Lady Don: ನೋಡೋಕೆ ಸಖತ್​ ಕ್ಯೂಟು, ಕಿರಿಕ್​ ಮಾಡಿದ್ರೆ ಸೇರಿಸ್ತಾಳೆ ಹರಿಶ್ಚಂದ್ರ ಘಾಟು: ಯಾರು ಈ ‘ಮಚ್ಚೇಶ್ವರಿ’?

Lady Don: ಸೂರತ್‍ನಲ್ಲಿ ‘ಲೇಡಿ ಡಾನ್’(Lady Don) ಎಂದೇ ಹೆಸರುವಾಸಿ! ಬಹಳ ಬೇಗನೆ ಕ್ರೀಮಿನಲ್ ವೃತ್ತಿ(Criminal Profession)ಗೆ ಕೈ ಹಾಕಿರುವ ಈ ಯುವತಿಯ ಮೇಲೆ ಹಲವಾರು ಪೊಲೀಸ್ ಕೇಸ್‍(Police Case)ಗಳು ದಾಖಲಾಗಿವೆ.

ಲೇಡಿ ಡಾನ್ ಅಸ್ಮಿತಾ ಬಾ ಗೋಹಿಲ್

ಲೇಡಿ ಡಾನ್ ಅಸ್ಮಿತಾ ಬಾ ಗೋಹಿಲ್

  • Share this:

ಅಸ್ಮಿತಾ ಬಾ ಗೋಹಿಲ್ ಅಲಿಯಾಸ್ ಡಿಕು(Asmita Ba Gohil alias Diku) ಮುದ್ದಾದ 23 ವಯಸ್ಸಿನ ಹುಡುಗಿ, ಹಾಗೆ ಸುಮ್ಮನೆ ನೋಡಿದರೆ ಸಾಮಾಜಿಕ ಮಾಧ್ಯಮ(Social Media) ಮತ್ತು ಸೆಲ್ಫಿ ಮೋಹವುಳ್ಳ ಸಾಮಾನ್ಯ ಹುಡುಗಿಯಂತೆ ಕಾಣುತ್ತಾರೆ. ಹಾಗಂತ ಅವರ ಮುಖ ನೋಡಿ ಮರುಳಾದೀರಿ ಜೋಕೆ, ಯಾಕಂತೀರಾ..? ಈ ಚೆಲುವೆ ಸೂರತ್‍ನಲ್ಲಿ ‘ಲೇಡಿ ಡಾನ್’(Lady Don) ಎಂದೇ ಹೆಸರುವಾಸಿ! ಬಹಳ ಬೇಗನೆ ಕ್ರೀಮಿನಲ್ ವೃತ್ತಿ(Criminal Profession)ಗೆ ಕೈ ಹಾಕಿರುವ ಈ ಯುವತಿಯ ಮೇಲೆ ಹಲವಾರು ಪೊಲೀಸ್ ಕೇಸ್‍(Police Case)ಗಳು ದಾಖಲಾಗಿವೆ. ಆಕೆ ಬಹಿರಂಗವಾಗಿ, ಶಸ್ತ್ರಸಜ್ಜಿತವಾಗಿ ಮತ್ತು ಹಲವಾರು ಜನರನ್ನು ಬೆದರಿಸುವ ಮೂಲಕ ಗುರುತಿಸಲ್ಪಟ್ಟಿದ್ದಾಳೆ. ಸಾಮಾಜಿಕ ಮಾಧ್ಯಮದ ಬಗ್ಗೆ ವಿಪರೀತ ಗೀಳನ್ನು ಹೊಂದಿರುವ ಈ ಯುವತಿ, ಇಂಟರ್‌ನೆಟ್‌ನಲ್ಲಿ ಸಖತ್​ ಫೇಮಸ್​. ಫ್ಯಾನ್ಸಿ ಬೈಕ್(Fancy Bike) ಮತ್ತು ಕಾರು(Car)ಗಳ ಜೊತೆ, ಮತ್ತು ಖಡ್ಗ(Sword), ಬ್ಲೇಡ್(Blade) ಹಾಗೂ ಗನ್‍(Gunಗಳ ಜೊತೆ ಪೋಸ್ ನೀಡಿರುವ ಆಕೆಯ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದು.


23 ವರ್ಷದ ಲೇಡಿ ಡಾನ್​ ಕಂಡರೆ ಎಲ್ಲರಿಗೂ ಭಯ!


ಅವಳು ಶಸ್ತ್ರಸಜ್ಜಿತಳಾಗಿದ್ದಾಗ, ಆಕೆಯ ವರ್ತನೆ ಊಹಿಸುವುದು ಕೂಡ ಅಸಾಧ್ಯ ಮತ್ತು ದಿಢೀರನೆ ಜನರ ಮೇಲೆ ಆಕ್ರಮಣ ಮಾಡಿರುವುದುಂಟು ಎನ್ನಲಾಗುತ್ತದೆ. ಐದು ಸಹೋದರಿಯರಲ್ಲಿ ಕಿರಿಯಳಾಗಿರುವ ಈ ಯುವತಿ, ಕೊಲೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಜೈಲು ವಾಸವನ್ನು ಕೂಡ ಅನುಭವಿಸಿದ್ದಾಳೆ.ಅವಳ ಎಲ್ಲಾ ಅಪರಾಧಿ ಕೃತ್ಯಗಳಲ್ಲಿ ಪಾಲುದಾರನಾಗಿರುವ ಮತ್ತು ಆಕೆಯ ಜೊತೆ ಲಿವ್ – ಇನ್ ಸಂಬಂಧ ಹೊಂದಿರುವ ಸಂಜಯ್ ಭುವಾ ಮೇಲೆ ಕೂಡ ಎರಡು ಕೊಲೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳ ಆರೋಪ ಇದೆ.


ಇದನ್ನು ಓದಿ : ಮೊದಲ ಸಲ‌ ಡಿನ್ನರ್​ಗೆ ಕರೆದವನು ಬೆತ್ತಲಾಗಿದ್ದ, ಕೇಳಬಾರದ್ದು ಕೇಳಿಬಿಟ್ಟ..ಆಮೇಲೇನಾಯ್ತು?


ಕ್ರೈಂ ಕೇಸ್​ನಲ್ಲಿ ಅಂದರ್​ ಆಗಿದ್ದ ಲೇಡಿ ಡಾನ್​

ಜನರನ್ನು ತಲವಾರೊಂದರ ಮೂಲಕ ಹೆದರಿಸಿ, ಹಣಕ್ಕೆ ಬೇಡಿಕೆ ಇಟ್ಟ ಕಾರಣಕ್ಕಾಗಿ ಒಮ್ಮೆ ವೈರಲ್ ಆಗಿದ್ದಳು. ಈ ಲೇಡಿ ಡಾನ್ ಮತ್ತು ಆಕೆಯ ಗೆಳೆಯ , ಇತ್ತೀಚೆಗೆ ಗುಜರಾತ್‍ನ ಸೂರತ್‍ನ ವರಚ್ಚಾ ಪ್ರದೇಶದ ಸೊಸೈಟಿಯೊಂದರ ಸ್ಥಳೀಯ ಅಂಗಡಿಯವರಿಂದ ಹಣ ವಸೂಲಿ ಮಾಡುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ವೈರಲ್ ವಿಡಿಯೋದಲ್ಲಿ, ಆಕೆ ಪುರುಷನ ಹಿಂದೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಪಾನ್ ಅಂಗಡಿಯೊಂದರ ಮುಂದೆ ಬೈಕ್ ನಿಲ್ಲಿಸುವ ಮೊದಲು ಅದೇ ರಸ್ತೆಯಲ್ಲಿ ಹಿಂದೆ ಮುಂದೆ ಓಡಾಡುತ್ತಾರೆ. ಬಳಿಕ ಕೂಡಲೇ ಬೈಕ್‍ನಿಂದ ಇಳಿದು, ಅಸ್ಮಿತಾ ಅಂಗಡಿಯವರನ್ನು ಹೆದರಿಸಲು ಅವರ ಮುಂದೆ ತಲವಾರನ್ನು ಝಳಪಿಸುತ್ತಾಳೆ. ಅವಳು ಅವನಿಗೆ ಅಂಗಡಿ ಮುಚ್ಚಲು ಒತ್ತಾಯಿಸುತ್ತಾಳೆ. ಕೆಲವೇ ಸಮಯದಲ್ಲಿ ಅವಳ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿ ಲೇಡಿ ಡಾನನ್ನು ಬಂಧಿಸಲಾಯಿತು. ಆದರೆ ಇದು ಆಕೆಯ ಮೇಲೆ ಹಾಕಲಾಗುತ್ತಿರುವ ಮೊದಲ ಪ್ರಕರಣವೇನಲ್ಲ.

2019ರಲ್ಲೂ ಸಖತ್​ ವೈರಲ್ ಆಗಿತ್ತು ಜೋಡಿ!

ಮಾರ್ಚ್ 2018ರ ಹೋಳಿಯ ಸಂದರ್ಭದ ಇಂತದ್ದೇ ವಿಡಿಯೋದಲ್ಲಿ, ಅವಳು ಕುಡುಗೋಲಿನಂತಹ ಆಯುಧ ಝುಳಪಿಸುತ್ತಾ ಗಂಡಸರ ಗುಂಪೊಂದನ್ನು ಬೈಯುತ್ತಿರುವುದನ್ನು ಕಾಣಬಹುದಾಗಿತ್ತು. ಆಕೆಯ ಜೊತೆ ಚೂರಿ ಹಿಡಿದುಕೊಂಡಿದ್ದ ಸಂಜಯ್ ಗೋಹಿಲ್ ಎಂಬ ಗೆಳೆಯ ಕೂಡ ಆ ವಿಡಿಯೋದಲ್ಲಿ ಇದ್ದ. ಗಲಭೆಗೆ ಪ್ರಚೋದನೆಗೆ ನೀಡಿದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿತ್ತು. ಬಳಿಕ ಅವರಿಬ್ಬರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.“ಈ ಮಹಿಳೆಯ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದೆ. ಆಕೆಯ ಭೂತಕಾಲವು ಅಪರಾಧ ಚಟುವಟಿಕೆಗಳಿಂದ ತುಂಬಿಕೊಂಡಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನು ಓದಿ : ಬೈಕ್​ ಕಂಟ್ರೋಲ್​ ಸಿಕ್ಲಿಲ್ಲ ಅಂತ ಅಂಗಡಿಯೊಳಗೇ ನುಗ್ಗಿಸಿ ಬಿಟ್ಟ, ವಿಡಿಯೋ ನೋಡಿ!

‘ನಮ್ಮದೇ ನಿಯಮಗಳ ಮೇಲೆ ಬದುಕುತ್ತೇವೆ’
ಅಸ್ಮಿತಾ ಗೋಹಿಲ್ ಅಲಿಯಾಸ್ ಲೇಡಿ ಡಾನ್ , ಫೇಸ್‍ಬುಕ್ ಪ್ರೊಫೈಲ್ ಪ್ರಕಾರ, ‘ಸ್ವ –ಉದ್ಯೋಗಿ’. ಆಕೆಗೆ 12,000 ಹಿಂಬಾಲಕರಿದ್ದಾರೆ ಮತ್ತು ಆಕೆಯ ಫ್ರೆಂಡ್ಸ್ ಲಿಸ್ಟ್‌ನಲ್ಲಿ 2,500 ಪ್ರೊಫೈಲ್‍ಗಳು ಇವೆ. “ನಮ್ಮ ಜೀವನದ ವಿಧಾನವು ವಿಭಿನ್ನವಾಗಿದೆ, ನಾವು ನಿರೀಕ್ಷೆಗಳ ಮೇಲೆ ಬದುಕುವುದಿಲ್ಲ, ನಾವು ನಮ್ಮದೇ ನಿಯಮಗಳ ಮೇಲೆ ಬದುಕುತ್ತೇವೆ” ಎಂದು ಆಕೆ ತಮ್ಮ ಫೇಸ್‍ಬುಕ್ ಬಯೋದಲ್ಲಿ ಬರೆದುಕೊಂಡಿದ್ದಾಳೆ.


Published by:Vasudeva M
First published: