ಮರದಿಂದ ತೆಗೆದ ಚಿತ್ರ ಈ ಪೊಟೋಗ್ರಾಫರ್​ ಜೀವನವನ್ನೇ ಬದಲಿಸಿತು


Updated:April 23, 2018, 4:47 PM IST
ಮರದಿಂದ ತೆಗೆದ ಚಿತ್ರ ಈ ಪೊಟೋಗ್ರಾಫರ್​ ಜೀವನವನ್ನೇ ಬದಲಿಸಿತು

Updated: April 23, 2018, 4:47 PM IST
ಕೊಟ್ಟಾಯಂ: ಕೋತಿಯ ಹಾಗೆ ಮರ ಏರಿ ನೂತನ ರೀತಿಯಲ್ಲಿ ದಂಪತಿ ಫೊಟೋ ತೆಗೆದು ವೈರಲ್​ ಆಗಿದ್ದ ಛಾಯಾಗ್ರಾಹಕ ಇದೀಗ ಕೇರಳಾದಲ್ಲಾ ಭಾರೀ ಬೇಡಿಕೆಯ ಫೊಟೋಗ್ರಾಫರ್​ಗಳಲ್ಲಿ ಒಬ್ಬರಾಗಿದ್ದಾರೆ.ಹೌದು! ಇತ್ತೀಚೆಗೆ ನವದಂಪತಿಯ ಸುಂದರವಾದ ಫೋಟೋ ಕ್ಲಿಕ್ಕಿಸಲು ವಿಷ್ಣು ವೈಟರಾಂಪ್​ ಮರದಲ್ಲಿ ನೇತಾಡಿದ್ದಾರೆ. ಈ ಫೋಟೋವನ್ನು ರೆಜೋಯ್​ ಬಿನ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಈ ಚಿತ್ರ ಹಾಗೂ ವೀಡಿಯೋ ವೈರಲ್ ಆಗಿದ್ದು, ಛಾಯಾಗ್ರಾಹಕನ ಕರ್ತವ್ಯ ನಿಷ್ಠೆ, ಶ್ರಮ ಮತ್ತು ಸಾಹಸವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.


Loading...

ವಿಷ್ಣು ’ವೈಟ್‌ರ‍್ಯಾಂಪ್’ ಎಂಬ ವೆಡ್ದಿಂಗ್ ಫೋಟೋಗ್ರಾಫರ್ ಗ್ರೂಪ್ ಸದಸ್ಯ. ಈ ಕುರಿತು ನ್ಯೂಸ್​ ಮಿನಿಟ್​ನೊಂದಿಗೆ ಮಾತನಾಡಿರುವ ವಿಷ್ಣು, ಮದುವೆ ಕಾರ್ಯಕ್ರಮ ಬಳಿಕ, ನಾವು ವರನ ಮನೆಯ ಹೊರಗೆ ಚಿತ್ರೀಕರಣ ಮಾಡುತ್ತಿದ್ದೆವು. ಈ ವೇಳೆ ಮರದ ಮೇಲಿಂದ ಒಂದೊಳ್ಳೆ ಚಿತ್ರ ತೆಗೆಯಬಹುದು ಎಂದು ಮರ ಹತ್ತಿದೆ. ಆದರೆ ಸರಿಯಾದ ಪ್ರೇಮ್​ ಸೆಟ್​ ಮಾಡಲು ಈ ರೀತಿ ಮಾಡಬೇಕಾಯಿತು ಎಂದು ಹೇಳಿದ್ದಾರೆ. 
First published:April 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ