Tallest Dog: ವಿಶ್ವದ ಅತಿ ಎತ್ತರದ ನಾಯಿ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಜೀಯಸ್

ಅಮೇರಿಕಾದ ಜೀಯಸ್ ಎಂಬ ನಾಯಿಯನ್ನು ವಿಶ್ವದ ಅತಿ ಎತ್ತರದ ನಾಯಿ (ಗಂಡು) ಎಂದು ಗುರುತಿಸಲಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬುಧವಾರ ಎರಡು ವರ್ಷ ವಯಸ್ಸಿನ ಅಮೇರಿಕನ್ ಗ್ರೇಟ್ ಡೇನ್ ತಳಿಯ ಜೀಯಸ್ ಅನ್ನು ವಿಶ್ವದ ಅತಿ ಎತ್ತರದ ನಾಯಿ ಎಂದು ಘೋಷಿಸಿದೆ.

ವಿಶ್ವದ ಅತಿ ಎತ್ತರದ ನಾಯಿ

ವಿಶ್ವದ ಅತಿ ಎತ್ತರದ ನಾಯಿ

  • Share this:
ವಿಶ್ವದಲ್ಲಿ ಎತ್ತರದ ಮನುಷ್ಯ, ಎತ್ತರದ ಕುಟುಂಬ ಇರುವಂತೆ ಪ್ರಾಣಿಗಳೂ (Animals) ಈ ಹೆಗ್ಗಳಿಕೆಗೆ ಪಾತ್ರವಾಗಿವೆ. ಅವು ಸಹ ತಮ್ಮ ಎತ್ತರದಿಂದಲೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬುಕ್ ಸೇರಿವೆ. ಅಮೇರಿಕಾದ (America) ಜೀಯಸ್ (Zeus) ಎಂಬ ನಾಯಿಯನ್ನು ವಿಶ್ವದ ಅತಿ ಎತ್ತರದ ನಾಯಿ (ಗಂಡು) ಎಂದು ಗುರುತಿಸಲಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬುಧವಾರ ಎರಡು ವರ್ಷ ವಯಸ್ಸಿನ ಅಮೇರಿಕನ್ ಗ್ರೇಟ್ ಡೇನ್ ತಳಿಯ ಜೀಯಸ್ ಅನ್ನು ವಿಶ್ವದ ಅತಿ ಎತ್ತರದ ನಾಯಿ ಎಂದು ಘೋಷಿಸಿದೆ. 3 ಅಡಿ 5.18 ಇಂಚು (1.046 ಮೀಟರ್) ಎತ್ತರವಿರುವ ಜೀಯಸ್ ಅಸಾಮಾನ್ಯವಾದ ಎತ್ತರದ ನಾಯಿ.

ಜೀಯಸ್ ಅಮೆರಿಕದ ಟೆಕ್ಸಾಸ್‌ನಲ್ಲಿರುವ ಬೆಡ್‌ಫೋರ್ಡ್‌ನಲ್ಲಿ ಡೇವಿಸ್ ಕುಟುಂಬದೊಂದಿಗೆ ವಾಸಿಸುತ್ತಿದೆ. ಜೀಯಸ್ ಕೇವಲ ಎಂಟು ವಾರಗಳ ಮರಿಯಾಗಿದ್ದಾಗ ಬ್ರಿಟಾನಿ ಡೇವಿಸ್ ಅವರು ಇದನ್ನು ದತ್ತು ಪಡೆದು ಅದರ ಪಾಲನೆ, ಪೋಷಣೆ ಮಾಡುತ್ತಾ ಬಂದಿದ್ದಾರೆ. 2012 ರಲ್ಲಿ ಅತ್ಯಧಿಕ ಎತ್ತರ ನಾಯಿ ಎಂದು ಗ್ರೇಟ್ ಡೇನ್ ಜಾರ್ಜ್ ಹೆಸರು ಮಾಡಿತ್ತು.

ದತ್ತು ಪಡೆದಾಗ 8 ವಾರಗಳ ಪುಟ್ಟ ನಾಯಿಯಾಗಿತ್ತು

ತನ್ನ ನಾಯಿಮರಿ ಬಗ್ಗೆ ಮಾತಾಡುತ್ತಾ ಡೇವಿಸ್, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೇರಿರುವುದು ಖುಷಿಯಾಗಿದೆ, "ನಾವು ಅವನನ್ನು ದತ್ತು ಪಡೆದಾಗ ಕೇವಲ 8 ವಾರಗಳ ಮರಿಯಾಗಿದ್ದನು, ಈಗ ಜೀಯಸ್ ಬೆಳೆದಿದ್ದಾನೆ ಮತ್ತು ದೊಡ್ಡವನಾಗಿದ್ದಾನೆ. ಜೊತೆಗೆ ಅವನ ಪುಟ್ಟ ಪಾದಗಳು ಸಹ ದೊಡ್ಡ ಪಂಜಗಳಾಗಿವೆ” ಎಂದು ಹೇಳಿದರು.

ವಿಶ್ವದ ಅತಿ ಎತ್ತರದ ನಾಯಿ ಎಂಬ ಖ್ಯಾತಿ

ಜನರು ಜೀಯಸ್ ಅನ್ನು ನೋಡಿದಾಗಲೆಲ್ಲಾ, "ವಾಹ್, ಇದು ನಾನು ನೋಡಿದ ಅತ್ಯಂತ ಎತ್ತರದ ನಾಯಿ ಎಂದು ಹಲವಾರು ಜನ ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದರು. ಆದರೆ ಅದು ಈಗ ಅಕ್ಷರಶಃ ನಿಜವಾಗಿದೆ. ಜೀಯಸ್ ವಿಶ್ವದ ಅತಿ ಎತ್ತರದ ನಾಯಿ ಎಂಬ ಖ್ಯಾತಿ ಪಡೆದುಕೊಂಡಿದ್ದಾನೆ ಎಂದು ಜೀಯಸ್ ಮಾಲೀಕ ಡೇವಿಸ್ ತಿಳಿಸಿದರು.

ಕುದುರೆ ತರ ಇದೆ ಈ ನಾಯಿ

ನಾವು ಜೀಯಸ್ನನ್ನು ಹೊರಗಡೆ ಕರೆದುಕೊಂಡು ಹೋದಾಗ ವಾಹ್ ಇದು ಕುದುರೆ, ನಾನು ಇದರ ಮೇಲೆ ಸವಾರಿ ಮಾಡಬಹುದೇ ಎಂದು ಸಹ ಹಲವರು ಹೇಳಿದ್ದಾರೆ ಎಂದು ಡೇವಿಸ್ ಜೀಯಸ್ ಎತ್ತರದ ಬಗ್ಗೆಗಿನ ಜನರ ಪ್ರತಿಕ್ರಿಯೆಗಳ ಬಗ್ಗೆ ವಿವರಿಸಿದರು.

ಜನರು ಆರಂಭದಲ್ಲಿ ಜೀಯಸ್ ಎತ್ತರ ನೋಡಿ ಇದು ಅಪಾಯಕಾರಿ ನಾಯಿ ಎಂದು ಭಾವಿಸಿದ್ದರು. ಆದರೆ ಕಾಲಕ್ರಮೇಣ ಜೀಯಸ್ನ ಮುದ್ದಾಟ, ತುಂಟಾಟ, ಅವನ ಪ್ರೀತಿಗೆ ಮನಸೋತರು. ದೈತ್ಯ ನಾಯಿ ನೆರೆಹೊರೆಯಲ್ಲಿ ಪ್ರಸಿದ್ಧವಾಗಿದೆ ಮತ್ತು ಈಗ ಎಲ್ಲರೂ ಜೀಯಸ್ನನ್ನು ಇಷ್ಟ ಪಡುತ್ತಾರೆ ಮತ್ತು ಪ್ರೀತಿಸುತ್ತಾರೆ ಎಂದಿದ್ದಾರೆ. ಅವರ ಜನಪ್ರಿಯತೆಯ ಬಗ್ಗೆ ಮಾತನಾಡುತ್ತಾ, ಡೇವಿಸ್ ಹೇಳಿದರು, “ರೈತರ ಡಲ್ಲಾಸ್ ಫಾರ್ಮರ್ಸ್ ಮಾರುಕಟ್ಟೆಯಲ್ಲಿ ಜೀಯಸ್ ಬಹಳ ಪ್ರಸಿದ್ಧವಾಗಿದೆ. ಎಲ್ಲರಿಗೂ ಇವನ ಬಗ್ಗೆ ಗೊತ್ತು ಮತ್ತು ನಾಯಿಗೆ ಅಲ್ಲಿ ಪ್ರೀತಿ ಮತ್ತು ಹೆಚ್ಚಿನ ಸತ್ಕಾರ ಸಿಗುತ್ತದೆ ಎಂದಿದ್ದಾರೆ.

ಜೀಯಸ್ನನ್ನು ಹಂದಿ ಬೇಟೆ ಮಾಡಲು ಮೊದಲು ಕರೆತರಲಾಯಿತಾದರೂ, ಇವನು ಶಾಂತ ಸ್ವಭಾವದವನು, ಅವನು ಎಲ್ಲೂ ಹೋಗಲು ಇಷ್ಟಪಡುವುದದಿಲ್ಲ. ಜೀಯಸ್ ಮನುಷ್ಯರ ಜೊತೆ ಹೆಚ್ಚು ಬೆರೆಯುತ್ತಾನೆ. ನೆರೆಹೊರೆಯವರ ಜೊತೆ ಸುತ್ತಾಡುತ್ತಾ ತನ್ನ ದಿನಗಳನ್ನು ಕಳೆಯುತ್ತಾನೆ, ಅವನು ಕಿಟಕಿಯ ಬಳಿ ಮಲಗುತ್ತಾನೆ ಮತ್ತು ಸ್ಥಳೀಯ ರೈತರ ಮಾರುಕಟ್ಟೆಗಳಲ್ಲಿ ತಿರುಗುತ್ತಾನೆ ಎಂದು ಡೇವಿಸ್ ತಿಳಿಸಿದರು.

ಜೀಯಸ್ ತನ್ನ ವಾಸ ಸ್ಥಳವನ್ನು ಮೂರು ಚಿಕಣಿ ಆಸ್ಟ್ರೇಲಿಯನ್ ಶೆಫರ್ಡ್ಸ್ ಮತ್ತು ಬೆಕ್ಕಿನೊಂದಿಗೆ ಹಂಚಿಕೊಳ್ಳುತ್ತಾನೆ. ಅವನ ದೊಡ್ಡ ವಾಸ ಸ್ಥಳದ ಹೊರತಾಗಿಯೂ, ಅವನು ತನ್ನ ಚಿಕ್ಕ ಮುದ್ದಿನ ಒಡಹುಟ್ಟಿದವರ ಜೊತೆಗೆ ಇರಲು ಬಯಸುತ್ತಾನೆ ಎಂದಿದ್ದಾರೆ.

ಇದನ್ನೂ ಓದಿ: Successful Farmer: ಬರಡು ಭೂಮಿಯಲ್ಲಿ ಛಲ ಬಿಡದ ರೈತ! 10 ಕೋಟಿ ಲೀಟರ್ ಹಿಡಿಯುವ ಬಾವಿ, ಒಣಗಿದ್ದ ನೆಲದಲ್ಲಿ ಈಗ ತಿಳಿನೀರು

ಜೀಯಸ್ ಸಾಮಾನ್ಯವಾಗಿ ಖುಷಿಯಾಗಿ ಇರುತ್ತಾನೆ. ಆದರೆ ಕೆಲವೊಮ್ಮೆ ಇವನ ಎತ್ತರವೇ ಇವನಿಗೆ ತೊಂದರೆಯಾಗುತ್ತದೆ ಎಂದು ಡೇವಿಸ್ ಸಹೋದರಿ ಬ್ರಿಟಾನಿ ಹೇಳಿದರು. ಅಲ್ಲದೇ ದೊಡ್ಡ ಪ್ರಾಣಿ ಜೀಯಸ್ಗೆ ಆಹಾರ ನೀಡುವುದು ಸಹ ಕೆಲವು ಬಾರಿ ದುಬಾರಿಯಾಗುತ್ತದೆ ಎಂದು ಮತ್ತು ದೊಡ್ಡ ತಳಿ ನಾಯಿ ಹೊಂದಲು ಆಸಕ್ತಿ ಇರುವವರು ನಾಯಿಯ ಆಹಾರಕ್ಕಾಗಿ ಹಣವನ್ನು ಖರ್ಚು ಮಾಡಲು ಸಿದ್ಧರಾಗಬೇಕು ಎಂದು ಹೇಳಿದರು.
Published by:Divya D
First published: