ಸಾಮಾಜಿಕ ಜಾಲತಾಣಗಳಲ್ಲಿ(Social Media) ಮನರಂಜನೆಗೇನೂ ಕೊರತೆ ಇಲ್ಲ ಬಿಡಿ. ದಿನಕ್ಕೆ ನೂರಾರು ರೀತಿಯ ವಿಡಿಯೋ, ಫೋಟೋಸ್ಗಳು, ಮೀಮ್ಸ್ಗಳು ವೈರಲ್ ಆಗ್ತಾನೇ ಇರುತ್ತದೆ. ಮನುಷ್ಯರ ನೂತನ ಆವಿಷ್ಕಾರಗಳು ನಿಜಕ್ಕೂ ತಲೆಯನ್ನು ಕೆಡಿಸುತ್ತದೆ. ಅವುಗಳೇ ಟ್ರೆಂಡಿಂಗ್ ಆಗ್ತಾ ಇರುತ್ತವೆ. ಇದೀಗ ಒಂದು ವಿಷಯ ವೈರಲ್ ಆಗಿದೆ. ನಿಮ್ಮ ಮನೆಗಳಿಗೆ ಹಾಲು ಬರುತ್ತಾ? ಹಾಲು ತಂದು ಕೊಡುವ ವ್ಯಕ್ತಿ ಯಾವುದರಲ್ಲಿ ಬರುತ್ತಾರೆ? ಸೈಕಲ್ ಅಥವಾ ಒಂದು ಹಳೆಯ ಗಾಡಿಗಳಲ್ಲಿ ಬರುತ್ತಾರಾ? ಹಾಗಾದ್ರೆ ವೈರಲ್ (Viral) ಆದ ವಿಡಿಯೋ ನೋಡಿ. ಯಾರಿಗೆ ಎಂತಹ ಉಪಾಯ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿವೆ. ಇದರಲ್ಲಿ ಜನರು ವಿಶಿಷ್ಟ ರೀತಿಯಲ್ಲಿ ಜೀವನವನ್ನು(Life) ಸಾಗಿಸುವುದನ್ನು ಕಾಣಬಹುದು. ಅಂತಹ ಒಂದು ವಿಶಿಷ್ಟ ರೂಪವನ್ನು ಯುವಕನೊಬ್ಬ ಮಾಡಿದ್ಮದಾರೆ. ಅವರ ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯಂತೆ ವೈರಲ್ ಆಗಿದೆ.
ಹಾಲು ಮಾರಾಟ ಮಾಡಲು ಜನರು ಸೈಕಲ್ ಮತ್ತು ದ್ವಿಚಕ್ರವಾಹನಗಳನ್ನು ಬಳಸುತ್ತಾರೆ. ಕೆಲವರು ಭಾರವಾದ ಪಾತ್ರೆಗಳೊಂದಿಗೆ ಹಾಲು ಸರಬರಾಜು ಮಾಡುತ್ತಾರೆ. ಈ ಎಲ್ಲಾ ರೆಕಾರ್ಡ್ಗಳನ್ನು ಮುರಿದುಹಾಕಿದೆ. ಹಾಲು ಮಾರಾಟ ಮಾಡಲು 'ಹಾರ್ಲಿ ಡೇವಿಡ್ಸನ್' ಬೈಕ್ ಆಯ್ಕೆ ಮಾಡಿಕೊಂಡಿದ್ದಾರೆ. ನೀವು ಎಂದಾದರೂ ಹಾರ್ಲೆ ಡೇವಿಡ್ಸನ್ನಲ್ಲಿ ಹಾಲುಗಾರನನ್ನು ನೋಡಿದ್ದೀರಾ? ಇಲ್ಲದಿದ್ದರೆ, ಈ ವೈರಲ್ ವೀಡಿಯೊವನ್ನು ಈಗಲೇ ನೋಡಿ.
ಇದನ್ನೂ ಓದಿ: ಮದ್ವೆ ಆಗ್ತಿಲ್ಲ ಅಂತ ಸಿಎಂಗೆ ಲೆಟರ್ ಬರೆದ 3 ಅಡಿ ವ್ಯಕ್ತಿ, ಕೊನೆಗೆ ಚಿನ್ನದಂಥ ಹುಡುಗಿನೇ ಸಿಕ್ಕಿ ಬಿಟ್ಟಳು!
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ