14 ಕೋಟಿ ಗರಿ ಗರಿ ನೋಟಿನಿಂದ ಪಬ್ ಅಲಂಕಾರ! ಸುತ್ತಮುತ್ತ ದುಡ್ಡು ತುಂಬಿದ್ರೂ ಕದಿಯೋದು ಕಷ್ಟ!

McGuire Irish: 1977 ರಿಂದ ಮೆಕ್‌ಗುಯಿರ್‌ ಐರಿಶ್ ಪಬ್​ನ ಮಾಲೀಕ ಮೆಕ್‌ಗುಯಿರ್‌ ಮತ್ತು ಆತನ ಹೆಂಡತಿ ನೋಟಿನ ಮೂಲಕ ಪಬ್​ನ ಅಂದ ಹೆಚ್ಚಿಸಲು ಪ್ರಾರಂಭ ಮಾಡಿದರಂತೆ. ಸದ್ಯ 2 ಮಿಲಿಯನ್​ ಡಾಲರ್​ ಹಣವನ್ನು ಬಳಸಿದ್ದಾರೆ.

McGuire Irish Florida Pub

McGuire Irish Florida Pub

 • Share this:
  ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಸಾಕಷ್ಟು ಪಬ್​​ಗಳಿವೆ. ಅವುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಕುಳಿತುಕೊಳ್ಳುವ ಆಸನದಿಂದ ಹಿಡಿದು ಕುಡಿಯುವ ಪಾನೀಯದವರೆಗೆ ವೆರೈಟಿಗಳಿವೆ. ಹಾಗಾಗಿ ಜನರು ಇದರಿಂದ ಆಕರ್ಷಿತಗೊಂಡು ಚೆನ್ನಾಗಿರುವ ಪಬ್​ಗಳನ್ನು ಆರಿಸಿ ನಂತರ ತಮ್ಮ ದಾಹ ತೀರಿಸಿಕೊಳ್ಳುತ್ತಾರೆ. ಅದರಂತೆ ನಾವು ಹೇಳಲು ಹೊರಟಿರುವ ಪಬ್​ವೊಂದು ಇವೆಲ್ಲದಕ್ಕಿಂತ ಭಿನ್ನವಾಗಿದೆ. ಪಬ್​ ಒಳಗಡೆ ಕಾಲಿಟ್ಟರೆ ಸಾಕು ಎಲ್ಲಿನೋಡಿದರು ಗರಿ ಗರಿ ನೋಟುಗಳ ಕಾಣಿಸುತ್ತದೆ. ಅಂದಹಾಗೆಯೇ ಬೆಂಗಳೂರಿನಲ್ಲಿ ಇಂತಹ ಪಬ್​ ಇದೆಯಾ? ಹಾಗಿದ್ದರೆ ಇದು ಎಲ್ಲಿಯದ್ದು? ಒಂದು ಬಾರಿ ಪಬ್​ ನೋಡಿ ಬರೋಣ…!

  ನೀವಂದುಕೊಡಂತೆ ಇದು ಬೆಂಗಳೂರಿನದ್ದಲ್ಲ. ಫ್ಲೊರೀಡಾದಲ್ಲಿರುವ ಪಬ್​. ಅಲ್ಲಿನ ಪೆನ್ಸಕೋಲಾ ಬಳಿಯ ಮೆಕ್‌ಗುಯಿರ್‌ ಹೆಸರಿನ ಜನಪ್ರಿಯ ಐರಿಶ್ ಪಬ್. ಫ್ಲೊರೀಡಾದಲ್ಲಿ ಈ ಪಬ್​ ಹೆಸರು ಹೇಳಿದರೆ ಸಾಕು ಪಬ್​ನ ವಿಶೇಷತೆಯನ್ನು ಕೊಂಡಾಡುತ್ತಾರೆ ಅಲ್ಲಿಯ ವಲಸಿಗರು.  ಅಂದಹಾಗೆಯೇ, ಮೆಕ್‌ಗುಯಿರ್‌ ಐರಿಶ್ ಪಬ್ ಒಳಕ್ಕೆ ಎಂಟ್ರಿ ನೀಡಿ ಕಣ್ಣಾಡಿಸಿದರೆ ಎಲ್ಲೆಂದರಲ್ಲಿ ಗರಿ ಗರಿಯ ನೋಡುಗಳು ನೇತುಹಾಕಿರುವುದು ಕಾಣಿಸುತ್ತೆ. ಸುಮಾರು 2 ಮಿಲಿಯನ್​ ಡಾಲರ್​ನಷ್ಟ ಹಣದಿಂದ ಈ ರೀತಿಯ ವಿನ್ಯಾಸ ಮಾಡಿದ್ದಾರೆ. ಹಾಗಾಗಿ ನೋಡಲು ವಾವ್​​ ಎಂದು ಅನಿಸುವ ಮೆಕ್‌ಗುಯಿರ್‌ ಐರಿಶ್ ಪಬ್​ಗೆ ಜನಪ್ರಿಯವಾಗಲು ಇದೇ ಮುಖ್ಯ ಕಾರಣ.  1977 ರಿಂದ ಮೆಕ್‌ಗುಯಿರ್‌ ಐರಿಶ್ ಪಬ್​ನ ಮಾಲೀಕ ಮೆಕ್‌ಗುಯಿರ್‌ ಮತ್ತು ಆತನ ಹೆಂಡತಿ ನೋಟಿನ ಮೂಲಕ ಪಬ್​ನ ಅಂದ ಹೆಚ್ಚಿಸಲು ಪ್ರಾರಂಭ ಮಾಡಿದರಂತೆ. ಸದ್ಯ 2 ಮಿಲಿಯನ್​ ಡಾಲರ್​ ಹಣವನ್ನು ಬಳಸಿದ್ದಾರೆ.  15 ಸಾವಿರ ಚದರ ಅಡಿಗಳು ಮತ್ತು ಸೀಲಿಂಗ್​ನ ಪ್ರತಿ ಬಿಟ್​, ಗೋಡೆಗಳ ಮೇಲೆ ಡಾಲರ್​ಗಳಿವೆ ಎಂದು ಹೇಳಿದ್ದಾರೆ ಮಾಲೀಕ ವಿಲಿಯಂ ಮೆಕ್‌ಗುಯಿರ್‌. ಪ್ರತಿ ವರ್ಷ ಈ ಹಣವನ್ನು ಎಣಿಸಲಾಗುತ್ತದೆ ಮತ್ತು ತೆರಿಗೆ ಪಾವತಿಸುತ್ತೇವೆ. ಅದನ್ನು ಕೂಡ ಆಸ್ತಿಯೆಂದು ಪರಿಗಣಿಸುತ್ತೇವೆ ಅದರ ಜೊತೆಗೆ ಸಾಲವನ್ನು ಪಡೆಯುತ್ತೇವೆ ಎಂದು ಹೇಳಿದರು.  ಹಿಂದೊಮ್ಮೆ ಈ ಪಬ್​ನಲ್ಲಿ ಕಳ್ಳತನ ನಡೆದಿತ್ತು.  ಆನಂತರ ಕಳ್ಳರನ್ನ ಬಂಧಿಸಿ ಸರಿಯಾದ ಶಿಕ್ಷೆ ವಿಧಿಸಲಾಯಿತು. ಇನ್ನು ನೇತುಹಾಕಿದ ಪ್ರತಿ ನೋಟಿನ ಮೇಲೆ ಕಪ್ಪು ಮಾರ್ಕರಿಂದ ಆಟೋಗ್ರಾಫ್​ ಬರೆಯಲಾಗಿದ್ದು, ರಂಧ್ರವನ್ನು ಮಾಡಲಾಗಿದೆ. ಹಾಗಾಗಿ ಸದ್ಯ ಈ ನೋಟನ್ನು ಯಾರು ಕದಿಯಲಾಗುವುದಿಲ್ಲ. ಕದ್ದರು ನೋಟಿನ ಮೇಲಿರುವ ಗುರುತಿಂದ ಪತ್ತೆಹಚ್ಚಬಹುದಾಗಿದೆ.
  Published by:Harshith AS
  First published: