Miss World: ವಿಶ್ವ ಸುಂದರಿ 2021 ರಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಚೆಲುವೆ ಯಾರು ಗೊತ್ತೇ?

Miss World: ಮಾನಸ ಜನಿಸಿರುವುದು ಹೈದರಾಬಾದ್‍ನಲ್ಲಿ ಮತ್ತು ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.23 ವರ್ಷದ ಆಕೆಗೆ ಹಣಕಾಸು ಕ್ಷೇತ್ರದಲ್ಲಿ ವಿಶೇಷ ಆಸಕ್ತಿ

ಮಾನಸ ವಾರಣಾಸಿ

ಮಾನಸ ವಾರಣಾಸಿ

  • Share this:
ಮಿಸ್ ಯುನಿವರ್ಸ್ 2021 ( Miss Universe 2021 crown) ಕಿರೀಟ ಹರ್ನಾಸ್ ಸಂಧು(Harnas Sandhu) ಅವರ ಮುಡಿಗೇರಿದ್ದೇ ತಡ, ಡಿಸೆಂಬರ್‌ನಲ್ಲಿ ನಡೆಯಲಿರುವ 70 ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಚೆಲುವೆ ಯಾರು ಎಂಬ ಕುರಿತು ಪ್ರತಿಯೊಬ್ಬರಿಗೂ ಕುತೂಹಲ (Curious) ಮೂಡಿದೆ. ನಿಮಗೂ ಆ ಬಗ್ಗೆ ಕುತೂಹಲ ಇದೆಯೇ? ಹಾಗಾದರೆ ಇಲ್ಲಿದೆ ಆ ಚೆಲುವೆಯ ಕುರಿತ ಮಾಹಿತಿ. 70 ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ (70th Miss World pageant ) ಭಾರತವನ್ನು ಪ್ರತಿನಿಧಿಸಲಿರುವವರು ಬೇರೆ ಯಾರು ಅಲ್ಲ, ಮಾನಸ ವಾರಣಾಸಿ. ಫಾಲ್ಗುನಿ ಶಾನೆ ಪೀಕಾಕ್, ನೇಹಾ ಧೂಪಿಯಾ, ಚಿತ್ರಾಂಗದ ಸಿಂಗ್ ಮತ್ತು ಪುಲ್ಕಿತ್ ಸಾಮ್ರಾಟ್ ಮಿಸ್ ಇಂಡಿಯಾ 2020 ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಅಪಾರಶಕ್ತಿ ಖುರಾನಾ ಆ ಸ್ಪರ್ಧೆಯ ನಿರೂಪಕರಾಗಿದ್ದರು. ಮಾನಸ ವಾರಣಾಸಿ (Mansa Varanasi) ಅವರು ಆ ಸ್ಪರ್ಧೆಯಲ್ಲಿ ಭಾರತ ಸುಂದರಿ ( Miss India) 2020 ಕಿರೀಟವನ್ನು ಮುಡಿಗೇರಿಸಿಕೊಂಡರು.

ಯಾರು ಈ ಮಾನಸ ವಾರಣಾಸಿ?
ಮಾನಸ ಜನಿಸಿರುವುದು ಹೈದರಾಬಾದ್‍ನಲ್ಲಿ ಮತ್ತು ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.23 ವರ್ಷದ ಆಕೆಗೆ ಹಣಕಾಸು ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಮಾನಸ ವಾರಣಾಸಿ ಅವರು ವಾಸವಿ ಕಾಲೇಜ್ ಆಫ್ ಎಂಜಿನಿಯರಿಂಗ್‍ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಇದನ್ನೂ ಓದಿ: Miss Universe: 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಭುವನ ಸುಂದರಿ ಪಟ್ಟ, ಮಿಸ್ ಯೂನಿವರ್ಸ್ ಆಗಿ ಹೊರ ಹೊಮ್ಮಿದ ಹರ್ನಾಜ್ ಸಂಧು

ಚಿಕ್ಕ ಹುಡುಗಿಯಾಗಿದ್ದಾಗ ತುಂಬಾ ನಾಚಿಕೆ ಸ್ವಭಾವದವರಾಗಿದ್ದ ಮಾನಸ ಅವರು, ಭರತನಾಟ್ಯ ಮತ್ತು ಸಂಗೀತದ ಮೂಲಕ ತಮ್ಮನ್ನು ವ್ಯಕ್ತಪಡಿಸಲು ಆದ್ಯತೆ ನೀಡಿದರು. “ನಿಮ್ಮ ಒಂದು ಪ್ರಚಂಡ ಮತ್ತು ಅಮೂಲ್ಯ ಬದುಕಿನಲ್ಲಿ ನೀವೇನು ಮಾಡಬೇಕೆಂದು ಆಲೋಚಿಸಿದ್ದೀರಿ, ನನಗೆ ಹೇಳಿ” ಎಂಬುವುದು ವೆಬ್‍ಸೈಟ್ ಪಟ್ಟಿ ಮಾಡಲಾದ ಅವರ ಇಷ್ಟದ ಉಲ್ಲೇಖವಾಗಿದೆ.


ಹಲವು ಆಸಕ್ತಿ
ಪುಸ್ತಕಗಳು, ಸಂಗೀತ, ಯೋಗ ಸೇರಿಂದತೆ ಹಲವು ರೀತಿಯ ವಿಷಯಗಳಲ್ಲಿ ಅವರು ಆಸಕ್ತಿ ಹೊಂದಿದ್ದಾರೆ. ಸಾಮಾನ್ಯವಾಗಿ ಗಮನಕ್ಕೆ ಬಾರದ ವಿಷಯಗಳನ್ನು ವೀಕ್ಷಿಸಲು ಅವರು ಅದನ್ನು ತಮ್ಮ ಮೇಲೆಯೇ ತೆಗೆದುಕೊಳ್ಳುತ್ತಾರೆ ಮತ್ತು ಅದು ಅವರಿಗೆ ಆ ಕ್ಷಣವನ್ನು ನಿಜವಾಗಿಯೂ ಜೀವಿಸಲು ಸಹಾಯ ಮಾಡುತ್ತದೆ.

ಪ್ರಿಯಾಂಕ ಚೋಪ್ರಾ ಜೋನಾಸ್ ಸ್ಪೂರ್ತಿ
“ಭಾರತ, ನಾವು ಮಿಸ್ ವರ್ಲ್ಡ್ 2021 ರಲ್ಲಿ, ಒಂದು ಉದ್ದೇಶದ ಸುತ್ತಿನಲ್ಲಿ ಸೌಂದರ್ಯದ ಮೊದಲ 10 ನೇ ಸ್ಥಾನಕ್ಕೆ ತಲುಪಿದ್ದೇವೆ” ಎಂದು ಹೇಳಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದರು. 2020 ರ ಭಾರತ ಸುಂದರಿ ಮಾನಸ ವಾರಣಾಸಿ ಅವರ ಜೀವನದಲ್ಲಿ ಮೂವರು ಅತೀ ಪ್ರಭಾವಿ ವ್ಯಕ್ತಿಗಳು ಎಂದರೆ, ಅವರ ತಾಯಿ, ಅಜ್ಜಿ ಮತ್ತು ಕಿರಿಯ ಸಹೋದರಿ. ಮಾನಸ, 2000 ನೇ ಇಸವಿಯಲ್ಲಿ ಮಿಸ್ ವರ್ಲ್ಡ್ ಕಿರೀಟ ಗೆದ್ದಿದ್ದ, ಪ್ರಿಯಾಂಕ ಚೋಪ್ರಾ ಜೋನಾಸ್ ಅವರಿಂದಲೂ ಪ್ರಭಾವಿತರಾಗಿದ್ದಾರೆ.

ಸಂದರ್ಶನದಲ್ಲಿ ಹೇಳಿಕೆ
ಎಲ್ಲಾ ಸೌಂದರ್ಯ ಸ್ಪರ್ಧೆ ವಿಜೇತರಲ್ಲಿ ನನಗೆ ಪ್ರಿಯಾಂಕ ಚೋಪ್ರಾ ಎದ್ದು ಕಾಣುತ್ತಾರೆ, ಏಕೆಂದರೆ ಅವರೊಬ್ಬ ಅನ್ವೇಷಕಿ – ಅವರು ಯಾವಾಗಲೂ ತಮ್ಮ ಗಡಿಗಳನ್ನು ವಿಸ್ತರಿಸುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ: Miss Universe: ನಾನು ಭಾರತದ ಹೆಮ್ಮೆಯಾಗಲು ಬಯಸಿದ್ದೆ: ಮಿಸ್ ಯೂನಿವರ್ಸ್ ಹರ್ನಾಜ್ ಸಂಧು

ಸಂಗೀತ, ಚಲನಚಿತ್ರ, ಉದ್ಯಮಶೀಲತೆ, ಸಮಾಜ ಸೇವೆ ಮತ್ತು ಪಟ್ಟಿ ಮುಂದುವರೆಯುತ್ತಲೇ ಹೋಗುತ್ತದೆ. ತನ್ನನ್ನು ತಾನೇ ಆಲಿಸಿಕೊಳ್ಳುವ ಸಂಕೋಚದ ಮಗುವಾಗಿ ಕೂಡ, ನಾನು ಯಾವಾಗಲೂ ಬಹಿರಂಗವಾಗಿ ಎಲ್ಲವನ್ನು ಮಾತನಾಡುವ ಪ್ರಿಯಾಂಕರನ್ನು ನೋಡುತ್ತಿದ್ದೆ. ಅವರ ಬಹುಮುಖತೆ ಮತ್ತು ಸಾಮರ್ಥ್ಯ ನನಗೆ ಸ್ಪೂರ್ತಿ ನೀಡಿದೆ” ಎಂದು ಸಂದರ್ಶನವೊಂದರಲ್ಲಿ ಆಕೆ ಹೇಳಿದ್ದರು.
Published by:vanithasanjevani vanithasanjevani
First published: