ಸಾಂತಾ ತಾತನಿಗೊಂದು ಪತ್ರ: ಬಾಲಕಿಗೆ ಸಿಕ್ತು ಭರ್ಜರಿ ಉಡುಗೊರೆ

ಎಲ್ಲೆಡೆ ವೈರಲ್​ ಆಗುತ್ತಿದ್ದ ಈ ಸುದ್ದಿಯನ್ನು ಮೆಕ್ಸಿಕೋದ ನೊಗಲಸ್​ನ ರೇಡಿಯೊವೊಂದು ಸುದ್ದಿ ಬಿತ್ತರಿಸಿದೆ.

zahir | news18
Updated:December 25, 2018, 8:33 PM IST
ಸಾಂತಾ ತಾತನಿಗೊಂದು ಪತ್ರ: ಬಾಲಕಿಗೆ ಸಿಕ್ತು ಭರ್ಜರಿ ಉಡುಗೊರೆ
ಸಾಂದರ್ಭಿಕ ಚಿತ್ರ
  • News18
  • Last Updated: December 25, 2018, 8:33 PM IST
  • Share this:
ಕ್ರಿಸ್ಮಸ್​ ಹಬ್ಬದ ಸಮಯದಲ್ಲಿ ಸಾಂತಾ ಕ್ಲಾಸ್​ ಗಿಫ್ಟ್​ ಕೊಡುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಸಾಂತಾ ವೇಷಧಾರಿಗಳು ಪುಟಾಣಿಗಳಿಗೆ ಉಡುಗೊರೆಗಳನ್ನು ನೀಡಿ ಖುಷಿ ಪಡಿಸುತ್ತಾರೆ. ಹೀಗೆ ಸಿಕ್ಕಿರುವ ಗಿಫ್ಟ್​ಗಳು ಸ್ವತಃ ಸಾಂತಾ ತಾತ ನೀಡಿದ್ದಾರೆ ಎಂದೇ ಅನೇಕ ಮಕ್ಕಳು ನಂಬುತ್ತಾರೆ. ಹೀಗಾಗಿಯೇ ಮೆಕ್ಸಿಕೋದ ಬಾಲಕಿಯೊಬ್ಬಳು ಡಿ. 16 ರಂದು ಸಾಂತಾ ಕ್ಲಾಸ್​ಗೊಂದು ಸಂದೇಶ ಕಳುಹಿಸಿದ್ದಳು. ಆ ಸಂದೇಶಕ್ಕೆ  ಪ್ರತಿಫಲ ಕೂಡ ಸಿಕ್ಕಿದೆ.

ಅಮೆರಿಕದ ಗಡಿ ದೇಶವಾಗಿರುವ ಮೆಕ್ಸಿಕೋದ ಪುಟ್ಟ ಬಾಲಕಿ ದಯಾಮಿ ಈ ಕ್ರಿಸ್ಮಸ್​ಗೆ ತನಗೆ ಬೇಕಿರುವ ಉಡುಗೊರೆಗಳನ್ನು ಪಟ್ಟಿ ಮಾಡಿ ಬಲೂನ್​ನಲ್ಲಿ ಸಿಕ್ಕಿಸಿ ಹರಿಬಿಟ್ಟಿದ್ದಳು. ಈ ಬಲೂನ್​ ಗಡಿದಾಟಿ ಅರಿಜೋನದ ಪಟಗೋನಿಯಾ ಎಂಬಲ್ಲಿಗೆ ಬಂದು ಬಿದ್ದಿದೆ. ಈ ಪ್ರದೇಶದಲ್ಲಿ ನಾಯಿಯೊಂದಿಗೆ ವಾಕಿಂಗ್ ಹೋಗುತ್ತಿದ್ದ ರಾಂಡಿ ಹೇಸ್ ಎಂಬ ವ್ಯಕ್ತಿ​ ಈ ರೆಡ್​ ಬಲೂನ್​ನ್ನು ಗಮನಿಸಿದ್ದು, ಅದಕ್ಕೆ ಕಟ್ಟಿದ್ದ ಉಡುಗೊರೆಗಳ ಲೀಸ್ಟ್​​ನ್ನು ನೋಡಿದ್ದಾರೆ.

ಇದನ್ನೂ ಓದಿ: ನಮ್ಮೂರ ಹೆಮ್ಮೆ ಡಾಕ್ಟರ್ ನರಸಮ್ಮ: 15 ಸಾವಿರ ಹೆರಿಗೆ ಮಾಡಿಸಿದ ಮಹಾತಾಯಿ

ಸ್ಪ್ಯಾನಿಷ್​ ಭಾಷೆಯಲ್ಲಿ ಬರೆಯಲಾಗಿದ್ದರಿಂದ ಈ ಬಲೂನ್​ ಮೆಕ್ಸಿಕೋದಿಂದ ಬಂದಿರಬಹುದು ಎಂದು ಹೇಸ್ ಸಂಶಯಿಸಿದ್ದರು. ಅದರಂತೆ ಬಾಲಕಿಯ ಮಾಹಿತಿಯನ್ನು ಕಲೆಹಾಕಲು ಮುಂದಾಗಿದ್ದಾರೆ. ಅಲ್ಲದೆ ಹೇಸ್​ ಸಾಮಾಜಿಕ ತಾಣದಲ್ಲಿ ಈ ಕುರಿತು ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರು. ಈ ಪೋಸ್ಟ್​ಗಳು ವೈರಲ್ ಆಗುತ್ತಿದ್ದಂತೆ ಅಮೆರಿಕದ ನ್ಯೂಸ್​ ಪೇಪರ್​ವೊಂದು ಈ ಕುರಿತು ಸುದ್ದಿಯನ್ನು ಪ್ರಕಟಿಸಿತು.

ಇದನ್ನೂ ಓದಿ: ದೇಶದ ಅತಿವೇಗದ ರೈಲು ಟ್ರೈನ್​18 ವಿಶೇಷತೆಗಳೇನು?

ಎಲ್ಲೆಡೆ ವೈರಲ್​ ಆಗುತ್ತಿದ್ದ ಈ ಸುದ್ದಿಯನ್ನು ಮೆಕ್ಸಿಕೋದ ನೊಗಲಸ್​ನ ರೇಡಿಯೊವೊಂದು ಸುದ್ದಿ ಬಿತ್ತರಿಸಿದೆ. ಇದನ್ನು ಕೇಳಿದ ಬಾಲಕಿಯ ಪೋಷಕರು ರೇಡಿಯೊವನ್ನು ಸಂಪರ್ಕಿಸಿದ್ದು, ಅಲ್ಲದೆ ತಮ್ಮ ವಿಳಾಸವನ್ನು ಹಂಚಿಕೊಂಡಿದ್ದಾರೆ.

(Cesar Barron )
ಅದರಂತೆ ಪುಟ್ಟ ಬಾಲಕಿಯ ಮನೆಗೆ ಭೇಟಿ ನೀಡಿದ ಹೇಸ್​, ಬಾಲಕಿ ಕೋರಿದ ಎಲ್ಲ ಗಿಫ್ಟ್​ಗಳನ್ನು ನೀಡಿದ್ದಾರೆ. ಈ ವೇಳೆ ತನಗೆ ಉಡುಗೊರೆ ನೀಡಲು ತನ್ನನ್ನು ಸಾಂತಾ ಕ್ಲಾಸ್​ ಇಲ್ಲಿಗೆ ಕಳುಹಿಸಿದ್ದಾರೆ ಎಂದು ಹೇಸ್​ ಬಾಲಕಿ ತಿಳಿಸಿದರು. ಒಟ್ಟಿನಲ್ಲಿ ಕ್ರಿಸ್ಮಸ್ ಖುಷಿಯಲ್ಲಿದ್ದ ಪುಟಾಣಿ ದಯಾಮಿ ಪಾಲಿಗೆ ರಾಂಡಿ ಹೇಸ್​ ಸಾಂತಾ ತಾತನಾಗಿ ಪ್ರತ್ಯಕ್ಷರಾದರು.

ಇದನ್ನೂ ಓದಿ: ಶೀಘ್ರದಲ್ಲೇ ಬರಲಿದೆ 20 ರೂ. ಹೊಸ ನೋಟು: ಏನಿದರ ವಿಶೇಷತೆ ?

First published:December 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading