• Home
  • »
  • News
  • »
  • trend
  • »
  • Train Coaches Numbers: ರೈಲು ಬೋಗಿಗಳಲ್ಲಿ ಬರೆದಿರುವ ನಂಬರ್​ಗಳ ಅರ್ಥ ಇದಂತೆ

Train Coaches Numbers: ರೈಲು ಬೋಗಿಗಳಲ್ಲಿ ಬರೆದಿರುವ ನಂಬರ್​ಗಳ ಅರ್ಥ ಇದಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Numbers On Trian: ರೈಲು ಕೋಚ್‌ನಲ್ಲಿ ನಾಲ್ಕು, ಐದು ಮತ್ತು ಆರು ಅಂಕಿಗಳ ಸಂಖ್ಯೆಯನ್ನು ಮುದ್ರಿಸಿರುವುದನ್ನು ನಾವೆಲ್ಲರೂ ಗಮನಿಸಿರಬೇಕು. ಈ ಸಂಖ್ಯೆ ಏನು ಸೂಚಿಸುತ್ತದೆ ಎಂದು ನಿಮ್ಮ ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದೀರಾ? ಖಂಡಿತಾ ಇಂತಹ ಅನುಮಾನಗಳು, ಕೂತುಹಲಗಳು ಎಲ್ಲರ ತಲೆಗೂ ಬಂದಿರುತ್ತದೆ.

ಮುಂದೆ ಓದಿ ...
  • Share this:

ರೈಲು ಭಾರತೀಯರ (Indian Railway) ಬಜೆಟ್‌ ಸ್ನೇಹಿ (Budget Friendly) ಮತ್ತು ಅತ್ಯಂತ ಆರಾಮವಾದ ಸಂಚಾರ ಸಾರಿಗೆ ವಿಧಾನ. ಸದಾ ಜನರಿಂದ ಗಿಜಿ ಗಿಜಿ ಎನ್ನುವ ರೈಲಿನಲ್ಲಿ ಪ್ರತಿನಿತ್ಯ ದೇಶದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಜನರು ಪ್ರಯಾಣ ಬೆಳೆಸುತ್ತಾರೆ. ಭಾರತದಲ್ಲಿ ರೈಲು, ರೈಲು ನಿಲ್ದಾಣ, ರೈಲು ಮಾರ್ಗ ಎಲ್ಲವೂ ಸಹ ಬಹಳ ವಿಶೇಷತೆಗಳಿಂದ ಕೂಡಿದೆ. ಹಲವಾರು ರೈಲು, ರೈಲು ಮಾರ್ಗ, ನಿಲ್ದಾಣಗಳು ವಿಶ್ವ ಪರಂಪರೆ ತಾಣಗಳಲ್ಲೂ ಸಹ ಸ್ಥಾನ ಪಡೆದಿವೆ. ಕೆಲವು ರೈಲು ಮಾರ್ಗಗಳು ನಮಗೆ ಪ್ರಕೃತಿಯ (Nature) ಹೊಸ ಪ್ರಪಂಚವನ್ನೇ ತೋರಿಸುತ್ತವೆ. ಬ್ರಿಟಿಷರ ಕಾಲದಲ್ಲಿ ಉದಯವಾದ ರೈಲುಗಳು ಇಲ್ಲಿಯವರೆಗೂ ಕೆಲವು ಕೂತುಹಲಕಾರಿ ವಿಷಯಗಳನ್ನು ಉಳಿಸಿಕೊಂಡು ಬಂದಿದೆ.


ರೈಲಿನ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ, ಎಲ್ಲರೂ ಒಮ್ಮೆಯಾದರೂ ಈ ಸುಂದರ ಸಾರಿಗೆಯಲ್ಲಿ ಪ್ರಯಾಣಿಸಿರುತ್ತಾರೆ. ರೈಲು ಅಗ್ಗವಾದ ಸಂಚಾರ ವ್ಯವಸ್ಥೆಯಾಗಿದ್ದು, ಎಸಿಯಂತಹ ಅನುಕೂಲಗಳನ್ನು ಸಹ ಹೊಂದಿದೆ. ಜನರಲ್‌ ಬೋಗಿ, ಕಾಯ್ದಿರಿಸಿದ ಬೋಗಿ ಹೀಗೆ ಇನ್ನೂ ಅನೇಕ ಸವಲತ್ತುಗಳಿವೆ.


ರೈಲು ಬೋಗಿಯ ಮೇಲಿರುವ ಈ ಸಂಖ್ಯೆ ಏನನ್ನು ಸೂಚಿಸುತ್ತದೆ?


ರೈಲು ಕೋಚ್‌ನಲ್ಲಿ ನಾಲ್ಕು, ಐದು ಮತ್ತು ಆರು ಅಂಕಿಗಳ ಸಂಖ್ಯೆಯನ್ನು ಮುದ್ರಿಸಿರುವುದನ್ನು ನಾವೆಲ್ಲರೂ ಗಮನಿಸಿರಬೇಕು. ಈ ಸಂಖ್ಯೆ ಏನು ಸೂಚಿಸುತ್ತದೆ ಎಂದು ನಿಮ್ಮ ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದೀರಾ? ಖಂಡಿತಾ ಇಂತಹ ಅನುಮಾನಗಳು, ಕೂತುಹಲಗಳು ಎಲ್ಲರ ತಲೆಗೂ ಬಂದಿರುತ್ತದೆ. ವಾಸ್ತವವಾಗಿ, ಈ ಸಂಖ್ಯೆಯು ರೈಲಿನ ಬಗ್ಗೆ ಪ್ರಯಾಣಿಕರಿಗೆ ತಿಳಿದಿರಬೇಕಾದ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ.


ಇದನ್ನೂ ಓದಿ: ಮಾಲ್ಡೀವ್ಸ್‌ನ ಸಾಗರದ ಆಳದಲ್ಲಿ ಹೊಸದೊಂದು ಪರಿಸರ ವ್ಯವಸ್ಥೆ ಪತ್ತೆ ಹಚ್ಚಿದ ವಿಜ್ಞಾನಿಗಳು


ಮೊದಲೆರಡು ಅಂಕಿ ಉತ್ಪಾದನೆಯ ವರ್ಷದ ಸೂಚಕ


ಹೌದು, ಈ ಸಂಖ್ಯೆಯ ಮೊದಲ ಎರಡು ಅಂಕೆಗಳು ಉತ್ಪಾದನೆಯ ವರ್ಷವನ್ನು ಸೂಚಿಸುತ್ತವೆ. ಉದಾಹರಣೆಗೆ ಕೋಚ್‌ನಲ್ಲಿ 02052 ಬರೆದಿರುವುದನ್ನು ನೀವು ಗಮನಿಸಿದರೆ, ಆ ಸಂಖ್ಯೆಯ ಮೊದಲ ಎರಡು ಅಂಕಿಗಳು ಅದು ಯಾವ ವರ್ಷದಲ್ಲಿ ಉತ್ಪಾದನೆ ಆಗಿದೆ ಎಂದು ತಿಳಿಸುತ್ತದೆ. ಅಂದರೆ 02052 ಎಂದು ರೈಲಿನ ಮೇಲೆ ಇದ್ದರೆ ಮೊದಲ ಎರಡು ಅಂಕೆಗಳು ಅಂದರೆ 02 ಕೋಚ್ ತಯಾರಾದ ವರ್ಷವನ್ನು ತಿಳಿಸುತ್ತದೆ. ಆದ್ದರಿಂದ, ನಿರ್ದಿಷ್ಟ ಕೋಚ್ ಅನ್ನು 2002 ರಲ್ಲಿ ತಯಾರಿಸಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.


ಉಳಿದ ಅಂಕಿ ಬೋಗಿಯ ಪ್ರಕಾರವನ್ನು ತಿಳಿಸುತ್ತದೆ


ಹಾಗಾದರೆ, 02052 ಈ ಸಂಖ್ಯೆಯ ಉಳಿದ ಮೂರು ಅಂಕೆಗಳ ಅರ್ಥವೇನು? ಈ ಅಂಕಿಗಳು ನಮಗೆ ಏನು ತಿಳಿಸುತ್ತದೆ ಅಂತೀರಾ ಅದಕ್ಕೂ ಇಲ್ಲಿದೆ ನೋಡಿ ಉತ್ತರ. ಹೌದು ನಂತರದ ಮೂರು ಅಂಕಿಗಳು ಬೋಗಿಯ ಪ್ರಕಾರವನ್ನು ತಿಳಿಸಿಕೊಡುತ್ತದೆ.




ಮೇಲಿನ ಉದಾಹರಣೆಯಲ್ಲಿನ 02052 ಸಂಖ್ಯೆಯ ರೈಲಿನ ಮೂರು ಅಂಕೆಗಳು ಅಂದರೆ 052 ಎಸಿ II-ಶ್ರೇಣಿಯ ಬಗ್ಗೆ ಮತ್ತು ಕೋಚ್‌ ಬಗ್ಗೆ ತಿಳಿಸಿಕೊಡುತ್ತದೆ.


ಇದನ್ನೂ ಓದಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಹಳೆ ಫೋಟೊ ಇಲ್ಲಿದೆ


ಸಂಖ್ಯೆಗಳ ಮೂಲಕ ಬೋಗಿಗಳ ಪ್ರಕಾರವನ್ನು ಹೇಗೆ ತಿಳಿಯಬಹುದು ?


ಮೊದಲ ಎರಡು ಅಂಕೆಗಳನ್ನು ಕಳೆದು 001 ರಿಂದ 025 ರವರೆಗಿನ ಸಂಖ್ಯೆಯು AC ಫಸ್ಟ್ ಕ್ಲಾಸ್ ಆಗಿದೆ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ, 026-050, 051-100, 101-150, 151-200, 201-400, 401-600, 601-700 ಮತ್ತು 701-800 AC ಫಸ್ಟ್ ಕ್ಲಾಸ್ ಕಮ್ AC II-ಟೈರ್, AC II-ಟೈರ್, AC III-ಟೈರ್, ಎಸಿ ಚೇರ್ ಕಾರ್, ಸ್ಲೀಪರ್ ಸೆಕೆಂಡ್‌ ಕ್ಲಾಸ್, ಜನರಲ್ ಸೆಕೆಂಡ್ ಕ್ಲಾಸ್ (ಅನ್ ರಿಸರ್ವ್ಡ್ ಕ್ಲಾಸ್), II ಕ್ಲಾಸ್, ಸಿಟ್ಟಿಂಗ್ ಕಮ್ ಲಗೇಜ್ ರೇಕ್ ಎಂದು ಕ್ರಮವಾಗಿ ಸೂಚಿಸುವ ಸಂಕೇತಗಳಾಗಿವೆ. ಸಂಖ್ಯೆಯು 800 ಕ್ಕಿಂತ ಹೆಚ್ಚಿದ್ದರೆ, ಕೋಚ್ ಅನ್ನು ಪ್ಯಾಂಟ್ರಿ, ಜನರೇಟರ್ ಅಥವಾ ಮೇಲ್ ಉದ್ದೇಶಗಳಿಗಾಗಿ ಉದ್ದೇಶಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು