ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲನೆಯ ಅಲೆಯು (Corona First Wave) ಇಡೀ ದೇಶವನ್ನೇ ನಲುಗಿಸಿದ್ದಾಗ, ಕೇಂದ್ರ ಸರ್ಕಾರ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಲಾಕ್ಡೌನ್ (Lockdown) ಹೇರಿದ್ದು, ಈ ಕಠಿಣವಾದ ಸಮಯದಲ್ಲಿ ಎಷ್ಟೋ ಬಡ ಕಾರ್ಮಿಕರು (Migrant Workers) ಅನೇಕ ಮಹಾನಗರಗಳಿಂದ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿ ಸುರಕ್ಷಿತವಾಗಿ ಹೋಗಿ ತಲುಪಲು ಪರದಾಡುತ್ತಿದ್ದರು.ಆಗ ಸಿನೆಮಾಗಳಲ್ಲಿ ಖಳ ನಾಯಕನ ಪಾತ್ರ ಮಾಡುತ್ತಿರುವ ನಟ ಸೋನು ಸೂದ್ (Bollywood Actor Sonu Sood) ನಿಜ ಜೀವನದ ಆಪದ್ಬಾಂಧವನಂತೆ ಬಂದು ಸಾವಿರಾರು ಜನರಿಗೆ ಸಹಾಯ (Help) ಮಾಡಿದ್ದರು. ಪ್ರವಾಸಿ ಕಾರ್ಮಿಕರನ್ನು ಅವರನ್ನು ಊರಿಗೆ ತಲುಪಿಸಲು ಬಸ್, ರೈಲು ಸಹ ಬುಕ್ ಮಾಡಿದ್ದರು. ಕೆಲವರಿಗೆ ವಿಮಾನದ ಮೂಲಕ ಕಳುಹಿಸಿದ್ದರು.
ನಟ ಸೂದ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ (IT Raid) ಈ ವರ್ಷದ ಸೆಪ್ಟೆಂಬರ್ನಲ್ಲಿ ದಾಳಿ ನಡೆಸಿ, ಅವರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ತೆರಿಗೆಗಳನ್ನು (Tax) ತಪ್ಪಿಸಿದ್ದಾರೆ ಎಂದು ಆರೋಪಿಸಿತ್ತು. ಆದ್ದರಿಂದ ನಟ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅಭಿಮಾನಿಗಳಿಗೆ ಸತ್ಯ ಏನು ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದು ಬರೆದುಕೊಂಡಿದ್ದರು.
ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಇಲ್ಲಿದೆ ನೋಡಿ ಅದಕ್ಕೆ ಕಾರಣ. ನಟ ಸೋನು ಸೂದ್ರನ್ನು ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವರಾದ ಕೆ. ಟಿ. ರಾಮರಾವ್ (Minister K T Ramarao) ಸೋಮವಾರ ಶ್ಲಾಘಿಸಿದರು ಮತ್ತು ಆದಾಯ ತೆರಿಗೆ ಇಲಾಖೆಯ ದಾಳಿಗಳ ಹೊರತಾಗಿಯೂ ಉತ್ತಮ ಕೆಲಸ ಮುಂದುವರಿಸುವಂತೆ ಒತ್ತಾಯಿಸಿದರು.
ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೂದ್ ಅವರೊಂದಿಗೆ ಕೋವಿಡ್ ಯೋಧರನ್ನು (Corona Warriors)ಸನ್ಮಾನಿಸಿದ ನಂತರ ಮಾತನಾಡಿದ ಸಚಿವರು, ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾಗ ನಟ ಆದಾಯ ತೆರಿಗೆ ಇಲಾಖೆಯ (Income Tax Department) ದಾಳಿಗಳನ್ನು ಎದುರಿಸಿದ್ದಾರೆ ಎಂದು ಆಘಾತ ವ್ಯಕ್ತಪಡಿಸಿದರು.
ಸೂದ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, ಅವರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದ ನಂತರ ನಟ ಅದೇ ಸಮಯದಲ್ಲಿ ತನ್ನ ಫೌಂಡೇಶನ್ ನ "ಪ್ರತಿ ರೂಪಾಯಿ ಸಹ ಒಂದು ಜೀವವನ್ನು ಉಳಿಸುವ ಸರದಿಗಾಗಿ ಕಾಯುತ್ತಿದೆ" ಎಂದು ಹೇಳಿದ್ದರು.
"ಇಡೀ ರಾಷ್ಟ್ರ ಮತ್ತು ಜಗತ್ತು ನಟ ಸೂದ್ ಹೇಗೆ ಕಷ್ಟದ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿ ಪ್ರಶಂಸೆ ಮಾಡುತ್ತಿದ್ದರೆ, ಆದಾಯ ತೆರಿಗೆ ಇಲಾಖೆ ಇವರ ಮೇಲೆ ದಾಳಿ ನಡೆಸಿದೆ” ಎಂದು ಅವರು ಹೇಳಿದರು.
"ನಟ ಅಂತಹ ಯಾವುದೇ ವಿಷಯಗಳ ಬಗ್ಗೆ ತಲೆ ಕೆಡೆಸಿಕೊಳ್ಳದೇ ಸಮಾಜಕ್ಕೆ ಸಹಾಯ ಮಾಡುವುದನ್ನು ಮುಂದುವರಿಸಬೇಕು" ಎಂದು ರಾಮರಾವ್ ಹೇಳಿದರು. ತೆಲಂಗಾಣ ಸರ್ಕಾರ ಅವರಿಗೆ ಎಲ್ಲಾ ಬೆಂಬಲ ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಆದಾಯ ತೆರಿಗೆ ಇಲಾಖೆಯ ದಾಳಿಯ ಹೊರತಾಗಿಯೂ ಬಡವರಿಗೆ ಸಹಾಯ ಮಾಡುವುದನ್ನು ಮುಂದುವರಿಸುವುದಾಗಿ ಸೂದ್ ಅದೇ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. ಸಚಿವ ರಾಮರಾವ್ ಕೂಡ ಅಗತ್ಯವಿರುವವರಿಗೆ ಈ ಕಠಿಣವಾದ ಸಂದರ್ಭದಲ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ