ಜಗತ್ತಿನಲ್ಲಿ ಪ್ರತಿನಿತ್ಯ ಎಲ್ಲಾ ವಿಷಯಗಳಲ್ಲೂ ಹೊಸ ಹೊಸ ವಿಚಾರಗಳನ್ನು ಕಾಣುತ್ತೇವೆ. ಅದರಂತೆ ಪಾಕ ಪದ್ಧತಿಯಲ್ಲೂ ನಾನಾ ರೀತಿಯಾದ ಬದಲಾವಣೆಯನ್ನು ಹೊಸ ಹೊಸ ತಿನಿಸುಗಳನ್ನು ದಿನನಿತ್ಯ ಕಾಣುತ್ತೇವೆ. ಮತ್ತು ಅದರ ರುಚಿಯನ್ನು (Taste) ಸ್ವಾಧಿಸುತ್ತೇವೆ. ಪ್ರತಿಯೊಂದು ದೇಶವು ತನ್ನದೆ ಆದ ರೀತಿಯಾದ ಆಹಾರ ಪದ್ಧತಿಗೆ (Food Style) ಅಥವಾ ಪಾಕ ಪದ್ಧತಿಗೆ ಹೆಸರುವಾಸಿಯಾಗಿರುತ್ತದೆ. ಅಲ್ಲದೆ ಪ್ರತಿ ದೇಶವು ತನ್ನನ್ನು ಪ್ರತಿ ವಿಷಯದಲ್ಲಿ ವಿಶ್ವ (World) ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಬಯಸುತ್ತದೆ. ಇದರಂತೆ ಮೆಕ್ಸಿಕೋ ನಗರದ (Mexico City) ಬಾಣಸಿಗರು (Chefs) ಅತಿ ಉದ್ದನೆಯ ಟೋರ್ಟಾ ಸ್ಯಾಂಡ್ವಿಚ್ (Torta Sandwich) ತಯಾರಿಸುವ ಮೂಲಕ ವಿಶ್ವದಾಖಲೆಯನ್ನು (World Record) ಬರೆದಿದ್ದಾರೆ.
ರುಚಿಕರವಾದ ತಿನಿಸುಗಳಿಗೆ ಪ್ರಸಿದ್ಧಿಯಾಗಿದೆ ಮೆಕ್ಸಿಕೋ ನಗರ
ಮೆಕ್ಸಿಕೋ ನಗರವು ಅತ್ಯಂತ ರುಚಿಯಾದ ತಿನಿಸುಗಳು ಮತ್ತು ಟೋರ್ಟಾ ಸ್ಯಾಂಡ್ವಿಚ್ ಗಳಿಗೆ ಹೆಸರುವಾಸಿಯಾಗಿದೆ. ಪ್ರತಿನಿತ್ಯ ಇಲ್ಲಿನ ಬಾಣಸಿಗರು ಏನಾದರೂ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಅದರಂತೆ ಈ ಬಾರಿ ಸ್ಯಾಂಡ್ವಿಚ್ ಗಳ ಮೇಲಿನ ಪ್ರೀತಿಯನ್ನು ಒಂದು ಹೆಜ್ಜೆ ಮುಂದಕ್ಕೆ ಇಟ್ಟು ಅತಿ ಉದ್ದನೆಯ ಟೋರ್ಟಾ ಸ್ಯಾಂಡ್ವಿಚ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಒಟ್ಟಿಗೆ ಆಕಾಶದಲ್ಲಿ ಹಾರಿದ ತಾಯಿ ಮಗಳು! ಇಲ್ಲಿದೆ ನೋಡಿ ಪೈಲೆಟ್ ಅಮ್ಮ ಮಗಳ ರೋಮಾಂಚಕ ಕಥೆ
ಟೋರ್ಟಾ ಸ್ಯಾಂಡ್ವಿಚ್ ಮೇಳ
ವೆನುಸ್ಟಿಯಾನೊ ಕರಾನ್ಜಾದಲ್ಲಿ ನಡೆದ 17ನೇ ಆವೃತ್ತಿಯ ವಾರ್ಷಿಕ ಟೋರ್ಟಾ ಸ್ಯಾಂಡ್ವಿಚ್ ಮೇಳದಲ್ಲಿ ಮೆಕ್ಸಿಕೋ ನಗರದ ಸ್ಥಳಿಯ ಬಾಣಸಿಗರು ಅತಿ ಉದ್ದದ ಸ್ಯಾಂಡ್ವಿಚ್ ತಯಾರಿಸಿದ್ದಾರೆ. ಈ ಮೇಳವು ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಉತ್ತೇಜಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಅತೀ ಉದ್ದನೆಯ ಸ್ಯಾಂಡ್ವಿಚ್
ಮೆಕ್ಸಿಕೊ ನಗರದ ಬಾಣಸಿಗರು ತಯಾರಿಸಿದ ಈ ಸ್ಯಾಂಡ್ವಿಚ್ 74 ಮೀಟರ್ (242.7 ಅಡಿ) ಉದ್ದವಾಗಿದೆ. ಮತ್ತು 800 ಕೆ.ಜಿ ತೂಕ ಇದೆ. ಇದು ಈ ಹಿಂದಿನ ದಾಖಲೆಗಳನ್ನು ಮುರಿದಿದೆ. ಇಷ್ಟು ಉದ್ದನೆಯ ಸ್ಯಾಂಡ್ವಿಚ್ ತಯಾರಿಸಲು ಬಾಣಸಿಗರು ಒಟ್ಟಾಗಿ ಕೆಲಸ ಮಾಡಿದರು.
Assembled at a record speed of just over 2 minutes, this ‘torta’ sandwich broke another world record also for the longest one ever created at 242.7 feet at 17th annual Torta fair in Mexico City pic.twitter.com/LFLHjNTxDj
— Reuters (@Reuters) August 4, 2022
ಅಲ್ಲಿಗೆ ಬಂದಂತಹ ನೋಡುಗರು ಪ್ರತಿ ಪೀಸ್ಗೆ 35 ಪೆಸೊಸ್ (1.5 ಡಾಲರ್) ಕೊಟ್ಟು ಖರೀದಿಸಿ ಸೇವಿಸಿದರು. ಪ್ರತಿಯೊಂದು ಬೇರೆ ಬೇರೆ ರುಚಿಯನ್ನು, ಬೇರೆ ಬೇರೆ ಮಾಂಸದ ತುಣುಕುಗಳನ್ನು ಹೊಂದಿರುವುದರಿದ ಅವರಿಗೆ ಅವರಿಷ್ಟದವುಗಳನ್ನು ಆಯ್ಕೆ ಮಾಡಲು ಅವಕಾಶವಿತ್ತು.
ವ್ಯಾಪಾರದ ಉತ್ತೇಜನೆಗೆ ಅನುಕೂಲ
ಕಳೆದ ವರ್ಷ ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನೇಕ ರೆಸ್ಟೊರೆಂಟ್ ಗಳು ಮುಚ್ಚಿ ಹೋಗಿದ್ದವು ಮತ್ತು ಕೆಲವು ನಷ್ಟ ಅನುಭವಿಸಿದ್ದವು. ಆದ್ದರಿಂದ ಅಂತಹ ವ್ಯಾಪರಿಗಳಿಗೆ ಈ ರೀತಿಯಾದ ಆಹಾರ ಮೇಳಗಳು ತಮ್ಮ ವ್ಯಾಪಾರವನ್ನು ಉತ್ತೇಜಿಸಲು ಸಹಕರಿಸುತ್ತದೆ.
ಇದನ್ನೂ ಓದಿ: Viral Video: ಕರಾಟೆಯಲ್ಲಿ ಈ ನಾಯಿಯೇ ಚಾಂಪಿಯನ್! ಡಾಗ್‌ನ ಒಂದೇ ಹೊಡೆತಕ್ಕೆ ಬೆಕ್ಕು ಎಸ್ಕೇಪ್!
ಟೋರ್ಟಾ ಮೇಳದಲ್ಲಿ ಭಾಗವಹಿಸಿದ ಜೆಸ್ಸಿ ಅರೆವಾಲೊ "ಟೋರ್ಟಾಸ್ ಎಂದರೆ ಎಲ್ಲವೂ! ಅವುಗಳೆಂದರೆ ಪ್ರೀತಿ, ಒಟ್ಟಿಗೆ ಸೇರುವುದು ಎಂದರ್ಥ. ಕನಿಷ್ಠ ಪಕ್ಷ ನನ್ನ ಮನೆಯಲ್ಲಿ ಕುಟುಂಬದವರು ಒಟ್ಟಿಗೆ ಇರುವಾಗ ನಾವು ಟೋರ್ಟಾಗಳನ್ನು ಬೇಯಿಸುತ್ತೇವೆ ಮತ್ತು ನಾವೆಲ್ಲರೂ ಅದರಲ್ಲಿ ನಮ್ಮ ನೆಚ್ಚಿನ ಪದಾರ್ಥಗಳನ್ನು ಹಾಕುತ್ತೇವೆ." ಎಂದು ವರದಿ ಮಾಡುವಾಗ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ