Netflix ನಲ್ಲಿ ಕೆಲ್ಸ ಬೋರ್ ಅಂತೆ, ಹಾಗಂತ ರಾಜೀನಾಮೆ ಕೊಟ್ಟು ಹೊರಗೆ ಬಂದ್ಬಿಟ್ಟಿದ್ದಾನೆ ಭೂಪ!

ವರ್ಷಕ್ಕೆ 3.5 ಕೋಟಿ ರೂ., ತಿಂಗಳಿಗೆ ಸುಮಾರು 30 ಲಕ್ಷ ರೂ. ವೇತನ.. ಯಾರಿಗುಂಟು ಯಾರಿಗಿಲ್ಲದಂತಹ ಉದ್ಯೋಗದ ಪ್ಯಾಕೇಜ್‌.. ಆದರೆ, ಅಮೆರಿಕದಲ್ಲಿ ಬೇಜಾರು ಎಂಬ ಒಂದೇ ಕಾರಣಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್‌ ಒಬ್ಬರು ಕೆಲಸ ಬಿಟ್ಟಿದ್ದಾರೆ. ಮೈಕಲ್‌ ಲಿನ್ ಎಂಬಾತ ಅಮೆಜಾನ್‌ ಸಂಸ್ಥೆಯನ್ನು ತೊರೆದ ಬಳಿಕ 2017ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ಆದರೆ, 4 ವರ್ಷಗಳ ಬಳಿಕ ಆ ಸಂಸ್ಥೆಗೂ ಅವರು ಗುಡ್‌ಬೈ ಹೇಳಿದ್ದಾರೆ.

ಮೈಕಲ್‌ ಲಿನ್

ಮೈಕಲ್‌ ಲಿನ್

  • Share this:
ವರ್ಷಕ್ಕೆ 3.5 ಕೋಟಿ ರೂ., ತಿಂಗಳಿಗೆ ಸುಮಾರು 30 ಲಕ್ಷ ರೂ. ವೇತನ (Salary). ಯಾರಿಗುಂಟು ಯಾರಿಗಿಲ್ಲದಂತಹ ಉದ್ಯೋಗದ ಪ್ಯಾಕೇಜ್‌ (Employment Package). ಆದರೆ, ಅಮೆರಿಕದಲ್ಲಿ (America) ಬೇಜಾರು ಎಂಬ ಒಂದೇ ಕಾರಣಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ (Netflix) ಕೆಲಸ ಮಾಡುತ್ತಿದ್ದ ಇಂಜಿನಿಯರ್‌ (Engineer) ಒಬ್ಬರು ಕೆಲಸ ಬಿಟ್ಟಿದ್ದಾರೆ. ಮೈಕಲ್‌ ಲಿನ್ (Michael Lin) ಎಂಬಾತ ಅಮೆಜಾನ್‌ ಸಂಸ್ಥೆಯನ್ನು ತೊರೆದ ಬಳಿಕ 2017ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಆಗಿ ಕೆಲಸಕ್ಕೆ ಸೇರಿದ್ದರು. ಆದರೆ, 4 ವರ್ಷಗಳ ಬಳಿಕ ಆ ಸಂಸ್ಥೆಗೂ ಅವರು ಗುಡ್‌ಬೈ ಹೇಳಿದ್ದಾರೆ.

ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿರುವ ಲಿನ್‌, 2017ರಲ್ಲಿ ನೆಟ್‌ಫ್ಲಿಕ್ಸ್‌ ಸಂಸ್ಥೆಗೆ ಸೇರಿದಾಗ ನಾನು ಅಲ್ಲಿಯೇ ಕೊನೆಯವರೆಗೂ ಉಳಿಯುತ್ತೇನೆ ಎಂದು ಭಾವಿಸಿದ್ದೆ. ವರ್ಷಕ್ಕೆ ನಾನು 450,000 ಡಾಲರ್‌ (ಸುಮಾರು 3.5 ಕೋಟಿ ರೂ.) ಗಳಿಸಿದ್ದೇನೆ. ಪ್ರತಿದಿನ ಉಚಿತವಾಗಿ ಆಹಾರ ತಿಂದಿದ್ದೇನೆ. ಅನಿಯಮಿತ ವೇತನಸಹಿತ ರಜೆಗಳನ್ನು ತೆಗೆದುಕೊಂಡಿದ್ದೇನೆ. ಅದು ಬಿಗ್‌ ಟೆಕ್‌ ಕನಸಾಗಿತ್ತು ಎಂದಿದ್ದಾರೆ.

2021 ರಲ್ಲಿ ನೆಟ್‌ಫ್ಲಿಕ್ಸ್‌ ಸಂಸ್ಥೆಯಿಂದ ಹೊರಬಂದ ಲಿನ್
2021 ಮೇನಲ್ಲಿ ನೆಟ್‌ಫ್ಲಿಕ್ಸ್‌ ಸಂಸ್ಥೆಯಿಂದ ಲಿನ್‌ ಹೊರಬಂದಾಗ ಎಲ್ಲರೂ ಅವನಿಗೆ ತಲೆ ಕೆಟ್ಟಿದೆ ಎಂದು ಭಾವಿಸಿದ್ದರು. ಈ ನಿರ್ಣಯಕ್ಕೆ ನನ್ನ ಪೋಷಕರೇ ಮೊದಲು ಆಕ್ಷೇಪಿಸಿದ್ದು, ನಾನು ಕೆಲಸ ಬಿಡುವುದರಿಂದ ಅವರು ಅಮೆರಿಕಕ್ಕೆ ವಲಸೆ ಬರುವ ಕನಸನ್ನು ಹಾಳು ಮಾಡುತ್ತಿರುವಂತೆ ಕಂಡಿತು ಎಂದು ಲಿನ್‌ ಹೇಳಿದ್ದಾರೆ. ಪೋಷಕರ ಬಳಿಕ ನನ್ನ ಗುರು ಇನ್ನೊಂದು ಕೆಲಸ ಹುಡುಕದೇ ಕೆಲಸ ಬಿಡಬೇಡ ಎಂದು ಹೇಳಿದ್ದರು. ಮುಂದೆ ಮತ್ತೊಂದು ಉದ್ಯೋಗದಲ್ಲಿ ವೇತನ ಮಾತುಕತೆ ಮಾಡುವಾಗ ಹೆಚ್ಚಿನ ಸಂಬಳ ಕಡಿತವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು ಎಂದು ಲಿನ್‌ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇವರ ಮಾತುಗಳನ್ನು ಕೇಳಿ ನಾನು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇನೆಯೇ ಎಂಬ ಯೋಚನೆ ಲಿನ್ ತಲೆಯಲ್ಲಿ ಬಂತು. ಅದಕ್ಕಾಗಿ ತಮ್ಮ ಮ್ಯಾನೆಜರ್‌ಗೆ ತಮ್ಮ ರಾಜೀನಾಮೆ ವಿಷಯವನ್ನು ಮಾತಾಡುವುದಕ್ಕಿಂತ ಮುಂಚೆ ಮೂರು ದಿನ ಲಿನ್‌ ಯೋಚನೆ ಮಾಡಿದ್ದರು. ಉತ್ತಮ ವೇತನದ ಉದ್ಯೋಗ ತೊರೆಯಲು ನಿರ್ಧರಿಸಿದ ಬಗ್ಗೆ ಮಾತನಾಡಿರುವ ಲಿನ್‌, ತನ್ನ ಆರಂಭಿಕ ವರ್ಷದ ಉದ್ಯೋಗ ಜೀವನದಲ್ಲಿ ಬಹಳಷ್ಟು ಕಲಿತಿದ್ದೇನೆ ಎಂದು ಹೇಳಿದ್ದಾರೆ.

ವರ್ಕ್‌ ಫ್ರಂ ಹೋಮ್‌ನಿಂದ ಬೇಸತ್ತ ಲಿನ್!
ನೆಟ್‌ಫ್ಲಿಕ್ಸ್‌ನಲ್ಲಿ ಉದ್ಯೋಗ ಮಾಡುವುದು ಎಂಬಿಎನಲ್ಲಿ ನೀವು ಕಲಿಯುವ ಕೇಸ್ ಸ್ಟಡೀಸ್‌ನಲ್ಲಿ ಕೆಲಸ ಮಾಡಲು ಹಣ ಪಡೆಯುವಂತಿದೆ. ಪ್ರತಿಯೊಂದು ಉತ್ಪನ್ನದ ನಿರ್ಧಾರದ ಬಗ್ಗೆ ಮೆಮೊಗಳನ್ನು ಕಂಪನಿ ಮಾಡಿತ್ತು. ಅವುಗಳು ಎಲ್ಲ ಉದ್ಯೋಗಿಗಳಿಗೂ ಲಭ್ಯವಿತ್ತು. ಅದರಿಂದ ನಾನು ಪ್ರತಿದಿನ ತುಂಬಾ ಕಲಿತಿದ್ದೇನೆ ಎಂದು ಲಿನ್‌ ಹೇಳಿದರು. ಆದರೆ, ಕೆಲವೇ ವರ್ಷ ಆರಂಭದಲ್ಲಿದ್ದ ಉತ್ಸಾಹ ಕಡಿಮೆಯಾಗುತ್ತಾ ಬಂತು. ಕೋವಿಡ್ ಬಳಿಕವಂತೂ ವರ್ಕ್‌ ಫ್ರಂ ಹೋಮ್‌ ಕಲ್ಪನೆಯಿಂದ ಲಿನ್‌ ಕೆಲಸವನ್ನು ಆನಂದಿಸಲು ಆಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Proud Teacher: ಸ್ನಾನವೇ ಮಾಡದ ಈ ಮಕ್ಕಳು ಈಗ ಸ್ನಾನ ಮಾಡಿ ಸ್ಕೂಲ್​ಗೆ ಹೋಗ್ತಾರೆ! ಎಲ್ಲಾ ಕ್ರೆಡಿಟ್ ಶಿಕ್ಷಕರಿಗೆ

ನೆಟ್‌ಫ್ಲಿಕ್‌ ಸಂಸ್ಥೆಯ ನೆಟ್‌ವರ್ಕಿಂಗ್‌ ವಿಭಾಗದಲ್ಲಿ ಲಿನ್‌ ಎರಡು ವರ್ಷ ಕೆಲಸ ಮಾಡಿದರು. ಅಲ್ಲಿದ್ದುಕೊಂಡೆ ಪ್ರತಿ ಪ್ರಾಡಕ್ಟ್‌ ಮ್ಯಾನೆಜರ್‌ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರು. ಆದರೆ, ಅದು ಯಾವುದು ಉಪಯೋಗಕ್ಕೆ ಬರಲಿಲ್ಲ. ಏಕೆಂದರೆ ಇಂತಹ ಪ್ರೊಮೋಷನ್‌ ಅಥವಾ ಕೆಲಸ ಬದಲಾವಣೆಗಳನ್ನು ನೆಟ್‌ಫ್ಲಿಕ್ಸ್‌ ಸಾಮಾನ್ಯವಾಗಿ ಮಾಡುತ್ತಿದ್ದಿಲ್ಲ. ಕಂಪನಿಯಲ್ಲಿ ಇಂಜಿನಿಯರ್‌ ಒಬ್ಬ ಪ್ರಾಡಕ್ಟ್‌ ಮ್ಯಾನೆಜರ್‌ ಬದಲಾಗಿದ್ದನ್ನು ನಾನು ನೋಡೆ ಇಲ್ಲ ಎಂದು ಲಿನ್‌ ಬರೆದಿದ್ದಾರೆ.

ಹಣ ಬರ್ತಿತ್ತು, ಕಲಿಕೆ ನಿಂತಿತ್ತು!
ನಾನು ನೆಟ್‌ಫ್ಲಿಕ್ಸ್‌ನಲ್ಲಿ ಉದ್ಯೋಗ ಪ್ರಾರಂಭಿಸಿದಾಗ, ನಾನು ಹಣ ಸಂಪಾದನೆ ಜೊತೆಗೆ ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುತ್ತಿದ್ದೆ. ಆದರೆ, ಈಗ ನಾನು ಕೇವಲ ಹಣ ಗಳಿಸುತ್ತಿದ್ದು, ವೃತ್ತಿಯಲ್ಲಿ ಯಾವುದೇ ಪ್ರಗತಿಯನ್ನು ಕಾಣಲು ಸಾಧ್ಯವಾಗಲಿಲ್ಲ. ಇದರಿಂದ ಏಪ್ರಿಲ್‌ 2021ರಲ್ಲಿ ಅವರು ಕೆಲಸಕ್ಕೆ ರಾಜೀನಾಮೆ ನೀಡಿದರು. ಆದರೆ, ಸಂಸ್ಥೆಯು ಅವರನ್ನು ಮುಂದುವರಿಯುವಂತೆ ಕೇಳಿಕೊಂಡಿತು. ಆದರೆ, ತಮ್ಮ ಕೆಲಸದಲ್ಲಿ ತೃಪ್ತಿ ಕಾಣದ ಲಿನ್‌ ಎರಡು ವಾರಗಳ ಬಳಿಕ ಕೆಲಸವನ್ನು ತೊರೆದರು.

ಇದನ್ನೂ ಓದಿ:  Viral Video: ಹೇ, ಅದು ನನ್ನ ಬೆಡ್ ಎದ್ದೇಳು- ಮಾವುತನ ಜೊತೆ ಆನೆಮರಿಯ ಕ್ಯೂಟ್ ಫೈಟ್! ವಿಡಿಯೋ ವೈರಲ್

ನನಗಾಗಿ ಕೆಲಸ ಮಾಡುತ್ತಿರುವ ತೃಪ್ತಿ ಇದೆ!
ಕೆಲಸ ಬಿಟ್ಟ ಬಳಿಕ ನನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದ್ದು, ಅದರ ಮೂಲಕ ನಾನು ಉದ್ಯಮಿಗಳು, ಬರಹಗಾರರು ಮತ್ತು ರಚನೆಕಾರರಂತಹ ಅನೇಕರನ್ನು ಭೇಟಿ ಮಾಡಿದ್ದೇನೆ. ನೆಟ್‌ಫ್ಲಿಕ್ಸ್‌ನಲ್ಲಿ ಕೆಲಸ ಬಿಟ್ಟು 8 ತಿಂಗಳಾಗಿದೆ. ಈಗ ನನಗಾಗಿ ಕೆಲಸ ಮಾಡಲು ಸಂಪೂರ್ಣ ಸಮಯ ವಿನಿಯೋಗಿಸಬೇಕು ಎಂದು ನಿರ್ಧರಿಸಿದ್ದೇನೆ. ಈಗಷ್ಟೇ ನನ್ನ ಬ್ಯುಸಿನೆಸ್‌ ಪ್ರಾರಂಭಿಸಿದ್ದು, ಯಾವುದೇ ಆದಾಯ ಇಲ್ಲದಿದ್ದರೂ ನನಗಾಗಿ ಕೆಲಸ ಮಾಡಿದ ತೃಪ್ತಿ ನನ್ನಲ್ಲಿದೆ. ಮುಂದೆ ಒಳ್ಳೆಯದಾಗುವ ವಿಶ್ವಾಸ ಇದೆ ಎನ್ನುತ್ತಾರೆ ಲಿನ್‌.
Published by:Ashwini Prabhu
First published: