳ ಹಿಂದೆ ಫಿಟ್​ನೆಸ್​ ಚಾಲೆಂಜ್​ನ್ನು ಸಹ ಟ್ವಿಟರ್​ನಲ್ಲಿ ನೀಡಿ ಸಾಕಷ್ಟು ವೈರಲ್​ ಆಗಿದ್ದರು. ಕ್ರೀಡಾಪಟುಗಳು, ಖ್ಯಾತ ವ್ಯಕ್ತಿಗಳಿಗೆ ನೇರವಾಗಿ ತಮ್ಮ ಫಿಟ್​ನೆಸ್​ನ್ನು ಬಹಿರಂಗ ಪಡಿಸುವಂತೆ ಕೋರಿ ಟ್ವಿಟರ್​ನಲ್ಲಿ ಹೊಸ ಅಭಿಯಾನ ಹುಟ್ಟುಹಾಕಿದ್ದರು.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...