• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Mehndi Effects: ಕೈಗೆ ಮೆಹಂದಿ ಹಚ್ಚಿದ ನಿಮಿಷಗಳಲ್ಲೇ ಕುಸಿದು ಬಿದ್ದ ಬಾಲಕಿ, ಮದರಂಗಿ ಪ್ರಿಯರೇ ಹುಷಾರ್!

Mehndi Effects: ಕೈಗೆ ಮೆಹಂದಿ ಹಚ್ಚಿದ ನಿಮಿಷಗಳಲ್ಲೇ ಕುಸಿದು ಬಿದ್ದ ಬಾಲಕಿ, ಮದರಂಗಿ ಪ್ರಿಯರೇ ಹುಷಾರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೆಹಂದಿಯಂತಹ ಕೆಲವು ವಾಸನೆಗಳು ವಿಶೇಷವಾಗಿ ಅಪಸ್ಮಾರ(ಮೂರ್ಛೆ) ರೋಗಿಗಳನ್ನು ಹೆಚ್ಚು ರೋಗಗ್ರಸ್ತವಾಗಿಸಲು ಪ್ರಚೋದಿಸಬಹುದು. ಮೆಹಂದಿ ಮಾತ್ರವಲ್ಲ ಪೆಟ್ರೋಲ್, ಬ್ಲೀಚಿಂಗ್ ಪೌಡರ್​ ಅಥವಾ ಫೆವಿಕಲ್​ನಂತಹ ಅಂಟುಗಳ ವಾಸನೆಯು ಕೆಲವು ಜನರನ್ನು ರೋಗಗ್ರಸ್ತರನ್ನಾಗಿಸಬಹುದು. ಜನವರಿ 2023 ಆವೃತ್ತಿಯಲ್ಲಿ ಕ್ಲಿನಿಕಲ್ ನ್ಯೂರೋಫಿಸಿಯಾಲಜಿ ಪ್ರಕಟಿಸಿದ ವರದಿಯಲ್ಲಿ, ಒಂಬತ್ತು ವರ್ಷದ ಬಾಲಕಿಯೊಬ್ಬಳು ತನ್ನ ಕೈಗೆ ಹಚ್ಚಿದ ಮೆಹಂದಿಯ ವಾಸನೆಯಿಂದ ಅಪಸ್ಮಾರ ಅಥವಾ ಮೂರ್ಛೆ ರೋಗಕ್ಕೀಡಾಗಿದ್ದಳು ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

ಭಾರತೀಯ ಸಂಸ್ಕೃತಿಯಲ್ಲಿ (Indian Culture) ಮೆಹಂದಿ (Mehndi) ಅಥವಾ ಗೋರಂಟಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಬ್ಬ- ಹರಿದಿನ, ಮದುವೆಯಂತಹ (Marriage) ಶುಭ ಸಮಾರಂಭಗಳ ಮಹಿಳೆಯರು ತಮ್ಮ ಕೈಗಳನ್ನು ಸುಂದರವಾದ ಮೆಹಂದಿ ಹಾಕಿಕೊಳ್ಳುತ್ತಾರೆ. ತನ್ನದೇ ಆದ ಆಕರ್ಷಣೆಯನ್ನು ಹೊಂದಿರುವ ಮೆಹಂದಿ ಅನಾರೋಗ್ಯಕ್ಕೂ(Sick) ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿತ್ತಿವೆ. ಇದರ ವಾಸನೆಯು ಅಪಸ್ಮಾರ ಅಥವಾ ಮೂರ್ಛೆ ರೋಗ (Epileptic) ಇರುವ ಜನರನ್ನ ಮತ್ತಷ್ಟು ರೋಗಗ್ರಸ್ತರನ್ನಾಗಿಸಲು ಪ್ರಚೋದಿಸುತ್ತದೆ. ಇದಕ್ಕೆ ಕಾರಣವೆಂದರೆ ದೇಶದಲ್ಲಿ ಮೆಹಂದಿಯ ಜನಪ್ರಿಯತೆ ಮತ್ತು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ನೈಸರ್ಗಿಕ ಗೋರಂಟಿಯನ್ನು ಪ್ಯಾರಾ-ಫೆನೈಲೆನೆಡಿಯಮೈನ್ (Para-Phenylenediamine) ಎಂಬ ರಾಸಾಯನಿಕಗಳೊಂದಿಗೆ ಬೆರೆಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ರಾಸಾಯನಿಕ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ.


ಪಿಪಿಡಿ ರಾಸಾಯನಿಯಕವುಳ್ಳ ಮೆಹಂದಿಯನ್ನು ಬಳಸುವುದರಿಂದ ಚರ್ಮದ ಸಮಸ್ಯೆಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುವುದರ ಜೊತೆಗೆ, ದೀರ್ಘಕಾಲದ ಆಲಸ್ಯ, ಅನೋರೆಕ್ಸಿಯಾ ಮತ್ತು ಗ್ಯಾಸ್ಟ್ರೊ ಕರುಳಿನ ಅಡಚಣೆಗಳಂತಹ ಗಂಭೀರ ಕಾಯಿಲೆಗಳನ್ನು ಇದು ಪ್ರಚೋದಿಸಬಹುದು ಎಂದು ವರದಿಗಳು ಹೇಳುತ್ತಿವೆ.


ಮೂರ್ಛೆ ಹೋದ ಬಾಲಕಿ


ಮೆಹಂದಿಯಂತಹ ಕೆಲವು ವಾಸನೆಗಳು ವಿಶೇಷವಾಗಿ ಅಪಸ್ಮಾರ(ಮೂರ್ಛೆ) ರೋಗಿಗಳನ್ನು ಹೆಚ್ಚು ರೋಗಗ್ರಸ್ತವಾಗಿಸಲು ಪ್ರಚೋದಿಸಬಹುದು. ಮೆಹಂದಿ ಮಾತ್ರವಲ್ಲ ಪೆಟ್ರೋಲ್, ಬ್ಲೀಚಿಂಗ್ ಪೌಡರ್​ ಅಥವಾ ಫೆವಿಕಲ್​ನಂತಹ ಅಂಟುಗಳ ವಾಸನೆಯು ಕೆಲವು ಜನರನ್ನು ರೋಗಗ್ರಸ್ತರನ್ನಾಗಿಸಬಹುದು. ಜನವರಿ 2023 ಆವೃತ್ತಿಯಲ್ಲಿ ಕ್ಲಿನಿಕಲ್ ನ್ಯೂರೋಫಿಸಿಯಾಲಜಿ ಪ್ರಕಟಿಸಿದ ವರದಿಯಲ್ಲಿ, ಒಂಬತ್ತು ವರ್ಷದ ಬಾಲಕಿಯೊಬ್ಬಳು ತನ್ನ ಕೈಗೆ ಹಚ್ಚಿದ ಮೆಹಂದಿಯ ವಾಸನೆಯಿಂದ ಅಪಸ್ಮಾರ ಅಥವಾ ಮೂರ್ಛೆ ರೋಗಕ್ಕೀಡಾಗಿದ್ದಳು ಎಂದು ತಿಳಿದುಬಂದಿದೆ.


mehndi can made you sick do not forget these things while applying henna
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Symptoms Of Diabetes: ಡಯಾಬಿಟಿಸ್​ನ ಈ ಲಕ್ಷಣಗಳು ದೇಹಕ್ಕೆ ತುಂಬಾ ಅಪಾಯಕಾರಿ


ಅಪಸ್ಮಾರ ಅಥವಾ ಮೂರ್ಛೇ ರೋಗಕ್ಕೆ ಕಾರಣ ?


ಸಾಮಾನ್ಯವಾಗಿ, ಪ್ರಕಾಶಮಾನವಾದ ಬೆಳಕು, ಜೋರು ಧ್ವನಿ, ಮೆಹಂದಿಯಂತಹ ದೊಡ್ಡ ಪ್ರಮಾಣದ ವಾಸನೆ, ಕೆಲವು ಬಣ್ಣಗಳು ಹಾಗೂ ನಿದ್ರಾ ಹೀನತೆಯು ರೋಗಗಳನ್ನು ಪ್ರಚೋದಿಸುವ ವಿಷಯಗಳಾಗಿವೆ. ಇವುಗಳಿಂದ ಮೆದುಳಿನ ಹಾಲೆಗಳಿಂದ ಸೆಳತ ಕಾಣಿಸಿಕೊಳ್ಳುತ್ತದೆ. ಆರೋಗ್ಯವಂತ ವ್ಯಕ್ತಿಗಳ ಮೆದುಳಿನಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ಪ್ರಮಾಣದ ವಿದ್ಯುತ್ ತರಂಗಗಳು ಉತ್ಪಾದನೆಯಾಗುತ್ತವೆ. ಅವುಗಳಲ್ಲಿ ಏರುಪೇರಾದರೆ ಅಪಸ್ಮಾರ ಅಥವಾ ಮೂರ್ಛೆ ಉಂಟಾಗುತ್ತದೆ.  " ಸಾಮಾನ್ಯವಾಗಿ ಅಪಸ್ಮಾರ ರೋಗಿಗಳು ಒಂದು ನಿರ್ದಿಷ್ಟ ವಾಸನೆಯಿಂದ ರೋಗಗ್ರಸ್ತರಾಗುತ್ತಿದ್ದರೆ, ಅಂತಹ ರೋಗಿಗಳಿಗೆ ಆ ವಾಸನೆಯಿಂದ ದೂರ ಇರುವಂತೆ ಶಿಫಾರಸು ಮಾಡುತ್ತೇವೆ" ಎಂದು ಫರಿದಾಬಾದ್‌ನ ಮರೆಂಗೋ ಕ್ಯೂಆರ್‌ಜಿ ಆಸ್ಪತ್ರೆಯ ಹಿರಿಯ ಸಲಹೆಗಾರ ನರವಿಜ್ಞಾನಿ ಡಾ.ನಜೀಬ್ ಉರ್ ರೆಹಮಾನ್ ಹೇಳುತ್ತಾರೆ.




PPDಯಿಂದ ಉಂಟಾಗುವ ಪರಿಣಾಮಗಳು


ಟ್ಯೂಬ್​ಗಳು ಮತ್ತು ಕೋನ್​ಗಳ ರೂಪದಲ್ಲಿ ದೊರೆಯುವ ಕಪ್ಪು ಗೋರಂಟಿಯಲ್ಲಿ ಪ್ಯಾರಾ-ಫೆನೈಲೆನೆಡಿಯಮೈನ್ (PPD)ನೊಂದಿಗೆ ಬೆರೆಸಲಾಗಿರುತ್ತದೆ. ಇದನ್ನು ಬಳಸುವವವರ ಕೈಗಳಲ್ಲಿ ಡರ್ಮಟೈಟಿಸ್ (ತುರಿಕೆ) ಉಂಟಾಗಬಹುದು. ಇದು ನಂತರ ತೋಳುಗಳು, ಎದೆಯವರೆಗೂ ಹರಡುವ ಸಾಧ್ಯತೆ ಇರುತ್ತದೆ.


ಇಷ್ಟೇ ಅಲ್ಲದೆ ಪಿಪಿಡಿಯನ್ನು ಹೆಚ್ಚಾಗಿ ಬಳಸುವುದರಿಂದ ತೀವ್ರವಾದ ಕಣ್ಣಿನ ಉರಿ, ಕಣ್ಣೀರು ಬರುವುದು, ಅಸ್ತಮಾ, ಜಠರದುರಿತ, ಮೂತ್ರಪಿಂಡ ವೈಫಲ್ಯ, ತಲೆತಿರುಗುವಿಕೆ, ನಡುಕ, ಸೆಳೆತ ಮತ್ತು ಒಮ್ಮೊಮ್ಮೆ ಕೋಮಾಗೂ ಹೋಗಬಹುದು. ಜೊತೆಗೆ ದೀರ್ಘಕಾಲದ ಚರ್ಮದ ಕಾಯಿಲೆಗೆ ಕಾರಣವಾಗಬಹುದು. ಅನೋರೆಕ್ಸಿಯಾ, ಜಠರ-ಕರುಳಿನ ತೊಂದರೆಗಳು ಕಾಮಾಲೆ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯ ರೆಹಮಾನ್​ ತಿಳಿಸಿದ್ದಾರೆ.


ಲೂಪಸ್, ಆಸ್ತಮಾ, ಸ್ತನ, ಗರ್ಭಾಶಯ ಮತ್ತು ಗಾಳಿಗುಳ್ಳೆಯ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಈ ರಾಸಾಯನಕಿದಿಂದ ಬರಬಹುದಾದಾ ದೀರ್ಘಕಾಲೀನ ಪರಿಣಾಮವಾಗಿದೆ ಎಂದು ಅವರು ಹೇಳಿದ್ದಾರೆ.


ಮೆಹಂದಿಯನ್ನು ಹಾಕಿಕೊಳ್ಳುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ


- ಯಾವುದೇ ಗೋರಂಟಿ ಅಥವಾ ಮೆಹಂದಿ ಉತ್ಪನ್ನಗಳು ಅಥವಾ ಬಣ್ಣಗಳನ್ನು ಬಳಸುವ ಮೊದಲು ಪ್ಯಾಕೆಟ್ ಮೇಲಿನ ಅಂಶಗಳನ್ನು ಓದಲು ಮರೆಯದಿರಿ. ಇದರಿಂದ ಅದರಲ್ಲಿರುವ ರಾಸಾಯನಿಕ ವಸ್ತುಗಳ ಬಗ್ಗೆ ನೀವು ನಿಖರವಾದ ತಿಳಿದುಕೊಳ್ಳಬಹುದು.


- ಇದು ನೈಸರ್ಗಿಕ ಗೋರಂಟಿಯೇ ಎಂದು ತಿಳಿಯಲು ಪ್ರಾಡಕ್ಟ್​ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಗೋರಂಟಿ ಬಗ್ಗೆ ನಿಮಗೆ ಖಚಿತತೆ ಸಿಗದಿದ್ದರೆ ಅದನ್ನು ಬಳಸಬೇಡಿ


- ನೀವು ಈ ಹಿಂದೆಯೇ ಆ ಉತ್ಪನ್ನವನ್ನು ಬಳಸಿದ್ದರೂ ಸಹ ಪ್ರತಿ ಬಾರಿ ಅದನ್ನು ಪರೀಕ್ಷೆ ಮಾಡಿ ಖರೀದಿಸಿ


- ಮೆಹಂದಿಯ ಹೆಚ್ಚಿನ ಬಣ್ಣದಿಂದ ಪಡೆಯಲು ಕೊಠಡಿಯನ್ನು ಬಿಸಿಯಾಗಿಡುವ ಪ್ರಯತ್ನದಿಂದ ದೂರವಿರಿ. ಹೆಚ್ಚಿನ ಬಿಸಿಯಾದ ವಾತಾವರಣ ನಿಮಗೆ ತಲೆತಿರುಗುವಂತೆ ಮಾಡಬಹುದು ಮತ್ತು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು.

Published by:Rajesha M B
First published: