ಪೊಲೀಸರು ಹಿಡಿದು ಎಳೆದೊಯ್ಯುತ್ತಿದ್ದರೂ ಟೀ ಕಪ್​​​​ ಕೆಳಗಿಳಿಸದ ಭೂಪ.. ಕುಡ್ಕೊಂಡೇ ಜೀಪ್​ ಹತ್ತಿದ!

ವ್ಯಕ್ತಿಗಳ ಚಹಾಪ್ರೇಮ ಯಾವ ಮಟ್ಟದ್ದೆಂದರೆ, ಅವರನ್ನು ಪೊಲೀಸರು ಬಂಧಿಸಿ, ಎಳೆದುಕೊಂಡು ಹೋಗುತ್ತಿದ್ದರೂ, ಕೈಯಲ್ಲಿರುವ ಚಹಾದ ಲೋಟವನ್ನು ಬಿಡಲು ತಯಾರಿರಲಿಲ್ಲ

ಟೀ ಕಪ್​​​​ ಕೆಳಗಿಳಿಸದ ಭೂಪ

ಟೀ ಕಪ್​​​​ ಕೆಳಗಿಳಿಸದ ಭೂಪ

 • Share this:

  ನೀವು ಇಡೀ ದಿನದಲ್ಲಿ ಎಷ್ಟು ಲೋಟ ಚಹಾ ಸೇವಿಸಿದಿರಿ ಎಂಬ ಲೆಕ್ಕ ಸ್ವತಃ ನಿಮಗೆ ಗೊತ್ತಿಲ್ಲದಿದ್ದರೆ, ನೀವು ನಿಜಕ್ಕೂ ಒಬ್ಬ ಚಹಾ ಪ್ರೇಮಿ ಎಂದೇ ಅರ್ಥ. ನಿಮ್ಮಂತಹ ಸಾಕಷ್ಟು ಚಹಾಪ್ರೇಮಿಗಳನ್ನು ನೀವು ಕಂಡಿರಬಹುದು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಇರುವ ಇಬ್ಬರು ಚಹಾ ಪ್ರೇಮಿಗಳನ್ನು ನೋಡಿದರೆ, “ಆಹಾ. . .ಚಹಾ ಪ್ರೇಮವೇ?!” ಎಂದು ನೀವು ಉದ್ಘರಿಸುವುದು ಖಂಡಿತಾ. ಏಕೆಂದರೆ, ಅದನ್ನು ನೋಡಿ ಈಗಾಗಲೇ ಲಕ್ಷಾಂತರ ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಸೋಜಿಗಪಟ್ಟಿದ್ದಾರೆ. ಯಾಕೆ ಗೊತ್ತಾ? ಅದರಲ್ಲಿ ಇರುವ ವ್ಯಕ್ತಿಗಳ ಚಹಾಪ್ರೇಮ ಯಾವ ಮಟ್ಟದ್ದೆಂದರೆ, ಅವರನ್ನು ಪೊಲೀಸರು ಬಂಧಿಸಿ, ಎಳೆದುಕೊಂಡು ಹೋಗುತ್ತಿದ್ದರೂ, ಕೈಯಲ್ಲಿರುವ ಚಹಾದ ಲೋಟವನ್ನು ಬಿಡಲು ತಯಾರಿರಲಿಲ್ಲ!


  ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ, ಇಬ್ಬರು ಪುರುಷರನ್ನು ಬಂಧಿಸುತ್ತಿರುವ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಆ ವಿಡಿಯೋದಲ್ಲಿ, ಪೊಲೀಸ್ ಬಂಧಿತನ ಕೈಯನ್ನು ಹಿಡಿದುಕೊಂಡಿದ್ದಾನೆ. ಆದರೆ ಬಂಧಿತನ ದೃಷ್ಟಿ ಮಾತ್ರ ತನ್ನ ಇನ್ನೊಂದು ಕೈಯಲ್ಲಿರುವ ಚಹಾದ ಲೋಟದ ಮೇಲಿದೆ. ತನ್ನ ಕೈಯಲ್ಲಿರುವ ಲೋಟದಲ್ಲಿನ ಚಹಾ ಎಲ್ಲಿ ಕೆಳಗೆ ಚೆಲ್ಲಿ ಬಿಡುತ್ತದೋ ಎಂಬ ಭಯದಿಂದ ಬಂಧಿತ ನಿಧಾನವಾಗಿ ನಡೆಯುವ ದೃಶ್ಯ ಅದರಲ್ಲಿದೆ. ಅವರ ಹಿಂದೆ ಮತ್ತೊಬ್ಬ ವ್ಯಕ್ತಿ ಕೂಡ ನಡೆದುಕೊಂಡು ಬರುತ್ತಿದ್ದಾನೆ. ಅವನೂ ಕೂಡ ತನ್ನ ಕೈಯಲ್ಲಿರುವ ಚಹಾ ಬೀಳದಂತೆ ಜಾಗರೂಕತೆಯಿಂದ ನಡೆಯುವುದನ್ನು ಕಾಣಬಹುದು.


  ये हम है, ये हमारी चाय है, बाक़ी बाद में देखेंगे 😎 pic.twitter.com/B0K1X9y5P4


  ಪೊಲೀಸರು ತುಂಬಾ ತಾಳ್ಮೆಯಿಂದ ಆತನನ್ನು ಪೊಲೀಸ್ ವಾಹನದ ಬಳಿ ಕರೆದುಕೊಂಡು ಹೋದರು. ಕೆಲ ಸಮಯದ ಹಿಂದೆ ವೈರಲ್ ಆಗಿದ್ದ, ಪಾಕಿಸ್ತಾನದ ದಾನನೀರ್ ಮುಬೀನಳ, “ಪಾವ್ರಿ ಹೋ ರಹಿ ಹೈ” ವಿಡಿಯೋವನ್ನು ಉಲ್ಲೇಖಿಸಿ, ಅಂಕಿತಾ ಶವರ್i ತಾವು ಪೋಸ್ಟ್ ಮಾಡಿದ ಆ ವಿಡಿಯೋಗೆ “ಯೇ ಹಮ್ ಹೇ, ಯೇ ಹಮಾರಿ ಚಾಯ್ ಹೇ, ಬಾಕಿ ಬಾದ್ ಮೆ ದೇಖೇಂಗೆ’ (ಇದು ನಾನು, ಇದು ನನ್ನ ಚಹಾ, ಬಾಕಿ ಎಲ್ಲವನ್ನು ಆಮೇಲೆ ನೋಡಿಕೊಂಡರಾಯಿತು) ಎಂಬ ಅಡಿಬರಹ ನೀಡಿದ್ದರು.


  “ಆ ಬಂಧಿತರ ಲೋಟಗಳನ್ನು ಎಸೆಯದೆ, ಅವರಿಗೆ ಚಹಾ ಕುಡಿಯಲು ಅವಕಾಶ ನೀಡಿದ ಪೊಲೀಸರ ವರ್ತನೆ ನನಗೆ ಇಷ್ಟವಾಯಿತು. ಎಷ್ಟು ಸಂವೇದನೆ” ಎಂದು ಅವರು ಬರೆದುಕೊಂಡಿದ್ದಾರೆ.


  ಟ್ವಿಟ್ಟರ್‌ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 1.21 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ ಮತ್ತು ಸುಮಾರು 12,000ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ.


  “ಜಾನ್ ಜಾಯೇ ಪರ್ ಚಾಯ್ ನ ಜಾಯೆ. .. (ಜೀವ ಹೋಗಲಿ, ಆದರೆ ಚಹಾ ಬೀಳದಿರಲಿ) . . ಈ ಚಹಾ ಪ್ರಿಯರಿಗೂ ಇನ್ನಷ್ಟು ಶಕ್ತಿ ಸಿಗಲಿ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು, “ಅಪ್ರತಿಮ ಚಹಾಪ್ರೇಮಿಗಳು” ಎಂದು ಬರೆದಿದ್ದಾರೆ.


  ಇನ್ನೊಬ್ಬರು , “ಇವರು ನಿಜವಾದ ಚಹಾ ಪ್ರೇಮಿಗಳು” ಎಂದಿದ್ದರೆ, ಮತ್ತೊಬ್ಬ ನೆಟ್ಟಿಗ, “ಯಾಕೆಂದರೆ ಚಹಾ ಎಂಬುದು ಪ್ರೀತಿ” ಎಂದು ಪ್ರತಿಕ್ರಿಯಿಸಿದ್ದಾರೆ.


  ಈಗ ಹೇಳಿ, ಅವರ ಈ ಚಹಾ ಪ್ರೇಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?
  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
  First published: