ಈ ಊರಲ್ಲಿ ಪುರುಷರು ಮಹಿಳೆಯರ ಉಡುಪು ಧರಿಸುತ್ತಾರೆ !

news18
Updated:April 28, 2018, 5:53 PM IST
ಈ ಊರಲ್ಲಿ ಪುರುಷರು ಮಹಿಳೆಯರ ಉಡುಪು ಧರಿಸುತ್ತಾರೆ !
news18
Updated: April 28, 2018, 5:53 PM IST
ನ್ಯೂಸ್ 18 ಕನ್ನಡ

ದೆವ್ವ-ಪಿಶಾಚಿಗಳಿಗೆ ಯಾರು ತಾನೆ ಹೆದರುವುದಿಲ್ಲ. ಅದರಲ್ಲೂ ಸತ್ತವರ ಆತ್ಮ ಮರಳಿ ಬರುತ್ತದೆ ಎಂದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಇಂತಹದೊಂದು ಬೆಚ್ಚಿ ಬೀಳಿಸುವ ಕಥೆಯಿಂದ ಥಾಯ್ಲೆಂಡ್​ನ ಜನರು ತಮ್ಮ ವೇಷ ಭೂಷಣವನ್ನು ಬದಲಿಸಿದ್ದಾರೆ. ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ.

ಥಾಯ್ಲೆಂಡ್​ನ ನಖೋನ್ ಫೆನೋಮ್ ಪ್ರಾಂತ್ಯದ ಪುರುಷರು ದೆವ್ವದ ಕಥೆಗೆ ಬೆಚ್ಚಿ ತಮ್ಮ ಉಡುಪನ್ನು ಬದಲಿಸಿಕೊಂಡಿದ್ದಾರಂತೆ. ಅಲ್ಲಿಯ ಜನರ ಈ ವಿಚಿತ್ರ ನಿರ್ಧಾರದ ಹಿಂದಿರುವ ಕಾರಣ ಕೂಡ ಅಷ್ಟೇ ವಿಚಿತ್ರವಾಗಿದೆ.

ಈ ಹಿಂದೆ ಗ್ರಾಮದಲ್ಲಿ ಐದು ಜನ ಪುರುಷರು ಅನಿರೀಕ್ಷಿತವಾಗಿ ಮೃತಪಟ್ಟಿದ್ದರು. ಇವರ ಅಸಹಜ ಸಾವಿಗೆ ವಿಧವೆಯ ದೆವ್ವವೇ ಕಾರಣ ಎಂದು ಗ್ರಾಮಸ್ಥರು ನಂಬಿದ್ದಾರೆ. ಹೀಗಾಗಿ ಪುರುಷರು ದೆವ್ವದ ಭಯದಿಂದಾಗಿ ಮಹಿಳೆಯರ ಉಡುಪನ್ನು ಧರಿಸಲು ಪ್ರಾರಂಭಿಸಿದ್ದಾರಂತೆ.

ಈ ಪ್ರೇತವು ಗ್ರಾಮದ ಪುರುಷರ ಮತ್ತು ಯುವಕರ ಮೇಲೆ ಕಣ್ಣಿಟ್ಟಿದೆ ಎಂದು ಗ್ರಾಮಸ್ಥರು ತಿಳಿದಿದ್ದಾರೆ. ಹಾಗಾಗಿ ಗ್ರಾಮದ ಮಹಿಳೆಯರು ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ರಕ್ಷಿಸಲು ಮಹಿಳಾ ವಸ್ತ್ರದ ಮೊರೆ ಹೋಗಿದ್ದಾರೆ.

ಅಷ್ಟೇ ಅಲ್ಲದೆ ಪ್ರೇತದ ಭಯದಿಂದ ಗ್ರಾಮದ ಪ್ರತಿ ಮನೆಯ ಮುಂದೆ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಪ್ರೇತದ ಕಾಟದಿಂದ ತಪ್ಪಿಸಿಕೊಳ್ಳಲು ಮನೆಗಳ ಮುಂದೆ ಪುರುಷರ ನಗ್ನ ಮೂರ್ತಿಯನ್ನು ಇಡಲಾಗಿದೆ. ಇದರಿಂದ ಪ್ರೇತವು ಮನೆಯ ಒಳಗೆ ಪ್ರವೇಶಿಸುವುದಿಲ್ಲ ಎಂಬುದು ಅಲ್ಲಿನ ಜನರ ನಂಬಿಕೆ. ವಿಚಿತ್ರವೆಂದರೆ ಮೂರ್ತಿ ಸ್ಥಾಪಿಸಿದ ಬಳಿಕ ಗ್ರಾಮದಲ್ಲಿ ಯಾವುದೇ ಅಸಹಜ ಸಾವು ಸಂಭವಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

 
Loading...

 

 
First published:April 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...