• Home
  • »
  • News
  • »
  • trend
  • »
  • Viral News: ಮಣ್ಣಿನಡಿಯಲ್ಲಿ ಸಿಕ್ತು ಮಧ್ಯಕಾಲೀನ ಮದುವೆ ಉಂಗುರ! ಮೌಲ್ಯ ಎಷ್ಟು ಗೊತ್ತಾ?

Viral News: ಮಣ್ಣಿನಡಿಯಲ್ಲಿ ಸಿಕ್ತು ಮಧ್ಯಕಾಲೀನ ಮದುವೆ ಉಂಗುರ! ಮೌಲ್ಯ ಎಷ್ಟು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದು ಮದುವೆ ಉಂಗುರವಾಗಿತ್ತಂತೆ. ಐದಡಿ ಮಣ್ಣಿನ ಆಳದಲ್ಲಿ ಇದು ಕ್ಯಾಂಡಿಯಿಂದ ಮುಚ್ಚಿದಂತೆ ಕಂಡುಬಂದಿತ್ತು ಎಂದು ಲೋಹ ಪತ್ತೆಕಾರ ಡೇವಿಡ್‌ ತಿಳಿಸಿದ್ದಾರೆ.

  • Share this:

ಮೂರು ವರ್ಷಗಳ ಹಿಂದೆ ಮೆಟಲ್‌ ಡಿಟೆಕ್ಟರ್‌ (Metal Detector) ಒಬ್ಬರು ಮೈದಾನದಲ್ಲಿ ಸಮೀಕ್ಷೆ ಮಾಡುತ್ತಿರುವಾಗ ಕ್ಯಾಂಡಿಯ ಹೊದಿಕೆಯಂತೇ ಇದ್ದ ವಸ್ತುವೊಂದು ಲಭಿಸಿತ್ತು. ಏನೋ ಒಂದು ಅಪರರೂಪವಾಗಿರುವ ವಸ್ತು ಸಿಕ್ಕಿದೆ ಎಂದು ಸುಮ್ಮನೆ ತಮ್ಮ ಬಳಿ ಇಟ್ಟುಕೊಂಡಿದ್ದರಂತೆ. ಆದರೆ ಅದನ್ನು ಮನೆಗೆ ತಂದು ತೊಳೆದಾಗ ಕ್ಯಾಂಡಿಯಂತೇ ಇದ್ದ ವಸ್ತು ಬೇರೆಯದ್ದೇ ಆಗಿತ್ತು. ಇದು ಅಂತಿಂತ ವಸ್ತುವಲ್ಲ (Medieval Gold Wedding)  ಮಧ್ಯಕಾಲದ ಲೋಹವಾಗಿತ್ತು. ಮೂಲತಃ ಮೆಟಲ್‌ ಡಿಟೆಕ್ಟರ್‌ ಆಗಿದ್ದ ಡೇವಿಡ್ ಬೋರ್ಡ್ ಇಂಗ್ಲೆಂಡ್‌ನ ಡಾರ್ಸೆಟ್‌ನ ಥಾರ್ನ್‌ಕಾಂಬ್ ಬಳಿಯ ಹುಲ್ಲುಗಾವಲಿನ ಮೈದಾನದಲ್ಲಿ 2019 ರಲ್ಲಿ ಸಮೀಕ್ಷೆ ನಡೆಸುತ್ತಿದ್ದರು. ಹೀಗೆ ತಮ್ಮ ಕೆಲಸದಲ್ಲಿ ಅದು, ಇದು ಪತ್ತೆ ಹಚ್ಚುತ್ತಿರುವಾಗ ಅವರಿಗೆ ಕ್ಯಾಂಡಿಯ ಹೊದಿಕೆ ಇರುವ ವಸ್ತುವೊಂದು ಲಭಿಸಿದೆ. ಇದೇನಿದು ಅಂತಾ ಜೇಬಿಗೆ ಇಳಿಸಿ ಹಾಗೇ ಸಮೀಕ್ಷೆ ಮುಂದುವರೆಸಿದ್ದರು.


ಬೆಲೆಬಾಳುವ ಲೋಹವಾಗಿತ್ತು ಕ್ಯಾಂಡಿ ಹೊದಿಕೆಯ ವಸ್ತು
ನಂತರ ಸಮೀಕ್ಷೆ ಎಲ್ಲಾ ಮುಗಿದ ಬಳಿಕ ಮನೆಗೆ ಬಂದು ಕ್ಯಾಂಡಿ ಹೊದಿಕೆ ಇರುವ ವಸ್ತುವನ್ನು ನೀರಿನಲ್ಲಿ ತೊಳೆದಿದ್ದಾರೆ. ಈ ವೇಳೆ ಮಹದಾಶ್ಚರ್ಯವೊಂದು ಅವರಿಗೆ ಕಾದಿತ್ತು ನೋಡಿ. ಹೌದು ಕ್ಯಾಂಡಿಯಂತೆ ಕಾಣುತ್ತಿದ್ದ ವಸ್ತು ಶುದ್ಧ ಚಿನ್ನ ಮತ್ತು ವಜ್ರದ ಉಂಗುರವಾಗಿತ್ತು.


ಬಂಗಾರ ಮತ್ತು ವಜ್ರದ ಮದುವೆ ಉಂಗುರ
ಮೆಟಲ್‌ ಡಿಟೆಕ್ಟರ್‌ ಡೇವಿಡ್ ಬೋರ್ಡ್ ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಹಳೆ ಕಾಲದ ಬಂಗಾರ ಇದು ಎಂದು ಅರಿತುಕೊಂಡರು. ಅಲ್ಲದೇ ಇದು ಮದುವೆ ಉಂಗುರವಾಗಿತ್ತಂತೆ. ಐದಡಿ ಮಣ್ಣಿನ ಆಳದಲ್ಲಿ ಇದು ಕ್ಯಾಂಡಿಯಿಂದ ಮುಚ್ಚಿದಂತೆ ಕಂಡುಬಂದಿತ್ತು ಎಂದು ಲೋಹ ಪತ್ತೆಕಾರ ಡೇವಿಡ್‌ ತಿಳಿಸಿದ್ದಾರೆ.


ಇನ್ನೊಮ್ಮೆ ಸಿಗೋದೇ ಇಲ್ಲ ಇದು!
"ಒಮ್ಮೆ ನಾನು ಮನೆಗೆ ಬಂದು ಅದನ್ನು ತೊಳೆದಾಗ ಅದು ನಾವು ಯೋಚಿಸಿದ್ದಕ್ಕಿಂತ ಉತ್ತಮವಾಗಿದೆ ಎಂದು ನಾವು ಅರಿತುಕೊಂಡೆವು. ಕ್ಯಾಂಡಿಯಂತಿದ್ದ ವಸ್ತುವಿನ ಕೆಳಗೆ ಶುದ್ಧ ಚಿನ್ನ ನೋಡಿ ನಮಗೆ ಆಶ್ಚರ್ಯವಾಯಿತು" ಎಂದು ಬೋರ್ಡ್ ಸುದ್ದಿ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲದೇ ಇಂತಹ ಮತ್ತೊಂದು ಉಂಗುರ ನಮಗೆ ಮತ್ತೆ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಇದು ತುಂಬಾ ಅಪರೂಪವಾಗಿದೆ ಎಂದಿದ್ದಾರೆ.


ಉಂಗುರದ ಮೌಲ್ಯ
ಮದುವೆಯ ಉಂಗುರವಾದ ಇದರ ಮೌಲ್ಯ ಸುಮಾರು 47,300 ಡಾಲರ್‌ (3,870,977.61 ಇಂಡಿಯನ್ ಕರೆನ್ಸಿ) ಆಗಿದ್ದು, ಮಧ್ಯಕಾಲೀನ ಚಿನ್ನ ಮತ್ತು ವಜ್ರದ ಉಂಗುರ ಎನ್ನಲಾಗಿದೆ.


ಇದನ್ನೂ ಓದಿ: Passport Name: ಪಾಸ್​ಪೋರ್ಟ್​ನಲ್ಲಿ ಒಂದೇ ಹೆಸರನ್ನು ಹೊಂದಿದ್ದೀರಾ? ಈ ದೇಶಕ್ಕೆ ಹೋಗೋ ಮುನ್ನ ಯೋಚಿಸಿ!


ಲೋಹದ ಮೂಲ ಊಹಿಸಿದ ಇತಿಹಾಸಕಾರರು
ಬ್ರಿಟಿಷ್ ಹರಾಜು ಸಂಸ್ಥೆ ನೂನನ್ಸ್ ಮೇಫೇರ್ ಪ್ರಕಾರ, ಲೇಡಿ ಬ್ರೂಕ್ ಮಧ್ಯಕಾಲೀನ ವಜ್ರದ ಉಂಗುರವನ್ನು 1388 ರಲ್ಲಿ ಸರ್ ಥಾಮಸ್ ಬ್ರೂಕ್ ಅವರನ್ನು ವಿವಾಹವಾದ ಲೇಡಿ ಜೋನ್ ಬ್ರೂಕ್ ಎಂಬ ಮಹಿಳೆಗೆ ನೀಡಿರಬಹುದು. ಬ್ರೂಕ್ ಈಗ ಉಂಗುರ ಪತ್ತೆಯಾದ ಭೂಮಿಯನ್ನು ಅವರು ಈ ಹಿಂದೆ ಹೊಂದಿದ್ದರು. ಹೀಗಾಗಿ ಇದು ಅವರಿಗೆ ಸಂಬಂಧ ಪಟ್ಟಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಇದೇ ನವೆಂಬರ್‌ 29ಕ್ಕೆ ಹರಾಜು
ಇನ್ನೂ ಡೇವಿಡ್‌ಗೆ ಸಿಕ್ಕ ಉಂಗುರವನ್ನು ಹರಾಜು ಮಾಡಲಾಗುತ್ತಿದೆ. ನೂನನ್ಸ್ ಮೇಫೇರ್ ಪ್ರಕಾರ ಲೇಡಿ ಬ್ರೂಕ್ ಮಧ್ಯಕಾಲೀನ ವಜ್ರದ ಉಂಗುರವು ನವೆಂಬರ್ 29 ರಂದು ಮಾರಾಟವಾಗಲಿದೆ. ನೂನನ್ಸ್‌ನ ಸಲಹೆಗಾರ ನಿಗೆಲ್ ಮಿಲ್ಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಉಂಗುರವು ಇನ್ನೂ ಸಹ ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: 4 Day Working Week: ವಾರದಲ್ಲಿ 4 ದಿನ ಕೆಲಸ, 3 ರಜೆಗಳಿಗೆ ಒಪ್ಪಿದ 100 ಕಂಪನಿಗಳು!


ಉಂಗುರ ಹೇಗಿದೆ?
ಉಂಗುರವು ವಜ್ರ ಮತ್ತು ಚಿನ್ನದ ಎರಡು ಲೋಹದ ಬ್ಯಾಂಡ್‌ಗಳಿಂದ ಮಾಡಲ್ಪಟ್ಟಿದೆ. ಅದು ಒಕ್ಕೂಟದ ಸಂಕೇತವಾಗಿದೆ. ಉಂಗುರದ ಮೇಲೆ "ieo vos tien foi tenes le moy" ಅಥವಾ "I hold your faith, hold my" ಎಂದು ಈ ಸಾಲುಗಳನ್ನು ಮಧ್ಯಕಾಲೀನ ಫ್ರೆಂಚ್‌ನಲ್ಲಿ ಕೆತ್ತಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: