Paul Alexander: ಮ್ಯಾನ್ ವಿತ್ ಐರನ್ ಲಂಗ್ಸ್: 70 ವರ್ಷ ಯಂತ್ರದ ಮೂಲಕವೇ ಜೀವನ, ಆದರೂ ಧೈರ್ಯ ಕಳೆದುಳ್ಳಲಿಲ್ಲ!

ಸಾವನ್ನೇ ಗೆದ್ದಿರುವ ಪೌಲ್ ಅಲೆಕ್ಸಾಂಡರ್‌ನ ಜೀವನದ ಘಟನೆ ನಮಗೆ ಸ್ಫೂರ್ತಿದಾಯಕವಾಗಿದೆ. 1952ರಲ್ಲಿ ಅವರಿಗೆ ಬಾಲ್ಯದಲ್ಲೇ ಪ್ಯಾರಾಲಿಟಿಕ್ ಪೊಲಿಯೋ ಮೈಲೆಟಿನ್ ಎಂಬ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತದೆ. ಇದಲ್ಲದೇ ಆ ವರ್ಷ 60,000ಕ್ಕೂ ಅಧಿಕ ಮಕ್ಕಳಿಗೆ ಈ ವೈರಲ್ ರೋಗ ಕಾಣಿಸಿಕೊಂಡಿತ್ತು. ಇದರ ಪರಿಣಾಮವಾಗಿ ಸುಮಾರು 3000 ಜನ ಸತ್ತಿದ್ದರು

ಸಾವನ್ನೇ ಗೆದ್ದಿರುವ ಪೌಲ್ ಅಲೆಕ್ಸಾಂಡರ್‌

ಸಾವನ್ನೇ ಗೆದ್ದಿರುವ ಪೌಲ್ ಅಲೆಕ್ಸಾಂಡರ್‌

 • Share this:
  ನಮಗೆ ಸ್ವಾಭಾವಿಕವಾಗಿ ಉಸಿರಾಡಲು ತೊಂದರೆಯಾದಾಗ ಅದು ಭೀಕರ ಎನಿಸುತ್ತದೆ. ಇನ್ನೇನು ಸಾವೇ ನಮ್ಮ ಎದುರು ಬಂದು ಕದ ತಟ್ಟಿದಂತೆ ಭಾಸವಾಗುತ್ತದೆ. ಇಂತಹದರಲ್ಲಿ ಸಾವನ್ನೇ ಗೆದ್ದಿರುವ ಪೌಲ್ ಅಲೆಕ್ಸಾಂಡರ್‌ನ (Paul Alexander) ಜೀವನದ ಘಟನೆ ನಮಗೆ ಸ್ಫೂರ್ತಿದಾಯಕವಾಗಿದೆ. 1952ರಲ್ಲಿ ಅವರಿಗೆ ಬಾಲ್ಯದಲ್ಲೇ ಪ್ಯಾರಾಲಿಟಿಕ್ ಪೋಲಿಯೋ (Paralytic Polio) ಮೈಲೆಟಿನ್ ಎಂಬ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತದೆ. ಇದಲ್ಲದೇ ಆ ವರ್ಷ 60,000ಕ್ಕೂ ಅಧಿಕ ಮಕ್ಕಳಿಗೆ ಈ ವೈರಲ್ ರೋಗ ಕಾಣಿಸಿಕೊಂಡಿತ್ತು. ಇದರ ಪರಿಣಾಮವಾಗಿ ಸುಮಾರು 3000 ಜನ ಸತ್ತಿದ್ದರು, ಬದುಕುಳಿದವರು ಅಂಗವೈಕ್ಯಲ್ಯ ಬಳಲುವ ಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಸ್ವಿಮ್ಮಿಂಗ್ ಪೂಲ್, ಹೋಟೆಲ್, ಮಾಲ್‌ಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂದ್ ಮಾಡಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ, ಬೀದಿಬದಿಗಳಲ್ಲಿ ಕೀಟನಾಶಕಗಳನ್ನು, ಡಿ.ಡಿ.ಟಿಯಂತಹ ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಯಿತು. ಇತ್ತೀಚೆಗೆ ಉಂಟಾದ ಕೋವಿಡ್‌ನಂತೆ 1950-60ರ ದಶಕದಲ್ಲಿ ಈ ವಾತಾವರಣ ಉಂಟಾಗಿತ್ತು. ಈ ಸಾಂಕ್ರಾಮಿಕ ರೋಗ ಕೆಲವರು ಟೆಲಿಫೋನ್ ವೈರ್ ಮೂಲಕ ಹಬ್ಬುತ್ತದೆ ಎಂದು ಟೆಲಿಫೋನನ್ನೆ ಬಂದ್ ಮಾಡಲಾಗಿತ್ತು.

  ಇದನ್ನೂ ಓದಿ: ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ! ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಉದ್ಯಮಿಯ ಉದ್ದೇಶ

  ಶ್ವಾಸಕೋಶವೇ ದುರ್ಬಲಗೊಳಿಸಿದ ವೈರಸ್

  ಪೌಲ್ ಎಂದಿನಂತೆ ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಆತನಿಗೆ ವಿಪರೀತ ಕತ್ತು ನೋವಿನ ಜೊತೆ ತನ್ನ ದೇಹವನ್ನೇ ಅಲುಗಾಡಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿತ್ತು. ಕ್ರಮೇಣ ಉಸಿರಾಡಲು ಕಷ್ಟವಾಗತೊಡಗಿತ್ತು. ವೈರಸ್‌ನ ಪ್ರಭಾವ ಆತನ ಶ್ವಾಸಕೋಶವೇ ದುರ್ಬಲಗೊಂಡಿತ್ತು. ಇದಕ್ಕೆ ಪರ್ಯಾಯವಾಗಿ ಐರನ್ ಲಂಗ್ ಎಂದು ಕರೆಯಿಸಿಕೊಳ್ಳುವ ಸಾಧನದೊಂದಿಗೆ ಇರಿಸಲಾಯಿತು. ಈ ಸಾಧನ ರೋಗಿಗೆ ಕೃತಕ ಒತ್ತಡ ಉಂಟು ಮಾಡಿ ಉಸಿರಾಡುವಂತೆ ಮಾಡುತಿತ್ತು. ಇದನ್ನೆಲ್ಲಾ ಗಮನಿಸುತ್ತಿದ್ದ ಪೌಲ್ ತನ್ನ ಸುತ್ತಲೂ ಅಸಹಾಯಕತೆಯಿಂದ ಆ ಸಾಧನದೊಳಗೆ ಮಲಗಿದ್ದ ನೂರಾರು ಮಕ್ಕಳು ದಿನನಿತ್ಯ ಸಾಯುವುದನ್ನು ನೋಡಿ ತಾನು ಯಾವಾಗ ಬೇಕಾದರೂ ಸಾಯಬಹುದು ಎಂದು ಯೋಚಿಸುತ್ತಿದ್ದ .

  ಸಾವನ್ನೇ ಗೆದ್ದಿರುವ ಪೌಲ್ ಅಲೆಕ್ಸಾಂಡರ್‌


  ಉಸಿರು ಬಿಗಿ ಹಿಡಿಯುವ ಕಲೆ ಕಲಿತ

  ಆದರೆ ಆತನ ಚಿಕಿತ್ಸಾ ಅವಧಿ ಮೀರಿದರೂ ಗುಣಮುಖನಾಗದೇ ಅದೇ ಯಂತ್ರದಲ್ಲಿ ಬಂಧಿಯಾಗುವಂತಾಗಿತ್ತು. ಇದೆಲ್ಲದರ ನಡುವೆಯೆ ಪೌಲ್ ಆಸ್ಪತ್ರೆಯಿಂದ ಮನೆಗೆ ಶಿಫ್ಟ್ ಆಗುತ್ತಾನೆ. ಈಗ ಆತನ ಸಂಪೂರ್ಣ ಹೊಣೆಗಾರಿಕೆ ಪೋಷಕರದ್ದಾಗಿತ್ತು. ಕೆಲವೊಮ್ಮೆ ಐರನ್ ಲಂಗ್ಸ್ ಗೆ ಪವರ್ ಕಟ್ ಆದಂತಹ ಸಂದರ್ಭದಲ್ಲಿ ಮಾನವ ಚಾಲಿತವಾಗಿ ಆ ಸಾಧನವನ್ನು ನಿರ್ವಹಿಸಿ ಆಮ್ಲಜನಕವನ್ನು ಪೂರೈಸಬೇಕಿತ್ತು. ಇದೆಲ್ಲದರ ಹೊರತಾಗಿ ಪೌಲ್ ಉಸಿರು ಬಿಗಿದು ಹಿಡಿಯುವ ಕಲೆಯನ್ನು ಕಲಿತಿದ್ದ.

  ಫ್ರಾಗ್​ ಬ್ರೀತಿಂಗ್ ಅಭ್ಯಾಸ

  ಈ ನಡುವೆ ಆತನಿಗೆ ಉತ್ತಮ ಜ್ಞಾನಾರ್ಜನೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇದ್ದದ್ದು ಮೆಚ್ಚಲೇಬೇಕು. ಕಲಿಕೆಯ ಜೊತೆ ಜ್ಞಾನ ಹಾಗೂ ತಿಳುವಳಿಕೆಗಳು ನಮ್ಮನ್ನು ಯಶಸ್ವಿಗೊಳಿಸುತ್ತವೆ ಎಂದು ತಿಳಿದಿದ್ದ ಪೌಲ್ ಓದಲು ಅಭ್ಯಾಸ ಮಾಡಿದ . 10ನೇ ತರಗತಿಯನ್ನು ಪೂರ್ಣಗೊಳಿಸಿದ , ಇದರ ಜೊತೆ ಆತ ಇನ್ನು ಹೆಚ್ಚು ಕಾಲ ಬದುಕಬೇಕೆಂಬ ಆಸೆಯಿಂದ ಫ್ರಾಗ್ ಬ್ರೀತಿಂಗ್ ಕೂಡ ಅಭ್ಯಾಸ ಮಾಡಿದ್ದ. ಇದಾದ ನಂತರ ಲಾ ಓದಬೇಕೆಂದು ಆಸೆ ಹೊತ್ತ ಈತ ಕಾನೂನು ಶಾಸ್ತ್ರದಲ್ಲಿ ಪರಿಣತಿ ಹೊಂದಿ ತನ್ನ ಮೊದಲ ಕೇಸ್ ಅನ್ನು ಜಯಿಸಿದ . ಕ್ಲಾರೆ ಎಂಬಾಕೆಯನ್ನು ವಿವಾಹವಾಗುತ್ತಾನಾದರೂ, ಆಕೆ ತಾನು ಈತನಿಗೆ ಜೀವನ ಪೂರ್ತಿ ನರ್ಸ್ ಆಗಿಯೇ ಜೀವನ ಸಾಗಿಸಬೇಕೆಂದು ವಿಚ್ಚೇದನ ನೀಡುತ್ತಾಳೆ. ಹೀಗಿದ್ದರೂ ಪೌಲ್​ ಜೀವನವಿಡೀ ಯಂತ್ರದೊಂದಿಗೆ ಕಳೆಯುತ್ತಾ ಇನ್ನೂ ಜೀವಂತವಾಗಿದ್ದಾನೆ .

  ಇದನ್ನೂ ಓದಿ: ಮದುವೆ ಮತ್ತು ಮಾನವೀಯತೆ; ಉಡುಪಿಯಲ್ಲಿ ಕಾಲಿಲ್ಲದ ಯುವತಿಯ ವರಿಸಿದ ದುಬೈನ ಉದ್ಯೋಗಿ

  ಸಣ್ಣ ಸಣ್ಣ ನಿರ್ಧಾರಗಳಿಗೂ ಆತ್ಮಹತ್ಯೆಯಂತಹ ದಾರಿ ಹಿಡಿಯುವ ಜನರಿಗೆ ಅಸಾಧ್ಯವಾದ ಹೋರಾಟದ ಬದುಕನ್ನು ಪೌಲ್ ಹೀಗೂ ಬದುಕಿ ಬಾಳಬಹುದೆಂದು ತೋರಿಸಿಕೊಟ್ಟಿದ್ದಾನೆ .

  -ರಂಜಿತ್ ಕುಮಾರ್ ಕೆ ಎಸ್| ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
  Published by:Precilla Olivia Dias
  First published: