Rainbow Video: ನಯಾಗರ ಜಲಪಾತದಲ್ಲಿ ಕಾಮನಬಿಲ್ಲಿನ ಮೋಹಕ ದೃಶ್ಯ! ವಿಡಿಯೋ ವೈರಲ್

ವಿಶ್ವದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಅಮೆರಿಕಾದ ನಯಾಗರ ಫಾಲ್ಸ್ ನಲ್ಲಿ ಮೂಡಿದ ಕಾಮನಬಿಲ್ಲು ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಆಕರ್ಷಿಸುತ್ತಿದ್ದು ನಯಾಗರ ಜಲಪಾತದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ನಯಾಗರ ಜಲಪಾತದಲ್ಲಿ ಕಾಮನಬಿಲ್ಲು

ನಯಾಗರ ಜಲಪಾತದಲ್ಲಿ ಕಾಮನಬಿಲ್ಲು

  • Share this:
ಮಳೆಗಾಲ ಬಂತೆಂದರೆ ಸಾಕು ಹಳ್ಳ, ತೊರೆ, ನದಿಗಳು,ಕಡಲು, ಸಮುದ್ರ, ಜಲಪಾತಗಳು (Falls) ಎಲ್ಲವೂ ತುಂಬಿ ತುಳುಕುತ್ತಿರುತ್ತದೆ. ಅದರಲ್ಲೂ ಈ ಬಾರಿಯಂತು ಅಧಿಕ ಪ್ರಮಾಣದಲ್ಲಿ ಮಳೆ (Rain) ಸುರಿದಿದ್ದು ಎಲ್ಲಾ ಜಲಪಾತಗಳು ಒಂದಲ್ಲ ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಇತ್ತೀಚಿಗೆ ಕರ್ನಾಟಕದ (Karnataka) ಜೋಗ ಜಲಪಾತ (Jog Falls) ಧುಮ್ಮುಕ್ಕಿ ಹರಿದಿದ್ದು ಆ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ (Viral Video) ಆಗಿತ್ತು ಅಂದ್ರೆ ತುಂಬಾ ಜನ ಅದು ಜೋಗ ಜಲಪಾತವಲ್ಲ ಅಮೆರಿಕಾದ (America)  ನಯಾಗರ ಜಲಪಾತ (Niagara Falls) ಎಂದು ಕನ್ಫ್ಯೂಸ್ ಆಗಿದ್ರು. ಅದರೆ ಇದೀಗ ನಯಾಗರ ಫಾಲ್ಸ್ ನಲ್ಲಿ ಮೂಡಿದಂತಹ ಕಾಮನಬಿಲ್ಲು (Rainbow) ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ಹರಿದಾಡುತ್ತಿದೆ. ಅಲ್ಲದೆ ಇದು ನಯಾಗರ ಫಾಲ್ಸ್ ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಜನ ಇದನ್ನು ನೋಡಿ ಬೆರಗುಗೊಂಡಿದ್ದಾರೆ. ನಯಾಗರದ ನವೀನತೆಯನ್ನು ಕಂಡು ಮನಸೋಲುವ ಜನತೆಗೆ ಈ ಕಾಮನಬಿಲ್ಲಿನ ದೃಶ್ಯ ಸಾಕ್ಷಿಯಾಯಿತು.

ನಯಾಗರ ಜಲಪಾತದಲ್ಲಿ ಕಾಮನಬಿಲ್ಲಿನ ಸೊಬಗು
ವಿಶ್ವದ ಪ್ರಸಿದ್ಧವಾದ ಜಲಪಾತಗಳಲ್ಲಿ ಒಂದು ನಯಾಗರ ಜಲಪಾತ. ಎತ್ತರದಿಂದ ರಭಸವಾಗಿ ಬೀಳುವ ನೀರು ಹಾಲಿನ ನೊರೆಯಂತೆ ಕಾಣುತ್ತದೆ. ಹಾಲಿನಂತಿರುವ ಜಲಪಾತದ ರಮಣೀಯವಾದ ದೃಶ್ಯಗಳು ಜನರ ಮನಸನ್ನು ಮುದಗೊಳಿಸುತ್ತದೆ. ಅದರಲ್ಲೂ ಇತ್ತೀಚಿಗೆ ಇಲ್ಲಿ ಕಾಮನ ಬಿಲ್ಲು ಕಾಣಿಸಿಕೊಂಡಿದ್ದು ಇದು ಜಲಪಾತದ ಸೊಬಗಿಗೆ ಇನ್ನಷ್ಟು ಮೆರುಗು ನೀಡಿದೆ.

ಇದನ್ನೂ ಓದಿ: Naneghat Reverse Fall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ! ವಿಡಿಯೋ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಕಾಮನಬಿಲ್ಲಿನ ಓಟ
ಸಾಮಾನ್ಯವಾಗಿ ಎಲ್ಲರೂ ತಾವು ನೋಡಿದಂತಹ ಸುಂದರವಾದ ದೃಶ್ಯಗಳನ್ನು, ವಿಸ್ಮಯಕಾರಿ ವಿಚಾರಗಳನ್ನು ಕ್ಯಾಮಾರದಲ್ಲಿ ಸರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಲಲು ಬಯಸುತ್ತಾರೆ. ಇದೀಗ ನಯಾಗರ ಜಲಪಾತದಲ್ಲಿ ಮೂಡಿದ ಕಾಮನಬಿಲ್ಲಿನ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೀಕ್ಷಣೆ ಪಡೆಯುತ್ತಿದೆ.






ಮನಮೋಹಕವಾದ ಮಳೆಬಿಲ್ಲು
ಜೂನ್ 18 ರಂದು ಇನ್ಸ್ಟ್ರಾಗ್ರಾಂನಲ್ಲಿ ಶಂಪಾ ಎನ್ನುವವರು ನಯಾಗರದಲ್ಲಿನ ಕಾಮನಬಿಲ್ಲಿನ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಇದಕ್ಕೆ "ಅಪರೂಪದ ದೃಶ್ಯ. ಜಲಪಾತದ ಮೇಲೆ ಪೂರ್ಣ ಮಳೆಬಿಲ್ಲು. ಸುಂದರವಾದ ದೃಶ್ಯ." ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ಜನ ಕಾಮನಬಿಲ್ಲಿನ ನೋಟಕ್ಕೆ ಬೋಲ್ಡ್ ಆಗಿ ಬಿಟ್ಟಿದ್ದಾರೆ.

ವೀಡಿಯೊದಲ್ಲಿ ಬೀಳುವ ನೀರು ಮತ್ತು ಸುತ್ತಲೂ ಬಿಳಿ ನೊರೆಗಳ ನಡುವೆ ಮಳೆಬಿಲ್ಲಿನ ರಚನೆಯ ಅದ್ಭುತ ದೃಶ್ಯವನ್ನು ಕಾಣಬುದು. ಈ ದೃಶ್ಯವನ್ನು ಗಮನಿಸಿದ ಜನರು ಇದು ನಮ್ಮ ಕಣ್ಣಲ್ಲಿ ಎಂದಿಗೂ ಶಾಶ್ವತ, ಇದು ಸ್ವರ್ಗ ಎಂದು ಕಮೆಂಟ್ ಮಾಡಿದ್ದಾರೆ. 2.2 ಮಿಲಿಯನ್ ಗಿಂತಲೂ ಅಧಿಕ ಜನ ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.

ಮಳೆಬಿಲ್ಲು ಹೇಗೆ ರೂಪುಗೊಳ್ಳುತ್ತದೆ
ಬೃಹತ್ ಪ್ರಮಾಣದ ನೀರು ನಿರಂತರವಾಗಿ ಕೆಳಕ್ಕೆ ಹರಿಯುತ್ತಿರುವುದರಿಂದ, ಜಲಪಾತದ ಸುತ್ತಲಿನ ಗಾಳಿಯಲ್ಲಿ ಮಂಜು ಸ್ಥಗಿತಗೊಳ್ಳುತ್ತದೆ. ಆದ್ದರಿಂದ, ಸೂರ್ಯನ ಬೆಳಕು ಮಂಜಿನ ಮೂಲಕ ಹಾದುಹೋದಾಗ, ಇದು ಜಲಪಾತದ ಮೇಲೆ ಸುಂದರವಾದ ಮಳೆಬಿಲ್ಲುಗಳ ರಚನೆಗೆ ಕಾರಣವಾಗುತ್ತದೆ.

ಇದನ್ನೂ ಓದಿ:Peacock Dance Viral Video: ಇವಳ ಡ್ಯಾನ್ಸ್ ನೋಡಿ ನಾಚಿ ನೀರಾದ ಜನ! ಯಾರಿವಳು? ಇಲ್ಲಿದೆ ನೋಡಿ ವೀಡಿಯೋ


ಮಳೆಬಿಲ್ಲು ಮಳೆಯ ಮುನ್ಸೂಚನೆಗೆ ಸಾಕ್ಷಿಯಾದರೆ. ನಯಾಗರದಲ್ಲಿ ಮೂಡಿದಂತಹ ಮಳೆಬಿಲ್ಲು ಪ್ರಕೃತಿ ಸೌಂದರ್ಯವನ್ನು ಆನಂದಿಸುವ ಜನರಿಗೆ ಹೊಸ ಮೆರುಗನ್ನು ನೀಡಿತು, ಪ್ರಕೃತಿಯ ವಿಸ್ಮಯಕಾರಿ ವಿಚಾರಗಳು ದಿನದಿಂದ ದಿನಕ್ಕೆ ಮನುಷ್ಯನ ಮನಸ್ಸನ್ನು ಸೋಲಿಸುತ್ತಲೇ ಇರುತ್ತದೆ.


Published by:Nalini Nalini
First published: