‘ಅತಿಥಿ ದೇವೋ ಭವ’ ಎಂಬ ವೇದವಾಕ್ಯ ಈಗಲೂ ನಮ್ಮ ದೇಶದಲ್ಲಿದೆ. ಯಾಕೆಂದ್ರೆ ಸಂಸ್ಕಾರ ಎಂದು ಬಂದಾಗ ನಮ್ಮ ದೇಶ ಭಾರತ (India) ಈ ವಿಷಯದಲ್ಲಿ ಮೇಲುಗೈ ಎಂದರೆ ತಪ್ಪಾಗಲಾರದು. ಹಾಗೆಯೆ ಮದುವೆ ವಿಷಯಕ್ಕೆ ಬಂದ್ರೆ ಅಂದೊಂದು ಖಾಸಗಿ ಕಾರ್ಯಕ್ರಮ. ಆಹ್ವಾನಿತರಿಗೆ ಮಾತ್ರ ಉಪಚಾರ ಎನ್ನುವ ನಿಯವು ಇದೆ. ಆದರೆ ಅಹ್ವಾನ ಇಲ್ಲದವರು ಮದುವೆಗೆ(Marriage) ಬಂದರೆ ಅವರನ್ನು ಉಪಚರಿಸಬೇಕಾದ ಕರ್ತವ್ಯ ಮತ್ತು ವಿನಮ್ರತೆ ಆಯಾ ಕುಟುಂಬದವರಿಗೆ ಇರಬೇಕು. ಆದ್ರೆ ಮದುವೆ ಮನೆಯಲ್ಲಿ ನಡೆದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ(Social media) ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ವಿಡಿಯೋ(Video) ನೋಡಿದ್ರೆ ನೀವು ಮಾತ್ರ ಶಾಕ್ (Shock) ಆಗುತ್ತೀರಿ ಯಾಕೆ ಗೊತ್ತಾ.. ಹೀಗಿದೆ ಮಾಹಿತಿ
ಹೌದು ಎಂಬಿಎ ವಿದ್ಯಾರ್ಥಿಯೊಬ್ಬ ಮದುವೆ ಮನೆಯಲ್ಲಿ ಉಚಿತವಾಗಿ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಆಹ್ವಾನವಿಲ್ಲವಿಲ್ಲದಿದ್ದರು ಮದುವೆಗೆ ಬಂದಿದ್ದಾನೆ. ಆದ್ರೆ ಮದುವೆ ಮನೆಯವರು ಈತನಿಗೆ ವಿಚಿತ್ರ ಶಿಕ್ಷೆ ನೀಡಿದ್ದಾರೆ. ಏನಂದ್ರೆ ಉಚಿತವಾಗಿ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಆಹ್ವಾನವಿಲ್ಲದೆಯೇ ಬಂದಿದ್ದಾನೆ ಎಂದು ಮದುವೆಮನೆಯವರು ಪಾತ್ರೆ ತೊಳೆಯುವ ಶಿಕ್ಷೆ ನೀಡಿದ್ದಾರೆ.
ವಿಡಿಯೋದಲ್ಲಿ ಇರುವುದೇನು ?
ಈ ವಿದ್ಯಾರ್ಥಿ ಮೂಲತಃ ಜಬಲ್ಪುರದವನು. ಎಂಬಿಎ ಓದಲು ಭೋಪಾಲ್ಗೆ ಬಂದಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಮದುವೆ ಕಾರ್ಯಕ್ರಮವೊಂದರಲ್ಲಿ ನಡೆದಿದೆ. ವೈರಲ್ ಆದ ವಿಡಿಯೋದಲ್ಲಿ ಇರುವಂತೆ ‘ಎಂಬಿಎ ಓದುತ್ತಿರುವ ನಿನಗೆ ನಿಮ್ಮ ಪೋಷಕರು ಹಣ ಕಳಿಸುವುದಿಲ್ಲವೆ?
ಇದನ್ನೂ ಓದಿ: Viral News: ತಾಳಿ ಕಟ್ಟಿದ ಜೋಶ್ನಲ್ಲಿ ಕಿಸ್ ಕೊಟ್ಟ ವರ, ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
ಹೀಗೆಲ್ಲ ಮಾಡಿ ಜಬಲ್ಪುರಕ್ಕೆ ಕೆಟ್ಟ ಹೆಸರನ್ನು ತರುತ್ತೀರಿ’ ಎಂದು ವಿಡಿಯೋದಲ್ಲಿ ಈ ವ್ಯಕ್ತಿಯೊಬ್ಬರು ಹೇಳುತ್ತಿರುವುದನ್ನು ನೋಡಬಹುದು. ಅಷ್ಟಕ್ಕೆ ಬಿಡದೆ, ‘ಪಾತ್ರೆಗಳನ್ನೆಲ್ಲ ತೊಳೆದ ಮೇಲೆ ಏನನ್ನಿಸುತ್ತಿದೆ?’ ಎಂದು ಕೇಳಿದಾಗ ಆ ವಿದ್ಯಾರ್ಥಿ, ‘ಪುಕ್ಕಟೆಯಾಗಿ ಊಟ ಮಾಡಿದ್ದಕ್ಕೆ ಪ್ರತಿಯಾಗಿ ಈ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾನೆ.
MBA student came to eat food without being invited at a marriage ceremony in Madhya Pradesh, people forced him to wash utensils !!
मध्यप्रदेश के एक शादी समारोह में बिना बुलाए खाना खाने पहुंचा MBA का छात्र, लोगों ने युवक से धुलाए बर्तन !!
+ pic.twitter.com/XmBGr85aTy
— Ashwini Shrivastava (@AshwiniSahaya) December 1, 2022
ಅತಿಥಿ ದೇವೋ ಭವ ವೇದವಾಕ್ಯ ಎಲ್ಲಿ ಹೋಯಿತು ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ.
ಒಂದು ಊಟಕ್ಕಾಗಿ ಇಷ್ಟು ದೊಡ್ಡ ಶಿಕ್ಷೆ ನೀಡುವುದು ಸರಿಯಲ್ಲ. ಇದರಲ್ಲಿ ತಪ್ಪೇನೂ ಇಲ್ಲ, ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಕ್ಕೆ ಬಂದು ಊಟ ಮಾಡುವುದು ತಪ್ಪೇನಿಲ್ಲ ಎಂದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ಎಷ್ಟೋ ಜನ ಟಯಲ್ಲಿ ಊಟ ಬಿಟ್ಟು ವೇಸ್ಟ್ ಮಾಡುತ್ತಾರೆ. ಅದು ನಿಮ್ಮ ಗಮನಕ್ಕೆ ಬಂದಿಲ್ವ. ಈ ಹುಡುಗ ಊಟ ಮಾಡಿದ್ದಕ್ಕೆ ಇಂಥ ಶಿಕ್ಷೆ ನೀಡಿದ್ದು ಸರಿಯಲ್ಲ. ಮಾನವೀಯತೆ ಎಂಬುದು ಇದ್ದಿದ್ದರೆ ಈ ವಿಡಿಯೋ ವನ್ನು ಅಪ್ಲೋಡ್ ಮಾಡುತ್ತಿರಲಿಲ್ಲ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.
ಇದನ್ನೂ ಓದಿ: Viral News: ಅಬ್ಬಬ್ಬಾ ಏನ್ ಐಡಿಯಾ ಗುರೂ ಇದು; ತಲೆ ಕೂದಲನ್ನು ಹೀಗೂ ತೊಳೆಯಬಹುದು!
ಭಾರತ 'ಅತಿಥಿ ದೇವೋ ಭವ' ಎಂಬ ವಾಕ್ಯವನ್ನು ಪುರಾತನದಿಂದಲೂ ಪಾಲಿಸುತ್ತ ಬಂದಿದೆ. ಆದರೆ ಆಹ್ವಾನವಿಲ್ಲದೆ ಮದುವೆ ಮನೆಗೆ ಬಂದು ಊಟ ಮಡಿದ ಯುವಕನಿಗೆ ಈ ರೀತಿಯ ಶಿಕ್ಷೆ ನೀಡಿರುವುದು ಸರಿಯಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ