Vande Bharat mission ಮೂಲಕ ಜೀವದ ಹಂಗು ತೊರೆದು ಭಾರತೀಯರ ರಕ್ಷಣೆಗೆ ನಿಂತ Pilot ಲಕ್ಷ್ಮೀ ಜೋಶಿ..!

ಲಕ್ಷ್ಮೀ ಜೋಶಿ ಮೊದಲ ಬಾರಿಗೆ ವಿಮಾನದಲ್ಲಿ ಕುಳಿತಾಗ ಕೇವಲ 8 ವರ್ಷ. ಪೈಲಟ್ ಆಗಬೇಕೆಂದು ಬಯಸಿದ್ದರು. ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡು ವಿಮಾನ ಹಾರಾಟ ಪ್ರಾರಂಭಿಸಿದ್ದಾರೆ.

ಲಕ್ಷ್ಮೀ ಜೋಶಿ

ಲಕ್ಷ್ಮೀ ಜೋಶಿ

  • Share this:

ಕೊರೊನಾ ವೈರಸ್ (Corona virus) ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಎಲ್ಲಾ ವಿಮಾನಗಳ (Airplanes) ಹಾರಾಟವನ್ನು ಸ್ಥಗಿತಗೊಳಿಸಿತ್ತು. ಹಾಗಾಗಿ ಕೆಲವು ಭಾರತೀಯರು ವಿದೇಶದಲ್ಲಿಯೇ ಉಳಿದುಬಿಟ್ಟಿದ್ದರು. ಪ್ರಯಾಣದ ನಿರ್ಬಂಧಗಳಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಮೇ 2020ರಲ್ಲಿ ವಂದೇ ಭಾರತ್ ಮಿಷನ್‌ ಅಡಿಯಲ್ಲಿ (Vande Bharat mission) ವಿಮಾನ ಹಾರಾಟವನ್ನು ಪ್ರಾರಂಭಿಸಿದ್ದರು. ಇದರಲ್ಲಿ ಸ್ವಯಂಸೇವಕರಗಿ ಕೆಲಸ ಮಾಡಿದ ಹಲವಾರು ಪೈಲಟ್‌ಗಳಲ್ಲಿ ಲಕ್ಷ್ಮೀ ಜೋಶಿ(Lakshmi Joshi) ಕೂಡ ಒಬ್ಬರು.


ವಿಮಾನ ಹಾರಿಸಿದ ಅನುಭವ
ಲಕ್ಷ್ಮೀ ಜೋಶಿ ಮೊದಲ ಬಾರಿಗೆ ವಿಮಾನದಲ್ಲಿ ಕುಳಿತಾಗ ಕೇವಲ 8 ವರ್ಷ. ಪೈಲಟ್ ಆಗಬೇಕೆಂದು ಬಯಸಿದ್ದರು. ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡು ವಿಮಾನ ಹಾರಾಟ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬ್ ಎಂಬುದರ ಜೊತೆ ಮಾತನಾಡಿದ ಲಕ್ಷ್ಮೀ ಜೋಶಿ, ಬಾಲ್ಯದ ಕನಸು, ಪೈಲಟ್ ತರಬೇತಿ, ಕೊರೋನಾ ಸಾಂಕ್ರಾಮಿಕ ಕಾಲದಲ್ಲಿ ಭಾರತೀಯರನ್ನು ಸ್ಥಳಾಂತರಿಸಲು ತಿಂಗಳಲ್ಲಿ 3 ಬಾರಿ ವಿಮಾನಗಳನ್ನು ಹಾರಿಸಿದ ಅನುಭವವನ್ನು ತೆರೆದಿಟ್ಟಿದ್ದಾರೆ.

ನನ್ನ ತಂದೆ ನನ್ನನ್ನು ಪೈಲಟ್ ಮಾಡುವ ಕಾರಣಕ್ಕೆ ಸಾಲ ಮಾಡಿದರು. ಸಾಲದ ಹಣವನ್ನು ನನ್ನ ಕೈಯಲ್ಲಿಟ್ಟು, ಹೋಗು ಮಗಳೇ, ಆಕಾಶವೇ ನಿನ್ನ ಮಿತಿ ಎಂದು ಹೇಳಿ ಪೈಲಟ್ ತರಬೇತಿಗೆ ನನ್ನನ್ನು ಕಳುಹಿಸಿಕೊಟ್ಟರು ಎಂದು ಅಪ್ಪನ ತ್ಯಾಗವನ್ನು ನೆನೆದರು.

ಇದನ್ನೂ ಓದಿ: ನಟಿ ಆಗಬೇಕು ಅಂದುಕೊಂಡಿರಲಿಲ್ಲವಂತೆ Disha Patani.. ಮತ್ತೆ ಹಾಟ್​ ಬೆಡಗಿ ಕನಸ್ಸು ಏನಾಗಿತ್ತು?

2 ವರ್ಷಗಳ ನಂತರ, ಅವಳು ತನ್ನ "ಹೃದಯ ಮತ್ತು ಆತ್ಮವನ್ನು ತರಬೇತಿಗೆ ಸೇರಿಸಿ ಪೈಲಟ್ ತರಬೇತಿ ಪೂರ್ಣಗೊಳಿಸಿ ತನ್ನ ಪೈಲಟ್ ಪರವಾನಗಿಯನ್ನು ಪಡೆದರು. ನನ್ನ ಕನಸುಗಳಿಗೆ ರೆಕ್ಕೆಗಳು ಸಿಕ್ಕಿದ್ದವು, ನಾನು ಭಾವಪರವಶನಾಗಿದ್ದೆ! ಶೀಘ್ರದಲ್ಲೇ, ನಾನು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿಕೊಂಡೆ ಎಂದು ನೆನಪಿಸಿಕೊಂಡರು. ನನ್ನ ತಂದೆ ಯಾವಾಗಲೂ ನನಗೆ ಸ್ಫೂರ್ತಿ. ಸಂಬಂಧಿಕರು ನನ್ನ ಬಗ್ಗೆ ವಿಚಾರಿಸಿದಾಗ ನನ್ನ ಮಗಳು ಆಕಾಶದಲ್ಲಿ ಹಾರುವುದಕ್ಕಾಗಿಯೇ ಜನಿಸಿದ್ದಾಳೆ ಎಂದು ಅಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ತಿಳಿಸಿದರು.

ವಂದೇ ಭಾರತ್ ಮಿಷನ್
ಕೆಲಸವನ್ನು ಪ್ರೀತಿಸುತ್ತಿದ್ದರೂ ತಮ್ಮ ವೃತ್ತಿಗಿಂತ ಹೆಚ್ಚಿನದನ್ನು ಮಾಡಲು ಬಯಸಿದ್ದೆ. ಆದ್ದರಿಂದ ಕೊರೋನಾ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ವಂದೇ ಭಾರತ್ ಮಿಷನ್ ಮೂಲಕ ಸಿಕ್ಕಿಬಿದ್ದ ಭಾರತೀಯರನ್ನು ರಕ್ಷಿಸಲು ಸ್ವಯಂಪ್ರೇರಿತರಾಗಿ ವಿದೇಶಕ್ಕೆ ತೆರಳಿದೆ. ಈ ನಿರ್ಧಾರಿಂದ ಪೋಷಕರು ಚಿಂತಾಕ್ರಾಂತರಾದರು. ಅವರಿಗೆ ಈ ಮಿಷನ್‌ನ ಮಹತ್ವವನ್ನು ವಿವರಿಸಿದ ಬಳಿಕ ಇಷ್ಟವಿಲ್ಲದ ಮನಸ್ಸಿನಿಂದ ಒಪ್ಪಿಕೊಂಡರು ಎಂದು ಲಕ್ಷ್ಮೀ ಜೋಶಿ ವಿವರಿಸಿದರು.


ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ನಾನು ಮೊದಲ ವಿಮಾನ ಹಾರಿಸಿದ್ದು ಚೀನಾದ ಶಾಂಘೈಗೆ. ಚೀನಾ ಕೋವಿಡ್‌ನ ಹಾಟ್ ಸ್ಪಾಟ್ ಆಗಿರುವುದರಿಂದ ಎಲ್ಲರೂ ತೊಂದರೆಗೀಡಾಗಿದ್ದಾರೆ ಎಂದು ತಿಳಿದಿತ್ತು. ಆ ವಿಮಾನ ಹಾರಾಟವನ್ನು ತಾನು ಎಂದಿಗೂ ಮರೆಯುವುದಿಲ್ಲ. ಅಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ಮರಳಿ ಕರೆತರುವುದು ನಮ್ಮ ಗುರಿಯಾಗಿತ್ತು. ನಾವೆಲ್ಲರೂ ಹಾರಾಟದ ಸಮಯದಲ್ಲಿ ಹಜ್ಮತ್ ಸೂಟ್‌ಗಳನ್ನು ಧರಿಸಿದ್ದೆವು, ನಾನು ಅದನ್ನು ಧರಿಸಿ ವಿಮಾನವನ್ನು ಹಾರಿಸಿದೆ" ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟರು.

3 ರಕ್ಷಣಾ ವಿಮಾನ
ಅಂತಿಮವಾಗಿ ಭಾರತಕ್ಕೆ ಬಂದಿಳಿದಾಗ, ಪ್ರಯಾಣಿಕರು ಸಿಬ್ಬಂದಿಗೆ ನಿಂತು ಚಪ್ಪಾಳೆ ತಟ್ಟಿದರು. ಒಂದು ಪುಟ್ಟ ಹುಡುಗಿ ನನ್ನ ಬಳಿಗೆ ಬಂದು ನಾನು ನಿನ್ನಂತೆಯೇ ಆಗಬೇಕೆಂದು ಬಯಸುತ್ತೇನೆ..! ಎಂದು ಹೇಳಿದಳು. ಆಗ ನನಗೆ ಅಪ್ಪ ಹೇಳಿದ್ದನ್ನೇ ನಾನು ಆಕೆಗೆ ಹೇಳಿದೆ ಎಂದು ಅಪ್ಪನ ಮಾತುಗಳನ್ನು ನೆನೆದರು. ಲಕ್ಷ್ಮೀ ಜೋಶಿ ತಿಂಗಳಿಗೆ 3 ರಕ್ಷಣಾ ವಿಮಾನಗಳನ್ನು ಹಾರಿಸಿದರು.

ವಿಮಾನಗಳು ದೀರ್ಘವಾಗಿದ್ದವು ಮತ್ತು ಹಜ್ಮತ್ ಸೂಟ್ ಧರಿಸಿ ಅದನ್ನು ಚಲಾಯಿಸುವುದು ಕಠಿಣವಾಗಿತ್ತು. ಆದರೆ ಸಿಕ್ಕಿಹಾಕಿಕೊಂಡ ಭಾರತೀಯರ ಆಲೋಚನೆಯು ತನ್ನನ್ನು ತುಂಬಾ ಧೈರ್ಯದಿಂದ ವಿಮಾನ ಹಾರಿಸಲು ಪ್ರೇರಣೆ ನೀಡಿತು. ಒಮ್ಮೆ, ನಾನು ಭಾರತಕ್ಕೆ ವೈದ್ಯಕೀಯ ಸಹಾಯವನ್ನು ತರಲು ತೆರಳಿದ್ದೆ. ಅಲ್ಲಿ ವಿಮಾನ ಪ್ರಯಾಣಿಕರ ಬದಲಿಗೆ, ನಾವು ನೂರಾರು ರಟ್ಟಿನ ಪೆಟ್ಟಿಗೆಗಳೊಂದಿಗೆ ತೆಗೆದುಕೊಂಡು ಬಂದೆ ಎಂದು ಹೇಳಿದರು.

ಇದನ್ನೂ ಓದಿ: Viral News: ವಿಮಾನ ಹಾರಾಟದ ಸಮಯದಲ್ಲಿ ಪೈಲಟ್‌ಗಳಿಂದ ಹೆಚ್ಚಾದ ತಪ್ಪುಗಳು: ಎಲ್ಲದಕ್ಕೂ ಕಾರಣ ಕೊರೊನಾ..!

ನನ್ನ ಬಗ್ಗೆ ಹೆಮ್ಮೆ
ಕೊರೋನಾ ವೈರಸ್‌ನ ಮೂರನೇ ಅಲೆ ಜಗತ್ತಿನಾದ್ಯಂತ ಪ್ರಾರಂಭವಾಗಿದೆ. ಆದರೆ ವಂದೇ ಭಾರತ್ ಮಿಷನ್ ಇನ್ನೂ ಸಾಕಷ್ಟು ಸಕ್ರಿಯವಾಗಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಶೀಘ್ರದಲ್ಲೇ ನೆವಾರ್ಕ್‌ಗೆ ಹಾರಲಿದ್ದೇನೆ ಎಂದು ಜೋಶಿ ಹೇಳಿದರು. ಅಪ್ಪ ಈಗ ನನ್ನ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಹೇಳುವ ಜೋಶಿ, ಅಪ್ಪ ನನ್ನ ಬಳಿ ನಾನು ನಿಮಗೆ ಆಕಾಶದ ಮಿತಿಯನ್ನು ಹೇಳುತ್ತಿದ್ದೆ. ಆದರೆ ನೀವು ಅದನ್ನು ಅಳೆಯುತ್ತಿದ್ದೀರಿ! ಹಾರುತ್ತಿರಿ!' ಮತ್ತು ಅದನ್ನೇ ನಾನು ಮಾಡಲಿದ್ದೇನೆ. ಹಾರುತ್ತಲೇ ಇರಿ! ಎಂದು ಹೇಳಿದರು.

ಜೋಶಿ ಅವರ ಸ್ವಯಂಗಾಥೆ ಸಾಕಷ್ಟು ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಖಂಡಿತವಾಗಿಯೂ ಅದ್ಭುತವಾದ ಕಥೆ! ಹಾರುತ್ತಲೇ ಇರಿ ಮತ್ತು ಮೇಲೇರುತ್ತಾ ಇರಿ! ನಿಮ್ಮ ಬಗ್ಗೆ ಅಪಾರ ಗೌರವ! ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಎಲ್ಲರೂ ಭಯ ಮತ್ತು ಸಂಕಟದಲ್ಲಿ ಮುಳುಗಿರುವ ಸಮಯದಲ್ಲೂ ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು.. ನೀವು ಸ್ಪೂರ್ತಿ" ಎಂದು ಮತ್ತೊಬ್ಬರು ಹೇಳಿದರು.
Published by:vanithasanjevani vanithasanjevani
First published: