ಇದು ಬೆತ್ತಲೆ ಕಾಡು, ಮಹಿಳೆಯರಿಗೆ ಮಾತ್ರ ಪ್ರವೇಶ.. ಅಪ್ಪಿತಪ್ಪಿ ಪುರುಷರು ಪ್ರವೇಶಿಸಿದರೆ ಕತೆ ಅಷ್ಟೇ!

Nude forest: ಮೊದಲೇ ತಿಳಿಸಿದಂತೆ ಈ ಕಾಡಿನೊಳಕ್ಕೆ ಪ್ರವೇಶಿಸುವ ಮಹಿಳೆಯರು ಬಟ್ಟೆ ಧರಿಸುವಂತಿಲ್ಲ. ಇದು ಅಲ್ಲಿನ ಸಂಪ್ರದಾಯವಾಗಿದ್ದು, ತಲೆಮಾರುಗಳಿಂದ ನಡೆಯುತ್ತಾ ಬಂದಿದೆ.

Forest (Photo:Google)

Forest (Photo:Google)

 • Share this:
  ಮಹಿಳಾ ಸಬಲೀಕರಣದ ಬಗ್ಗೆ ವಿಶ್ವವ್ಯಾಪಿ ಚರ್ಚೆಯಲ್ಲಿದೆ. ಪುರುಷರು ವಿವಿಧ ಕ್ಷೇತ್ರದಲ್ಲಿ ಮಿಂಚಿದಂತೆ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ಅವರ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಆದರೆ ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಲಾಗುವುದಿಲ್ಲ. ಪಿತೃ ಪ್ರಧಾನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಕೊಂಚ ಭಯವಿದೆ. ಯಾವುದೇ ಕೆಲಸವನ್ನು ಮಾಡುವ ಮೊದಲು ತಂದೆ ಬಳಿ, ಗಂಡನ ಬಳಿ ಕೇಳಿಯೇ ಮುನ್ನಡೆಯುತ್ತಾರೆ. ಏನೇ ಆಗಲಿ.. ಮಹಿಳೆಯರಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಇಂಡೋನೇಷ್ಯಾದಲ್ಲೊಂದು ಪವಿತ್ರವಾದ ಅರಣ್ಯವಿದೆ. ಅಂದರೆ ಈ ಅರಣ್ಯದಲ್ಲಿ ಮಹಿಳೆಯರು ಮಾತ್ರ ವಾಸಿಸುತ್ತಾರೆ. ಪುರುಷರಿಗೆ ಇಲ್ಲಿ ನಿಷೇಧ ವಿಧಿಸಲಾಗಿದೆ.

  ಇಂಡೋನೇಷ್ಯಾದ ಪುಪುವಾ ಅರಣ್ಯವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಮಹಿಳೆಯರಿಗೆ ಇಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ. ಹಾಗಾಗಿ ಮಹಿಳೆಯರು ಇಲ್ಲಿ ಬೆತ್ತಲಾಗಿ ಓಡಾಡುತ್ತಾರೆ. ಪರುಷರಿಗೆ ಮಾತ್ರ ಈ ಕಾಡಿನೊಳಕ್ಕೆ ನೋ ಎಂಟ್ರಿ. ಅಪ್ಪಿ-ತಪ್ಪಿ ಹೋದರೆ ಕಠಿಣ ಶಿಕ್ಷೆ ನೀಡಲಾಗುತ್ತದೆ.

  ಪುಪುವಾ ಕಾಡನ್ನು ಮ್ಯಾಂಗ್ರೂವ್​ ಕಾಡು ಎಂದು ಕರೆಯಲಾಗುತ್ತದೆ. ಮೊದಲೇ ತಿಳಿಸಿದಂತೆ ಈ ಕಾಡಿನೊಳಕ್ಕೆ ಪ್ರವೇಶಿಸುವ ಮಹಿಳೆಯರು ಬಟ್ಟೆ ಧರಿಸುವಂತಿಲ್ಲ. ಇದು ಅಲ್ಲಿನ ಸಂಪ್ರದಾಯವಾಗಿದ್ದು, ತಲೆಮಾರುಗಳಿಂದ ನಡೆಯುತ್ತಾ ಬಂದಿದೆ.

  ಪುರುಷರು ಈ ಕಾಡಿನೊಳಕ್ಕೆ ಬಂದರೆ ಶಿಕ್ಷೆಯ ಜೊತೆಗೆ ದೊಡ್ಡ ಮೊತ್ತ ತಲೆದಂಡ ನೀಡಬೇಕು. ಯಾರಾದರು ಪುರುಷರು ಹಠಕ್ಕೆ ಬಿದ್ದು ಕಾಡಿನೊಳಕ್ಕೆ ಹೋಗಿ ಸಿಕ್ಕಿ ಬಿದ್ದರೆ ಅವರನ್ನು ಅಲ್ಲಿನ ಬುಡಕಷ್ಟು ಜನಾಂಗದವರ ಬಳಿ ಕರೆದುಕೊಂಡು ಹೋಗಲಾಗುತ್ತದೆ. ನಂತರ ನ್ಯಾಯ ನಿರ್ಣಯದ ಮೂಲಕ 5 ಸಾವಿರಕ್ಕಿಂತ ಹೆಚ್ಚಿನ ದಂಡವನ್ನು ಪಾವತಿಸಬೇಕು. ಇನ್ನು ದಂಡವನ್ನು ನಯವಾದ ಕಲ್ಲುಗಳ ರೂಪದಲ್ಲಿ ನೀಡಲಾಗುತ್ತಂತೆ.

  ಆಂಡಿಯ್ರಾನಾ ಮೆರೌಡ್ಜಿ ಎಂಬಾಕೆ ಪುಪುವಾ ಕಾಡಿನ ಬಗ್ಗೆ ಮಾತನಾಡಿದ್ದು, ಇದೊಂದು ಪವಿತ್ರ ಕಾಡು, ಹುಟ್ಟುವಾಗಿನಿಂದಲೂ ಈ ಕಾಡಿಗೆ ತೆರಳುವವರು ಬೆತ್ತಲಾಗಿ ಸಂಚರಿಸುವ ಸಂಪ್ರದಾಯವಿತ್ತು. ಇಲ್ಲಿ ವಾಸಿಸುವ ಮಹಿಳೆಯರು ವಿಶೇಷ ರೀತಿಯ ಸಮುದ್ರ ಚಿಪ್ಪುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ.

  ಆದರೀಗ ನಗರದ ಜನರಿಂದಾಗಿ ಅರಣ್ಯ ನಾಶವಾಗುತ್ತಿದೆ. ಮಾಲಿನ್ಯವು ಆಗುತ್ತಿದೆ. ಹಿಂದೆ 1-2 ಗಂಟೆಯಲ್ಲಿ ಮಸ್ಸೆಲ್​ಗಳನ್ನು ಹುಡುಕಬಹುದಾಗಿತ್ತು. ಆಧರೀಗ ನೀಡಿನಲ್ಲಿ ಗಂಟೆಗಟ್ಟಲೆ ಹುಡುಕಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರು ಪುಪುವಾ ಕಾಡಿನಲ್ಲಿರುವ ವಿಚಿತ್ರ ಸಂಪ್ರದಾಯ ಈಗಲೂ ಜೀವಂತವಾಗಿದೆ
  Published by:Harshith AS
  First published: