Mental Health: ಉದ್ಯೋಗಿಗಳ ಮಾನಸಿಕ ಆರೋಗ್ಯ ಕೂಡ ಮುಖ್ಯ; ಅದಕ್ಕೆ ಈ ಸಂಸ್ಥೆ ನೀಡುತ್ತಿದೆ ಮೆಂಟಲ್​ ಹೆಲ್ತ್​​ ಲೀವ್​​

Mental Health: ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳು ಮತ್ತೆ ರಿಫ್ರೆಶ್‌ ಆಗೋದಿಕ್ಕೆ 11 ದಿನಗಳ ಕಾಲ ಮಾನಸಿಕ ಆರೋಗ್ಯ ರಜೆ ನೀಡಿದೆ. ಈ ಕಂಪನಿ ಯಾವುದು ಅಂತ ತಿಳಿಯೋಕೆ ಈ ಸ್ಟೋರಿ ಓದಿ.

ಮೀಶೋ

ಮೀಶೋ

  • Share this:
ಸದ್ಯ ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಬರುತ್ತಿವೆ. ಆದರೆ ಬಹಳಷ್ಟು ಜನರಿಗೆ ಹಬ್ಬಗಳ ಅವಧಿಯಲ್ಲಿ ರಜೆ (Vacation) ಪಡೆಯೋಕೆ ಸಾಧ್ಯವಾಗೋದಿಲ್ಲ. ಹಬ್ಬಗಳೆಂದರೆ (Festival) ಕೇಳಬೇಕಾ ಬಟ್ಟೆಗಳು, ಹಬ್ಬದ ಸಾಮಾನುಗಳು, ಮನೆ ಅಲಂಕಾರಕ್ಕೆ ಹೀಗೆ ಖರೀದಿ ಜೋರಾಗಿಯೇ ಇರುತ್ತೆ. ಅಲ್ಲದೇ ಮನೆಯಲ್ಲೂ ಹಬ್ಬ, ಪೂಜೆ ಹೀಗೆ ಕೆಲಸಗಳು (Work) ಜೋರಾಗಿಯೇ ಇರುತ್ತವೆ. ಆದರೆ ಇದಕ್ಕೆಲ್ಲ ಸಮಯ (Time) ಸಿಗಬೇಕಲ್ಲ.ಬಹಳಷ್ಟು ಕಂಪನಿಗಳಲ್ಲಿ (Company) ಹಬ್ಬದ ಪ್ರಯುಕ್ತ ರಜೆ ಸಿಗೋದಿಲ್ಲ. ಆ ಸಮಯದಲ್ಲೇ ಹೆಚ್ಚಿನ ವ್ಯಾಪಾರ ವಹಿವಾಟುಗಳಾಗೋದ್ರಿಂದ ಕಂಪನಿ ತನ್ನ ಉದ್ಯೋಗಿಗಳಿಗೆ (employees) ರಜೆ ನೀಡೋಕೆ ನಿರಾಕರಿಸುತ್ತೆ. ಆದ್ರೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳು ಮತ್ತೆ ರಿಫ್ರೆಶ್‌ ಆಗೋದಿಕ್ಕೆ 11 ದಿನಗಳ (Days) ಕಾಲ ಮಾನಸಿಕ ಆರೋಗ್ಯ ರಜೆ ನೀಡಿದೆ.

ಮೀಶೊ ಎನ್ನುವ ಇ ಕಾಮರ್ಸ್‌ ಕಂಪನಿ ತನ್ನ ಉದ್ಯೋಗಳನ್ನು ರಿಸೆಟ್‌ ಹಾಗೂ ರಿಚಾರ್ಜ್‌ ಮಾಡೋಕೆ ಅಂತ 11 ದಿನಗಳ ಮೆಂಟಲ್‌ ಹೆಲ್ತ್‌ ಲೀವ್‌ ನೀಡಿದೆ. ಹಾಗಂತ ಈ ಕಂಪನಿ ಮಾನಸಿಕ ಆರೋಗ್ಯ ರಜೆ ನೀಡ್ತಾ ಇರೋದು ಇದೇ ಮೊದಲ ಬಾರಿಯಲ್ಲ. ಕಳೆದ ವರ್ಷ ಕೂಡ ಹೀಗೆಯೇ ರಜೆ ನೀಡಿತ್ತು ಮೀಶೋ.

ಏಕೆ ಈ ಮೆಂಟಲ್‌ ಹೆಲ್ತ್‌ ರಜೆ?

ಮೀಶೋ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಪ್ರಕಟಣೆಯು ಉದ್ಯೋಗದಿಂದ ಸಂಪೂರ್ಣವಾಗಿ ಅನ್‌ಪ್ಲಗ್ ಮಾಡಲು ಮತ್ತು ಹಬ್ಬದ ಮಾರಾಟದ ಅವಧಿಯ ನಂತರ ಅವರ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಅನುವು ಮಾಡಿಕೊಡುತ್ತದೆ ಎಂದು ಬರೆದುಕೊಂಡಿದೆ.

ಇನ್ನು ಮೀಶೋದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆಶಿಶ್ ಕುಮಾರ್ ಸಿಂಗ್, “ರೀಸೆಟ್ ಮತ್ತು ರೀಚಾರ್ಜ್‌ನೊಂದಿಗೆ, ಬಿಡುವಿಲ್ಲದ ಕೆಲಸದಿಂದ ಕೆಲ ದಿನ ಮುಕ್ತಿ ಸಿಗುತ್ತೆ. ಸಾಂಪ್ರದಾಯಿಕ ಮಾನದಂಡಗಳ  ಆಚೆ ಬಂದು ನಾವು ಉದ್ಯೋಗಿಗಳಿಗೆ ರಜೆ ನೀಡಿದ್ದೇವೆ. ಈ ರಜೆಯನ್ನು ನೌಕರರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಅವರಿಷ್ಟದಂತೆ ರಜೆಯನ್ನು ಸದುಪಯೋಗ ಮಾಡಿಕೊಳ್ಳಬಹುದು. ಹತ್ತಿರದ ಮತ್ತು ಆತ್ಮೀಯರೊಂದಿಗೆ ಸಮಯ ಕಳೆಯಬಹುದು, ಪ್ರವಾಸಕ್ಕೆ ಹೋಗಬಹುದು ಅಥವಾ ಹೊಸ ಹವ್ಯಾಸವನ್ನು ಆರಿಸಿಕೊಳ್ಳುವುದು ಹೀಗೆ ಏನನ್ನು ಬೇಕಾದರೂ ಮಾಡಬಹುದು" ಎಂದಿದ್ದಾರೆ.

ಇದನ್ನೂ ಓದಿ: ಮೈಸೂರಿಗೆ ಒಂದು ದಿನದ ಟ್ರಿಪ್, ಈ ಎಲ್ಲಾ ಸ್ಥಳಗಳ ಸೌಂದರ್ಯ ಆಸ್ವಾದಿಸಬಹುದು!

ನೌಕರರಿಗಾಗಿ ಹಲವು ಸವಲತ್ತು!

ಮೀಶೋ ಇ-ಕಾಮರ್ಸ್ ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಹಾಗೂ ಹೊಸ ಪ್ರತಿಭೆಗಳನ್ನು ಆಕರ್ಷಿಸಲು ಸಾಕಷ್ಟು ಕ್ರಮ ಕೈಗೊಂಡಿದೆ. ಇದಕ್ಕೆ ಅನುಗುಣವಾಗಿ ಜೂನ್‌ನಲ್ಲಿ ಮೀಶೋ ಅನಿಯಮಿತ ರಜೆ ನೀತಿಯನ್ನು ಘೋಷಿಸಿದೆ.ತನ್ನ ಉದ್ಯೋಗಿಗಳಿಗೆ 365 ದಿನಗಳ ವೇತನದ ರಜೆಯನ್ನು ಈ ಕಂಪನಿ ನೀಡುತ್ತಿದೆ. ಒಬ್ಬ ಉದ್ಯೋಗಿ ಅಥವಾ ಅವರ ಪ್ರೀತಿಪಾತ್ರರು ಗಂಭೀರವಾದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಆಗಾಗ್ಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವಾಗ ಈ ನೀತಿಯು ಅನ್ವಯಿಸುತ್ತದೆ ಎಂದು ಕಂಪನಿ ಹೇಳಿದೆ.

ಇನ್ನು ಸ್ವಯಂ ಅನಾರೋಗ್ಯಕ್ಕಾಗಿ ರಜೆಯ ಅವಧಿಯ ಉದ್ದಕ್ಕೂ ನೌಕರರು ಪೂರ್ಣ ವೇತನಕ್ಕೆ ಅರ್ಹರಾಗಿರುತ್ತಾರೆ. ಅಲ್ಲದೇ ಅವರ ಕುಟುಂಬದ ಸದಸ್ಯರು ಶೇ. 25 ರಷ್ಟು 3 ತಿಂಗಳವರೆಗೆ ಅರ್ಹರಾಗಿರುತ್ತಾರೆ ಎಂದು ಮೀಶೋ ಹೇಳಿದೆ.ಅಲ್ಲದೇ ಕೆಲಸದ ಸ್ಥಳಗಳಲ್ಲಿರುವ ಟೆನ್ಶನ್‌ ಹಾಗೂ ಆತಂಕಗಳಿಂದ ಹೊರಬರಲು ಇಂತಹ ರಿಸೆಟ್‌ ಹಾಗೂ ರಿಚಾರ್ಜ್‌ ಅಗತ್ಯ ಇದೆ. ಇತರ ಕಂಪನಿಗಳೂ ಹೀಗೆಯೇ ತಮ್ಮ ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದಿದೆ ಮೀಶೋ.

ಇದನ್ನೂ ಓದಿ: ಪಾಲಕ್ ಇಷ್ಟ ಅಂತ ಅತಿಯಾಗಿ ತಿಂದ್ರೆ ಕಿಡ್ನಿ ಸಮಸ್ಯೆ ಬರಬಹುದು

ಒಟ್ಟಾರೆಯಾಗಿ ಒಂದು ಕಂಪನಿ ಕೊಡುವ ಇಂಥ ಸವಲತ್ತುಗಳಿಂದ ಅಲ್ಲಿನ ನೌಕರರು ಸಮಾಧಾನದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಕಂಪನಿಯು ತನ್ನ ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಗಮನ ಕೊಟ್ಟು ರಜೆ ನೀಡಿರುವುದು ಶ್ಲಾಘನೀಯ.ಇದರಿಂದ ಉದ್ಯೋಗಿಗಳು ಇನ್ನಷ್ಟು ಉತ್ಸಾಹದಿಂದ, ಹುಮ್ಮಸ್ಸಿನಿಂದ ಕೆಲಸ ಮಾಡೋಕೆ ಸಾಧ್ಯವಾಗುತ್ತೆ. ಇದರಿಂದ ಕಂಪನಿಯ ಅಭಿವೃದ್ಧಿಗೆ ಸಹಾಯವಾಗುತ್ತೆ. ಹಾಗಾಗಿ ಮೆಂಟಲ್‌ ಹೆಲ್ತ್‌ ಲೀವ್‌ ನಿಂದ ಕಂಪನಿಗೂ ಒಳ್ಳೆಯದು ಜೊತೆಗೆ ಉದ್ಯೋಗಿಗಳಿಗೂ ಒಳ್ಳೆಯದು.
First published: