ಕ್ರಿಸ್ಮಸ್ಗೆ (Christmas) ಅಥವಾ ಹೊಸ ವರ್ಷಕ್ಕೆ(New Year) ಹಲವಾರು ಕಂಪನಿಗಳಲ್ಲಿ (Company) ಉಡುಗೊರೆಗಳನ್ನು ನೀಡುತ್ತಾರೆ. ಈಗಂತೂ ವರ್ಕ್ ಫ್ರಂ ಹೋಮ್ ಹೆಚ್ಚಾಗಿರೋದ್ರಿಂದ ಅಂಥ ಉಡುಗೊರೆಗಳನ್ನು ಮನೆಗೇ ಕಳುಹಿಸ್ತಾರೆ. ಆದ್ರೆ ಇಲ್ಲೊಬ್ಬ ಪ್ರತಿಷ್ಠಿತ ಮೆಟಾ (Meta) ಕಂಪನಿಯ ಮಾಜಿ ಉದ್ಯೋಗಿಯೊಬ್ಬನಿಗೆ (Ex-Employ) ಕಂಪನಿಯಿಂದ ವಿಚಿತ್ರ ಉಡುಗೊರೆ ಬಂದಿದೆ. ಮೆಟಾದ ಮಾಜಿ ಉದ್ಯೋಗಿ ಮ್ಯಾಟ್ ಮೊಟೈಲ್ಗೆ (Mobile) ಒಂದು ರಟ್ಟಿನ ಬಾಕ್ಸ್ ಪಾರ್ಸಲ್ ಬಂದಿದೆ. ಬಾಕ್ಸ್ (Box) ಮೇಲೆ ಎರಡು ಎಮೋಜಿ ಇದ್ದು ಲೀವರ್ (ಹೊರಟು ಹೋದವರು) ಎಂಬುದಾಗಿ ಬರೆಯಲಾಗಿದೆ.
ಇದನ್ನು ಸ್ವತಃ ಮ್ಯಾಟ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದ್ರಲ್ಲಿ ಏನ್ ವಿಶೇಷ ಅಂದ್ರಾ. ವಿಷ್ಯ ಬೇರೆನೇ ಇದೆ.
So... a month after being laid off, Meta sends me a box labeled "leaver" containing "sad" & "wow" emoji Christmas tree ornaments. There was no note explaining this; just a random box for "leaver." Merry Christmas to me.
Any other "leavers" get something like this? pic.twitter.com/Wk51d2iJIg
— Matt Motyl (@MattMotyl) December 12, 2022
ಮ್ಯಾಟ್ ಅವರಿಗೆ ಕಳುಹಿಸಲಾದ ಬಾಕ್ಸ್ ನ ಮೇಲೆ ಎರಡು ಎಮೋಜಿಗಳಿದ್ದವು. ಒಂದು ದುಃಖದ ಹಾಗೂ ಮತ್ತೊಂದು ವಾವ್ ಎಮೋಜಿಗಳಿದ್ದವು. ಇನ್ನು ಬಾಕ್ಸ್ ತೆಗೆದು ನೋಡಿದರೆ ಅದರೊಳಗೆ ಕ್ರಿಸ್ ಮಸ್ ಟ್ರೀ ಆರ್ನಮೆಂಟ್ಸ್ ಗಳಿದ್ದವು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಅವರು ತಮ್ಮ ಟ್ವೀಟ್ ನಲ್ಲಿ ವಜಾಗೊಳಿಸಿದ ಒಂದು ತಿಂಗಳ ನಂತರ ಮೆಟಾ ನನಗೆ ದುಃಖದ ಹಾಗೂ ವಾವ್ ಎಮೋಜಿ ಹೊಂದಿರುವ ಬಾಕ್ಸ್ ಕಳುಹಿಸಿದೆ.
ಅದರಲ್ಲಿ ಕ್ರಿಸ್ಮಸ್ ಟ್ರೀ ಆಭರಣಗಳಿದ್ದು ಅದರ ಮೇಲೆ ಲೀವರ್ (ಹೊರಟು ಹೋದವರು) ಎಂಬುದಾಗಿ ಬರೆಯಲಾಗಿದೆ.
ಇದರೊಳಗೆ ಯಾವುದೇ ನೋಟ್ ಇರಲಿಲ್ಲ ಎಂಬುದಾಗಿ ಬರೆದುಕೊಂಡಿದ್ದಾರೆ. ಅಲ್ಲದೇ ಬೇರೆ ಯಾವುದಾದರೂ ಮಾಜಿ ಉದ್ಯೋಗಿಗಳು ಇಂತಹ ಬಾಕ್ಸ್ ಅನ್ನು ಪಡೆದುಕೊಂಡಿದ್ದೀರಾ ಎಂಬುದಾಗಿ ಪ್ರಶ್ನಿಸಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ ಏನಿತ್ತು ಗೊತ್ತಾ?
ಅಲ್ಲದೇ ಕಾಮೆಂಟ್ ವಿಭಾಗದಲ್ಲಿ ಮ್ಯಾಟ್ ಅವರು, ಎರಡು ಎಮೋಜಿ ಮುಖದ ರಬ್ಬರ್ ಸ್ಟ್ಯಾಂಪ್ಗಳ ಹೊರತಾಗಿ, ಬಾಕ್ಸ್ನಲ್ಲಿ ಅಪಾರ ಪ್ರಮಾಣದ ಪ್ಯಾಕಿಂಗ್ ಪೇಪರ್ ಗಳು ಇದ್ದವು ಅಷ್ಟೇ ಎಂದು ಹೇಳಿದ್ದಾರೆ.
ಅಲ್ದೇ ಬಾಕ್ಸ್ನಲ್ಲಿ ಮೆಟಾ ಆಫೀಸ್ ಮೇಲಿಂಗ್ ಲೇಬಲ್ ಇದ್ದುದರಿಂದ ಇದು ನನ್ನ ಸ್ನೇಹಿತರು ಮಾಡಿದಂತಹ ತಮಾಷೆ ಅಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.
ಈ ಮಧ್ಯೆ ಮತ್ತೊಂದು ಪ್ರತ್ಯೇಕ ಟ್ವಿಟ್ಟರ್ ಪೋಸ್ಟ್ನಲ್ಲಿ, ಮ್ಯಾಟ್ ಅವರು, ಮೆಟಾದಿಂದ ನಾಲ್ಕು ದೊಡ್ಡ ಬಾಕ್ಸ್ಗಳನ್ನು ಸ್ವೀಕರಿಸಿದ್ದಾಗಿ ಹೇಳಿದ್ದಾರೆ. ಇದರಿಂದ ಅವರು ಕಂಪನಿಯಿಂದ ಪಡೆದ ಕ್ವೆಸ್ಟ್ 1 ವರ್ಚುವಲ್ ರಿಯಾಲಿಟಿ ಹೆಡ್ಸೆಟ್ ಮತ್ತು ನಿಯಂತ್ರಕವನ್ನು ಹಿಂತಿರುಗಿಸಬಹುದು ಎಂದೂ ಹೇಳಿದ್ದಾರೆ.
ಮತ್ತೆ ಯಾರಾದರೂ ಇಂಥ ಬಾಕ್ಸ್ ಗಳನ್ನು ಸ್ವೀಕರಿಸಿದ್ದೀರಾ ಎಂಬು ಕೇಳಿರುವುದಕ್ಕೆ ಕೆಲವರು ತಮಗೆ ವೈಯಕ್ತಿಕವಾಗಿ ಮೆಸೇಜ್ ಮಾಡಿರುವುದಾಗಿಯೂ ಅವರು ಹೇಳಿದ್ದಾರೆ. ಅವರಲ್ಲಿ ಕೆಲವರು ಇಂಥ ವಿಚಿತ್ರ ಬಾಕ್ಸ್ ಗಳನ್ನು ಸ್ವೀಕರಿಸಿದ್ದಾರೆ.
ಒಬ್ಬ ವ್ಯಕ್ತಿ ಹಲವಾರು ತೆರೆದ ಬೋರ್ಬನ್ ಬಾಟಲಿಗಳ ಪೆಟ್ಟಿಗೆಯನ್ನು ಸ್ವೀಕರಿಸಿದ್ದಾರೆಂದು ಹೇಳಿದ್ದಾರೆ. ಅಲ್ಲದೇ ಅವರನ್ನು ವಜಾಗೊಳಿಸುವ ಮೊದಲು ಅದನ್ನು ತನ್ನ ಡೆಸ್ಕ್ ಬಳಿ ನೋಡಿದ್ದಾಗಿಯೂ ಹೇಳಿದ್ದಾರೆ ಎಂದು ಮ್ಯಾಟ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Viral Video: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಜೀವ ಉಳಿಸಿದ ಸಿಐಎಸ್ಎಫ್ ಸಿಬ್ಬಂದಿ, ವೀಡಿಯೋ ನೋಡಿ
ಇಂತ ಉಡುಗೊರೆಗೆ "ಯಾವುದೇ ಅರ್ಥವಿಲ್ಲ
ಈ ಮಧ್ಯೆ, ಇಂಟರ್ನೆಟ್ ಬಳಕೆದಾರರು ಮ್ಯಾಟ್ ಅವರ ಟ್ವಿಟರ್ ಪೋಸ್ಟ್ಗೆ ತ್ವರಿತವಾಗಿ ಪ್ರತಿಕ್ರಿಯಿಸಿದರು. ಕೆಲವರು ಇಂತ ಉಡುಗೊರೆಗೆ "ಯಾವುದೇ ಅರ್ಥವಿಲ್ಲ" ಎಂದು ಹೇಳಿದ್ದಾರೆ. ಇನ್ನೊಬ್ಬರು, "ನನ್ನನ್ನು ಕ್ಷಮಿಸಿ ಮ್ಯಾಟ್, ಎಂತಹ ಕಳಪೆ ಚಿಂತನೆ ಎಂದು ಕಾಮೆಂಟ್ ಮಾಡಿದ್ದಾರೆ. "ಇದು ವಿಚಿತ್ರವಾಗಿದೆ.
ನಾನು ಅದರಲ್ಲಿ ಯಾವುದೇ ಅಂಶವನ್ನು ನೋಡುವುದಿಲ್ಲ. ಅವು ಅರ್ಥಹೀನ ವಸ್ತುಗಳು ಮತ್ತು ಅದರಲ್ಲಿ ಯಾವುದೇ ಪ್ರಸ್ತುತತೆಯನ್ನು ನಾನು ನೋಡಲಾಗುವುದಿಲ್ಲ ಎಂದು ಮತ್ತೊಬ್ಬರು ಹೇಳಿದರು.
ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, "ಇದು ನಂಬಲಾಗದಷ್ಟು ಸಂವೇದನಾರಹಿತವಾಗಿದೆ. ನನ್ನನ್ನು ಕ್ಷಮಿಸಿ. ನಿಮ್ಮ ಮುಂದಿನ ಸ್ಥಳವು ನಿಮ್ಮನ್ನು ಹೆಚ್ಚು ಮೆಚ್ಚುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಮತ್ತೊಬ್ಬರು "ಉಫ್, ಇದು ಕ್ಷುಲ್ಲಕ ಮತ್ತು ಅಸಭ್ಯವಾಗಿದೆ. ವಿಶೇಷವಾಗಿ ಅವರು ಕಳುಹಿಸಲು ಆಯ್ಕೆ ಮಾಡಿದ ಎಮೋಜಿಗಳೊಂದಿಗೆ ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ