Scary Video: ಅಬ್ಬಬ್ಬಾ.. ಎಲ್ಲಿ ನೋಡಿದ್ರೂ ಕೆಂಪು ಏಡಿಗಳ ರಾಶಿ: ಗುಂಡಿಗೆ ಗಟ್ಟಿ ಇದ್ದವರು ಮಾತ್ರ ಈ ವಿಡಿಯೋ ನೋಡಿ!

Scary Video: ಕ್ರಿಸ್‌ಮಸ್‌ ದ್ವೀಪಕ್ಕೆ ಬಂದಿರುವ ಪ್ರವಾಸಿಗರು ಮತ್ತು ಅಲ್ಲಿನ ಸ್ಥಳೀಯರು ಮಿಲಿಯನ್‌ಗಟ್ಟಲೆ ಕೆಂಪು ಏಡಿಗಳು ಪೂರ್ತಿಯಾಗಿ ಎಲ್ಲಾ ಬೀದಿಗಳ ರಸ್ತೆಗಳನ್ನು ಅವರಿಸಿಕೊಂಡಿರುವುದನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ.

ರಸ್ತೆ ತುಂಬೆಲ್ಲಾ ಕೆಂಪು ಏಡಿಗಳು

ರಸ್ತೆ ತುಂಬೆಲ್ಲಾ ಕೆಂಪು ಏಡಿಗಳು

  • Share this:

ಸಾಮಾನ್ಯವಾಗಿ ಕಾಡು ಪ್ರಾಣಿಗಳು(Wild Animals) ಮತ್ತು ಎಮ್ಮೆ(Buffalo), ಕುರಿಗಳು(sheep) ನಾವು ಪ್ರಯಾಣಿಸುತ್ತಿರುವಂತಹ ರಸ್ತೆಯ ಮಧ್ಯೆ ಬಂದರೆ, ನಾವು ನಮ್ಮ ವಾಹನವನ್ನು ನಿಧಾನ ಮಾಡುತ್ತೇವೆ ಅಥವಾ ಅವುಗಳು ರಸ್ತೆಯಿಂದ ಪಕ್ಕಕ್ಕೆ ಹೋಗುವವರೆಗೆ ವಾಹನ(Vehicle)ವನ್ನು ಅಲ್ಲೇ ನಿಲ್ಲಿಸಿಕೊಂಡು ಬಿಡುತ್ತೇವೆ.ಆದರೆ, ಇಲ್ಲಿ ನಾವು ಹೇಳಲು ಹೊರಟಿರುವುದು ವಿಭಿನ್ನವಾದ ಘಟನೆಯ ಬಗ್ಗೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಎಣಿಕೆಗೆ ಸಿಗದೇ ಇರುವಷ್ಟು ಕೆಂಪು ಏಡಿಗಳು(Red crabs)  ಒಟ್ಟಿಗೆ ಬಂದು ನಗರದ ಎಲ್ಲಾ ರಸ್ತೆಗಳನ್ನು ಪೂರ್ತಿಯಾಗಿ ಆವರಿಸಿಕೊಂಡು ಯಾವುದೇ ವಾಹನ ಸವಾರರಿಗೆ ಒಂದಿಂಚು ಜಾಗವನ್ನು ರಸ್ತೆಯ ಮೇಲೆ ಬಿಡದೇ ಆಕ್ರಮಿಸಿಕೊಂಡಿರುವ ದೃಶ್ಯವನ್ನು ನೀವು ಈ ಹಿಂದೆ ಎಲ್ಲಿಯೂ ನೋಡಿರಲಿಕ್ಕಿಲ್ಲ.


ಕೆಂಪು ಏಡಿಗಳನ್ನು ಕಂಡ ಜನರಿಗೆ ಶಾಕ್!

ಈ ದೃಶ್ಯ ನೋಡಲು ಸಿಕ್ಕಿದ್ದು ಆಸ್ಟ್ರೇಲಿಯಾದಲ್ಲಿ, ಕ್ರಿಸ್‌ಮಸ್‌ ದ್ವೀಪಕ್ಕೆ ಬಂದಿರುವ ಪ್ರವಾಸಿಗರು ಮತ್ತು ಅಲ್ಲಿನ ಸ್ಥಳೀಯರು ಮಿಲಿಯನ್‌ಗಟ್ಟಲೆ ಕೆಂಪು ಏಡಿಗಳು ಪೂರ್ತಿಯಾಗಿ ಎಲ್ಲಾ ಬೀದಿಗಳ ರಸ್ತೆಗಳನ್ನು ಅವರಿಸಿಕೊಂಡಿರುವುದನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಅಂದಾಜು 50 ಮಿಲಿಯನ್‌ಗಿಂತಲೂ ಹೆಚ್ಚು ಕೆಂಪು ಏಡಿಗಳ ಬೃಹತ್ ಗುಂಪೊಂದು ಕಾಡಿನಿಂದ ಪಶ್ಚಿಮ ಆಸ್ಟ್ರೇಲಿಯಾದಲ್ಲಿರುವ ರಾಷ್ಟ್ರೀಯ ಉದ್ಯಾನದ ತೀರದ ಕಡೆಗೆ ತಮ್ಮ ಪ್ರಯಾಣ ಮಾಡುತ್ತಿದ್ದವು ಎಂದು ಹೇಳಲಾಗುತ್ತಿದೆ. ಇದರ ಪರಿಣಾಮವಾಗಿ, ಕೆಂಪು ಏಡಿಗಳು ರಸ್ತೆಗಳು, ಸೇತುವೆಗಳು, ಉದ್ಯಾನವನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣವಾಗಿ ಅವರಿಸಿಕೊಂಡಿದ್ದವು.





ಎಲ್ಲಿ ನೋಡಿದರೂ ಕೆಂಪು ಏಡಿಗಳ ರಾಶಿ!

ಸ್ಥಳೀಯರು ಚಿತ್ರೀಕರಿಸಿದ ಮತ್ತು ಹಂಚಿಕೊಂಡ ವಿಡಿಯೋಗಳು ಹೇಗೆ ಈ ಪುಟ್ಟ ಜೀವಿಗಳು ತಮ್ಮ ಗಮ್ಯ ಸ್ಥಾನ ತಲುಪಲು ರಸ್ತೆಗಳು ಮತ್ತು ಬಂಡೆಗಳನ್ನು ದಾಟಿಕೊಂಡು ಹೋಗುತ್ತಿರುವುದನ್ನು ತೋರಿಸುತ್ತವೆ. ಈ ವರ್ಷ ಕೆಂಪು ಏಡಿಗಳ ವಲಸೆ ಹಿಂದೆಂದಿಗಿಂತಲೂ ತುಂಬಾನೇ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಂದಾಜು 50 ಮಿಲಿಯನ್ ಏಡಿಗಳು ಮಳೆಯ ನಂತರ ಕಾಡಿನಿಂದ ಹಾದು ಹೋಗುವುದರಿಂದ ಪ್ರತಿ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಈ ದೃಶ್ಯವು ಇಲ್ಲಿನ ಜನರಿಗೆ ಹೊಸದೇನಲ್ಲ ಎಂದು ವರದಿಗಳು ತಿಳಿಸಿವೆ.


ಇದನ್ನು ಓದಿ : ಗುಜರಾತಿ ಗಾಯಕಿಯ ಮೇಲೆ ನೋಟಿನ ಮಳೆ: Viral Video ನೋಡಿದರೆ ಬೆರಗಾಗೋದು ಗ್ಯಾರೆಂಟಿ!

ಈ ಕೆಂಪು ಏಡಿಗಳು ಪಟ್ಟಣಗಳ ಮೂಲಕ ಚಲಿಸುವಾಗ, ಬಹುತೇಕವಾಗಿ ಎಲ್ಲಾ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಅವು ಹೋಗುವಾಗ ಸಾಮಾನ್ಯವಾಗಿ ಹೂವು, ಬೀಜ, ಎಲೆ, ಹಣ್ಣು ಹಂಪಲುಗಳನ್ನು ತಿನ್ನುತ್ತಾ ತನ್ನ ಮರಿಗಳಿಗೂ ಸಹ ತಿನ್ನಿಸುತ್ತಾ ಸಾಗುತ್ತವೆ.


ಏಡಿಗಳು ಸಂಚರಿಸಲು ವಿಶೇಷ ಸೇತುವೆ!

ಪ್ರತಿ ವರ್ಷ, ಕ್ರಿಸ್‌ಮಸ್‌ ದ್ವೀಪದ ಸಿಬ್ಬಂದಿ ಈ ದೊಡ್ಡ ವಲಸೆಗಾಗಿ ಹಲವಾರು ತಿಂಗಳುಗಳ ಕಾಲ ಕೆಲಸ ಮಾಡುತ್ತಾರೆ. ಅವರು ತಡೆಗೋಡೆಗಳನ್ನು ನಿರ್ಮಿಸುತ್ತಾರೆ ಮತ್ತು ಏಡಿಗಳಿಗೆ ಬಳಸಲು ವಿಶೇಷ ಸೇತುವೆಗಳನ್ನು ಸಹ ಮಾಡುತ್ತಾರೆ. ಆದರೆ ಈ ವರ್ಷ ಏಡಿಗಳ ವಲಸೆ ಸಂಖ್ಯೆಯನ್ನು ಕಡಿಮೆ ಅಂದಾಜು ಮಾಡಿದ್ದರೂ, ಹಠಾತ್ತನೆ ಅತಿ ಹೆಚ್ಚು ಕೆಂಪು ಏಡಿಗಳು ಬಂದಿದ್ದು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ.


ಇದನ್ನು ಓದಿ :4 ಕಾಲಿನ ಹಾವು ಇದ್ದಿದ್ದು ಸತ್ಯವಾ? ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಿದ್ದಾರೆ ವಿಜ್ಞಾನಿಗಳು!

"ಕ್ರಿಸ್‌ಮಸ್‌ ದ್ವೀಪದಲ್ಲಿ ಕೆಂಪು ಏಡಿ ವಲಸೆ ಈ ವರ್ಷ ಹೆಚ್ಚಾದ್ದರಿಂದ, ಕಚೇರಿ ಬ್ಲಾಕ್‌ನ ಬಾಗಿಲು ಸೇರಿದಂತೆ ಎಲ್ಲೆಡೆ ಏಡಿಗಳು ತಿರುಗಾಡುತ್ತಿವೆ. ನಮ್ಮ ಸಿಬ್ಬಂದಿಯವರು ಸಂಚಾರ ನಿರ್ವಹಿಸುತ್ತಿದ್ದಾರೆ. ಏಡಿಗಳನ್ನು ರಸ್ತೆಗಳಿಂದ ಹೊರ ತೆಗೆಯುತ್ತಿದ್ದಾರೆ ಮತ್ತು ಮುಚ್ಚಿರುವ ರಸ್ತೆಗಳ ಬಗ್ಗೆ ಸಮುದಾಯಕ್ಕೆ ಆಗಾಗ್ಗೆ ಮಾಹಿತಿ ಒದಗಿಸುತ್ತಿದ್ದಾರೆ" ಎಂದು ಪಾರ್ಕ್ಸ್ ಆಸ್ಟ್ರೇಲಿಯದ ವಕ್ತಾರರು ಹೇಳಿದರು.


Published by:Vasudeva M
First published: