ಹಾಲು ಕ್ರೇಟ್ ಚಾಲೆಂಜ್ ಮೂಲತಃ ಟಿಕ್ಟಾಕ್ನಲ್ಲಿ ಮೊದಲು ಹೊರಹೊಮ್ಮಿತು ಮತ್ತು ನಂತರ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ ಎಂದು ಹೇಳಲಾಗುತ್ತಿದೆ.
ಅಂತರ್ಜಾಲದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಹೊಸ-ಹೊಸ ಚಾಲೆಂಜ್ ವೈರಲ್ ಆಗುತ್ತಲೇ ಇರುವುದು ಸಾಮಾನ್ಯವಾಗಿದೆ. ಈ ಹಿಂದೆ ಬಾಟಲ್ ಚಾಲೆಂಜ್ ಸಾಮಾ ಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ, ಇದೀಗ ಮಿಲ್ಕ್ ಕ್ರೇಟ್ ಚಾಲೆಂಜ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಚಾಲೆಂಜ್ನಲ್ಲಿ ಜನ ಗಾಯಾಳುವಾಗುವ ಸಾಧ್ಯತೆ ಇದೆ. ಹೀಗಾಗಿ ಜನ ಹುಷಾರಾಗಿರು ವುದು ಉತ್ತಮ. ಅಲ್ಲದೆ, ಈ ಚಾಲೆಂಜ್ನಲ್ಲಿ ಭಾಗವಹಿಸದೆ ಇರುವುದು ಒಳ್ಳೆಯದು, ಏಕೆಂದರೆ ಈ ಚಾಲೆಂಜ್ನಿಂದ ಗಾಯಾಳುವಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈಗ ಟ್ರೆಂಡ್ ಆಗಿರುವ ಚಾಲೆಂಜ್ನಲ್ಲಿ ಕೆಲವು ಸಂದರ್ಭಗಳಲ್ಲಿ ಜನರನ್ನು ಗಾಯಗೊಳಿಸುತ್ತಿದೆ. ಈ ಚಾಲೆಂಜ್ನಲ್ಲಿ ಭಾಗವಹಿಸುವ ಜನ ಹಾಲಿನ ಬಾಕ್ಸ್ಗಳನ್ನು ಅಣಿಯಾಗಿ ಮೆಟ್ಟಿಲಿನಂತೆ ಜೋಡಿಸಿ ಅವುಗಳನ್ನು ಏರಲು ಯತ್ನಿಸುತ್ತಾರೆ. ಈ ವೇಳೆ ಅವರು ಬಾಕ್ಸ್ಗಳನ್ನು ಕೆಳಗೆ ಬೀಳದಂತೆ ನಡೆಯಬೇಕು. ಆದರೆ, ಈ ಚಾಲೆಂಜ್ನಲ್ಲಿ ಜನ ಬಾಕ್ಸ್ನಿಂದ ಕೆಳಗೆ ಬಿದ್ದು ಗಾಯ ಮಾಡಿಕೊಂಡಿರುವುದು ವಿಡಿಯೋಗಳಲ್ಲಿ ದಾಖಲಾಗಿದೆ.
ವರದಿಗಳ ಪ್ರಕಾರ, ಹಾಲು ಕ್ರೇಟ್ ಚಾಲೆಂಜ್ ಮೂಲತಃ ಟಿಕ್ಟಾಕ್ನಲ್ಲಿ ಮೊದಲು ಹೊರಹೊಮ್ಮಿತು ಮತ್ತು ನಂತರ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ ಎಂದು ಹೇಳಲಾಗುತ್ತಿದೆ.
#MilkCrateChallenge ಹ್ಯಾಶ್ಟ್ಯಾಗ್ನೊಂದಿಗೆ ಹೆಚ್ಚು ಹೆಚ್ಚು ಜನರು ತಮ್ಮ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಮಿಲ್ಕ್ ಕ್ರೇಟ್ ಚಾಲೆಂಜ್ಗೆ ಸಂಬಂಧಿಸಿದ ಅಪಾಯದ ಕಾರಣದಿಂದಾಗಿ ಇದನ್ನು ಯಾರೂ ಮಾಡಬಾರದಿ ಎಂದು ವೈದ್ಯರು ಜನರನ್ನು ಎಚ್ಚರಿಸಿದ್ದಾರೆ.
ಮೌಂಟ್ನಲ್ಲಿ ಕ್ರೀಡಾ ವೈದ್ಯಕೀಯದಲ್ಲಿ ಪರಿಣತಿ ಹೊಂದಿರುವ ಮೂಳೆ ಶಸ್ತ್ರ ಚಿಕಿತ್ಸಕ ಶಾನ್ ಆಂಥೋನಿ ಎಂಬುವವರು ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದು, "ಈ ಚಾಲೆಂಜ್ನಲ್ಲಿ ಭಾಗವಹಿಸುವ ಜನ ಕೀಲು ಗಾಯದ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಇದು ನಿಜಕ್ಕೂ ತೀರಾ ಅಪಾಯಕರವಾಗಿದ್ದು, ಜನ ಈ ಚಾಲೆಂಜೆನಲ್ಲಿ ಭಾಗವಹಿಸದಿರುವುದು ಒಳ್ಳೆಯದು" ಎಂದು ಎಚ್ಚರಿಕೆ ನೀಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ