Divorce Case: ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ವಿಚ್ಛೇದನ ಕಾರಣ ಬಹಿರಂಗ

ಬಿಲ್ ಗೇಟ್ಸ್ ಜೊತೆ 27 ವರ್ಷಗಳ ದಾಂಪತ್ಯವನ್ನು ಮೇ 2021 ರಲ್ಲಿ ಕೊನೆಗೊಳಿಸಿಕೊಂಡಿದ್ದು ಯಾಕೆ ಎಂದು ಮೆಲಿಂಡಾ ಹೇಳಿದ್ದಾರೆ. ತಮ್ಮ ವಿಚ್ಛೇದನ ಬಗ್ಗೆ ಮೆಲಿಂಡಾ ಗೇಟ್ಸ್ ಮೊದಲ ಬಾರಿಗೆ ಮಾತನಾಡಿದ್ದಾರೆ.

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್

  • Share this:
    ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲ್ ಗೇಟ್ಸ್ (Bill Gates) ಅವರು ತಮ್ಮ ಪತ್ನಿ ಮೆಲಿಂಡಾ ಗೇಟ್ಸ್ (Melinda Gates) ಅವರೊಂದಿಗೆ 27 ವರ್ಷಗಳ ದಾಂಪತ್ಯವನ್ನು ಮೇ 2021 ರಲ್ಲಿ ಕೊನೆಗೊಳಿಸಿಕೊಂಡಿದ್ದಾರೆ. ಇದೀಗ ತಾವಿಬ್ಬರೂ ವಿಚ್ಛೇದನ (Divorce) ನೀಡಿದ್ದು ಯಾಕೆ ಎಂದು ಮೆಲಿಂಡಾ ಹೇಳಿದ್ದಾರೆ. ತಮ್ಮ ವಿಚ್ಛೇದನಕ್ಕೆ ಕಾರಣಗಳ ಏನು ಎಂಬ ಬಗ್ಗೆ ಮೆಲಿಂಡಾ ಗೇಟ್ಸ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಬಿಲ್ ಗೇಟ್ಸ್ ಅವರ ವಿವಾಹೇತರ ಸಂಬಂಧದ ಬಗ್ಗೆ ಮೆಲಿಂಡಾ ಗೇಟ್ಸ್ ಮಾತನಾಡಿದ್ದಾರೆ. ಮತ್ತು ಇದಕ್ಕಾಗಿ ಅವರು ಬಿಲ್ ಅವರನ್ನು ಕ್ಷಮಿಸಿದ್ದಾಗಿ ಹೇಳಿದ್ದಾರೆ. ಅದೇನೇ ಇದ್ದರೂ ತಾವಿಬ್ಬರೂ ದಂಪತಿಯಾಗಿ ತಮ್ಮ ಸಂಬಂಧ (Relationship) ಮುಂದುವರೆಸಲು ಏನೂ ಉಳಿದಿರಲಿಲ್ಲ ಎಂದು ಹೇಳಿದ್ದಾರೆ.

    ವಿಚ್ಛೇದನಕ್ಕೆ ಕಾರಣ ತಿಳಿಸಿದ ಮೆಲಿಂಡಾ

    ಮೆಲಿಂಡಾ ಗೇಟ್ಸ್ ಅವರು ಸಿಬಿಎಸ್ ನ್ಯೂಸ್‌ನ ಬೆಳಗಿನ ಶೋ 'ಸಿಬಿಎಸ್ ಮಾರ್ನಿಂಗ್' ನಲ್ಲಿ ಗೇಲ್ ಕಿಂಗ್‌ಗೆ ಸಂದರ್ಶನವನ್ನು ನೀಡಿದ್ದಾರೆ. ಇದರಲ್ಲಿ ಬಿಲ್ ಗೇಟ್ಸ್ ಅವರ ವಿವಾಹೇತರ ಸಂಬಂಧದ ಬಗ್ಗೆ ಅವರು ಹೇಳಿದ್ದಾರೆ. 'ನಾನು ಖಂಡಿತವಾಗಿಯೂ ಅವರನ್ನು ಕ್ಷಮಿಸುವುದರಲ್ಲಿ ನಂಬಿಕೆ ಹೊಂದಿದ್ದೇನೆ. ಹಾಗಾಗಿ ನಾವು ನಮ್ಮ ಸಂಬಂಧವನ್ನು ಮತ್ತೆ ಮೊದಲಿನಂತೆ ನಿಭಾಯಿಸುತ್ತೇವೆ ಎಂದು ಭಾವಿಸಿದ್ದೆ. ಆದರೆ ಅದು ಹಾಗಾಗಲಿಲ್ಲ” ಎಂದಿದ್ದಾರೆ.

    ಮೆಲಿಂಡಾ ವಿಚ್ಛೇದನ ಘೋಷಣೆ ಮಾಡಿದ ನಂತರ ಬಿಲ್ ಅವರ ವಕ್ತಾರರೊಬ್ಬರು ಬಿಲ್ ಗೇಟ್ಸ್ ಅವರು  20 ವರ್ಷದಿಂದ ಹೊಂದಿದ್ದ ವಿವಾಹೇತರ ಸಂಬಂಧ, ಅಕ್ರಮ ಸಂಬಂಧದ ಬಗ್ಗೆ ಮೆಲಿಂಡಾಗೆ ತಿಳಿಸಿದ್ದರು. ಬಿಲ್ ಗೇಟ್ಸ್, ಮೆಲಿಂಡಾ ಜೊತೆಗಿನ ವೈವಾಹಿಕ ಸಂಬಂಧದಲ್ಲಿ ಇರುವುದಕ್ಕಾಗಿಯೇ ಈ ರೀತಿ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ತಿಳಿಸಿದ್ದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಬಿಲ್‌ ಗೇಟ್ಸ್‌ - ಮೆಲಿಂಡಾ ಗೇಟ್ಸ್‌ ವಿಚ್ಛೇದನ; ಗೂಗಲ್‌ನಲ್ಲಿ ಮೈಕ್ರೋಸಾಫ್ಟ್‌ ಷೇರು ಬೆಲೆಯನ್ನು ಹುಡುಕಿದ ಭಾರತೀಯರು

    ಅಕ್ರಮ ಸಂಬಂಧವೇ ಕಾರಣವಾಯ್ತು

    'ನಾವು ವಿಚ್ಛೇದನ ನೀಡಲು ಇದು ಒಂದೇ ಕಾರಣ ಆಗಿರಲಿಲ್ಲ. ನಮ್ಮ ಸಂಬಂಧದಲ್ಲಿ ಏನೂ ಉಳಿದಿರಲಿಲ್ಲ ಮತ್ತು ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ನನಗೆ ಅರಿವಾಗುವ ಸಮಯ ಬಂದೊದಗಿತ್ತು. ನಂತರ ನಮ್ಮಿಬ್ಬರ ನಡುವೆ ಏನಾಯಿತು ಎಂದು ನನಗೆ ನಂಬಲು ಸಹ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

    ಮೆಲಿಂಡಾ ಅವರು ಬಿಲ್‌ನಿಂದ ಬೇರ್ಪಟ್ಟಾಗ, ಅವರು ಹಲವಾರು ದಿನಗಳವರೆಗೆ ತುಂಬಾ ಮಂಕಾಗಿದ್ದರು, ಅಳುತ್ತಿದ್ದರು ಎಂದು ಹೇಳಿದ್ದಾರೆ. ಮದುವೆ ಮುರಿದು ಬಿದ್ದಾಗ ತುಂಬಾ ಸಿಟ್ಟು ಮಾಡಿಕೊಂಡಿದ್ದು, ತಮ್ಮನ್ನು ತಾವು ಕಂಟ್ರೋಲ್ ನಲ್ಲಿ ಇರಿಸಿಕೊಳ್ಳಲಾಗದ ಹಲವು ಸಂದರ್ಭಗಳನ್ನು ಎದುರಿಸಿದ್ದಾಗಿ ಹೇಳಿದ್ದಾರೆ. 'ಇದು ನನ್ನ ಶೋಕದ ಸಮಯ. ನಿಮ್ಮ ಜೀವನದಲ್ಲಿ ಜೀವನಪುರ್ತಿ ಇರಬೇಕೆಂದು ಭಾವಿಸಿದ ವ್ಯಕ್ತಿ ದೂರವಾದಾಗ, ಸಂಬಂಧ ಕೊನೆಗೊಂಡಾಗ ತುಂಬಾ ದುಃಖವಾಗುತ್ತದೆ ಎಂದು ಹೇಳಿದ್ದಾರೆ.






    'ಈಗ ನಾನು ನೋವಿನಿಂದ ಹೊರಬಂದಿದ್ದೇನೆ '

    ಸಂಬಂಧ ಕೊನೆಗೊಂಡ ನಂತರ ಅತೀವ ದುಃಖದಲ್ಲಿದ್ದ ನಾನೀಗ ಆ ದುಃಖದಿಂದ ಹೊರಬಂದಿದ್ದೇನೆ. ಜೀವನದಲ್ಲಿ ಮುನ್ನಡೆಯುತ್ತಿದ್ದೇನೆ ಎಂದು ಮೆಲಿಂಡಾ ಹೇಳಿದ್ದಾರೆ. ಈಗ ಜೀವನದ ಇನ್ನೊಂದು ಬದಲಾವಣೆಯನ್ನು ಕಾಣಲು ಪ್ರಯತ್ನಿಸುತ್ತಿದ್ದು, ಈಗ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. 2022 ನೇ ವರ್ಷದಲ್ಲಿ ನನ್ನ ಜೀವನದಲ್ಲಿ ಮುಂದೆ ಏನಾಗಲಿದೆ ಎಂಬುದರ ಕುರಿತು ಅರಿಯಲು ನಾನು ತುಂಬಾ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

    ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಒಟ್ಟಿಗೆ ಕೆಲಸ

    ತಮ್ಮ ಸಂಬಂಧ ಕೊನೆಗೊಳಿಸುವ ಮೊದಲು ಸಾಕಷ್ಟು ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.  ತಮ್ಮ ಚಾರಿಟಬಲ್ ಫೌಂಡೇಶನ್ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: Bill Gates Divorce: 148 ಬಿಲಿಯನ್ ಡಾಲರ್ ಸಂಪತ್ತು ಹಂಚಿಕೊಳ್ಳಲಿದ್ದಾರೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್​ !

    'ಕಳೆದ 27 ವರ್ಷಗಳಲ್ಲಿ, ನಾವು ನಮ್ಮ ಮೂರು ಮಕ್ಕಳನ್ನು ಬೆಳೆಸಿದ್ದೇವೆ ಮತ್ತು ವಿಶ್ವದಾದ್ಯಂತ ಜನರು ಆರೋಗ್ಯಕರ ಮತ್ತು ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡುವ ಅದ್ಭುತ ಸಂಸ್ಥೆಯನ್ನು ನಿರ್ಮಿಸಿದ್ದೇವೆ. ಭವಿಷ್ಯದಲ್ಲಿಯೂ ನಾವು ಈ ಕಾರ್ಯಾಚರಣೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಆದರೆ ದಂಪತಿಯಾಗಿ ಒಟ್ಟಿಗೆ ನಮ್ಮ ಜೀವನವನ್ನು ಮುಂದುವರಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
    Published by:renukadariyannavar
    First published: