• Home
  • »
  • News
  • »
  • trend
  • »
  • Viral Video: ಅಬ್ಬಬ್ಬಾ, ರಾತ್ರಿ ಆಕಾಶದಲ್ಲಿ ದೈತ್ಯ ಡ್ರ್ಯಾಗನ್! ವಿಡಿಯೋ ನೋಡಿದರೆ ಅದ್ಭುತ ಅಂತೀರಾ

Viral Video: ಅಬ್ಬಬ್ಬಾ, ರಾತ್ರಿ ಆಕಾಶದಲ್ಲಿ ದೈತ್ಯ ಡ್ರ್ಯಾಗನ್! ವಿಡಿಯೋ ನೋಡಿದರೆ ಅದ್ಭುತ ಅಂತೀರಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೀಪಾವಳಿ ಸಮಯದಲ್ಲಿ ಈ ದೀಪವಿರುವ ಆಕಾಶಬುಟ್ಟಿ ಮುಗಿಲೆತ್ತರದಲ್ಲಿ ಹಾರುತ್ತಿದ್ದಾಗ ನೋಡುವುದೇ ಒಂದು ರೋಮಾಂಚನಕಾರಿ ಆಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

  • Share this:

ನಾವು ಚಿಕ್ಕವರಾಗಿದ್ದಾಗ ಈ ದಸರಾ (Dasara) , ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಈ ಅಂಗಡಿಗಳ ಮೇಲೆ ಹಾಕಿದಂತಹ ಬಣ್ಣ ಬಣ್ಣದ ಲೈಟಿಂಗ್ (Lighting) ಗಳನ್ನು ನೋಡಿಯೇ ನಾವು ‘ಅಬ್ಬಬ್ಬಾ.. ಎಷ್ಟು ಚೆನ್ನಾಗಿ ಕಾಣುತ್ತಿದೆ ಈ ಲೈಟಿಂಗ್’ ಅಂತ ಅಂದುಕೊಂಡಿರುವುದು ಇರುತ್ತದೆ. ಹಾಗೆಯೇ ಈ ಗಾಳಿಪಟ (Galipata) ಗಳನ್ನು ಆಕಾಶ (Sky) ದಲ್ಲಿ ನೋಡಿ ಸಹ ನಮಗೆ ತುಂಬಾನೇ ರೋಮಾಂಚನವಾಗಿರುತ್ತದೆ. ಇದಷ್ಟೇ ಅಲ್ಲದೆ ದೀಪಾವಳಿ ಸಮಯದಲ್ಲಿ ಈ ದೀಪವಿರುವ ಆಕಾಶಬುಟ್ಟಿ ಮುಗಿಲೆತ್ತರದಲ್ಲಿ ಹಾರುತ್ತಿದ್ದಾಗ ನೋಡುವುದೇ ಒಂದು ರೋಮಾಂಚನಕಾರಿ ಆಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. 


ಈಗಂತೂ ಅನೇಕ ದೊಡ್ಡ ದೊಡ್ಡ ಪಾರ್ಕ್ ಗಳಲ್ಲಿ ನಡೆಯುವ ಲೇಸರ್ ಲೈಟ್ ಶೋ ಗಳು ನೋಡಲು ಕಣ್ಣಿಗೆ ತುಂಬಾನೇ ಮುದವನ್ನು ನೀಡುತ್ತವೆ ಎಂದು ಹೇಳಬಹುದು. ರಾತ್ರಿ ಆ ತಿಳಿ ನೀಲಿ ಬಣ್ಣದ ಆಕಾಶದಲ್ಲಿ ಸುಮ್ಮನೆ ಒಂದು ದೊಡ್ಡ ಟಾರ್ಚ್ ನ ಬೆಳಕು ಸಹ ತುಂಬಾನೇ ಸುಂದರವಾಗಿ ಕಾಣುತ್ತಿರುತ್ತದೆ.


ಸಾಮಾಜಿಕ ಮಾಧ್ಯಮದಲ್ಲಿ ಹೊಸದಾಗಿ ಒಂದು ವೀಡಿಯೋ ಜೋರಾಗಿಯೇ ಹರಿದಾಡುತ್ತಿದೆ ನೋಡಿ, ಅದರಲ್ಲಿ ವಿವಿಧ ಬಣ್ಣಗಳಿಂದ ಕೂಡಿದಂತಹ ಡ್ರ್ಯಾಗನ್ ಅನ್ನು ನಾವು ನೋಡಬಹುದು. ಅದೇನು? ಡ್ರ್ಯಾಗನ್ ರಾತ್ರಿ ಆಕಾಶದಲ್ಲಿ ಹೇಗೆ ಅಂತ ನೀವು ಯೋಚಿಸುತ್ತಿರಬಹುದು ಅಲ್ಲವೇ? ವೀಡಿಯೋ ಬಗ್ಗೆ ವಿಸ್ತಾರವಾಗಿ ಹೇಳುತ್ತೇವೆ ಕೇಳಿ.


ಈ ವೀಡಿಯೋದಲ್ಲಿ ಏನಿದೆ ಗೊತ್ತಾ?


ಇದು ನಿಜವಾದ ಡ್ರ್ಯಾಗನ್ ಅಲ್ಲ ಬಿಡಿ.. ಸಾವಿರಾರು ಡ್ರೋನ್ ಗಳು ಒಟ್ಟಿಗೆ ಬಂದು ಭಯಾನಕ ಡ್ರ್ಯಾಗನ್ ಅನ್ನು ರೂಪಿಸುವ ಅದ್ಭುತ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಕಿರು ಕ್ಲಿಪ್ ಅನ್ನು ಜಿಯೋಸ್ಕ್ಯಾನ್ ಡ್ರೋನ್ ಶೋ ಗುರುವಾರ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದೆ ಮತ್ತು ಅಂದಿನಿಂದ ಇದು ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಗಳಲ್ಲಿ ಕಾಣಿಸಿಕೊಂಡಿದೆ ಮತ್ತು ಇದುವರೆಗೂ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.


ಆಕಾಶದಲ್ಲಿ ಡ್ರ್ಯಾಗನ್ ಏನ್ ಮಾಡ್ತೀದೆ ನೋಡಿ!


ದೈತ್ಯ ಡ್ರ್ಯಾಗನ್ ಆಕಾಶದಲ್ಲಿ ತನ್ನ ಬಾಯಿಯನ್ನು ತೆರೆದು ಗಾಳಿಯಲ್ಲಿ ಹಾರುತ್ತಿರುವುದನ್ನು ಈ 7 ಸೆಕೆಂಡಿನ ಚಿಕ್ಕ ವೀಡಿಯೋ ತುಣುಕು ತೋರಿಸುತ್ತದೆ. ಡ್ರೋನ್ ಪ್ರದರ್ಶನದ ಸ್ಥಳವನ್ನು ಜಿಯೋಸ್ಕ್ಯಾನ್ ಹಂಚಿಕೊಂಡಿಲ್ಲ. ಆದರೆ ಯೂಟ್ಯೂಬ್ ಪೋಸ್ಟ್ 1,000 ಡ್ರೋನ್ ಗಳನ್ನು ಬಳಸಿಕೊಂಡು ಈ ಭಯಾನಕ ಜೀವಿಯನ್ನು ರಚಿಸಲಾಗಿದೆ ಎಂದು ಬಹಿರಂಗಪಡಿಸಿದೆ.


ಇದನ್ನೂ ಓದಿ: ಹುಟ್ಟೋ ಮಗು ಗಂಡೋ ಹೆಣ್ಣೋ ತಿಳ್ಕೊಳೋಕೆ ಇಡೀ ಜಲಪಾತವನ್ನೇ ಹಾಳುಮಾಡಿಬಿಟ್ರು!


ಈ ಕ್ಲಿಪ್ ಅನ್ನು ತನ್ಸು ಯೆಗೆನ್ ಎಂಬ ಬಳಕೆದಾರರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ನಲ್ಲಿ 17 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 20,000ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ. ಈ ಅದ್ಭುತ ದೃಶ್ಯವು ಇಂಟರ್ನೆಟ್ ಬಳಕೆದಾರರನ್ನು ಆಶ್ಚರ್ಯಚಕಿತರನ್ನಾಗಿಸಿತು. "ಇದು ಹುಚ್ಚುತನ" ಎಂದು ಒಬ್ಬ ಬಳಕೆದಾರರು ಬರೆದರೆ, ಇನ್ನೊಬ್ಬರು "ಗೇಮ್ ಆಫ್ ಡ್ರೋನ್ಸ್" ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.


ಅಹಮದಾಬಾದ್ ನಲ್ಲಿಯೂ ನಡೆದಿತ್ತು ಡ್ರೋನ್ ಪ್ರದರ್ಶನ!


ಏತನ್ಮಧ್ಯೆ, ಈ ವಾರದ ಆರಂಭದಲ್ಲಿ, ಅಹಮದಾಬಾದ್ ನಲ್ಲೂ ಸಹ ನೂರಕ್ಕೂ ಹೆಚ್ಚು ಡ್ರೋನ್ ಗಳು ಅದ್ಭುತ ಇದೇ ರೀತಿಯ ಪ್ರದರ್ಶನವನ್ನು ಸೃಷ್ಟಿಸಿದವು. ಈ ಡ್ರೋನ್ ಪ್ರದರ್ಶನವನ್ನು ಬೋಟ್ಲಾಬ್ ಡೈನಾಮಿಕ್ಸ್ ವಿನ್ಯಾಸಗೊಳಿಸಿ ನಿರ್ಮಿಸಿತ್ತು. ಇದು ಬುಧವಾರ ರಾತ್ರಿ ನಮ್ಮ ರಾಷ್ಟ್ರಧ್ವಜ, ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಭಾವಚಿತ್ರ ಮತ್ತು ಕ್ರೀಡಾಕೂಟದ ಲಾಂಛನವನ್ನು ಚಿತ್ರಿಸಿದೆ. ಕಾರ್ಯಕ್ರಮದ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ಒಂಬತ್ತು ವರ್ಷಗಳ ಬಳಿಕ ಮಹಿಳೆಯನ್ನು ಅದೇ ಸ್ಥಳದಲ್ಲಿ ಸೆರೆಹಿಡಿದ ಗೂಗಲ್​ ಮ್ಯಾಪ್​


"ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ನಗರವು ಸಿದ್ಧವಾಗುತ್ತಿದ್ದಂತೆ, ಅಹಮದಾಬಾದ್ ನಲ್ಲಿ ಅದ್ಭುತ ಡ್ರೋನ್ ಪ್ರದರ್ಶನ" ಎಂಬ ಶೀರ್ಷಿಕೆಯನ್ನು ಸಹ ಪಿಎಂ ಮೋದಿ ಅವರು ನೀಡಿದ್ದರು. ಇದರ ವಿಶೇಷವೆಂದರೆ, ಗುಜರಾತ್ ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಇದನ್ನು 2022 ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 12 ರವರೆಗೆ ಆಯೋಜಿಸಲಾಗುವುದು.

Published by:ವಾಸುದೇವ್ ಎಂ
First published: