ಪ್ರಸ್ತುತ ದಿನಮಾನಗಳಲ್ಲಿ ಯುವಜನರು ಆರೋಗ್ಯವನ್ನು(Health) ಕಾಪಾಡಿಕೊಳ್ಳಬೇಕು ದೇಹವನ್ನು(Body) ಸದೃಢವಾಗಿ ಇಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ಜಿಮ್ ನಲ್ಲಿ(Gym) ಪ್ರತಿನಿತ್ಯ ವ್ಯಾಯಾಮ(Exercise) ಮಾಡುತ್ತಲೇ ಇರುತ್ತಾರೆ. ಆದ್ರೆ ಹೀಗೆ ಅತಿಯಾಗಿ ದೇಹದಂಡನೆ(Workout) ಮಾಡುತ್ತಿರುವುದು ಬಹಳಷ್ಟು ಅಪಾಯಕಾರಿಯಾಗಿದ್ದು ಅದೆಷ್ಟೋ ಜನರು ವ್ಯಾಯಾಮ ಮಾಡುವ ವೇಳೆ ಮೃತಪಟ್ಟಿರುವ ಘಟನೆ ಗಳು ಪ್ರತಿನಿತ್ಯ ವರದಿಯಾಗುತ್ತಲೇ ಇವೆ.. ಅಲ್ಲದೇ ತಮ್ಮ ಸಾಮರ್ಥ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಜಿಮ್ ನಲ್ಲಿ ಇರುವ ವಸ್ತುಗಳನ್ನು ಬಳಸಲು ಹೋಗಿ ಅವಘಡಗಳನ್ನು ಮಾಡಿಕೊಂಡು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಅಲ್ಲದೆ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಹೆಚ್ಚಾಗಿ ಜಿಮ್ಗೆ ಹೋಗುವವರಿಗೆ ಎಚ್ಚರಿಕೆಯ ಕರೆಗಂಟೆ ಯನ್ನು ನೀಡುತ್ತಿವೆ.. ಅದೇ ರೀತಿ ಈಗ ವೈರಲ್ ಆಗುತ್ತಿರುವ ವಿಡಿಯೋ ಒಂದು ಜಿಮ್ ಪ್ರೇಮಿಗಳಿಗೆ ಆಘಾತ ಉಂಟುಮಾಡಿದೆ.
ಬೇರ್ಬೆಲ್ ಕುಸಿದು ಮಗಳ ಮುಂದೆಯೇ ಸಾವು
ಕಳೆದ ವರ್ಷ ಮೇ ತಿಂಗಳಲ್ಲಿ ಕ್ವಿನ್ಸ್ ಲ್ಯಾಂಡ್ ಮೂಲದ ವ್ಯಕ್ತಿಯೊಬ್ಬರು ಜಿಮ್ನಲ್ಲಿ ಇದೇ ರೀತಿ ಭಾರ ಎತ್ತಲು ಹೋಗಿ ಸಾವಿನ ಬಾಗಿಲಿನವರೆಗೆ ಹೋಗಿ ವಾಪಸ್ ಬಂದಿದ್ದರು. ಜೇಸನ್ ಲೇಟ್ ಎಂಬುವರು 120kg ತೂಕದ ಬೇರ್ಬೆಲ್ ಎತ್ತುವ ವೇಳೆ ಅದು ಕುಸಿದು ಇವರ ಮೇಲೆ ಬಿದ್ದಿತ್ತು. ಈ ಘಟನೆಯ ಬಳಿಕ ಲೇಟ್ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು.. ಆದ್ರೆ ಅಂದು ಅದೃಷ್ಟವಶಾತ್ ಲೇಟ್ ಅವರು ಬದುಕಿ ಉಳಿದಿದ್ದರು.. ಆದರೆ ಈ ಬಾರಿ ಮೆಕ್ಸಿಕೋದಲ್ಲಿ ನಡೆದಿರುವ ಘಟನೆ ಬೆಚ್ಚಿಬೀಳಿಸುವಂತೆ ಇದೆ.
ಹೌದು ಜಿಮ್ನಲ್ಲಿ ಬೇರ್ಬೆಲ್ ಕುಸಿದು ಮಗಳ ಮುಂದೆಯೇ ಮಹಿಳೆ ಸಾವಿಗೀಡಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಹೌದು ಮೆಕ್ಸಿಕೋದ ಜಿಮ್ ಒಂದರಲ್ಲಿ ಮಹಿಳೆ ವ್ಯಾಯಾಮ ಮಾಡುವಾಗ ಒಂದು 180 ಕೆಜಿ ತೂಕದ ಭಾರ ಎತ್ತಲು ಹೋಗಿದ್ದಾರೆ. ಆದ್ರೆ ಬೇರ್ಬೆಲ್ ಮಹಿಳೆಯ ಕುತ್ತಿಗೆಯ ಮೇಲೆ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರು ಮೆಕ್ಸಿಕನ್ ಮಹಿಳೆಯಾಗಿದ್ದು, ಅವರ ಹೆಸರು ತಿಳಿದು ಬಂದಿಲ್ಲ. ತಮ್ಮ ಪುತ್ರಿಯೊಂದಿಗೆ ಜಿಮ್ಗೆ ಬಂದು ವ್ಯಾಯಾಮ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ದುರಂತ ಸಂಭವಿಸುತ್ತಿದ್ದಂತೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಇತರರೆಲ್ಲರೂ ಸ್ಥಳಕ್ಕೆ ಓಡಿ ಬಂದು ಮಹಿಳೆಯ ರಕ್ಷಣೆಗೆ ಯತ್ನಿಸುತ್ತಾರೆ. ಆದರೆ ಅಷ್ಟರಲ್ಲಾಗಲ್ಲೇ ಅತೀಯಾದ ಭಾರ ಆಕೆಯ ಕುತ್ತಿಗೆಯ ಮೇಲೆ ಬಿದ್ದು ಆಕೆ ಸಾವನ್ನಪ್ಪಿದ್ದರಿಂದ ಯಾರೂ ಏನೂ ಮಾಡಲಾಗಲಿಲ್ಲ. ಎಲ್ಲರೂ ಶಾಕ್ ಗೆ ಒಳಗಾಗಿದ್ದರೆ ಓರ್ವ ವ್ಯಕ್ತಿ ಆಕೆಯನ್ನು ಎಳೆಯಲೂ ಪ್ರಯತ್ನಿಸುವುದನ್ನು ನೋಡಬಹುದು.. ಇನ್ನು ಈ ದುರಂತದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Cámaras de seguridad de un gimnasio en la col. #Peralvillo captaron el momento en que una mujer murió, cuando intentó cargar una pesa de 100 kilos, al no lograrlo ésta la aplastó.
ತನ್ನ ಪುಟ್ಟ ಮಗಳ ಜೊತೆ ಜಿಮ್ ಗೆ ಬಂದ ಮಹಿಳೆಯೊಬ್ಬಳು ತೂಕವಿರುವ ವ್ಯಾಯಾಮ ಮಾಡಲು ಮುಂದಾಗಿದ್ದಾರೆ.. ಇದಕ್ಕೂ ಮೊದಲು ಧಡೂತಿ ದೇಹದ ವ್ಯಕ್ತಿಯೊರ್ವ ಬೇರ್ಬೆಲ್ನ ತೂಕವನ್ನು ಸರಿ ಹೊಂದಿಸಿದ್ದಾನೆ. ಇದಾದ ಬಳಿಕ ಮಹಿಳೆ ವ್ಯಾಯಾಮ ಮಾಡಲು ಮುಂದಾಗಿ ಬರೋಬರಿ ಒಂದು 180 ಕೆಜಿ ತೂಕ ಎತ್ತಲು ಮುಂದಾಗಿದ್ದಾರೆ.. ಆದರೆ ಮಹಿಳೆ ಭಾರ ಎತ್ತಲು ತನ್ನ ಕುತ್ತಿಗೆಯನ್ನು ಬೇರ್ಬೆಲ್ ಕೆಳಭಾಗದಲ್ಲಿ ನುಗ್ಗಿಸಿದ ಕೆಲ ಕ್ಷಣದಲ್ಲೇ ಅದು ಆಕೆಯ ಮೇಲೆ ಬೀಳುತ್ತದೆ. ಬೇರ್ಬೆಲ್ನ ಮಹಿಳೆಯ ಮೇಲೆ ಬೀಳುತ್ತಿದ್ದಂತೆ ಜಿಮ್ ನಲ್ಲಿ ಇದ್ದ ಎಲ್ಲರೂ ಗಾಬರಿಯಿಂದ ಓಡಿ ಬಂದು ಅದನ್ನ ಎಳೆಯಲು ಪ್ರಯತ್ನಪಟ್ಟಿದ್ದಾರೆ.. ಅಲ್ಲದೇ ತನ್ನ ತಾಯಿಯ ಸಾವನ್ನು ಕಣ್ಣಾರೆ ಕಂಡ ಮಗಳು ಗಾಬರಿಯಾಗಿದ್ದಾಳೆ..