HOME » NEWS » Trend » MCDONALDS GIVING SPECIAL OFFER FOR COVID VACCINATED STG SESR

McDonalds : ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ರೆ ಮೆಕ್‌ಡೊನಾಲ್ಡ್ಸ್ ಸಿಗಲಿದೆ ವಿಶೇಷ ಆಫರ್

ಮೆಕ್‌ಡೊನಾಲ್ಡ್ಸ್‌ ಲಸಿಕೆ ಹಾಕಿಸಿಕೊಂಡ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಿದೆ

news18-kannada
Updated:June 11, 2021, 6:22 PM IST
McDonalds : ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ರೆ ಮೆಕ್‌ಡೊನಾಲ್ಡ್ಸ್ ಸಿಗಲಿದೆ ವಿಶೇಷ ಆಫರ್
ಮೆಕ್‌ಡೊನಾಲ್ಡ್ಸ್
  • Share this:

ಕೋವಿಡ್ - 19, ಲಾಕ್‌ಡೌನ್‌ ಸಮಯದಲ್ಲಿ ಅನೇಕರು ಕೆಲಸವಿಲ್ಲದೆ, ಊಟ ಸಿಗದೆ ಸಂಕಷ್ಟದಲ್ಲಿದ್ದಾರೆ. ಅಂತಹವರಿಗೆ ಅನೇಕರು ಊಟ, ಫುಡ್‌ ಕಿಟ್‌ ಮುಂತಾದವುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಹೋಂ ಐಸೊಲೇಷನ್‌ನಲ್ಲಿರುವ ಕೊರೋನಾ ಸೋಂಕಿತರ ಪೈಕಿ ಅನೇಕರಿಗೆ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲೂ ಅನೇಕರು ಅವರ ತಿಂಡಿ, ಊಟ ನೀಡುತ್ತಿದ್ದಾರೆ. ಹಾಗೇ, ಅನೇಕರು ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇನ್ನು, ಕೋವಿಡ್ - 19 ವಿರುದ್ಧ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಅಮೆರಿಕದ ಕೆಲ ರಾಜ್ಯಗಳಲ್ಲಿ ಬಿಯರ್, ಗಾಂಜಾ, ಲಾಟರಿ, ಮುಂತಾದ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ. ಇನ್ನು, ಭಾರತದಲ್ಲೂ ಕೋವಿಡ್ - 19 ವಿರುದ್ಧ ಹೋರಾಡಲು ಲಸಿಕೆ ಪ್ರಕ್ರಿಯೆ ನಡೆಯುತ್ತಿದೆ. ಆರಂಭದಲ್ಲಿ, ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಉಚಿತ ಟೊಮ್ಯಾಟೋ ನೀಡಲಾಗುತ್ತಿತ್ತು. ಇತ್ತೀಚೆಗೆ, ಲಸಿಕೆ ಹಾಕಿಸಿಕೊಂಡವರಿಗೆ ಬ್ಯಾಂಕ್‌ ಎಫ್‌ಡಿಯಲ್ಲಿ ಹೆಚ್ಚುವರಿ ಬಡ್ಡಿಯನ್ನೂ ನೀಡುವ ಆಫರ್‌ ಕೂಡ ನೀವು ಕೇಳಿರುತ್ತೀರಿ. ಈಗ, ದೇಶದಲ್ಲಿ ಮೆಕ್‌ಡೊನಾಲ್ಡ್ಸ್‌ ಸಹ ವ್ಯಾಕ್ಸಿನೇಷನ್‌ ಡ್ರೈವ್‌ಗೆ ವಿಶಿಷ್ಟವಾಗಿ ತಮ್ಮ ಬೆಂಬಲ ನೀಡಲು ಮುಂದಾಗಿದೆ.


ಲಸಿಕೆ ಪಡೆಯಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೆಕ್‌ಡೊನಾಲ್ಡ್ಸ್‌ ಇಂಡಿಯಾ ಇತ್ತೀಚೆಗೆ ತಮ್ಮ 'ವಿ ಕೇರ್' ಉಪಕ್ರಮವನ್ನು ಪ್ರಾರಂಭಿಸಿದೆ. ಉತ್ತರ ಮತ್ತು ಪೂರ್ವ ಭಾರತದ ಮೂಲಕ ಮೆಕ್‌ಡೊನಾಲ್ಡ್ಸ್‌ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದ್ದು, ಇದು ಮೆಕ್‌ಡೊನಾಲ್ಡ್ಸ್‌ ಗ್ರಾಹಕರು ಲಸಿಕೆ ಹಾಕಿಸಿಕೊಂಡ ನಂತರ ವಿಶೇಷ ಕೊಡುಗೆಗಳನ್ನು ನೀಡಲಿದೆ.



ಈ ಪ್ರದೇಶದ ಜನರು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಮೆಕ್‌ಡೊನಾಲ್ಡ್ಸ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ 'ಗಾಟ್ ವ್ಯಾಕ್ಸಿನೇಟೆಡ್' ಟ್ಯಾಬ್ ಅಡಿಯಲ್ಲಿ ಮೂಲ ವಿವರಗಳೊಂದಿಗೆ ಅಪ್‌ಲೋಡ್ ಮಾಡುವ ಮೂಲಕ ಮೆಕ್‌ಡೊನಾಲ್ಡ್ಸ್‌ನಲ್ಲಿ ಮೀಲ್‌ಗೆ "ಸೀಮಿತ ಸಮಯದ" ಕೊಡುಗೆಯನ್ನು ಪಡೆಯಬಹುದು ಎಂದು ಕಂಪನಿ ಅಧಿಕೃತ ಹೇಳಿಕೆ ನೀಡಿದೆ. ಲಸಿಕೆ ಹಾಕಿಸಿರುವ ಬಗ್ಗೆ ದಾಖಲೆ ಪೋಸ್ಟ್ ಮಾಡಿದ ಬಳಿಕ ಅವರು ಎಸ್‌ಎಂಎಸ್ ಮೂಲಕ  ಕೋಡ್ ಅನ್ನು ಸ್ವೀಕರಿಸುತ್ತಾರೆ, ಅದನ್ನು ತಮ್ಮ ನೆಚ್ಚಿನ ತಿನಿಸು ಪಡೆಯಲು Getmcdonalds.com ಮೂಲಕ ಪಡೆದುಕೊಳ್ಳಬಹುದು ಎಂದು ತಿಳಿದುಬಂದಿದೆ.'

ಇದನ್ನು ಓದಿ: ಕೆಲಸ ಕಳೆದುಕೊಂಡ ಅಪ್ಪ, ಝೊಮ್ಯಾಟೋ ಡೆಲಿವರಿ ಗರ್ಲ್‌ ಆದ ಮಗಳು..!

"ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ದೇಶದ ಹೋರಾಟದಲ್ಲಿ ವ್ಯಾಕ್ಸಿನೇಷನ್ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಮತ್ತು ಲಸಿಕೆ ಪಡೆಯಲು ಇತರರನ್ನು ಪ್ರೋತ್ಸಾಹಿಸುವುದು ಸೇರಿದಂತೆ ನಮ್ಮದೊಂದು ಪುಟ್ಟ ಸಹಾಯ ಮಾಡಬೇಕಾಗಿದೆ. ಜನರೊಂದಿಗೆ ಆಳವಾದ ಸಂಪರ್ಕ ಹೊಂದಿರುವ ಬ್ರ್ಯಾಂಡ್‌ ಆಗಿ, ನಾವು ಕೊಡುಗೆ ನೀಡಲು ಸಂತೋಷಪಡುತ್ತೇವೆ. ನಾವು ಸೇವೆ ಸಲ್ಲಿಸುತ್ತಿರುವ ಜನರಿಗೆ ನಮ್ಮದೇ ವಿಶಿಷ್ಟ ರೀತಿಯಲ್ಲಿ ಕೊಡುಗೆ ನೀಡಲು ನಮಗೆ ಸಂತೋಷವಾಗಿದೆ'' ಎಂದು ಉತ್ತರ ಮತ್ತು ಪೂರ್ವ ಭಾರತದ ಮೆಕ್‌ಡೊನಾಲ್ಡ್ಸ್‌ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ರಾಜೀವ್ ರಂಜನ್ ಹೇಳಿದ್ದಾರೆ.


ನೀವೂ ಈ ಪ್ರದೇಶದಲ್ಲಿದ್ದರೆ, ಮತ್ಯಾಕೆ ತಡ ಕೊರೊನಾ ಲಸಿಕೆ ಹಾಕಿಸಿಕೊಂಡು ಮೆಕ್‌ಡೊನಾಲ್ಡ್ಸ್‌ನಲ್ಲಿ ಈ ಕೊಡುಗೆ ಪಡೆದುಕೊಳ್ಳಿ.
Youtube Video
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
First published: June 11, 2021, 6:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories