World Tour: ಅಂಗಡಿ ಆದಾಯದಿಂದಲೇ ವಿದೇಶ ಪ್ರವಾಸ ಮಾಡಿದ ಮಹಿಳೆ; ಹೇಗಿತ್ತು ಇವರ ಜರ್ನಿ?

ಕೇರಳದ ಮೋಲಿ ಜಾಯ್ ಕಥೆಯೂ ಹೀಗೆ, ಶಾಲಾ ದಿನಗಳಲ್ಲಿ ಒಮ್ಮೆಯೂ ಪ್ರವಾಸ ಹೋಗಿರದಿದ್ದ ಮೋಲಿ, ತನ್ನ ಮಧ್ಯ ವಯಸ್ಸು ದಾಟಿದ ಮೇಲೆ, ಅಂದರೆ ಕಳೆದ 10 ವರ್ಷಗಳಲ್ಲಿ ಸುಮಾರು 11 ದೇಶಗಳನ್ನು ಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಮೋಲಿಯವರೇನು ಲಕ್ಷಾಧಿಪತಿಯಲ್ಲ, ಮನೆಗೆ ಹತ್ತಿರದಲ್ಲೇ ಸಾಧಾರಣ ದಿನಸಿ ಅಂಗಡಿ ನಡೆಸುತ್ತಿರುವ ಮಹಿಳೆ ಆಕೆ.

ಮೋಲಿ ಜಾಯ್

ಮೋಲಿ ಜಾಯ್

  • Share this:
ನಮ್ಮಲ್ಲಿ ಬಹಳಷ್ಟು ಮಂದಿಗೆ ದೇಶವಿದೇಶಗಳನ್ನು ಸುತ್ತುವ ಆಸೆ ಇರುತ್ತದೆ. ಆದರೆ ಅದನ್ನು ಈಡೇರಿಸಿಕೊಳ್ಳಲು ದುಡ್ಡಿದ್ದರೆ (Money) ಧೈರ್ಯ ಇರುವುದಿಲ್ಲ, ಧೈರ್ಯವಿದ್ದರೆ ದುಡ್ಡಿರುವುದಿಲ್ಲ. ಎರಡೂ ಇದ್ದರೂ ಕೆಲವೊಮ್ಮೆ ಅದನ್ನು ಈಡೇರಿಸಿಕೊಳ್ಳಲು ಕಾಲ ಕೂಡಿ ಬಂದಿರುವುದಿಲ್ಲ. ಕೇರಳದ (Kerala) ಮೋಲಿ ಜಾಯ್ (Molly Joy) ಕಥೆಯೂ ಹೀಗೆ, ಶಾಲಾ ದಿನಗಳಲ್ಲಿ ಒಮ್ಮೆಯೂ ಪ್ರವಾಸ (Tour) ಹೋಗಿರದಿದ್ದ ಮೋಲಿ, ತನ್ನ ಮಧ್ಯ ವಯಸ್ಸು ದಾಟಿದ ಮೇಲೆ, ಅಂದರೆ ಕಳೆದ 10 ವರ್ಷಗಳಲ್ಲಿ ಸುಮಾರು 11 ದೇಶಗಳನ್ನು ಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಮೋಲಿಯವರೇನು ಲಕ್ಷಾಧಿಪತಿಯಲ್ಲ, ಮನೆಗೆ ಹತ್ತಿರದಲ್ಲೇ ಸಾಧಾರಣ ದಿನಸಿ ಅಂಗಡಿ ನಡೆಸುತ್ತಿರುವ ಮಹಿಳೆ (Women) ಆಕೆ.

ಅಂಗಡಿ ಆದಾಯದಿಂದ ವಿದೇಶ ಪ್ರವಾಸ ಮಾಡಿದ ಮಹಿಳೆ
ಅಂಗಡಿಯ ಆದಾಯವನ್ನು ಅವರು ತನ್ನ ವಿದೇಶ ಪ್ರವಾಸಗಳಿಗಾಗಿ ಮೀಸಲಿಟ್ಟಿದ್ದಾರೆ . ಎರ್ನಾಕುಲಂ ಜಿಲ್ಲೆಯ ಇರುಂಪನಮ್‍ನ ಚಿತ್ರಾಪುಳದವರಾದ ಮೋಲಿ, ಇದುವರೆಗೆ ವಿದೇಶ ಪ್ರವಾಸಗಳಿಗಾಗಿ ಸುಮಾರು 10 ಲಕ್ಷ ರೂಗಳನ್ನು ಖರ್ಚು ಮಾಡಿದ್ದಾರಂತೆ. “ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ ನನ್ನನ್ನು ಪ್ರವಾಸಗಳಿಗೆ ಕಳುಹಿಸಲು ಹೆತ್ತವರ ಬಳಿ ಹಣ ಇರುತ್ತಿರಲಿಲ್ಲ. ಹಾಗಂತ, ಈಗ ನನ್ನ ಬಳಿ ತುಂಬಾ ಹಣವಿದೆ ಎಂದಲ್ಲ. ಆದರೆ ಜಗತ್ತನ್ನು ನೋಡಬೇಕು ಮತ್ತು ಪ್ರವಾಸ ಮಾಡಬೇಕು ಎಂಬ ನನ್ನ ತೀವ್ರವಾದ ಬಯಕೆ ಹೇಗೂ ಹಣವನ್ನು ಹೊಂದಿಸುವಂತೆ ಮಾಡಿದೆ” ಎನ್ನುತ್ತಾರೆ ಅವರು.

ಮೋಲಿ ಅವರ ಪತಿ ಜಾಯ್ ಅವರು ಸುಮಾರು 26 ವರ್ಷಗಳ ಹಿಂದೆ ದಿನಸಿ ಅಂಗಡಿಯನ್ನು ಆರಂಭಿಸಿದ್ದರು. ಸ್ಥಳೀಯರ ಪ್ರತಿಯೊಂದು ಅಗತ್ಯಗಳನ್ನು ಪೂರೈಸುವ ದಿನಸಿ ಅಂಗಡಿ ಅದಾಗಿತ್ತು. ಜಾಯ್ ಅವರು ಆಗಾಗ ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದರಿಂದ, ಅಂಗಡಿಯನ್ನು ನೋಡಿಕೊಳ್ಳುವ ಜವಾಬ್ಧಾರಿ ಮೋಳಿಯವರ ಹೆಗಲ ಮೇಲಿತ್ತು. 18 ವರ್ಷದ ಹಿಂದೆ ಜಾಯ್ ತೀರಿಕೊಂಡರು. ಕ್ರಮೇಣ ಮೋಲಿ ಅವರ ಮಗಳಿಗೆ ಮದುವೆಯಾಯಿತು ಮತ್ತು ಮಗ ಕೆಲಸಕ್ಕಾಗಿ ವಿದೇಶದಲ್ಲಿ ನೆಲಸಿದ. ಮೋಲಿಯ ಏಕೈಕ ಆದಾಯದ ಮೂಲ ದಿನಸಿ ಅಂಗಡಿಯಾಗಿತ್ತು.

2012 ರ ಮೊದಲ ಪ್ರವಾಸ
ಮೋಲಿ ಮೊತ್ತ ಮೊದಲ ಬಾರಿಗೆ ಪ್ರವಾಸ ಹೊರಟಿದ್ದು 2012 ರಲ್ಲಿ, ಅಂದರೆ ಆಕೆಯ 51 ನೇ ವಯಸ್ಸಿನಲ್ಲಿ. ನೆರೆಹೊರೆಯವರು ಕೇರಳದಿಂದ ಹೊರಗೆ ಪ್ರವಾಸ ಹೋಗೋಣವೆಂದು ಕರೆದಾಗ, ತನ್ನ ಅಂಗಡಿಯನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂಬ ಚಿಂತೆ ಎದುರಾಯಿತು ಮೊಲಿಗೆ, ಆದರೆ ಅಂತಿಮವಾಗಿ ಅವರು ಆ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿದರು. ಅಲ್ಲಿಂದ ಮೊಲಿಯವರ ಜೀವನದ ಹೊಸ ಅಧ್ಯಾಯ ಆರಂಭವಾಯಿತು.

ಇದನ್ನೂ ಓದಿ: Father Cries: ಪ್ರತಿದಿನ ಮಗನಿಗೆ 1 ಗಂಟೆ ಟ್ಯೂಶನ್ ಕೊಟ್ಟ ತಂದೆ, ಮಾರ್ಕ್​ ಕಾರ್ಡ್​ ಬಂದಾಗ ಕಣ್ಣೀರಿಟ್ಟರು

ಮೋಲಿ ನೆರೆಕೆರೆಯವರ ಜೊತೆ ಪ್ರವಾಸ ಹೋಗಿದ್ದು, ಪಳನಿ, ಮಧುರೈ, ಊಟಿ, ಕೊಡಕೇನಾಲ್, ಮೈಸೂರು ಮತ್ತು ಕೋವಲಂಗೆ. ಮೋಳಿಯ ಕೈಯಲ್ಲಿ ದಿನಸಿ ಅಂಗಡಿಯ ಆದಾಯವಿತ್ತು, ಹಾಗಾಗಿ ನೆರೆಯವರು ಜೊತೆ ಪ್ರವಾಸ ಹೋಗುವ ಹವ್ಯಾಸ ಮುಂದುವರೆಯಿತು. ಒಮ್ಮೆ ನೆರೆಮನೆಯ ನಿವೃತ್ತ ಶಿಕ್ಷಕಿ ಮೇರಿ ಎಂಬವರು ತಮ್ಮ ಜೊತೆ ವಿದೇಶ ಬರುವಿರಾ ಎಂದು ಕೇಳಿದಾಗ ಮೋಲಿ ಆಕೆಯ ಪ್ರಸ್ತಾಪವನ್ನು ಒಪ್ಪಿಕೊಂಡರು.

ಮೊದಲ ವಿದೇಶ ಪ್ರವಾಸ
ಮೋಲಿ ಮೊದಲ ಬಾರಿಗೆ ವಿದೇಶ ಪ್ರವಾಸ ಹೊರಟಿದ್ದು ‘ರಾಯಲ್ ಒಮಾನಿಯಾ’ ಎಂಬ ಕಂಪೆನಿಯ ಜೊತೆ. ಅದು 10 ದಿನಗಳ ಯೂರೋಪ್ ಪ್ರಯಾಣವಾಗಿತ್ತು. “ನಾನು ನನ್ನ ಮೊದಲ ವಿಮಾನ ಪ್ರಯಾಣವನ್ನು ಬಹಳ ಆನಂದಿಸಿದೆ ಮತ್ತು ನಾನು ಹಿಂದೆಂದೂ ಆಲೋಚಿಸಿಯೂ ಇರದೇ ಇದ್ದ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ, ಪ್ರಪಂಚ ಎಷ್ಟು ವಿಶಾಲವಾಗಿದೆ ಎಂದು ನನಗೆ ಅನಿಸಿತು” ಎನ್ನುತ್ತಾರೆ ಅವರು.

ನಂತರದ ದಿನಗಳಲ್ಲಿ, ಅದೇ ಟೂರಿಸ್ಟ್ ಕಂಪೆನಿಯ ಸಹಾಯದಿಂದ ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳನ್ನು ನೋಡಿ ಬಂದರು. ಮತ್ತೆ ವಿದೇಶಗಳತ್ತ ಮುಖ ಮಾಡಿದ ಮೋಲಿ, ಲಂಡನ್, ಆಮ್ಸ್ಟರ್ಡ್ಯಾಮ್, ಇಟಲಿ, ವಾಷಿಂಗ್ಟನ್, ಫಿಲಡೆಲ್ಫಿಯಾ, ನ್ಯೂಜೆರ್ಸಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು. ನಯಾಗರಾ ಜಲಪಾತದ ವಿಸ್ಮಯಕಾರಿ ನೋಟವನ್ನು ಸವಿದದ್ದು 61 ವರ್ಷದ ಮೋಲಿ ಅವರಿಗೆ ಎಂದಿಗೂ ಮರೆಯಲಾಗ ಅನುಭವವಾಗಿತ್ತು.

ಟ್ರಾವೆಲ್ ಮ್ಯಾಗಜೀನ್‍ಗಳಿಂದ ಮಾಹಿತಿ ಸಂಗ್ರಹ
ಮೋಲಿ ಅವರಿಗೆ ತನ್ನ ಅಂಗಡಿಯಲ್ಲಿ ಮಾರಲ್ಪಡುವ ಟ್ರಾವೆಲ್ ಮ್ಯಾಗಜೀನ್‍ಗಳಿಂದಾಗಿ ಹಲವಾರು ದೇಶಗಳ ಬಗ್ಗೆ ಮಾಹಿತಿ ಸಿಕ್ಕಿತು. ಕಡಿಮೆ ಆದಾಯವಿದ್ದರೂ ದೇಶ ವಿದೇಶಗಳನ್ನು ಸುತ್ತುವುದು ಹೇಗೆ ಸಾಧ್ಯ ಎಂಬ ಬಗ್ಗೆ ಮೋಲಿ ಮಾಹಿತಿ ಕಲೆ ಹಾಕಿದರು. ಅವರು ವಿಭಿನ್ನ ಟ್ರಾವೆಲ್ ಕಂಪೆನಿಗಳ ಜೊತೆಗೆ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಟ್ರಾವೆಲ್ ಕಂಪೆನಿಗಳ ಬೆಂಬಲ ಮತ್ತು ಮಾರ್ಗದರ್ಶನದ ಜೊತೆ ಪ್ರವಾಸ ಹೋಗುವುದು ಹೆಚ್ಚು ಸುರಕ್ಷಿತ ಎನ್ನುತ್ತಾರೆ ಆಕೆ.

ಇದನ್ನೂ ಓದಿ:  Skydive: ಅನಾಥ ವ್ಯಕ್ತಿಯ ಸ್ಕೈಡೈವ್! ನೆಟ್ಟಿಗರ ಮನಗೆದ್ದ ಟಿಕ್​ಟಾಕ್ ಜೋಡಿ

ಅಂಗಡಿಯ ಆದಾಯ ತಮ್ಮ ವಿದೇಶ ಪ್ರಯಾಣಕ್ಕೆ ಸಾಲದೆ ಇದ್ದಾಗ ಒಮ್ಮೊಮ್ಮೆ ಮೋಲಿ ತಮ್ಮ ಬಂಗಾರವನ್ನು ಅಡವಿಟ್ಟು ಸಾಲ ಪಡೆಯುತ್ತಾರಂತೆ. ಆದರೆ, ಅದನ್ನು ತಮ್ಮ ಅಂಗಡಿಯ ಆದಾಯದಿಂದಲೇ ತೀರಿಸುವ ಮೋಲಿ, ಪ್ರವಾಸಕ್ಕಾಗಿ ದುಡ್ಡನ್ನು ಉಳಿಸಿ ಇಡುತ್ತಾರೆ. ಪ್ರವಾಸದ ಸಂದರ್ಭದಲ್ಲಿ ಸುಮ್ಮನೆ ಶಾಪಿಂಗ್ ಮಾಡುವ ಅಭ್ಯಾಸ ಮೋಳಿಯವರಿಗೆ ಇಲ್ಲವಂತೆ, ಅವರು ತಮ್ಮ ಮಕ್ಕಳಿಗಾಗಿ ಚಾಕೋಲೇಟ್‍ಗಳನ್ನು ಮಾತ್ರ ಖರೀದಿಸುತ್ತಾರೆ.

ಸದ್ಯಕ್ಕೆ ಮೋಲಿಯ ಬಳಿ ವಿದೇಶ ಪ್ರಯಾಣಕ್ಕೆ ಹಣವಿಲ್ಲ, ಆದರೆ ಅದಕ್ಕೆ ಸಂಬಂಧಿಸಿದಂತೆ ಇನ್ನೂ ಈಡೇರದ ಕನಸುಗಳು ಸಾಕಷ್ಟಿವೆ. ಪ್ರವಾಸಕ್ಕೆ ಪ್ರಾಯೋಜಕರು ಸಿಕ್ಕರೆ, ಪ್ರಯಾಣಿಸಲು ಮೋಲಿ ಸಿದ್ಧವಿದ್ದರೆ, ಅದಕ್ಕೂ ಮೊದಲು ಕೇರಳದ ಕೆಲವು ಅಪರೂಪದ ಸ್ಥಳಗಳನ್ನು ಆಕೆ ನೋಡಲಿಕ್ಕಿದೆಯಂತೆ.
Published by:Ashwini Prabhu
First published: