ವಿಮಾನದಲ್ಲಿ (Flight) ಪ್ರಯಾಣ ಮಾಡಬೇಕಿದ್ದರೆ ಕೆಲವೊಂದಿಷ್ಟು ನಿಯಮ, ನಿರ್ಬಂಧಗಳಿರುತ್ತವೆ. ಅದಕ್ಕೆ ಪ್ರಯಾಣಿಕರು ಬದ್ಧರಾಗಿರಬೇಕಾಗುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಸಣ್ಣ ತಪ್ಪುಗಳಾದರೂ ಭಾರೀ ದಂಡ ತೆರಬೇಕಾಗುತ್ತದೆ. ಅಲ್ಲದೇ ಆ ತಪ್ಪುಗಳಿಂದ ಬರೀ ಒಬ್ಬರಿಗೆ ಮಾತ್ರವಲ್ಲ, ಅಲ್ಲಿರುವ ನೂರಾರು ಪ್ರಯಾಣಿಕರಿಗೆ ಅಪಾಯ ಸಂಭವಿಸಬಹುದು. 194 ಜನರು ಪ್ರಯಾಣಿಸುತ್ತಿದ್ದ ಏಷಿಯಾನಾ ಏರ್‌ಲೈನ್ಸ್ ಏರ್‌ಬಸ್ (Airbus) A321 ವಿಮಾನದಲ್ಲಿಯೂ ಇಂಥದ್ದೇ ಒಂದು ದೊಡ್ಡ ತಪ್ಪು ಸಂಭವಿಸಿದೆ. ಏಷಿಯಾನಾ ಏರ್‌ಲೈನ್ಸ್ (Airlines) ವಿಮಾನವು ದಕ್ಷಿಣ ಕೊರಿಯಾದ ಡೇಗುನಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ನಡೆದಂಥ ಈ ಅನಿರೀಕ್ಷಿತ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೂ ಉಸಿರಾಟದ ತೊಂದರೆಯಿಂದ (Problems) ಒಂಬತ್ತು ಜನರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ.
ಅಷ್ಟಕ್ಕೂ ವಿಮಾನದಲ್ಲಿ ಆಗಿದ್ದೇನು?
194 ಜನರಿದ್ದ ವಿಮಾನವು ಜೆಜು ದಕ್ಷಿಣ ದ್ವೀಪದಿಂದ ಆಗ್ನೇಯ ನಗರವಾದ ಡೇಗುಗೆ ತೆರಳುತ್ತಿತ್ತು. ಜೆಜು ದ್ವೀಪದಿಂದ ಹೊರಡುವ ವಿಮಾನವು ನೆಲದಿಂದ ಸುಮಾರು 700 ಅಡಿ ಎತ್ತರದಲ್ಲಿದ್ದಾಗ ಮತ್ತು ಲ್ಯಾಂಡಿಂಗ್‌ನಿಂದ ನಿಮಿಷಗಳ ದೂರದಲ್ಲಿದ್ದಾಗ ಎಮರ್ಜೆನ್ಸಿ ಎಕ್ಸಿಟ್ ಡೋರ್ ಓಪನ್ ಆಗಿದೆ.
ಹೌದು, ಏಷಿಯಾನಾ ಏರ್‌ಲೈನ್ಸ್ ವಿಮಾನ ದಕ್ಷಿಣ ಕೊರಿಯಾದ ಹಾರಾಟದ ಸಮಯದಲ್ಲಿ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನದ ಬಾಗಿಲನ್ನು ಭಾಗಶಃ ತೆರೆದಿದ್ದಾರೆ. ಆದರೆ ವಿಮಾನದಲ್ಲಿದ್ದ ಕೆಲವರು ವ್ಯಕ್ತಿಯನ್ನು ಬಾಗಿಲು ತೆರೆಯದಂತೆ ತಡೆಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಆತ ಯಾರ ಮಾತನ್ನೂ ಕೇಳದೇ ಅಂತಿಮವಾಗಿ ಬಾಗಿಲನ್ನು ತೆರೆದೇ ಬಿಟ್ಟಿದ್ದಾನೆ ಎಂದು ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: ಕುಚುಕು ಕುಚುಕು ಕುಚುಕು, ಇಂಥಾ ಫ್ರೆಂಡ್ಸ್ ಇದ್ರೆ ಎಂಥಾ ಕಾಯಿಲೆ ಇದ್ರೂ ಓಡಿ ಹೋಗುತ್ತೆ!
ಆದರೆ ಎಷ್ಟು ಸಮಯದವರೆಗೆ ಬಾಗಿಲು ತೆರೆದಿತ್ತು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ ಎಂದು ಏಷಿಯಾನಾ ಏರ್‌ಲೈನ್ಸ್ ತಿಳಿಸಿದೆ. ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರು ತೆಗೆದ ವೀಡಿಯೊದಲ್ಲಿ ಇದನ್ನು ನೋಡಬಹುದಾಗಿದೆ. ತೆರೆದ ಬಾಗಿಲಿನ ಮೂಲಕ ಕ್ಯಾಬಿನ್‌ಗೆ ರಭಸವಾಗಿ ಗಾಳಿ ಬೀಸುತ್ತಿರುವುದನ್ನು ನಾವು ಕಾಣಬಹುದು.
The unexpected opening of an emergency exit door on an Asiana Airlines plane making its landing on Friday in Daegu, South Korea, left passengers shaken, and 9 of them were hospitalized after they experienced difficulty breathing. https://t.co/LSWeUrAp45 pic.twitter.com/L9OP3M6eLV
— New York Times World (@nytimesworld) May 26, 2023
ಬಾಗಿಲು ತೆರೆದ ವ್ಯಕ್ತಿ ಅರೆಸ್ಟ್
ಇನ್ನು, ಬಲವಂತವಾಗಿ ಬಾಗಿಲು ತೆರೆದಿರುವ ಶಂಕೆಯ ಮೇಲೆ 30ರ ಹರೆಯದ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಆದರೆ ಯಾವ ಕಾರಣಕ್ಕೆ ಆತ ಬಾಗಿಲನ್ನು ತೆರೆದ ಎಂಬ ಕಾರಣ ಇನ್ನೂ ತಿಳಿದುಬಂದಿಲ್ಲ.
ಇನ್ನು, ಪ್ರಯಾಣಿಕರಲ್ಲಿ ಹದಿಹರೆಯದ ಕ್ರೀಡಾಪಟುಗಳು ಸೇರಿದ್ದಾರೆ. ಅವರು ಮತ್ತೊಂದು ಆಗ್ನೇಯ ನಗರವಾದ ಉಲ್ಸಾನ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಿಗೆ ಹಾಜರಾಗಲು ಹೊರಟಿದ್ದರು.
9 ಜನರು ಆಸ್ಪತ್ರೆಗೆ ದಾಖಲು
ಘಟನೆಯು ಕೆಲವು ಪ್ರಯಾಣಿಕರನ್ನು ಭಯಭೀತಗೊಳಿಸಿದ್ದು ನಿಜ. ಆದಾಗ್ಯೂ, 11 ಮತ್ತು 16 ವರ್ಷದೊಳಗಿನ ಹನ್ನೆರಡು ವ್ಯಕ್ತಿಗಳು ಹೈಪರ್ವೆನ್ಟಿಲೇಷನ್ ಅನ್ನು ಅನುಭವಿಸಿದ್ದಾರೆ. ಅವರಲ್ಲಿ ಉಸಿರಾಟದ ತೊಂದರೆಯಿಂದ ಒಂಬತ್ತು ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಡೇಗು ಅಗ್ನಿಶಾಮಕ ಮತ್ತು ಸುರಕ್ಷತಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಈ ಪ್ರಾಣಿಯ ಹಾಲಿನಲ್ಲಿ ಬಿಯರ್ಗಿಂತ ಹೆಚ್ಚು ಆಲ್ಕೋಹಾಲ್ ಇರುತ್ತಂತೆ!
ಆದರೆ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಆದರೂ ಕೆಲವು ಪ್ರಯಾಣಿಕರನ್ನು ಆಸ್ಪತ್ರೆಯಲ್ಲಿ ಮೌಲ್ಯಮಾಪನ ಮಾಡಲಾಯಿತು ಎಂದು ಏಷಿಯಾನಾ ಮತ್ತು ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಆಕಾಶದಲ್ಲಿ ಹಾರಾಟ ಮಾಡುವ ವಿಮಾನದ ಡೋರ್ ತೆರೆಯುವುದು ಎಂದರೆ ಅದೆಂಥಾ ಮೂರ್ಖತನ...? ಆದರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ ಕಾರಣ ಏನೇ ಇರಲಿ ಇಂಥ ದುಸ್ಸಾಹಸ ಮಾಡುವ ಮೊದಲು ತನ್ನ ಜೊತೆ ಎಷ್ಟೆಲ್ಲ ಜನರ ಪ್ರಾಣ ಅಪಾಯದಲ್ಲಿ ಸಿಲುಕಬಹುದು ಎಂಬ ಪರಿಜ್ಞಾನ ಇರಬೇಕಾದದ್ದು ಅಗತ್ಯ. ಘಟನೆಯ ಹಿಂದಿನ ಕಾರಣ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ