Video: ಕೈಚಳಕದಿಂದ ಕಾಳಿಂಗ ಸರ್ಪವನ್ನು ಹಿಡಿದ ವ್ಯಕ್ತಿ! ದೃಶ್ಯ ನೋಡಿದ್ರೆ ಮೈ ಜುಂ ಅನ್ನುತ್ತೆ

ಈ ದೃಶ್ಯ ಮಲೆನಾಡು ಅಥವಾ ಕರ್ನಾಟಕದಲ್ಲ. ಇದು ವಿದೇಶದಲ್ಲಿ ವ್ಯಕ್ತಿಯೋರ್ವ ಕಾಳಿಂಗ ಸರ್ಪವನ್ನು ಹಿಡಿಯುವ ದೃಶ್ಯ ಇದಾಗಿದೆ. ದಿರಿಯಲ್​ಟರ್ಜನ್​ ಎಂಬ ಇನ್​ಸ್ಟಾಗ್ರಾಂ ಖಾತೆಯು ಈ ವಿಡಿಯೋವನ್ನು ಹಂಚಿಕೊಂಡಿದೆ.

ಕಾಳಿಂಗ ಸರ್ಪ

ಕಾಳಿಂಗ ಸರ್ಪ

 • Share this:
  ಕಾಳಿಂಗ ಸರ್ಪ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದು. ಮಲೆನಾಡಿನಲ್ಲಿ ಅಥವಾ ಆಗುಂಬೆ ಭಾಗದಲ್ಲಿ ಕಾಳಿಂಗ ಸರ್ಪವನ್ನು ಕಾಣಬಹುದು. ಅತಿ ಅಪರೂಪದ ಹಾವು ಇದಾಗಿದೆ. ಹೆಚ್ಚಾಗಿ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಉದ್ದ ಮತ್ತು ಗಾತ್ರದಲ್ಲಿ ಉಳಿದೆಲ್ಲಾ ಹಾವುಗಳಿಂತ ದಪ್ಪವಾಗಿ ಬೆಳೆಯುವ ಈ ಕಾಳಿಂಗ ಸರ್ಪ (King Cobra) ಕಚ್ಚಿದರೆ (Bite) ನಿಮಿಷಾರ್ಧದಲ್ಲೇ ಸಾವನ್ನಪ್ಪಿದವರೂ ಇದ್ದಾರೆ. ಮೊದಲೇ ಹೇಳಿದಂತೆ, ಈ ಹಾವು ಅಷ್ಟು ಬೇಗ ಕಚ್ಚುವುದಿಲ್ಲ. ಆದರೆ ಹಾವಿಗೆ ನೋವಾದರೆ, ಭಯವಾದರೆ ಬೇಗನೆ ರಿಯಾಕ್ಟ್ (React)​ ಮಾಡುತ್ತದೆ. ಸಾಮಾನ್ಯವಾಗಿ ಈ ಹಾವನ್ನು (Snake) ಹಿಡಿಯಲು ಉರಗ ತಜ್ಞರು ಹಿಂದೇಟು ಹಾಕುವುದೇ ಜಾಸ್ತಿ. ಆದರೆ ಕೆಲವೇ ಕೆಲವರು ಧೈರ್ಯ ತೆಗೆದುಕೊಂಡು, ಹಿಡಿದು ಬಳಿಕ ಸುರಕ್ಷಿತ ಸ್ಥಳಕ್ಕೆ ಬಿಡುತ್ತಾರೆ. ಅದರಂತೆಯೇ ಇಲ್ಲೊಂದು ವಿಡಿಯೋದಲ್ಲಿ ಕಾಳಿಂಗ ಸರ್ಪವನ್ನು ವ್ಯಕ್ತಿಯೋರ್ವ ಹಿಡಿಯುತ್ತಿರುವ ದೃಶ್ಯ ಇದೀಗ ವೈರಲ್​ (Viral) ಆಗಿದೆ.

  ಅಂದಹಾಗೆಯೇ ಈ ದೃಶ್ಯ ಮಲೆನಾಡು ಅಥವಾ ಕರ್ನಾಟಕದಲ್ಲ. ಇದು ವಿದೇಶದಲ್ಲಿ ವ್ಯಕ್ತಿಯೋರ್ವ ಕಾಳಿಂಗ ಸರ್ಪವನ್ನು ಹಿಡಿಯುವ ದೃಶ್ಯ ಇದಾಗಿದೆ. ದಿರಿಯಲ್​ಟರ್ಜನ್​ ಎಂಬ ಇನ್​ಸ್ಟಾಗ್ರಾಂ ಖಾತೆಯು ಈ ವಿಡಿಯೋವನ್ನು ಹಂಚಿಕೊಂಡಿದೆ.

  ದಿರಿಯಲ್​ಟರ್ಜನ್​ ಇನ್​ಸ್ಟಾಗ್ರಾಂ ಈ ಖಾತೆಯನ್ನು ಮೈಕ್​ ಹೋಲ್​​​​ಸ್ಟನ್​ ಮುನ್ನಡೆಸುತ್ತಿದ್ದಾರೆ. ಮೈಕ್​ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದು, ಅವರ ಮನೆಯಲ್ಲಿ ಅನೇಕ ಪ್ರಾಣಿಗಳನ್ನು ಸಾಕುತ್ತಾರೆ. ಆಗಾಗ ಏನಾದರೂ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಅದರಂತೆಯೇ ಕಳೆದ ಬಾರಿ ಕೂಡ ಕಾಳಿಂಗ ಸರ್ಪದ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಮೈಕ್​ ಹೋಲ್​ಸ್ಟನ್​ ಕಾಳಿಂಗ ಸರ್ವವನ್ನು ಹಿಡಿಯುವ ಪ್ರಯತ್ನವನ್ನು ಮಾಡಿದ್ದರು, ಆದರೀಗ ಅವರ ಖಾತೆಯಲ್ಲಿ ವ್ಯಕ್ತಿಯೊಬ್ಬರು ಕಾಳಿಂಗ ಸರ್ಪವನ್ನು ಆಟವಾಡಿಸುತ್ತಾ ಬಳಿಕ ಹಿಡಿಯುವ ದೃಶ್ಯವನ್ನು ಶೇರ್​ ಮಾಡಿಕೊಂಡಿದ್ದಾರೆ.

  ಇದನ್ನೂ ಓದಿ: Hero Electric-Jio bp: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆ ಹೆಚ್ಚಳಕ್ಕೆ ಜಿಯೋ-ಬಿಪಿ ಜೊತೆ ಹೀರೋ ಎಲೆಕ್ಟ್ರಿಕ್‌ ಒಪ್ಪಂದ

  ಡಿಯಾಜ್​ಬಾರ್ನಿಯೋ ಎಂಬವರು ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ. ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡ ಅವರು ಕಾಳಿಂಗ ಸರ್ಪವನ್ನು ಸುಲಭವಾಗಿ ಹಿಡಿಯುವ ಮೂಲಕ ನೋಡುಗರಿಗೆ ಅಚ್ಚರಿಯಾಗುವಂತೆ ಮಾಡಿದ್ದಾರೆ.


  ಅಂದಹಾಗೆಯೇ, ಈ ವಿಡಿಯೋ 15 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಗಿಟ್ಟಿಸಿಕೊಂಡಿದೆ. ಬಹುತೇಕರು ಈ ವಿಡಿಯೋ ನೋಡಿ ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ. ಅದರಲ್ಲೂ ವಿಷಕಾರಿ ಹಾವನ್ನು ಹಿಡಿಯುವುದು ಸುಲಭದ ಮಾತಲ್ಲ ಎಂದು ವ್ಯಕ್ತಿಯೋರ್ವ ಕಾಮೆಂಟ್​​ ಮಾಡಿದ್ದಾನೆ.

  ಇದನ್ನೂ ಓದಿ: Formula 1: 2026ರ ಫಾರ್ಮುಲಾ 1 ಸೀಸನ್​ ರೇಸ್​ನಲ್ಲಿ ಭಾಗವಲಿಸಲು ಮುಂದಾದ ಜನಪ್ರಿಯ Audi
  ಕಾಳಿಂಗ ಸರ್ಪ

  ಅತಿ ವಿಷಕಾರಿ ಹಾವುಗಳ ಪಟ್ಟಿಯಲ್ಲಿ ಕಾಳಿಂಗ ಸರ್ಪವು ಒಂದು. ಆದರೆ ಈ ಹಾವಿಗೆ ಬೇಗನೇ ಸುಸ್ತಾಗುತ್ತದೆ. ಹೀಗಾಗಿ ಹಾವು ಹಿಡಿಯುವವರು ಅದನ್ನು ಚೆನ್ನಾಗಿ ಆಟವಾಡಿಸಿ ಬಳಿಕ ಅದನ್ನು ಹಿಡಿಯಲು ಯತ್ನಿಸುತ್ತಾರೆ. ಕೆಲವೊಮ್ಮೆ ಈ ಹಾವು ಕಡಿದು ಎಷ್ಟೋ ಮಂದಿ ಸಾವನ್ನಪ್ಪಿದವರೂ ಕೂಡ ಇದ್ದಾರೆ.

  ದೇವರನ್ನಾಗಿ ಪೂಜಿಸುತ್ತಾರೆ

  ಭಾರತದಲ್ಲಿ ಹಾವುಗಳನ್ನು ದೇವರನ್ನಾಗಿ ಪೂಜಿಸುತ್ತಾರೆ. ಅದರಲ್ಲೂ ನಾಗರ ಹಾವನ್ನು ಹೆಚ್ಚಾಗಿ ದೇವರ ವಾಹನ ಎಂದು ನಂಬಿಕೊಂಡು ಅದಕ್ಕೆ ಹಾಲೆರೆಯುವ ಮೂಲಕ ಪೂಜಿಸುತ್ತಾರೆ. ನಾಗರ ಪಂಚಮಿ ಸಮಯದಲ್ಲಿ ನಾಗರಾಧನೆಯನ್ನು ಕಾಣಬಹುದು. ಅದರಂತೆಯೇ ಕಾಳಿಂಗ ಸರ್ಪವನ್ನು ಪೂಜಿಸುವ ದೇವಾಲಯಗಳಿವೆ. ಕರ್ನಾಟಕ, ದಕ್ಷಿಣ ಕನ್ನಡದಲ್ಲಿ ಕಾಳಿಂಗ ಸರ್ಪವನ್ನು ಆರಾಧಿಸುವ ದೇವಸ್ಥಾನಗಳನ್ನು ಕಾಣಬಹುದಾಗಿದೆ.
  Published by:Harshith AS
  First published: