Video: ಗೊತ್ತಿರದ ಮದುವೆ ಸಮಾರಂಭಕ್ಕೆ ಹೋಗಿ ಹಾಡು ಹಾಡಿ ಅತಿಥಿಗಳ ಮನಗೆದ್ದ Mika Singh

ಗಾಯಕ ಮಿಕಾ ಸಿಂಗ್ ಇತ್ತೀಚೆಗೆ ರಾಹುಲ್ ವೈದ್ಯ ಅವರೊಂದಿಗೆ ಮದುವೆ ಪಾರ್ಟಿಯಲ್ಲಿ ಹೋಗಿ ಹಾಡು ಹಾಡಿ ನೆರೆದಿದ್ದವರ ಮನ ಗೆದ್ದಿದ್ದಾರೆ. ಆ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ಮಿಕಾ ಸಿಂಗ್​

ಮದುವೆ ಕಾರ್ಯಕ್ರಮದಲ್ಲಿ ಮಿಕಾ ಸಿಂಗ್​

 • Share this:
  ಯಾರು ಗೊತ್ತಿರದ ಮತ್ತು ಯಾರು ಕರೆಯದೆ ಇರುವ ಮದುವೆ ಸಮಾರಂಭಕ್ಕೆ (Marriage Party) ಸಾಮಾನ್ಯವಾಗಿ ಯಾರು ಹೋಗುವುದಿಲ್ಲ, ಆದರೆ ಇಲ್ಲೊಬ್ಬ ಜನಪ್ರಿಯ ಗಾಯಕ (Famous Singer) ತನಗೆ ಯಾರ ಮದುವೆ ನಡೀತಾ ಇದೆ ಅಂತಾನೂ ಗೊತ್ತಿಲ್ಲ, ಆದರೂ ಅವರ ಮದುವೆ ಪಾರ್ಟಿಯಲ್ಲಿ ಹೋಗಿ ಹಾಡನ್ನು (Song ) ಹಾಡಿ ಅಲ್ಲಿದ್ದ ಅತಿಥಿಗಳನ್ನು ರಂಜಿಸಿದ್ದಾರೆ. ಇವರ ಹಾಡನ್ನು ಕೇಳಿ ಪಾರ್ಟಿಯಲ್ಲಿ ನೆರೆದಿದ್ದ ಅತಿಥಿಗಳು ಸಂಗೀತದ ವೇದಿಕೆಯ ಮುಂದೆ ಬಂದು ತಮ್ಮ ಮೊಬೈಲ್ ಫೋನ್ ಗಳಲ್ಲಿ ವೀಡಿಯೋ ಮಾಡಿಕೊಂಡಿರುವ ಘಟನೆ ನಡೆದಿದೆ. ಯಾರಪ್ಪಾ ಆ ಗಾಯಕ ಅಂತೀರಾ? ಅವರು ಬೇರೆ ಯಾರು ಅಲ್ಲ, ಗಾಯಕ ಮಿಕಾ ಸಿಂಗ್ (Mika Singh) ಇತ್ತೀಚೆಗೆ ರಾಹುಲ್ ವೈದ್ಯ ಅವರೊಂದಿಗೆ ಮದುವೆ ಪಾರ್ಟಿಯಲ್ಲಿ ಹೋಗಿ ನೇರವಾಗಿ ಹಾಡು ಹಾಡುತ್ತಿರುವ ವೇದಿಕೆಯನ್ನು ಹತ್ತಿದರು. ಈ ಪಂಜಾಬಿ ಗಾಯಕ ಈ ಘಟನೆಯ ವೀಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್ ನ ಖಾತೆಯಲ್ಲಿನ ಪುಟದಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಮದುವೆ ಮನೆಯವರು ಇವರು ಬಂದು ಹಾಡು ಹಾಡಿ ಅತಿಥಿಗಳ ಮನವನ್ನು ರಂಜಿಸಿರುವುದರಿಂದ ಈ ಗಾಯಕನಿಗೆ ಅಭಿನಂದನೆ ಸಲ್ಲಿಸಿದರು.

  ಸರ್ಪ್ರೈಸ್​ ಸಿಂಗರ್​ 

  ತುಂಬಾನೇ ಸಿಂಪಲ್ ಆದ ಉಡುಪನ್ನು ಧರಿಸಿದ್ದ ಮಿಕಾ ತನ್ನ ಹಿಟ್ ಹಾಡಾದ ‘ಸಾವನ್ ಮೇ ಲಗ್ ಗಯಿ ಆಗ್’ ಅನ್ನು ಹಾಡಿದರು. ಅವರ ಈ ಪ್ರದರ್ಶನದ ನಂತರ, ಮಿಕಾ ಅತಿಥಿಗಳನ್ನು ಉದ್ದೇಶಿಸಿ "ಕರೆಯದೆ ಮದುವೆ ಪಾರ್ಟಿಗೆ ನುಗ್ಗಿ ಬಂದಿದ್ದೇನೆ, ಆದರೆ ನೀವು ನನ್ನ ಹಾಡನ್ನು ಆನಂದಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.


  View this post on Instagram


  A post shared by Mika Singh (@mikasingh)


  ವೇಗವಾಗಿ ಬಂದು ವೇದಿಕೆ ಹತ್ತಿ ಮಿಕಾ ಅವರು ಹುಡುಗಿಯ ಕೈಯಲ್ಲಿದ್ದ ಮೈಕ್ ತೆಗೆದುಕೊಂಡು "ನಾನು ಈ ಗಾಯಕಿಯನ್ನು ನೋಡಿದೆ, ಅವಳು ಸುಂದರವಾಗಿದ್ದಾಳೆ ಮತ್ತು ತುಂಬಾ ಚೆನ್ನಾಗಿ ಹಾಡುತ್ತಿದ್ದೀರಿ. ನಾನು ಇವಳನ್ನು ಜೀ ಟಿವಿಯಲ್ಲಿ ಪ್ರಸಾರವಾಗುವ ‘ಸಾ ರೆ ಗ ಮ ಪಾ’ ದಲ್ಲಿ ಭೇಟಿಯಾದೆ ಮತ್ತು ಅವಳನ್ನು ಭೇಟಿ ಮಾಡೋಣ ಅಂತ ನಿರ್ಧರಿಸಿದೆ” ಎಂದು ಹೇಳಿದರು. ನಂತರ ಮಿಕಾ ಅತಿಥಿಗಳಿಗೆ ರಾಹುಲ್ ಕೂಡ ತಮ್ಮೊಂದಿಗೆ ಇದ್ದಾರೆ ಎಂದು ಮಾಹಿತಿ ನೀಡಿದರು. ಈ 2 ನಿಮಿಷ 37 ಸೆಕೆಂಡಿನ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಇದುವರೆಗೆ 3,000ಕ್ಕೂ ಹೆಚ್ಚು ಜನರು ನೋಡಿ ಇಷ್ಟ ಪಟ್ಟಿದ್ದಾರೆ.

  ಅತಿಥಿಗಳಿಗೆ ಅಚ್ಚರಿ.. ಆನಂದ..

  ಈ ವೀಡಿಯೋ ನೋಡಿದ ಅಭಿಮಾನಿಗಳು ಗಾಯಕ ಮಿಕಾ ಅವರನ್ನು ತುಂಬಾನೇ ಹೊಗಳಿದರು. "ನನ್ನ ನೆಚ್ಚಿನ ಹಾಡುಗಳಲ್ಲಿ ಇದು ಒಂದು, ನೀವು ನನ್ನ ನೆಚ್ಚಿನ ಗಾಯಕ" ಎಂದು ಒಬ್ಬರು ಬರೆದರೇ, ಇನ್ನೊಬ್ಬ ಸಾಮಾಜಿಕ ಮಾಧ್ಯಮದ ಬಳಕೆದಾರರು " ವಾಹ್ ಅದ್ಭುತ.. ಮಿಕಾ ಜೀ " ಬರೆದಿದ್ದಾರೆ. "ವಾಹ್... ನಾನು ಮದುವೆಯಾದಾಗಲೂ ಸಹ ನೀವು ಇದೇ ರೀತಿ ಬಂದು ಹಾಡಬೇಕು" ಎಂದು ಇನ್ನೊಬ್ಬ ಅಭಿಮಾನಿಯೊಬ್ಬರು ಬರೆದಿದ್ದಾರೆ.

  ಇದನ್ನೂ ಓದಿ: Viral Video: ಮನೆಗೆ ಹೊಸಾ ಫೋನ್ ಬಂತು: DJ Music ಹಾಕಿ ಮೆರವಣಿಗೆಯಲ್ಲಿ ಬರಮಾಡಿಕೊಂಡ ಕುಟುಂಬ!

  ‘ಸಾವನ್ ಮೇ ಲಗ್ ಗಯಿ ಆಗ್’ ಹಾಡು 1998 ರಲ್ಲಿ ಬಿಡುಗಡೆಯಾಗಿತ್ತು ಮತ್ತು ಮಿಕಾ ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಇದು ಒಂದು. ಈ ಹಾಡನ್ನು ಕಳೆದ ವರ್ಷ ಕಿಯಾರಾ ಆಡ್ವಾಣಿ ಮತ್ತು ಆದಿತ್ಯ ನಟಿಸಿದ ‘ಇಂದು ಕಿ ಜವಾನಿ’ ಚಿತ್ರದಲ್ಲಿ ಹಾಡಿನ ಹೊಸ ಆವೃತ್ತಿಯನ್ನು ಬಳಸಲಾಯಿತು. ಈ ಹಾಡಿನ ಸಾಹಿತ್ಯವನ್ನು ಶಬ್ಬೀರ್ ಅಹ್ಮದ್ ಅವರು ಬರೆದಿದ್ದು, ಈ ಹಾಡನ್ನು 2008 ರಲ್ಲಿ ಹನ್ಸಲ್ ಮೆಹ್ತಾ ಅವರ ವುಡ್ ಸ್ಟಾಕ್ ವಿಲ್ಲಾದಲ್ಲಿ ಯೂ ಸಹ ಬಳಸಿಕೊಳ್ಳಲಾಗಿತ್ತು. ಮಿಕಾ ಅವರನ್ನು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಗೆ ಸಹ ಆಹ್ವಾನಿಸಿದ್ದರು, ಆದರೆ ಇತರ ವೃತ್ತಿಪರ ಬದ್ಧತೆಗಳಿಂದಾಗಿ ಇವರಿಗೆ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಅವರೇ ಈ ಹಿಂದೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.
  Published by:Kavya V
  First published: