HOME » NEWS » Trend » MEXICO MAN DUG AN UNDERGROUND SECRET TUNNEL TO HIS LOVERS HOUSE SESR

ಪ್ರಿಯತಮೆ ಮನೆಗೆ ರಹಸ್ಯ ಸುರಂಗ ಕೊರೆದ ಪ್ರೇಮಿ; ಹೆಂಡತಿಯ ಅಕ್ರಮ ಸಂಬಂಧ ಬಯಲಾದಾಗ ಗಂಡ ಮಾಡಿದ್ದೇನು?

ಪ್ರಿಯತಮೆಯ ಗಂಡ ಅತ್ತ ಆಫೀಸಿಗೆ ಹೋಗುತ್ತಿದ್ದಂತೆ ಈ ರಹಸ್ಯ ಮಾರ್ಗದ ಮೂಲಕ ಪ್ರಿಯತಮೆ ಮನೆ ಸೇರುತ್ತಿದ್ದ.

news18-kannada
Updated:January 4, 2021, 4:44 PM IST
ಪ್ರಿಯತಮೆ ಮನೆಗೆ ರಹಸ್ಯ ಸುರಂಗ ಕೊರೆದ ಪ್ರೇಮಿ; ಹೆಂಡತಿಯ ಅಕ್ರಮ ಸಂಬಂಧ ಬಯಲಾದಾಗ ಗಂಡ ಮಾಡಿದ್ದೇನು?
ರಹಸ್ಯ ಮಾರ್ಗ
  • Share this:
ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೊಬ್ಬ ಆಕೆಯನ್ನು ಸದಾ ಭೇಟಿಯಾಗುವ ಉದ್ದೇಶದಿಂದ ಖತರ್ನಾಕ್​ ಯೋಜನೆ ರೂಪಿಸಿ ಕಡೆಗೂ ಪ್ರಿಯತಮೆಯ ಗಂಡನ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೆಕ್ಸಿಕೋದ ಆಲ್ಬರ್ಟೊ ಎಂಬ ವ್ಯಕ್ತಿ ನೆರೆ ಮನೆಯವನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಕೂಡ ಗಂಡನಿಗೆ ತಿಳಿಯದಂತೆ ಈ ಸಂಬಂಧವನ್ನು ಕಾಪಾಡಿಕೊಂಡಿದ್ದಳು. ಸದಾ ಪ್ರಿಯತಮೆಯನ್ನು ಭೇಟಿಯಾಗಬೇಕೆಂಬುದು ಆಲ್ಬರ್ಟೊ ಉದ್ದೇಶವಾಗಿತ್ತು. ಆದರೆ, ನೇರವಾಗಿ  ಮನೆಗೆ ಹೋದರೆ ತಮ್ಮ ಈ ಅಕ್ರಮ ಸಂಬಂಧ ಊರಿಗೆಲ್ಲ ತಿಳಿಯುತ್ತದೆ ಎಂಬ ಹೆದರಿಕೆ ಈ ಜೋಡಿಗಳದ್ದು. ಇದೇ ಕಾರಣಕ್ಕೆ ಆಲ್ಬರ್ಟೊ ತನ್ನ ಮನೆಯಿಂದ ನೆರೆ ಮನೆಯಲ್ಲಿದ್ದ ಪ್ರಿಯತಮೆ ಮನೆಗೆ ಸುರಂಗ ಮಾರ್ಗ ಕೊರೆದು ಆತನ ಪ್ರೀತಿಯ ಆಳವನ್ನು ತೋರಿಸಿದ್ದಾನೆ.

ಅಚ್ಚರಿಯಾದರೂ ಹೌದು. ತನ್ನ ಮನೆಯಿಂದ ಪ್ರಿಯತಮೆ ಮನೆಯವರೆಗೂ ಆಳವಾದ ಸುರಂಗ ಮಾರ್ಗ ತೋಡಿದ ಆಲ್ಬರ್ಟೋ ಪ್ರತಿನಿತ್ಯ ಇದೇ ಮಾರ್ಗದ ಮೂಲಕ ಆಕೆಯನ್ನು ಭೇಟಿಯಾಗುತ್ತಿದ್ದ. ಪ್ರಿಯತಮೆಯ ಗಂಡ ಅತ್ತ ಆಫೀಸಿಗೆ ಹೋಗುತ್ತಿದ್ದಂತೆ ಆಲ್ಬರ್ಟೊ ಈ ರಹಸ್ಯ ಮಾರ್ಗದ ಮೂಲಕ ಪ್ರಿಯತಮೆ ಮನೆ ಸೇರುತ್ತಿದ್ದ.

ಹೀಗೆ ಹಲವು ದಿನಗಳ ಕಾಲ ಮುಂದುವರೆದಿದ್ದ ಇವರ   ಅಕ್ರಮ ಸಂಬಂಧ ಕೊನೆಗೂ ಬಯಲಾಗಿದೆ. ಪ್ರಿಯತಮೆಯ ಗಂಡ ಜಾರ್ಜ್​ ಒಂದು ದಿನ ಎಂದಿಗಿಂತ ಬೇಗ ಮನೆಗೆ ಬಂದಾಗ ಹೆಂಡತಿಯ ಅಕ್ರಮ ಸಂಬಂಧ ಬಯಲಾಗಿದೆ. ಈ ವೇಳೆ ಇವರ ಕೃತ್ಯ ನೋಡಿ ಶಾಕ್​ ಆಗಿದ್ದಾನೆ. ಅಷ್ಟೇ ಅಲ್ಲದೇ  ಮನೆಯೊಳಗೆ ಅವರು ಸಂಧಿಸಲು ಕೊರೆದ ಸುರಂಗ ಮಾರ್ಗ ನೋಡಿ ಅವಕ್ಕಾಗಿದ್ದಾನೆ. ಈ ವಿಚಾರದಲ್ಲಿ ಜಾರ್ಜ್​ , ಆಲ್ಬರ್ಟೊ ಇಬ್ಬರು ಜಗಳಕ್ಕೆ ನಿಂತಿದ್ದು, ಸದ್ಯ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಇದರ ಮಧ್ಯೆ ಇವರ ಮನೆಯ ಸುರಂಗ ಮಾರ್ಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
Published by: Seema R
First published: January 4, 2021, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories